Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಶುಕ್ರವಾರ ಈ ಲಕ್ಷ್ಮಿ ಕುಬೇರ ಮಂತ್ರ ಪಠಿಸಿ, ಆರ್ಥಿಕ ಸಂಕಷ್ಟ ದೂರಾಗುವುದು
ಶುಕ್ರವಾರ ಲಕ್ಷ್ಮಿ ಪೂಜೆ ಮಾಡಿದರೆ ಲಕ್ಷ್ಮಿ ನಮ್ಮ ಮನೆಯಲ್ಲಿ ನೆಲೆಸಿರುತ್ತಾಳೆ ಎಂಬುವುದು ಅವಳನ್ನು ನಂಬಿರುವ ಭಕ್ತರ ಬಲವಾದ ನಂಬಿಕೆ. ಶ್ರೀ ಲಕ್ಷ್ಮಿಯನ್ನು ಪ್ರತಿ ಶುಕ್ರವಾರ ಅತ್ಯಂತ ಶ್ರದ್ಧಾ ಭಕ್ತಿಯಿಂದ ಪೂಜಿಸುತ್ತಾರೆ. ಈ ದಿನ ಉಪವಾಸವಿದ್ದು ಲಕ್ಷ್ಮಿಯನ್ನು ಆರಾಧಿಸಿದರೆ ಇನ್ನೂ ಒಳ್ಳೆಯದು, ಅವಳ ಕೃಪೆಗೆ ಬೇಗನೆ ಪಾತ್ರರಾಗುವಿರಿ.

ಲಕ್ಷ್ಮಿ ಒಲಿದರೆ ಹಣದ ಕೊರತೆಯೇ ಇರುವುದಿಲ್ಲ, ಮನೆಯಲ್ಲಿ ಸಂಪತ್ತು, ಸಮೃದ್ಧಿ ಹೆಚ್ಚುವುದು, ಆದ್ದರಿಂದ ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಎಲ್ಲರೂ ಬಯಸುತ್ತಾರೆ. ನೀವು ಸಂಪತ್ತು ಹೆಚ್ಚಲು ಶುಕ್ರವಾರ ಪೂಜೆ ಮಾಡುವಾಗ ಲಕ್ಷ್ಮಿ ಕುಬೇರ ಮಂತ್ರಗಳನ್ನು ಹೇಳಿದರೆ ಇನ್ನೂ ಒಳ್ಳೆಯದು.
ಶುಕ್ರವಾರ ಲಕ್ಷ್ಮಿ ಪೂಜೆಯನ್ನು ಹೇಗೆ ಮಾಡಬೇಕು? ಈ ದಿನ ಪಠಿಸಬೇಕಾದ ಮಂತ್ರಗಳು ಇವುಗಳ ಕುರಿತ ಮಾಹಿತಿ ಇಲ್ಲಿದೆ:
ಲಕ್ಷ್ಮಿ ಪೂಜೆಗೆ ಸಿದ್ಧತೆ
* ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ. ಮಡಿ ಬಟ್ಟೆ ಧರಿಸಿ.
* ಶುಕ್ರವಾರ ಲಕ್ಷ್ಮಿಯನ್ನು ಪೂಜಿಸುವ ಮುನ್ನ ದೇವರ ಪೂಜಾ ವಸ್ತುಗಳು ಹಾಗೂ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಕು. ಅವಳ ಮೂರ್ತಿಯನ್ನು ತೊಳೆದು ಇಡಬೇಕು, ಫೋಟೋವಾದರೆ ಒರೆಸಿ ಇಡಿ.
* ಮನೆಮುಂದೆ ಹಾಗೂ ದೇವರ ಕೋಣೆಯಲ್ಲಿ ರಂಗೋಲಿ ಹಾಕಿ.
* ನಂತರ ದೇವಯನ್ನು ಹಲಗೆಯ ಮೇಲೆ ಪ್ರತಿಷ್ಠಾಪಿಸಿ, ಅವಳಿಗೆ ಬಟ್ಟೆ, ಆಭರಣ, ಹೂ, ಹಣ್ಣುಗಳಿಂದ ಅಲಂಕರಿಸಿ.
* ಲಕ್ಷ್ಮಿಯನ್ನು ಪೂಜಿಸುವಾಗ ತುಂದು ಕಂಚಿನ ತಂಬಿಗೆಯಲ್ಲಿ ನೀರು ತುಂಬಿ ಅದರಲ್ಲಿ ನಾಣ್ಯ ಹಾಕಿ, ಜುಟ್ಟು ಇರುವ ತೆಂಗಿನಕಾಯಿ ಇಟ್ಟು ಕುಂಕುಮ ಇಡಲು ಮರೆಯದಿರಿ.
* ಶಂಖವೂ ಇದ್ದರೆ ಒಳ್ಳೆಯದು.
* ದೇವಿಗೆ ದೈವೇದ್ಯ ಅರ್ಪಿಸಲು ಅಕ್ಕಿ ಪಾಯಸ ಮಾಡಿಡಿ.
* ನಂತರ ದೇವಿಗೆ ತುಪ್ಪದ ದೀಪ ಹಚ್ಚಿ ಮಂತ್ರಗಳನ್ನು ಹೇಳಿ
* ನಂತರ ದೇವಿಗೆ ನೈವೇದ್ಯ ಅರ್ಪಿಸಿ.
* ನಂತರ ಆ ಪ್ರಸಾದವನ್ನು ಮನೆಮಂದಿಗೆ ಹಂಚಿ.
ಸಂಜೆ ಹೊತ್ತಿನಲ್ಲಿ ಲಕ್ಷ್ಮಿ ಪೂಜೆ
ಸಂಜೆ ಹೊತ್ತು ಲಕ್ಷ್ಮಿ ದೀಪ ಹಚ್ಚಿದ ಬಳಿಕ ಅವಳಿಗೆ ಆರತಿ ಮಾಡಿ ಮನೆ ಮುಂದೆ ತುಪ್ಪದ ಹಚ್ಚಿಡಬೇಕು. ದೀಪದ ಬತ್ತಿಗೆ ಕೆಂಪು ಬಣ್ಣದ ನೂಲು ಬಳಸಿದರೆ ಇನ್ನೂ ಒಳ್ಳೆಯದು. ಅವಳಿಗೆ ಬಿಳಿ ಹಾಗೂ ಕೆಂಪು ಹೂಗಳನ್ನು ಅರ್ಪಿಸಿ. ಮನೆ ಬಾಗಿಲಿನಲ್ಲಿ ದೀಪ ಬೆಳಗುವುದರಿಂದ ಲಕ್ಷ್ಮಿ ಒಲಿಯುತ್ತಾಳೆ ಇದರಿಂದ ನಿಮ್ಮ ಆರ್ಥಿಕತೆಯನ್ನು ಸುಧಾರಣೆ ಕಾಣುವಿರಿ.
ಶುಕ್ರವಾರ ಈ ಲಕ್ಷ್ಮಿ ಕುಬೇರ ಮಂತ್ರ ಪಠಿಸಿ
ಲಕ್ಷ್ಮಿ ಕುಬೇರ ಮಂತ್ರ: .
"ಓಂ ಹ್ರೀಂ ಶ್ರೀಂ ಕ್ರೀಂ ಶ್ರೀಂ ಕುಬೇರಾಯ, ಅಷ್ಟ ಲಕ್ಷ್ಮಿ ಮಮ ಗೃಹೆ ಧನಂ ಪುರಾಯ ಪುರಾಯ ನಮಃ"
ಮಹಾಲಕ್ಷ್ಮಿ ಮಂತ್ರ:
"ಓಂ ಶ್ರೀಂ ಹ್ರೀಂ ಶ್ರೀಂ ಕಮಲೆ ಕಮಲಲಾಯೆ ಪ್ರಸೀದ, ಪ್ರಸೀದ ಓಂ ಶ್ರೀಂ ಹ್ರೀಂ ಶ್ರೀಂ ಮಹಾಲಕ್ಷ್ಮಯೆ ನಮಃ"
ಕುಬೇರ ಮಂತ್ರ:
ಓಂ ಶ್ರೀಂ ಒಂ ಹ್ರೀಂ ಶ್ರೀಂ ಓಂ ಹ್ರೀಂ ಶ್ರೀಂ ಕ್ಲೀಮ್ ವಿತ್ತೆಶ್ವರಾಯ ನಮಃ
ಓಂ ಯಕ್ಷಾಯ ಕುಬೇರಾಯ ವೈಶ್ರವಣಾಯ ಧನಧಾನ್ಯಾಧಿಪತಯೇ ಧನಧಾನ್ಯಸಮೃದ್ಧಿಂ ಮೇ ದೇಹಿ ದಾಪಯ ಸ್ವಾಹಾ
ಈ ಮಂತ್ರಗಳನ್ನು ಪಠಿಸುವುದರಿಂದ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ.



Click it and Unblock the Notifications

