Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ರಾಯರ ದಿನವಾದ ಗುರುವಾರದಂದು ಪೂಜೆ ಮಾಡುವುದು ಹೇಗೆ? ವಿಧಿ ವಿಧಾನಗಳೇನು ನೋಡಿ.!
ಅಪಾರ ಮಹಿಮರೂ ದಯಾಳುಗಳೂ ಯತಿಶ್ರೇಷ್ಠರೂ ಆಗಿರುವ ಶ್ರೀ ರಾಘವೇಂದ್ರಸ್ವಾಮಿಗಳು ಮಂತ್ರಾಲಯದಲ್ಲಿ ನೆಲೆಸಿದ್ದಾರೆ. ಭಕ್ತರ ಆರಾಧ್ಯ ದೇವ ಎಂದೇ ಗುರುಗಳು ಪ್ರಸಿದ್ಧಿ ಪಡೆದಿದ್ದಾರೆ. ನಿತ್ಯವೂ ಸಾವಿರಾರು ಭಕ್ತರು ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ಆಶೀರ್ವಾದ ಪಡೆಯುತ್ತಾರೆ. ಭಕ್ತರನ್ನು ನೆನೆದರೆ ಕ್ಷಣ ಮಾತ್ರದಲ್ಲಿ ಕಷ್ಟಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಅವರ ಭಕ್ತರಲ್ಲಿದೆ. ಅಲ್ಲದೆ ನಂಬಿ ಬಂದ ಭಕ್ತರನ್ನು ರಾಯರು ಎಂದಿಗೂ ಕೈಬಿಡುವುದಿಲ್ಲ.
ಹಾಗೆ ಗುರುವಾರ ರಾಯರ ಪೂಜೆಗೆ ಸೂಕ್ತ ದಿನವಂತೆ. ಪ್ರತೀ ಗುರುವಾರದಂದು ಶ್ರೀ ರಾಘವೇಂದ್ರರ ಪೂಜೆ ಅಥವಾ ಉಪವಾಸ ವ್ರತ ಮಾಡಬೇಕು. ಪೂಸ ನಕ್ಷತ್ರನಲ್ಲಿ ಬರುವಂತಹ ಗುರುವಾರವು ಪೂಜೆ ಅತೀ ಶುಭವೆನ್ನಲಾಗಿದೆ. ನಮ್ಮ ಸಾಮಾನ್ಯ ವಿಧಿವಿಧಾನದಂತೆ ಪೂಜೆ ಮಾಡಬಹುದು. ಆದರೆ ನಾವು ಸ್ವಚ್ಛವಾಗಿರುವುದು ಅತೀ ಅಗತ್ಯ.

ಆರು ಗುರುವಾರಗಳ ಕಾಲ ಪೂಜೆ ಮಾಡಬೇಕು ಮತ್ತು ಅಂತ್ಯದ ಪೂಜೆ ಏಳನೇ ಗುರುವಾರದಂದು ಮಾಡಬೇಕು.ಏಳನೇ ಗುರುವಾರದಂದು ಪೂಜೆ ಮಾಡಬೇಕು ಮತ್ತು ಇದು ಪೂಜೆ ಕೊನೆಗೊಳಿಸಲು ಅಂತಿಮ ಗುರುವಾರವಾಗಿದೆ ಮತ್ತು ಇದಕ್ಕೆ ವಿಶೇಷ ಬದ್ಧತೆ ತೋರಿಸಬೇಕು.ಹಾಗಾದರೆ ಪೂಜೆ ಮಾಡುವುದು ಹೇಗೆ? ವಿಧಿ ವಿಧಾನಗಳು ಇಲ್ಲಿವೆ ನೋಡಿ.
ಪೂಜೆ ಮಾಡುವಂತಹ ಜಾಗವನ್ನು ಸ್ವಚ್ಛವಾಗಿಟ್ಟುಕೊಳ್ಳಿ
ಪೂಜೆ ಮಾಡುವಂತಹ ಜಾಗವನ್ನು ಮೊದಲು ಶುಚಿಗೊಳಿಸಿ. ಬಳಿಕ ಈ ಜಾಗದಲ್ಲಿ ಕೊಲಂ ಅಥವಾ ರಂಗೋಲಿ ಹಾಕಿ. ಇದರ ಬಳಿಕ ಸಣ್ಣ ಮನಾಯಿ(ಮರದಿಂದ ಮಾಡಿದ ಕುಳಿತುಕೊಳ್ಳುವ ಸಾಧನ) ಇಡಿ ಮತ್ತು ಇದನ್ನು ಶುದ್ಧ ಮಾಡಿಕೊಂಡು, ಇದಕ್ಕೂ ರಂಗೋಲಿ ಹಚ್ಚಿ. ಮನಾಯಿಯ ಮೇಲೆ ಶ್ರೀ ರಾಘವೇಂದ್ರರ್ ಫೋಟೊ ಇಡಿ. ಈ ಫೋಟೊವನ್ನು ಸ್ವಚ್ಛಗೊಳಿಸಿ ಮತ್ತು ಇದಕ್ಕೆ ಶ್ರೀಗಂಧ ಮತ್ತು ಕುಂಕುಮ ಹಾಕಿ. ಇದರ ಬಳಿಕ ತುಳಸಿ ಮಾಲೆ ಮತ್ತು ಬೇರೆ ಹೂಗಳ ಮಾಲೆ ಫೋಟೊಗೆ ಹಾಕಿ.
ಬೆಳಗುವ ದೀಪವನ್ನಿಡಿ
ಫೋಟೋದ ಮುಂದೆ ಐದು ಕಡೆಗಳಿಂದ ಬೆಳಗುವ ದೀಪವನ್ನಿಡಿ. ಒಳ್ಳೆಯ ಹಣ್ಣುಗಳು, ತೆಂಗಿನಕಾಯಿ, ವೀಲ್ಯದ ಎಲೆಗಳನ್ನು ತೆಗೆದುಕೊಳ್ಳಿ. ರಾಘವೇಂದ್ರ ರಾಯರ ಫೋಟೋವಿದ್ದರೆ ಅದನ್ನು ಚೆನ್ನಾಗಿ ಒದ್ದೆ ಬಟ್ಟೆಯಿಂದ ಒರೆಸಿ, ಮೂರ್ತಿಯಿದ್ದರೆ ನೀರನ್ನು ಸಂಪ್ರೋಕ್ಷಿಸಿ. ಈಗ ರಾಘವೇಂದ್ರರ ಫೋಟೊದ ಮುಂದೆ ದೀಪ ಹಚ್ಚಿ.
ಈ ಮಂತ್ರವನ್ನು ಹೇಳಿ..
ಪೂಜೆ ಆರಂಭಿಸುವ ಮೊದಲು ನಿಮ್ಮ ಮನಸ್ಸು ಶುದ್ಧವಾಗಿರಲಿ ಮತ್ತು ಅದನ್ನು ನಿಯಂತ್ರಿಸಿಕೊಳ್ಳಿ. ಎಲ್ಲಾ ಇಚ್ಛೆಗಳು ಪೂರ್ತಿಯಾಗಲಿ ಎಂದು ಬೇಡಿಕೊಳ್ಳಿ. ಫೋಟೊದ ಮುಂದೆ ಕುಳೀತು ಧೂಪ ನೀಡಿ ಮತ್ತು ಇದರ ಬಳಿಕ ನೈವೇದ್ಯ ಅರ್ಪಿಸಿ. 2-3 ತುಳಸಿ ಎಲೆಗಳನ್ನು ತೆಗೆದುಕೊಂಡು ಅಂಗೈಯಲ್ಲಿ ಇಟ್ಟುಕೊಂಡು ಫೋಟೊ ಮತ್ತು ದೀಪಕ್ಕೆ ಪ್ರದಕ್ಷಿಣೆ ಬನ್ನಿ. ನೀವು 11 ಸಲ ಪ್ರದಕ್ಷಿಣೆ ಬರಬೇಕು ಮತ್ತು ಹೀಗೆ ಮಾಡುವಾಗ ಈ ಮಂತ್ರವನ್ನು ಹೇಳಿ.
ಪೂಜ್ಯಾಯಾ ರಾಘವೇಂದ್ರಾಯ
ಸತ್ಯಧರ್ಮ ರಧಾಯಚ
ಭಜತಾಂ ಕಲ್ಪವೃಕ್ಷಯಾ ನಮತಾಂ
ಶ್ರೀ ಕಾಮಧೇನುವೇ
ಶ್ರೀ ರಾಘವೇಂದ್ರರ ಪೂಜಿಸಲು ಗುರುವಾರವು ಒಳ್ಳೆಯದು. ಆದರ ಯಾವುದೇ ಒಳ್ಳೆಯ ದಿನದಂದು ನೀವು ಈ ಪೂಜೆ ಆರಂಭಿಸಬಹುದು. ಇದಕ್ಕೆ ನೀವು ಗುರುವಾರಕ್ಕಾಗಿ ಕಾರಯಬೇಕಿಲ್ಲ.ಪುರುಷರು ಧೋತಿ(ಬಿಳಿ ಪಂಚೆ) ಧರಿಸಬೇಕು ಮತ್ತು ಖಾಲಿ ಮೈಯಲ್ಲಿ ಇರಬೇಕು. ಪೂಜೆಯ ವೇಳೆ ಮಹಿಳೆಯರು ಸೀರೆ ಉಡಬೇಕು.
ನೀವು ಗುರುವಾರ ಬೆಳಗ್ಗೆ ಪೂಜೆ ಮಾಡುವಿರಾದರೆ ಬುಧವಾರ ರಾತ್ರಿ ಪೂಜೆಗೆ ಉಡುವ ಬಟ್ಟೆಯನ್ನು ನೀರಿನಲ್ಲಿ ನೆನೆಸಿಡಿ ಮತ್ತು ಇದರ ಬಳಿಕ ಪೂಜೆಗೆ ಸಂಬಂಧಿಸಿದ ಬಟ್ಟೆಗಳು ಒಣಗಿಸುವ ಜಾಗದಲ್ಲಿ ಇದನ್ನು ಒಣಗಿಸಿ. ಪೂಜೆಯ ದಿನ ಹಾಸಿಗೆ ಅಥವಾ ದಿಂಬು ಬಳಸಬೇಡಿ. ನೆಲದ ಮೇಲೆ ಶುದ್ಧ ಬಟ್ಟೆ ಅಥವಾ ಚಾಪೆ ಹಾಕಿ ಮಲಗಿ.
ಬೆಳಗ್ಗೆ 5 ಗಂಟೆಗೆ ಎದ್ದು ಬಳಿಕ ಪೂಜೆ ಮಾಡಿ
ಬೆಳಗ್ಗಿನಿಂದಲೇ ಉಪವಾಸ ಮಾಡಿ. ಉಪವಾಸ ಮಾಡಲು ಸಾಧ್ಯವಿಲ್ಲದೆ ಇದ್ದರೆ ಆಗ ಹಣ್ಣುಗಳನ್ನು ತಿಂದು ಹಾಲು ಕುಡಿಯಿರಿ. ಈ ವ್ರತ ಆಚರಿಸುವ ವಾರ ಮಾಂಸಹಾರ ಸೇವನೆ ಮಾಡಲೇಬಾರದು, ಮನೆಯಲ್ಲಿಯೂ ಮಾಡದಿದ್ದರೆ ಉತ್ತಮ. ಪ್ರತಿ ಗುರುವಾರ ಉಪವಾಸದ ಜೊತೆ ಮನೆಯಲ್ಲಿ ಮಾಂಸಹಾರ ಮಾಡದಂತೆ ನೋಡಿಕೊಳ್ಳುವುದು ಉತ್ತಮ.



Click it and Unblock the Notifications

