Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನನಗೆ 12 ದೇಶದಲ್ಲಿ 100ಕ್ಕೂ ಹೆಚ್ಚು ಮಕ್ಕಳಿದ್ದಾರೆ: ಟೆಲಿಗ್ರಾಮ್ ಸಿಇಓ ಅಚ್ಚರಿ..!
ಇತ್ತೀಚಿನ ವರ್ಷಗಳಲ್ಲಿ ಈ ಬಯೋಲಾಜಿಕಲ್ ಫಾದರ್ ಹಾಗೂ ಬಯೋಲಾಜಿಕಲ್ ಮದರ್ ಎಂಬ ಎರಡು ವಿಭಿನ್ನ ವಿಧಾನಗಳ ಮೂಲಕ ತಂದೆ-ತಾಯಿ ಆಗಬಹುದು. ಇದನ್ನು ಜೈವಿಕವಾಗಿ ಮಕ್ಕಳ ಪಡೆಯುವ ವಿಧಾನ ಎಂದು ಕರೆಯಲಾಗುತ್ತೆ. ಇಲ್ಲಿ ಪುರುಷರು ವೀರ್ಯ ದಾನದ ಮೂಲಕ ಹಾಗೂ ಮಹಿಳೆ ಅಂಡಾಣು ದಾನದ ಮೂಲಕ ತಾಯಿಯಾಗಬಹುದು.
ಆದ್ರೆ ನಿಮಗೆ ಅಚ್ಚರಿಯ ವಿಚಾರ ಏನೆಂದರೆ ಟೆಲಿಗ್ರಾಮ್ ಆಪ್ ಅನ್ನು ನೀವು ಬಳಸುತ್ತಿರಬಹುದು. ಈ ಟೆಲಿಗ್ರಾಮ್ ಸಹ ಸಂಸ್ಥಾಪಕ ಮತ್ತು ಸಿಇಓ ಪಾವೆಲ್ ಡುರೊವ್ ಸುಮಾರು 100 ಮಕ್ಕಳ ತಂದೆಯಾಗಿದ್ದಾರಂತೆ. ಜೊತೆಗೆ 12 ದೇಶಗಳಲ್ಲಿ ಅವರು 100ಕ್ಕೂ ಹೆಚ್ಚು ಮಕ್ಕಳನ್ನು ಹೊಂದಿರುವುದಾಗಿ ಅವರು ಹೇಳಿದ್ದಾರೆ.

ಡುರೊವ್ ತಮ್ಮ ಟೆಲಿಗ್ರಾಮ್ ಆಪ್‌ನಲ್ಲಿ ಈ ನೂರು ಮಕ್ಕಳ ಕಥೆಯನ್ನ ಹಂಚಿಕೊಂಡಿದ್ದಾರೆ. ಟೆಲಿಗ್ರಾಮ್‌ನಲ್ಲಿ ಡು ರೋವ್‌ನ ಚಾನೆಲ್ ಹೆಸರಿನ ಗುಂಪಿನಲ್ಲಿ ಹಂಚಿಕೊಂಡ ಅವರು, "ನನಗೆ 100 ಕ್ಕೂ ಹೆಚ್ಚು ಜೈವಿಕ ಮಕ್ಕಳಿದ್ದಾರೆ ಎಂದು ಹೇಳಲಾಗಿದೆ. ಮದುವೆಯಾಗದ ಮತ್ತು ಒಬ್ಬಂಟಿಯಾಗಿ ಬದುಕಲು ಇಷ್ಟಪಡುವ ಹುಡುಗನಿಗೆ ಇದು ಹೇಗೆ ಸಾಧ್ಯ?''
"ಹದಿನೈದು ವರ್ಷಗಳ ಹಿಂದೆ, ನನ್ನ ಸ್ನೇಹಿತರೊಬ್ಬರು ವಿಚಿತ್ರವಾದ ಮನವಿಯೊಂದಿಗೆ ನನ್ನ ಬಳಿ ಬಂದಿದ್ದರು. ಅವರು ಮತ್ತು ಅವರ ಪತ್ನಿ ಫಲವತ್ತತೆಯ ಸಮಸ್ಯೆಯಿಂದಾಗಿ ಮಕ್ಕಳನ್ನು ಹೊಂದಲು ಸಾಧ್ಯವಾಗಲಿಲ್ಲ ಮತ್ತು ಅವರು ಮಗುವನ್ನು ಹೊಂದಲು ಕ್ಲಿನಿಕ್‌ನಲ್ಲಿ ವೀರ್ಯವನ್ನು ದಾನ ಮಾಡಲು ನನ್ನನ್ನು ಕೇಳಿದರು. ಆದರೆ ಈ ವೇಳೆ ನನಗೆ ಜೋರಾಗಿ ನಗು ಬರುತ್ತಿತ್ತು. ಆದ್ರೆ ನನ್ನ ಬಳಿ ಬಂದಿದ್ದ ವ್ಯಕ್ತಿ ಎಷ್ಟು ಭೀಕರ ಸಮಸ್ಯೆಯಲ್ಲಿರಬಹುದು ಎಂದು ನಾನು ಭಾವಿಸಿದೆ''
ವೀರ್ಯವನ್ನು ದಾನ ಮಾಡಲು ಕ್ಲಿನಿಕ್‌ಗೆ ಭೇಟಿ ನೀಡಿದ ನಂತರ, ಡುರೊವ್ ಅವರು "ಉತ್ತಮ-ಗುಣಮಟ್ಟದ ಸ್ಪರ್ಮ್ ಹೊಂದಿರುವುದು ಅರಿವಿಗೆ ಬಂದಿದೆ. ಅಲ್ಲದೆ ಪ್ರಪಂಚದಲ್ಲಿ ಸಾವಿರಾರು ಮಂದಿಗೆ ಇದರಿಂದ ಉಪಯೋಗ ಆಗಲಿದೆ ಎಂಬುದನ್ನು ಅವರು ಅರಿತುಕೊಂಡರು. ಹೀಗಾಗಿ ವೀರ್ಯ ದಾನ ಮಾಡಲು ಅವರು ಮುಂದಾಗಿರುವುದಾಗಿ ಅವರು ತಮ್ಮ ಕಥೆ ಹಂಚಿಕೊಂಡಿದ್ದಾರೆ.
ಆದರೆ ಅವರೀಗ ವೀರ್ಯ ದಾನ ಮಾಡುವುದನ್ನು ನಿಲ್ಲಿಸಿದ್ದರು ಸಹ ಐವಿಎಫ್ ಕ್ಲೀನಿಕ್‌ನಲ್ಲಿ ಇಂದಗೂ ಅವರ ವೀರ್ಯ ವನ್ನು ಶೇಖರಿಸಿ ಇಡಲಾಗಿದೆ. ಅಲ್ಲದೆ ಹಲವು ದೇಶಗಳಿಗೆ ರವಾನಿಸಲಾಗಿದೆ. ಮಕ್ಕಳನ್ನು ಪಡೆಯಲು ಉದ್ದೇಶಿಸುವ ಕುಟುಂಬಗಳು ಬಳಸಿಕೊಳ್ಳುತ್ತಿವೆ ಎಂದಿದ್ದಾರೆ.
ಆರೋಗ್ಯಕರ ವೀರ್ಯದ ಕೊರತೆಯು ವಿಶ್ವಾದ್ಯಂತ ಹೆಚ್ಚು ಗಂಭೀರವಾದ ಸಮಸ್ಯೆಯಾಗಿದೆ ಮತ್ತು ಅದನ್ನು ನಿವಾರಿಸಲು ನಾನು ನನ್ನ ಪಾತ್ರವನ್ನು ಮಾಡಿದ್ದೇನೆ ಎಂದು ನಾನು ಹೆಮ್ಮೆಪಡುತ್ತೇನೆ ಎಂದಿದ್ದಾರೆ. 39 ವರ್ಷದ ಪಾವೆಲ್ ಡುರೊವ್ ಯುನೈಟೆಡ್ ಅರಬ್ ಎಮಿರೇಟ್ಸ್‌ನ ದುಬೈ ನಿವಾಸಿಯಾಗಿದ್ದಾರೆ. 22 ನೇ ವಯಸ್ಸಿನಲ್ಲಿ ಅವರು ರಷ್ಯಾದ ಅತಿದೊಡ್ಡ ಸಾಮಾಜಿಕ ನೆಟ್‌ವರ್ಕ್ Vkontakte ಅನ್ನು ರಚಿಸಿದರು. ಇದಾದ ಬಳಿಕ ಟೆಲಿಗ್ರಾಮ್‌ನ ಸಹ ಸಂಸ್ಥಾಪಕ ಹಾಗೂ ಸಿಇಓ ಆಗಿದ್ದಾರೆ.
ವೀರ್ಯದಾನ ಹಾಗೂ ಫರ್ಟಿಲಿಟಿ ಸಂಬಂಧ ಈಗ ತಂತ್ರಗಳು ಬಹಳ ಮುಂದುವರೆದಿದೆ. ಬಂಜೆತನ ಹಾಗೂ ಮಕ್ಕಳಾಗದೆ ಇರುವ ಸಮಸ್ಯೆಯನ್ನ ನಿವಾರಿಸುವ ಹತ್ತಾರು ಮಾರ್ಗದಲ್ಲಿ ವೀರ್ಯ ಹಾಗೂ ಅಂಡಾಣು ದಾನವೂ ಮಾರ್ಗ ಒಂದಾಗಿದೆ. ಸದ್ಯ ಐವಿಎಫ್ ಚಿಕಿತ್ಸೆ ಮೂಲಕ ಮಕ್ಕಳನ್ನು ಪಡೆಯುತ್ತಿರುವ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ಮೊದಲು ವ್ಯಕ್ತಿಯೊಬ್ಬ ವೀರ್ಯ ದಾನದ ಮೂಲಕ 1 ಸಾವಿರಕ್ಕೂ ಅಧಿಕ ಮಕ್ಕಳಿಗೆ ತಂದೆಯಾಗಿರುವುದಾಗಿ ಹೇಳಿಕೊಂಡಿದ್ದ. ಈಗ ಟೆಲಿಗ್ರಾಮ್ ಸಿಇಓ ಸಹ ಅಚ್ಚರಿ ಮೂಡಿಸಿದ್ದಾನೆ.



Click it and Unblock the Notifications