Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಬಿಎಂಟಿಸಿಯ ರಮೇಶ-ಸುರೇಶ ಹರಿಕತೆ ವೀಡಿಯೋ ನೋಡಿದ್ದೀರಾ?
ಬೆಂಗಳೂರು ಟ್ರಾಫಿಕ್ ಹೇಗಿದೆಯೆಂದು ನಿಮಗೆಲ್ಲಾ ಗೊತ್ತು? ಇಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು ಯಾರೂ ಎಷ್ಟು ಕಿ. ಮೀ ಇದೆ ಎಂದು ಯಾರೂ ಲೆಕ್ಕಾಚಾರ ಹಾಕುವುದಿಲ್ಲ, ಬದಲಿಗೆ ಎಷ್ಟು ಗಂಟೆ ಬೇಕು ಎಂದೇ ನೋಡುತ್ತಾರೆ. ಏಕೆಂದರೆ ಕೆಲವೊಮ್ಮೆ ಜಸ್ಟ್ ಒಂದು ಕಿಮೀ ಹೋಗಲು ಒಂದು ಅರ್ಧ ಗಂಟೆ ತೆಗೆದುಕೊಳ್ಳುವುದೂ ಉಂಟು. ಬೆಂಗಳೂರಿನಲ್ಲಿ 2-3 ಕಿ. ಮೀ ದೂರವಿರುವ ಸ್ಥಳಕ್ಕೆ ಹೋಗಲು ಗಾಡಿಯಲ್ಲಿ ಹೋಗುವುದಕ್ಕಿಂತ ಕಾಲ್ನಡಿಗೆಯಲ್ಲಿ ಹೋದರೆ ಬೇಗ ತಲುಪಬಹುದು ಅಲ್ವಾ?

ಇನ್ನು ಕಾರಿನಲ್ಲಿ ಹೋಗುವುದಾದರೆ ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಂತು, ನಿಂತು ಹೋಗುವಾಗಲೇ ಬಿಪಿ ಹೆಚ್ಚಾಗಿರುತ್ತದೆ, ಇನ್ನು ಆಫೀಸ್‌ನಲ್ಲಿ ಬಾಸ್ ಕಳುಹಿಸಿದ ಮೇಲ್‌ಗಳನ್ನು ನೋಡುವಾಗ ಕೆಲಸ ಪ್ರಾರಂಭಿಸುವ ಮುನ್ನವೇ ಸುಸ್ತಾಗಿರುತ್ತದೆ, ಆದ್ದರಿಂದ ತುಂಬಾ ಮಾನಸಿಕ ಒತ್ತಡಕ್ಕೆ ಒಳಗಾಗುತ್ತೇವೆ. ಇದನ್ನು ಬಿಎಂಟಿಸಿಯವರು ಸೊಗಸಾದ ವೀಡಿಯೋ ಮಾಡುವ ಮೂಲಕ ಸ್ವಂತ ವಾಹನ ಬಳಸುವ ಬದಲಿಗೆ ಬಿಬಿಎಂಟಿ ಬಸ್ ಬಳಸಿದರೆ ನಿಮಗೆ ಹಾಗೂ ಪರಸರಕ್ಕೆ ಎಷ್ಟೆಲ್ಲಾ ಲಾಭಗಳಿವೆ ಎಂದು ತುಂಬಾ ಸೊಗಸಾದ ಹರಿಕತೆಯ ರೂಪದಲ್ಲಿ ಹೇಳಿದ್ದಾರೆ ನೋಡಿ:
ಕಲಿಯುಗದ ಮಧ್ಯಕಾಲದಲ್ಲಿ ಭರತ ಭೂಮಿಯ ಕರ್ನಾಟಕ ರಾಜ್ಯದ ಬೆಂಗಳೂರಿನ ಸಿಲ್ಕ್‌ಬೋರ್ಡ್ ಜಂಕ್ಷನ್‌ನಲ್ಲಿ ಬೆಳಗ್ಗೆ ಹೊತ್ತಿನಲ್ಲಿ ಪ್ರಯಾಣಿಕರು ಬಸ್‌ಗಾಗಿ ಕಾಯುತ್ತಿರುತ್ತಾರೆ. ರಮೇಶ ಹಾಗೂ ಸುರೇಶ ಎಂಬ ಎರಡು ಸಾಫ್ಟ್ ಎಂಜಿನಿಯರ್‌ಗಳು ಬೆಳಗ್ಗೆ ಆಫೀಸ್‌ಗೆ ಹೊರಡುತ್ತಿರುತ್ತಾರೆ. ಸುರೇಶ ತನ್ನ ಸ್ವಂತ ಕಾರಿನಲ್ಲಿ ಆಫೀಸ್‌ಗೆ ತೆರಳಿದರೆ ರಮೇಶ ಬಿಎಂಟಿಸಿ ಬಸ್‌ನಲ್ಲಿ ತೆರಳುತ್ತಾರೆ. ಕಾರಿನಲ್ಲಿ ತೆರಳಿದ ಸುರೇಶ ಅಲ್ಲಲ್ಲಿ ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಂತು ಸುಸ್ತಾಗಿ ಆಫೀಸ್‌ಗೆ ಬಂದು ಅಲ್ಲಿ ಸರಿಯಾಗಿ ಕೆಲಸ ಮಾಡಲಾಗದೆ ಬಾಸ್‌ನಿಂದ ಬೈಗುಳ ತಿಂದು, ಮನೆಗೆ ಬಂದಾಗ ಅಲ್ಲಿ ಹೆಂಡತಿ ಕಡೆಯಿಂದಲೂ ಬೈಗುಳ ತಿಂದು ಆತನ ಜೀವನ ಕಷ್ಟಕರವಾಗಿದ್ದರೆ, ಇತ್ತ ಬಿಎಂಟಿಸಿ ಬದುಕಿನಲ್ಲಿ ಹೋಗುವ ರಮೇಶ ಹಾಡುಗಳನ್ನು ಕೇಳುತ್ತಾ, ಪುಸ್ತಕಗಳನ್ನು ಹೋದುತ್ತಾ, ಜನರೊಂದಿಗೆ ಮಾತನಾಡುತ್ತಾ ಯಾವುದೇ ದಣಿವಿಲ್ಲದೆ ಆಫೀಸ್ ಮುಟ್ಟುತ್ತಾನೆ. ನಂತರ ಆಫೀಸ್‌ನಲ್ಲಿ ಚೆನ್ನಾಗಿ ಕೆಲಸ ಮಾಡಿ ಬಾಸ್‌ನ ಹೊಗಳಿಕೆ ಸಿಕ್ಕಿ ಖುಷಿ-ಖುಷಿಯಾಗಿ ಮನೆಗೆ ಬಂದು ಮನೆಯಿಂದಲೂ ಹೆಂಡತಿಯ ಮೆಚ್ಚುಗೆ ಪಡೆದು ಖುಷಿ-ಖುಷಿಯಾಗಿ ಜೀವನ ಸಾಗಿಸುತ್ತಿದ್ದಾನೆ.
ಆದ್ದರಿಂದ ನಿಮ್ಮ ವಾಹನ ಚಲಾಯಿಸಿಕೊಂಡು ಹೋಗಿ ಮಾನಸಿಕ ಒತ್ತಡ ಅನುಭವಿಸುವುದಕ್ಕಿಂತ, ಬಿಎಂಟಿಸಿ ಬಳಸಿದರೆ ನಿಮಗೆ, ನಿಮ್ಮ ಜೇಬು ಹಾಗೂ ಪರಿಸರಕ್ಕೂ ಒಳ್ಳೆಯದು ಎಂದು ಹೇಳುತ್ತಿದೆ.
ದೆಹಲಿಯಲ್ಲಿ ವಾಯು ಮಾಲಿನ್ಯ ನೋಡುವಾಗ ನಮ್ಮ ಬೆಂಗಳೂರು ಆ ರೀತಿ ಕಲುಷಿತವಾಗುವುದಕ್ಕಿಂತ ಮುನ್ನ ಎಚ್ಚೆತ್ತುಕೊಳ್ಳಬೇಕಾಗಿದೆ. ಆ ನಿಟ್ಟಿನಲ್ಲಿ ಯೋಚಿಸಿಯಾದರೂ ಸ್ವಂತ ವಾಹನ ಬಳಕೆ ಕಡಿಮೆ ಮಾಡಿ ಸಾರ್ವಜನಿಕ ವಾಹನ ಹೆಚ್ಚಾಗಿ ಬಳಸಬೆಕಾಗಿದೆ.



Click it and Unblock the Notifications
