ನಂದಿನಿ ತುಪ್ಪ ಪರಿಶುದ್ಧವೆಂದು ಗ್ರಾಹಕರು ನಂಬಲು ಕಾರಣವೇನು? ಪರಿಶುದ್ಧ ತುಪ್ಪ ಕಂಡು ಹಿಡಿಯಲು ಸರಳ ಪರೀಕ್ಷೆಗಳು

ತಿರುಪತಿ ಲಡ್ಡು ಪ್ರಸಾದ ವಿವಾದದ ಬಳಿಕ ಕರ್ನಾಟಕದ ಮುಜರಾಯಿ ಇಲಾಖೆ ಎಲ್ಲಾ ದೇವಾಲಯಗಳಲ್ಲಿ ಪ್ರಸಾದ ತಯಾರಿಸುವಾಗ ನಂದಿನಿ ತುಪ್ಪವನ್ನೇ ಬಳಸುವಂತೆ ಆದೇಶ ಹೊರಡಿಸಿದೆ.

ಕರ್ನಾಟಕದ ಹಾಲಿನ ಉತ್ಪನ್ನಗಳ ಬ್ರ್ಯಾಂಡ್‌ ನಂದಿನಿ, ಸದಾ ಗ್ರಾಹಕರ ವಿಶ್ವಾಸವನ್ನು ಉಳಿಸಿಕೊಂಡು ಬಂದಿದೆ. ನಂದಿನಿ ತುಪ್ಪಕ್ಕಿಂತ ಅಗ್ಗದ ತುಪ್ಪ ಮಾರುಕಟ್ಟೆಯಲ್ಲಿ ದೊರೆಯಬಹುದು, ಆದರೆ ಅದರ ಪರಿಶುದ್ಧತೆಯನ್ನು ನಂದಿನಿ ತುಪ್ಪದ ಜೊತೆ ಹೋಲಿಕೆ ಮಾಡಲು ಸಾಧ್ಯವಾಗುವುದಿಲ್ಲ, ನಂದಿನಿ ತುಪ್ಪವನ್ನು ಕಣ್ಮುಚ್ಚಿ ನಂಬಬಹುದು.

Nandini Ghee

ತಿರುಪತಿಯ ಆಡಳಿತ ಮಂಡಲಿ ನಂದಿನಿ ತುಪ್ಪ ದುಬಾರಿ ಎಂಬ ಕಾರಣ ಹೇಳಿ, ತುಪ್ಪವನ್ನು ಖರೀದಿ ಮಾಡುವುದನ್ನು ನಿಲ್ಲಿಸಿತು, ಆದರೆ ಈಗ ತಯಾರಾಗುತ್ತಿರುವ ಲಡ್ಡುಗಳನ್ನು ಕಲಬೆರಿಕೆ ತುಪ್ಪದಲ್ಲಿ ತಯಾರು ಮಾಡಲಾಗುತ್ತಿದೆ, ವನಸ್ಪತಿ ಸೇರಿದಂತಿ ಹಸುವಿನ ಕೊಬ್ಬು ಕೂಡ ಬಳಸಲಾಗುತ್ತಿದೆ ಎಂಬ ಆರೋಪ ಹೊರಬರುತ್ತಿದ್ದಂತೆ ಭಕ್ತರಿಗೆ ಆಘಾತವಾಗಿದೆ, ಇದರ ಬೆನ್ನಲ್ಲೇ ಕರ್ನಾಟಕ ಸರ್ಕಾರ ದೇವಾಲಯಗಳಲ್ಲಿ ನಂದಿನಿ ತುಪ್ಪವನ್ನೇ ಬಳಸುವಂತೆ ಸೂಚನೆ ನೀಡಲಾಗಿದೆ. ಭಕ್ತರಿಗೆ ಅರ್ಪಿಸುವ ಪ್ರಸಾದಕ್ಕೆ ನಂದಿನಿ ತುಪ್ಪ ಬಿಟ್ಟು ಬೇರೆ ಯಾವ ತುಪ್ಪವನ್ನು ಬಳಸದಂತೆ ಸೂಚನೆ ನೀಡಲಾಗಿದೆ.

ನಂದಿನಿ ತುಪ್ಪವನ್ನು ಗ್ರಾಹಕರು ಕಲಬೆರಿಕೆಯ ಭಯವಿಲ್ಲದೆ ನಂಬಬಹುದು ಏಕೆ?

ಗುಣಮಟ್ಟ: ಇದನ್ನು ಹಸುವಿನ ಹಾಲಿನಿಂದ ತಯಾರಿಸಲಾಗಿದೆ, ಅಲ್ಲದೆ ತುಪ್ಪ ತಯಾರು ಮಾಡುವಾಗ ಸಾಂಪ್ರದಾಯಕ ವಿಧಾನ ಅನುಸರಿಸಿ ತುಪ್ಪವನ್ನು ತಯಾರು ಮಾಡಲಾಗುವುದು, ಇದಕ್ಕೆ AGMARK ಸರ್ಟಿಫಿಕೇಟ್ ಇದ್ದು ಇದರಲ್ಲಿ ಯಾವುದೇ ಕೃತಕ ಬಣ್ಣ ಸೇರಿಸಿಲ್ಲ.

ರುಚಿ: ನಂದಿನಿ ತುಪ್ಪ ನೀವು ಹಸುವಿನ ಹಾಲಿನಿಂದ ನೀವೇ ತುಪ್ಪ ತಯಾರು ಮಾಡಿದಾಗ ಸಿಗುವ ರುಚಿ-ಗುಣಮಟ್ಟದಲ್ಲಿ ಯಾವುದೇ ವ್ಯತ್ಯಾಸವಿರಲ್ಲ, ಅಲ್ಲದೆ ಸುವಾಸನೆಯನ್ನು ಹೊಂದಿರುತ್ತದೆ.
ಕರ್ನಾಟಕದ ಹಾಲಿನ ಉತ್ಪನ್ನಗಳಲ್ಲಿ ನಂದಿನಿಗೆ ಮೊದಲ ಸ್ಥಾನ ಎರಡನೇ ಸ್ಥಾನ ಅಮೂಲ್‌ ಹಾಲಿನ ಉತ್ಪನ್ನಗಳಿಗಿದೆ.
ನಂದಿನಿ ತುಪ್ಪ ದಕ್ಷಿಣ ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲಿಯೂ ಲಭ್ಯವಿದೆ, ಇದನ್ನು ದುಬೈ ಮುಂತಾದ ಅರಬ್ ರಾಷ್ಟ್ರಗಳಿಗೂ ರಪ್ತು ಮಾಡಲಾಗುವುದು.

ನಂದಿನಿ ತುಪ್ಪದಿಂದ ಮಾಡಿದ ಅಡುಗೆ ತುಂಬಾ ಸ್ವಾದಿಷ್ಟಕರವಾಗಿರುತ್ತದೆ
ನಂದಿನಿ ತುಪ್ಪ ಪರಿಶುದ್ಧವಾದ ತುಪ್ಪವಾಗಿರುವುದರಿಂದ ಇದರಿಂದ ಮಾಡಿದ ಅಡುಗೆ ಕೂಡ ತುಂಬಾನೇ ರುಚಿಯಾಗಿರುತ್ತದೆ, ಈ ತುಪ್ಪ ನೀಡುವ ಸ್ವಾದಕ್ಕಾಗಿಯೇ ಜನರು ನಂದಿನಿ ತುಪ್ಪದ ರುಚಿಯನ್ನು ತುಂಬಾ ಇಷ್ಟಪಡುತ್ತಾರೆ, ಮಕ್ಕಳ ಆಹಾರದಲ್ಲಿ ಕೂಡ ನಂದಿನಿ ತುಪ್ಪ ಹಾಕಿ ನೀಡಬಹುದು, ನಂದಿನಿ ಎಂಬ ಬ್ರ್ಯಾಂಡ್‌ನಲ್ಲಿ ಕಲಬೆರಿಕೆಯ ಭಯವಿಲ್ಲ.

ಶುದ್ಧ ಹಸುವಿನ ತುಪ್ಪ ಕಂಡು ಹಿಡಿಯುವುದು ಹೇಗೆ?
ನೀವು ಮನೆಯಲ್ಲಿ ಕೆಲ ಪರೀಕ್ಷೆ ಮಾಡಿ ಅದು ಶುದ್ಧ ತುಪ್ಪವೇ ಎಂದು ತಿಳಿಯಬಹುದು
ನೀವು ಒಂದು ಚಮಚ ತುಪ್ಪವನ್ನು ತೆಗೆದು ಕಾಯಿಸಿ, ಆ ತುಪ್ಪ ಬೇಗನೆ ಕರಗಿ ಅದು ಬೇಗನೆ ಕಂದು ಬಣ್ಣಕ್ಕೆ ತಿರುಗಿದರೆ ಅದು ಪರಿಶುದ್ಧವಾದ ತುಪ್ಪ, ಅದೇ ಬೇಗನೆ ಕರಗಲಿಲ್ಲ, ಕರಗಿದ ಮೇಲೂ ಹಳದಿ ಬಣ್ಣದಲ್ಲಿ ಇದ್ದರೆ ಅದು ಶುದ್ದವಲ್ಲ ಎಂದರ್ಥ

ನಿಮ್ಮ ಅಂಗೈಗೆ ಹಾಕಿ ಪರೀಕ್ಷೆ ಮಾಡಬಹುದು
ನಿಮ್ಮ ಅಂಗೈಗೆ ಸ್ವಲ್ಪ ತುಪ್ಪ ಹಾಕಿ, ಅದು ಬೇಗನೆ ಕರಗಿದರೆ ಶುದ್ಧ ತುಪ್ಪ, ಇಲ್ಲಾಂದ್ರೆ ಅದು ಪರಿಶುದ್ಧವಾದ ತುಪ್ಪವಲ್ಲ.

ನೀವು ಅಯೋಡಿಯನ್ ಟೆಸ್ಟ್ ಮಾಡಬಹುದು
ಒಂದು ಚಮಚ ತುಪ್ಪ ಕಾಯಿಸಿ ಅದಕ್ಕೆ ಚಿಟಿಕೆಯಷ್ಟು ಅಯೋಡಿಯನ್‌ ಹಾಕಿದರೆ ಅದರ ಬಣ್ಣ ಬದಲಾದರೆ ಅದು ಕಲಬೆರಿಕೆ ತುಪ್ಪ.

ತುಪ್ಪಕ್ಕೆ ವನಸ್ಪತಿ ಮಿಕ್ಸ್ ಆಗಿದೆಯೇ ಎಂದು ತಿಳಿಯುವುದು ಹೇಗೆ?
ನೀವು ಸ್ವಲ್ಪ ತುಪ್ಪವನ್ನು ಗಾಜಿನ ಡಬ್ಬಕ್ಕೆ ಹಾಕಿ ಅದರಲ್ಲಿ ಸ್ವಲ್ಪ ಸಕ್ಕರೆ ಹಾಕಿ ಚೆನ್ನಾಗಿ ಅಲುಗಾಡಿಸಿ ನಂತರ ಒಂದು 5 ನಿಮಿಷ ಹಾಗೆಯೇ ಇಡಿ, ತಳಭಾಗದಲ್ಲಿ ಕೆಂಪು ಬಣ್ಣ ಕಂಡು ಬಂದರೆ ಆ ತುಪ್ಪ ಶುದ್ಧವಲ್ಲ ಎಂದರ್ಥ.

Story first published: Friday, September 20, 2024, 21:11 [IST]
X
Desktop Bottom Promotion