Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
ದೇಶದಾದ್ಯಂತ ವೈದ್ಯರ ಮುಷ್ಕರ: ಸ್ವಾತಂತ್ರ್ಯ ಭಾರತದಲ್ಲಿ ಹೆಣ್ಮಕ್ಕಳಿಗೆ ಇಲ್ಲವೇ ರಕ್ಷಣೆ?
ದೇಶದಾದ್ಯಂತ ವೈದ್ಯರು ಆಗಸ್ಟ್ 17 ಬೆಳಗ್ಗೆ 6ರಿಂದ ಆಗಸ್ಟ್ 18 ಬೆಳಗ್ಗೆ 6ರವರೆಗೆ ಮುಷ್ಕರದಲ್ಲಿದ್ದಾರೆ, ಸರ್ಕಾರಿ ಹಾಗೂ ಕಾಸಗಿ ಆಸ್ಪತ್ರೆಯ ವಯದ್ಯರುಗಳು ಈ ಮುಷ್ಕರದಲ್ಲಿ ಭಾಗಿಯಾಗಲಿದ್ದು ಕರ್ನಾಟಕದಲ್ಲಿ ಸರ್ಕಾರಿ ವೈದ್ಯರು ಕೆಲಸಕ್ಕೆ ಹಾಜರಾಗಿಬೇಕಾಗಿ ಆದೇಶ ಹೊರಡಿಸಲಾಗಿದೆ.

ಹೊರ ರೋಗಿಗಳ ವಿಭಾಗ ಕಾರ್ಯ ನಿರ್ವಹಿಸುವುದಿಲ್ಲ ಹಾಗೂ ಯಾವುದೇ ಶಸ್ತ್ರ ಚಿಕಿತ್ಸೆ ಮಾಡಲಾಗುವುದಿಲ್ಲ ಎಂಂದು IMA ಹೇಳಿದೆ. ನೂರಾರು ರೋಗಿಗಳ ಪ್ರಾಣ ರಕ್ಷಣೆ ಮಾಡಬೇಕಾಗಿದ್ದ ವೈದ್ಯೆಯನ್ನು ಅತಿ ಕ್ರೂರವಾಗಿ ಅತ್ಯಾಚಾರ ಮಾಡಿ ಕೊಲ್ಲಲಾಗಿದೆ. ನೈಟ್ ಶಿಫ್ಟ್‌ನಲ್ಲಿದ್ದ ವೈದ್ಯೆ ಡ್ಯೂಟಿ ಮುಗಿಸಿ ಸ್ವಲ್ಪ ವಿಶ್ರಾಂತಿಗೆ ಅಂತ ಸೆಮಿನಾರ್ ರೂಂಗೆ ತೆರಳಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾಗ ಕಾಮುಕ ಮೃಗೀಯ ಕ್ರೂರಿಗಳು ಆ ವೈದ್ಯೆಯ ಮೇಲೆ ಅತ್ಯಾಚಾರ ಮಾಡಿ ಕೊಂದು ಹಾಕಿದೆ. ಇಂಥ ಭೀಕರ ಅತ್ಯಾಚಾರ ಕೇಸ್‌ಗಳು ಭಾರತದಲ್ಲಿ ನಡೆಯುತ್ತಿರುವುದು ಇದೇ ಮೊದಲಲ್ಲ, ನಿರ್ಭಯ ಕೇಸ್ ಆದಾಗಲೇ ಕಠಿಣ ಕಾನೂನಿಗೆ ಆಗ್ರಹಿಸುತ್ತಿದ್ದೇವೆ, ಕಾಮುಕರಿಗೆ ಯೋಚಿಸಿದರೂ ನಡುಕ ಉಂಟಾಗಬೇಕು ಅಂಥ ಕಾನೂನು ಬಂದರೆ ಮಾತ್ರ ಹೆಣ್ಮಕ್ಕಳಿಗೆ ರಕ್ಷಣೆ ಸಿಗಲು ಸಾಧ್ಯ.
ಹೆಣ್ಮಕ್ಕಳ ಮೇಲೆ ಅತ್ಯಾಚಾರವಾದಾಗ ಪ್ರತಿಭಟನೆ ಮಾಡುತ್ತೇವೆ, ಮತ್ತೆ ನಮ್ಮ ಕೆಲಸದಲ್ಲಿ ನಿರತರಾಗುತ್ತೇವೆ
ಹೆಣ್ಮಕ್ಕಳ ಮೇಲೆ ಅತ್ಯಾಚಾರವಾದಾಗ ಒಂದೆರಡು ದಿನ ಪ್ರತಿಭಟನೆ ಮಾಡಿ ನಂತರ ತಮ್ಮ-ತಮ್ಮ ಕೆಲಸದಲ್ಲಿ ಮಗ್ನರಾಗುತ್ತೇವೆ, ಆ ರೀತಿ ಆಗಬಾರದು, ಅತ್ಯಾಚಾರಿಗೆ ಮರಣದಂಡನೆ ಸಿಗುವವರೆಗೆ ಅದು ಕೂಡ ಕೂಡಲೇ ಸಿಗುವವರೆಗೆ ಅತ್ಯಾಚಾರಿಗಳನ್ನು ಮರೆಯಬಾರದು. ಕೇಸ್ ಅಮತ ವರ್ಷಗಟ್ಟಲೆ ಎಳೆಯದೆ ಇಂಥ ಕಾಮುಕ ಕ್ರೂರಿಗಳನ್ನು ಸಿಕ್ಕಿ ಅವರು ತಪ್ಪೊಪ್ಪಿಗೆ ಮಾಡಿದ ಕೂಡಲೇ ಗಲ್ಲಿಗೇರಿಸಬೇಕು, ಇಂಥ ಶಿಕ್ಷೆ ಬರುವವರೆಗೆ ಹೆಣ್ಮಕ್ಕಳಿಗೆ ರಕ್ಷಣೆ ಇಲ್ಲ.
ಮನೆಯಿಂದ ಹೊರಬಂದರೆ ಹೆಣ್ಣು ಸುರಕ್ಷಿತವಲ್ಲ ಎಂದಾದರೆ ನಾವು ಸ್ವಾತಂತ್ರ್ಯ ಭಾರತದಲ್ಲಿ ಇದ್ದೀವಾ?
ಹೌದು ಬ್ರಿಟಿಷರ ದಾಸ್ಯದಿಂದ ಮುಕ್ತಿ ಸಿಕ್ಕಿದೆ ಆದರೆ ಭಾರತದ ಹೆಣ್ಮಕ್ಕಳಿಗೆ ಈ ಅತ್ಯಾಚಾರಿಗಳಿಂದ ಮುಕ್ತಿ ಸಿಕ್ಕಿ , 2022ರ ಪೊಲೀಸ್ ದಾಖಲೆ ಪ್ರಕಾರ 31000ಕ್ಕೂ ಅಧಿಕ ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿದೆ, ಇನ್ನು ಕೆಲವು ಪ್ರಕರಣಗಳು ಹೊರಗಡೆ ಬರುವುದೇ ಇಲ್ಲ, ಅತ್ಯಾಚಾರಿಗಳಿಗೆ ಭಯವಿಲ್ಲ, ತಾವು ಏನು ಮಾಡಿದರು ಕೆಲವೊಂದು ವರ್ಷ ಜೈಲಿನಲ್ಲಿ ಆರಾಮವಾಗಿ ಉಂಡು-ತೇಗಿ ಮತ್ತೆ ಹೊರಗಡೆ ಬರಬಹುದು ಎಂದು ಇಂಥ ಕೃತ್ಯ ಮಾಡುತ್ತಿದ್ದಾರೆ.
ಮಗಳು ಡಾಕ್ಟರ್ ಆಗಿದ್ದಾಳೆ, ನನ್ನ ಮಗಳು ನೂರಾರು ಜನರ ಪ್ರಾಣ ರಕ್ಷಣೆ ಮಾಡುವ ದೇವತೆ ಎಂದು ಖುಷಿಪಡುತ್ತಿದ್ದ ಆ ತಂದೆ-ತಾಯಿಗೆ ಈಗ ಉತ್ತರ ಕೊಡುವವರು ಯಾರು?
ಡಾಕ್ಟರ್ ಆಗಲು ಎಷ್ಟೊಂದು ಪರಿಶ್ರಮ ಪಡಬೇಕು ಎಂಬುವುದು ಆ ಕೋರ್ಸ್ ಮಾಡಿದವರಿಗೆ ಮಾತ್ರ ಆ ಕೋರ್ಸ್ ಬಗ್ಗೆ ತಿಳಿದವರಿಗೆ ಗೊತ್ತಿರುತ್ತದೆ, ಹಗಲು-ರಾತ್ರಿಯನ್ನದೆ ಓದಬೇಕು, ಓದು-ಓದು, ಎಂಬಿಬಿಎಸ್ ಆದ ಮೇಲೆ ಪಿಜಿ ಮಾಡಬೇಕು ಹೀಗೆ ತಮ್ಮ ಆಯುಸ್ಸಿನ ಅರ್ಧ ಭಾಗಕ್ಕೂ ಹೆಚ್ಚು ಸಮಯ ಓದಿನಲ್ಲಿಯೇ ಕಳೆಯುತ್ತಾರೆ, ಅಷ್ಟೊಂದು ಶ್ರಮವಹಿಸಿ ವೈದ್ಯೆಯಾಗಿದ್ದ ಆ ಹೆಣ್ಮಗಳು ತನ್ನ ಕೆಲಸದ ಸ್ಥಳದಲ್ಲಿ ಇಂಥ ಸಾವಿಗೆ ಗುರಿಯಾಗಿದ್ದಾಳೆ ಎಂದರೆ ವ್ಯವಸ್ಥೆಯನ್ನು ಏನನ್ನಬೇಕು.
ವೈದ್ಯರ ಮುಷ್ಕರ ಆಸ್ಪತ್ರೆಯಲ್ಲಿ ಏನೆಲ್ಲಾ ಇರಲಿದೆ?
ಇಂದು ಬಹುತೇಕ ವಿಭಾಗಗಳು ಮುಚ್ಚಿರುತ್ತದೆ
ತುರ್ತು ಚಿಕಿತ್ಸೆ ಇರಲಿದೆ



Click it and Unblock the Notifications