Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
ಮಾಮೂಲಿ ಅಲ್ಲ 2 ನಿಮಿಷದಲ್ಲಿ ಮಾಡುವ ಬೊಂಬಾಟ್ ಚಿತ್ರಾನ್ನ..! ರೆಸಿಪಿ ಇಲ್ಲಿದೆ..!
ಚಿತ್ರಾನ್ನ ಎಲ್ಲರ ಮನೆಯ ಬೆಳಗಿನ ಉಪಹಾರ. ರುಚಿ ರುಚಿಯಲ್ಲಿ ಚಿತ್ರಾನ್ನ ಮಾಡಿ ಬೆಳಗ್ಗೆ ಸವಿಯೋದು ಕಾಮನ್, ರಾತ್ರಿ ಊಟ ಮಾಡಿ ಉಳಿದ ಅನ್ನವನ್ನ ಬೆಳಗ್ಗೆ ಚಿತ್ರಾನ್ನ ಮಾಡೋದು ನಡೆದುಕೊಂಡು ಬಂದಿದೆ. ಚಿತ್ರಾನ್ನ ಕೆಲವರಿಗೆ ಇಷ್ಟವಾಗೋದಿಲ್ಲ. ಆದ್ರೆ ಈ ರೀತಿ ಮಾಡಿದ್ರೆ ಎಲ್ಲರು ಇಷ್ಟಪಟ್ಟು ಸವಿಯುತ್ತಾರೆ. ಚಿತ್ರಾನ್ನ ಅಂದ್ರೆ ಕೆಲವರು ಮೂಗು ಮುರಿಯುತ್ತಾರೆ. ಆದ್ರೆ ಅದರ ರುಚಿ ನೋಡಿದವರಿಗೆ ಚಿತ್ರಾನ್ನ ಫೇಮಸ್ ಖಾದ್ಯ.
ಒಳ್ಳೆಯ ಒಗ್ಗರಣೆ ಬಗೆ ಬಗೆಯ ವಸ್ತುಗಳ ಹಾಕಿ ಮಾಡುವ ಚಿತ್ರಾನ್ನ ರುಚಿಯಲ್ಲಿಯೂ ಎ ಗ್ರೇಡ್. ಹಾಗೆ ಈ ಚಿತ್ರಾನ್ನವನ್ನ ಬೆಳಗ್ಗೆ ತಿಂಡಿಗೆ ಮಾಡಿದ್ರೆ ಮಧ್ಯಾಹ್ನದ ಬಾಕ್ಸ್‌ಗೆ ಸಂಜೆಯ ಸ್ನ್ಯಾಕ್ಸ್‌ಗೂ ಕೂಡ ಸವಿಯಬಹುದು. ಮನೆ ಮಂದಿಗೆಲ್ಲಾ ಇಷ್ಟಪಟ್ಟು ಸವಿಯಬಹುದಾದ ಚಿತ್ರಾನ್ನವನ್ನ ಮಾಡುವುದು ಹೇಗೆ? ಹೋಟೆಲ್ ಸ್ಟೈಲ್‌ನ ಚಿತ್ರಾನ್ನ ಮಾಡೋಕೆ ಕೇವಲ 2 ನಿಮಿಷ ಸಾಕು.

ಚಿತ್ರಾನ್ನ ಮಾಡಲು ಕಡಿಮೆ ಸಮಯ ಹಿಡಿಯುತ್ತೆ. ಆದ್ರೆ ಬರೀ 2 ನಿಮಿಷದಲ್ಲಿ ರುಚಿ ರುಚಿಯ ಚಿತ್ರಾನ್ನ ಮಾಡಬಹುದು ಎಂಬುದು ನಿಮಗೆ ಗೊತ್ತಾ? ಹೌದು ಕೇವಲ 2 ನಿಮಿಷ ಸಮಯದಲ್ಲಿ ಈ ಬೊಂಬಾಟ್ ರುಚಿಯ ಚಿತ್ರಾನ್ನ ಮಾಡಬಹುದು. ಹಾಗಾದ್ರೆ ಈ ಚಿತ್ರಾನ್ನ ಮಾಡುವುದು ಹೇಗೆ? ಚಿತ್ರಾನ್ನ ಮಾಡಲು ಬೇಕಾಗುವ ಪದಾರ್ಥಗಳು ಯಾವುದು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಚಿತ್ರಾನ್ನ ಮಾಡಲು ಬೇಕಾಗುವ ಪದಾರ್ಥಗಳು
- ಅನ್ನ
- ಸಾಸಿವೆ
- ಕಡಲೆ ಬೇಳೆ
- ಎಣ್ಣೆ
- ಉದ್ದಿನ ಬೇಳೆ
- ಕಡಲ ಬೀಜ
- ಅರಶಿನ ಪುಡಿ
- ಅರಶಿನ ಪುಡಿ
- ಉಪ್ಪು
- ನಿಂಬೆ
- ತೆಂಗಿನ ತುರಿ
- ಕೊತ್ತಂಬರಿ ಸೊಪ್ಪು
- ಕರಿಬೇವು
- ಹಸಿಮೆಣಸು
ಚಿತ್ರಾನ್ನ ಮಾಡುವ ವಿಧಾನ ಏನು?
ಮೊದಲು ಒಂದು ಪಾತ್ರೆ ಒಲೆ ಮೇಲೆ ಇಟ್ಟು ನಂತರ ಅದಕ್ಕೆ ಎಣ್ಣೆ ಹಾಕಿಕೊಳ್ಳಿ, ಎಣ್ಣೆ ಸ್ವಲ್ಪ ಹೆಚ್ಚಾಗಿ ಬಳಸಿ. ಎಣ್ಣೆ ಬಿಸಿಯಾದ ಬಳಿಕ ಇದಕ್ಕೆ ಸಾಸಿವೆ ಹಾಕಿ. ಅನಂತರ ಉದ್ದಿನ ಬೇಳೆ, ಕಡಲೆ ಬೇಳೆ, ಕಡಲೆ ಬೀಜ ಹಾಕಿ ಹುರಿದುಕೊಳ್ಳಿ. ಚೆನ್ನಾಗಿ ಅಂಶ ಕೆಂಪಗಾಗಲು ಬಿಡಬೇಕು.
ಈಗ ಇದಕ್ಕೆ ಅರಶಿನ, ಕರಿಬೇವು, ಹಸಿ ಮೆಣಸು ಹಾಕಿಕೊಂಡು ಮತ್ತೆ ಪ್ರೈ ಮಾಡಿ. 1 ನಿಮಿಷ ಫ್ರೈ ಮಾಡಿದ ಬಳಿಕ ಹಿಂದಿನ ದಿನ ಮಾಡಿದ್ದ ಅನ್ನ ಅಥವಾ ಚಿತ್ರಾನ್ನಕ್ಕೆಂದೇ ಮಾಡಿರುವ ಅನ್ನವನ್ನು ಇದಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಮಿಕ್ಸ್ ಮಾಡುವಾಗ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಬೇಕು.
ಘಮ ಘಮಿಸುವ ಟೊಮೆಟೋ ಪುಳಿಯೋಗರೆ ಮಾಡಿದ್ದೀರಾ.! ಇಲ್ಲಿದೆ ಸಿಂಪಲ್ ರೆಸಿಪಿ
ಅನಂತರ ಕತ್ತರಿಸಿಕೊಂಡಿರುವ ಕೊತ್ತಂಬರಿ ಸೊಪ್ಪನ್ನು ಕೂಡ ಹಾಕಿ ಕಲಸಿಕೊಳ್ಳಿ. ಕೊನೆಯಾದಾಗಿ ತೆಂಗಿನ ತುರಿ ಹಾಕಿ ಮಿಕ್ಸ್ ಮಾಡಿಕೊಂಡರೆ ಸಾಕು. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಚಿತ್ರಾನ್ನ ರೆಡಿಯಾಗುತ್ತದೆ. ಇದು ಮಾಮೂಲಿಯಾಗಿ ಮಾಡುವುದಕ್ಕಿಂತ 2 ನಿಮಿಷದೊಳಗೆ ಒಳ್ಳೆಯ ಒಗ್ಗರಣೆ ಹಾಕಿ ಮಾಡಬಹುದು. ಮನೆ ಮಂದಿಯಲ್ಲ ಈ ಚಿತ್ರಾನ್ನವನ್ನ ಬಾಯಿ ಚಪ್ಪರಿಸಿ ಸವಿಯುತ್ತಾರೆ. ನೀವು ಕೂಡ ಒಮ್ಮೆ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ. ಬೆಳಗ್ಗೆ ಸಮಯವಿಲ್ಲದಾಗ ಈ ರೀತಿ 2 ನಿಮಿಷದಲ್ಲಿ ಮಾಡುವ ಚಿತ್ರಾನ್ನ ಮಾಡಿ ಸವಿದು ನೋಡಿ.



Click it and Unblock the Notifications