Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ನಾನು ಸೇನೆಗೆ ಸೇರುತ್ತೇನೆ..! ಯೋಧರ ಕಾರ್ಯ ನೋಡಿ ಪತ್ರ ಬರೆದ ಕೇರಳ ಬಾಲಕ..!!
ವಯನಾಡಿನ ಭೂಕುಸಿತ ಎಷ್ಟು ಭೀಕರವಾಗಿತ್ತೆಂದರೆ ಈ ಗುಡ್ಡ ಕುಸಿತದಿಂದಾಗಿ 350 ಮಂದಿ ಮೃತಪಟ್ಟು ನೂರಾರು ಮಂದಿ ನಾಪತ್ತೆಯಾಗಿದ್ದರೆ. ಘಟನೆಯಲ್ಲಿ ಬದುಕುಳಿದವರು ಈಗ ಮನೆ ಮಠ ಆಸ್ತಿ ಎಲ್ಲವನ್ನೂ ಕಳೆದುಕೊಂಡು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಒಂದು ರಾತ್ರಿಯಲ್ಲಿ ನಡೆದು ಹೋದ ಭೀಕರತೆಗೆ ಇಡೀ ದೇಶ ಮರುಗಿದೆ.
ಸದ್ಯ ಈಗ ವಯನಾಡಿನ ಸುರಕ್ಷತೆಗಾಗಿ ಪಾರ್ಥನೆ ಮಾಡಲಾಗುತ್ತಿದೆ. ಎನ್‌ಡಿಆರ್‌ಎಫ್ ಹಾಗೂ ಭಾರತೀಯ ಸೇನೆಯು ಹಗಲು ರಾತ್ರಿ ಎನ್ನದೆ ಈಗ ಜನರ ರಕ್ಷಣೆಯಲ್ಲಿ ತೊಡಗಿವೆ, ಅದ್ರಲ್ಲೂ ಭೂಮಿ ಮೇಲಿನ ನರಕವಾಗಿದ್ದ ಜಗದಲ್ಲಿ ಸೇನೆ ಕೆಲವೇ ಗಂಟಯಲ್ಲಿ ಸೇತುವೆ ನಿರ್ಮಾಣ ಮಾಡಿ ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದು ಎಲ್ಲರ ಮೆಚ್ಚುಗೆ ಗಳಿಸಿದೆ.

ಯಾರು ತೆರಳಲಾಗದ ಜಾಗದಲ್ಲಿ ಸೇನೆಯ ಸಿಬ್ಬಂದಿ ತಮ್ಮ ಜೀವದ ಹಂಗು ತೊರೆದು ಎಲ್ಲರನ್ನು ರಕ್ಷಿಸಿದ್ದಾರೆ. ಮಣ್ಣಿನಡಿ ಹೂತುಹೋಗಿದ್ದ ಜನರನ್ನು ತಮ್ಮ ಹೆಗಲ ಮೇಲೆ ಹೊತ್ತು ನದಿ ದಾಟಿಸಿದ್ದಾರೆ. ಬಳಿಕ ಅವರನ್ನು ಹೊತ್ತು ಆಂಬ್ಯುಲೆನ್ಸ್‌ಗೆ ಹಾಕುವವರೆಗೂ ಭಾರತೀಯ ಸೇನೆ ಸಿಬ್ಬಂದಿ ಶ್ರಮ ವಹಿಸಿದ್ದಾರೆ. ಸದ್ಯಕ್ಕೆ ಸೇನಾ ಸಿಬ್ಬಂದಿಯೇ ದೇವರಾಗಿ ದೇವರ ಭೂಮಿ ಕಾಪಾಡುತ್ತಿದ್ದಾರೆ.
ಆದ್ರೆ ಈಗೊಂದು ಘಟನೆ ಎಂತವರನ್ನೂ ಭಾವುಕರನ್ನಾಗಿ ಮಾಡುತ್ತಿದೆ. ಭೂಕುಸಿತದಲ್ಲಿ ಎಲ್ಲರ ರಕ್ಷಣೆಗೆ ಟೊಂಕ ಕಟ್ಟಿ ನಿಂತಿರುವ ಸೇನಾ ಸಿಬ್ಬಂದಿಗೆ ಶಾಲಾ ವಿದ್ಯಾರ್ಥಿಯೊಬ್ಬರ ಪತ್ರ ಬರೆದಿರುವುದು ಭಾರೀ ಮೆಚ್ಚುಗೆ ಗಳಿಸುವ ಜೊತೆಗೆ ಆತನ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ಭೂಕುಸಿತ ಪೀಡಿತ ಕೇರಳದ ವಯನಾಡ್‌ನಲ್ಲಿ ಸೈನಿಕರ ರಕ್ಷಣಾ ಪ್ರಯತ್ನಗಳಿಂದ ಪ್ರೇರಿತನಾಗಿ, 3ನೇ ತರಗತಿಯ ವಿದ್ಯಾರ್ಥಿ ಸೇನೆಗೆ ಅಭಿನಂದನಾ ಪತ್ರ ಬರೆದಿದ್ದಾನೆ. ಜೊತೆಗೆ ನಾನು ಸಹ ಮುಂದೆ ದೊಡ್ಡವನಾಗಿ ಸೇನೆ ಸೇರುತ್ತೇನೆ ಎಂದು ಪತ್ರದಲ್ಲಿ ಬರೆದಿದ್ದಾನೆ.
ಘಟನಾ ಸ್ಥಳದಲ್ಲಿ 500ಕ್ಕೂ ಹೆಚ್ಚು ಮಂದಿ ಸೈನಿಕರು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಸತತ 5 ದಿನಗಳಿಂದ ರಕ್ಷಣಾ ಕಾರ್ಯ ನಡೆಯುತ್ತಲೇ ಇದೆ. ಹೀಗಾಗಿ ಈ ಕಾರ್ಯಗಳ ನೋಡಿದ ಶಾಲಾ ವಿದ್ಯಾರ್ಥಿ ಅಭಿನಂದನಾ ಪತ್ರ ಬರೆದು ಸೇನೆಗೆ ಧನ್ಯವಾದ ಅರ್ಪಿಸಿದ್ದಾನೆ.
ವಿದ್ಯಾರ್ಥಿ ಬರೆದ ಪತ್ರದಲ್ಲಿ ಏನಿದೆ?
''ಆತ್ಮೀಯ ಭಾರತೀಯ ಸೇನೆ, ನನ್ನ ಪ್ರೀತಿಯ ವಯನಾಡ್ ಭಾರಿ ಭೂಕುಸಿತದಿಂದ ಹಾನಿಗೊಳಗಾಗಿದೆ ಮತ್ತು ವಿನಾಶ ಸೃಷ್ಟಿಸಿದೆ. ನೀವು ಅವಶೇಷಗಳಡಿಯಲ್ಲಿ ಸಿಲುಕಿರುವ ಜನರನ್ನು ರಕ್ಷಿಸುತ್ತಿರುವುದನ್ನು ನೋಡಿ ನನಗೆ ಹೆಮ್ಮೆ ಮತ್ತು ಸಂತೋಷವಾಯಿತು" ಎಂದು ಮಲಯಾಳಂನಲ್ಲಿ ಶಾಲೆಯ ವಿದ್ಯಾರ್ಥಿ ರಾಯನ್ ಬರೆದಿದ್ದಾನೆ. 'ನೀವು ಹೊಟ್ಟೆ ಹಸಿವಿನಿಂದ ಬಿಸ್ಕೇಟ್‌ಗಳ ಸೇವಿಸುತ್ತಿರುವ ವಿಡಿಯೋವನ್ನು ನಾನು ನೋಡಿದೆ. ಇದು ನನಗೆ ಕಾಡಿತು. ನೀವು ರಕ್ಷಣೆಗಾಗಿ ಸೇತುವೆ ನಿರ್ಮಿಸಿದ್ದೀರಿ. ನಮಗಾಗಿ ಕೆಲಸ ಮಾಡುತ್ತಿದ್ದೀರಿ, ನಾನು ಸಹ ಮುಂದೊಂದು ದಿನ ಭಾರತೀಯ ಸೇನೆ ಸೇರಲು ಬಯಸುತ್ತೇನೆ. ಹಾಗು ನನ್ನ ರಾಷ್ಟ್ರವನ್ನ ರಕ್ಷಿಸಲು ಬಯಸುತ್ತೇನೆ' ಎಂದು ಮಲಯಾಳಂನಲ್ಲಿ ಬರೆದಿದ್ದಾನೆ.
ಈ ಪತ್ರ ನೋಡಿದ ಭಾರತೀಯ ಸೇನೆ ಈ ಪತ್ರಕ್ಕೆ ಪ್ರತಿಕ್ರಿಯೆಯನ್ನು ಸಹ ನೀಡಿದೆ. ಆತ್ಮೀಯ ಮಾಸ್ಟರ್ ರಾಯನ್, ನಿಮ್ಮ ಮನದಾಳದ ಮಾತುಗಳು ನಮ್ಮನ್ನು ಆಳವಾಗಿ ಮುಟ್ಟಿವೆ. ಸಂಕಷ್ಟದ ಸಮಯದಲ್ಲಿ, ನಾವು ಭರವಸೆಯ ದಾರಿದೀಪವಾಗಲು ಗುರಿ ಹೊಂದಿದ್ದೇವೆ ಮತ್ತು ನಿಮ್ಮ ಪತ್ರವು ಈ ಧ್ಯೇಯವನ್ನು ಪುನರುಚ್ಚರಿಸುತ್ತದೆ. ಸೇನೆ ಸಮವಸ್ತ್ರವನ್ನು ಧರಿಸಿ ನೀವು ನಮ್ಮೆದುರು ನಿಲ್ಲುವ ದಿನಕ್ಕಾಗಿ ನಾವು ಕುತೂಹಲದಿಂದ ಕಾಯುತ್ತಿದ್ದೇವೆ ಎಂದು ಸೇನೆ ಭಾವುಕ ಪತ್ರಕ್ಕೆ ಧನ್ಯವಾದ ಹೇಳಿದೆ.
ಭಾರತೀಯ ಸೇನೆಯ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ 190 ಅಡಿ ಉದ್ದದ ಬೈಲಿ ಸೇತುವೆಯ ನಿರ್ಮಾಣವನ್ನು ಕೆಲವೇ ಗಂಟೆಗಳಲ್ಲಿ ಪೂರ್ಣಗೊಳಿಸಿ ರಕ್ಷಣಾ ಕಾರ್ಯಚರಣೆ ನಡೆಸಿತ್ತು. ಸದ್ಯ ಬಹುತೇಕ ಶೋಧ ಕಾರ್ಯ ಅಂತಿಮ ಹಂತಕ್ಕೆ ತಲುಪಿದೆ.



Click it and Unblock the Notifications