Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ಘಮ ಘಮಿಸುವ ಟೊಮೆಟೋ ಪುಳಿಯೋಗರೆ ಮಾಡಿದ್ದೀರಾ.! ಇಲ್ಲಿದೆ ಸಿಂಪಲ್ ರೆಸಿಪಿ
ಬೆಳಗ್ಗೆ ತಿಂಡಿಗೆ ನೀವು ಪುಳಿಯೋಗರೆ ಮಾಡಿ ಸವಿದಿರುತ್ತೀರಿ. ಕಡಿಮೆ ಸಮಯದಲ್ಲಿ ಕಡಿಮೆ ವಸ್ತುಗಳ ಬಳಸಿ ಅತ್ಯಂತ ರುಚಿಕರ ಖಾದ್ಯವಾಗಿ ಇದನ್ನು ಮಾಡಬಹುದು. ಅದರಲ್ಲೂ ಎಂಟಿಆರ್ ಪುಳಿಯೋಗರೆ ಬಳಸಿ ಮಾಡುವಂತಹ ರೆಸಿಪಿ ಸಖತ್ ರುಚಿ ನೀಡಲಿದೆ. ಕೆಲವರಿಗೆ ಪುಳಿಯೋಗರೆ ಅಂದ್ರೆ ಪಂಚಪ್ರಾಣ. ಪುಳಿಯೋಗರೆ ಪುಡಿಯನ್ನು ಮನೆಯಲ್ಲೇ ಮಾಡಿಟ್ಟುಕೊಂಡು ಮಾಡುವ ಈ ತಿಂಡಿ ಬಹಳ ರುಚಿಕರವಾಗಿರುತ್ತೆ.
ಇನ್ನು ಮದುವೆ ಮನೆಯಲ್ಲಿ ಅಥವಾ ಶುಭ ಕಾರ್ಯದ ಸಂದರ್ಭದಲ್ಲಿ ಈ ಪುಳಿಯೋಗರೆ ಮಾಡಿದಾಗ ಅದರ ಸುವಾಸನೆ ಇಡೀ ಮನೆ ತುಂಬಿರುತ್ತದೆ. ಒಂದು ಸ್ಪೂನ್ ತುಪ್ಪ ಮಿಕ್ಸ್ ಮಾಡಿಕೊಂಡು ಸವಿಯುತ್ತಿದ್ದರೆ ಅದರ ರುಚಿಗೆ ಮಾರು ಹೋಗುತ್ತೀರಿ.

ಇನ್ನು ಪುಳಿಯೋಗರೆಯನ್ನು ಹಲವು ರೀತಿಯಲ್ಲಿ ಮಾಡಬಹುದು. ಹಾಗೆ ಟೊಮೆಟೋ ಪುಳಿಯೋಗರೆ ಮಾಡಿ ಸವಿದಿದ್ದೀರಾ? ಟೊಮೆಟೋ ಹಾಕಿ ಪುಳಿಯೋಗರೆ ಮಾಡಿದರೆ ಅದರ ರುಚಿಗೆ ನೀವು ಫಿದಾ ಆಗೋದು ಪಕ್ಕಾ. ಏಕೆಂದರೆ ಪುಳಿಯೋಗರೆ ಮಸಾಲೆಗೆ ಈ ಟೊಮೆಟೋ ಹಾಕಿ ಅದರ ರುಚಿ ಮತ್ತಷ್ಟು ಹೆಚ್ಚಿಸುತ್ತೆ. ಹಾಗಾದ್ರೆ ನಾವಿಂದು ಈ ಟೊಮೆಟೋ ಪುಳಿಯೋಗರೆ ಮಾಡುವ ಕುರಿತು ತಿಳಿಯೋಣ.
ಟೊಮೆಟೋ ಪುಳಿಯೋಗರೆ ಮಾಡುವ ವಿಧಾನವೇನು? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಈ ಪುಳಿಯೋಗರೆ ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಟೊಮೆಟೋ ಪುಳಿಯೋಗರೆ ಮಾಡಲು ಬೇಕಾಗುವ ಪದಾರ್ಥಗಳು
- ಕಡಲೆ ಬೀಜ
- ಅನ್ನ
- ಕಡಲೆ ಬೇಳೆ
- ಉದ್ದಿನ ಬೇಳೆ
- ಕರಿಬೇವು
- ಟೊಮೆಟೋ
- ಅರಶಿಣ
- ಧನಿಯಾ
- ಪುಳಿಯೋಗರೆ ಪೌಡರ್
- ಖಾರದ ಪುಡಿ
- ಉಪ್ಪು
- ಎಣ್ಣೆ
ಟೊಮೆಟೋ ಪುಳಿಯೋಗರೆ ಮಾಡುವುದು ಹೇಗೆ?
ಮೊದಲು ಒಲೆ ಮೇಲೆ ಒಂದು ಪಾತ್ರೆ ಇಟ್ಟು ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಸ್ವಲ್ಪ ಹೆಚ್ಚು ಹಾಕಿಕೊಂಡರೆ ಉತ್ತಮ. ಎಣ್ಣೆ ಬಿಸಿಯಾದಾಗ ಕಡಲೆ ಬೀಜ ಹಾಕಿ ಹುರಿದುಕೊಳ್ಳಬೇಕು. ನಂತರ ಕಡಲೆ ಬೀಜ ತೆಗೆದು ಮತ್ತೊಂದು ಬೌಲ್ಗೆ ಹಾಕಿಟ್ಟುಕೊಳ್ಳಿ. ಈಗ ಅದೇ ಎಣ್ಣೆಗೆ ಸಾಸಿವೆ, ಕಡಲೆ ಬೇಳೆ, ಉದ್ದಿನ ಬೇಳೆ ಹಾಕಿ ಕ್ರಿಸ್ಪಿಯಾಗಿ ಫ್ರೈ ಮಾಡಿಕೊಳ್ಳಿ.
ನಂತರ ಇದಕ್ಕೆ ಕರಿಬೇವು, ಮೂರು ಟೊಮೆಟೋ ದೊಡ್ಡದಾಗಿ ಕತ್ತರಿಸಿಕೊಂಡು ಹಾಕಿ, ತಕ್ಷಣ ಉಪ್ಪು ಹಾಕಿಕೊಂಡು ಫ್ರೈ ಮಾಡಬೇಕು. 3ರಿಂದ 4 ನಿಮಿಷ ಫ್ರೈ ಮಾಡಿದರೆ ಟೊಮೆಟೋ ಮೆತ್ತಗಾಗಬೇಕು. ಈಗ ಖಾರದ ಪುಡಿ, ಅರಶಿಣ, ಧನಿಯಾ ಪುಡಿ ಹಾಕಿಕೊಂಡು ಮಿಕ್ಸ್ ಮಾಡಿ. 1 ನಿಮಿಷದ ಬಳಿಕ ಸ್ವಲ್ಪ ನೀರು ಹಾಕಿ ಕುದಿಯಲು ಬಿಡಿ.
ಈಗ ಚಿಕ್ಕ ಪ್ಯಾಕೆಟ್ನ ಪುಳಿಯೋಗರೆ ಪುಡಿ ಹಾಕಿಕೊಂಡು ಮಿಕ್ಸ್ ಮಾಡಿಕೊಂಡು ಒಲೆ ಆಫ್ ಮಾಡಿಕೊಳ್ಳಿ. ಇದು ಗೊಜ್ಜಿನ ರೀತಿ ಸ್ವಲ್ಪ ತೆಳುವಾಗಿರಲಿ. ಈಗ ಒಂದು ಬೌಲ್ನಲ್ಲಿ ಅನ್ನ ತೆಗೆದುಕೊಂಡು ಅದಕ್ಕೆ ಸ್ವಲ್ಪ ಸ್ವಲ್ಪವೇ ಗೊಜ್ಜು ಹಾಕಿಕೊಳ್ಳುತ್ತಾ ಕಲಸಿಕೊಳ್ಳಬೇಕು. ಕೈಯಿಂದ ಮಿಕ್ಸ್ ಮಾಡಿಕೊಳ್ಳಿ. ಬೇಕಾದರೆ ಉಪ್ಪು ರುಚಿ ನೋಡಿಕೊಂಡು ಹಾಕಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಟೊಮೆಟೋ ಪುಳಿಯೋಗರೆ ರೆಡಿಯಾಗುತ್ತದೆ. ನೀವು ಕೂಡ ಒಮ್ಮೆ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications
