Latest Updates
-
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್!
ಚಪಾತಿ-ಊಟಕ್ಕೆ ರಾಜ್ಮಾ ಮಸಾಲೆ ಮಾಡಿ ನೋಡಿ.! ಇದರ ರುಚಿ ಮನಸೋಲದವರಿಲ್ಲ!!
ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟ, ರಾತ್ರಿ ಊಟದ ಜೊತೆಗೆ ಯಾವುದಾದರೊಂದು ಪಲ್ಯ, ಮಸಾಲೆಯುಕ್ತ ಫ್ರೈ, ಉಪ್ಪಿನಕಾಯಿ ಹೀಗೆ ಏನಾದರು ಒಂದು ಸೈಡ್ಸ್ ಇದ್ದರೆ ಊಟ ತಿಂಡಿ ರುಚಿ ದುಪ್ಪಟ್ಟ ಆಗುತ್ತೆ. ಹೀಗಾಗಿ ಎಲ್ಲರ ಮನೆಯಲ್ಲಿ ಒಂದೊಂದು ಪಲ್ಯ, ಗ್ರೇವಿ, ಫ್ರೈ ಏನಾದರು ಒಂದು ಖಾದ್ಯ ವಿಶೇಷವಾಗಿ ಮಾಡಿಯೇ ಮಾಡುತ್ತಾರೆ. ಹೀಗಾಗಿ ನಾವು ಊಟ ತಿಂಡಿಗೆ ಏನಾದರು ಪಲ್ಯ ಇದ್ದರೇನೆ ಆ ಹೊತ್ತಿನ ಊಟ ರುಚಿಯಾಗಿರುತ್ತೆ.
ಈಗ ನಾವು ಊಟ-ತಿಂಡಿಗೆ ಮಾಡಬಹುದಾದ ಅದ್ಭುತವಾದ ರುಚಿ ನೀಡುವ ರಾಜ್ಮಾ ಮಸಾಲೆ ಮಾಡುವ ಕುರಿತಂತೆ ತಿಳಿದುಕೊಳ್ಳೋಣ. ನೀವು ಕೂಡ ಬೇಳೆ ಕಾಳುಗಳ ಪ್ರಿಯರಾಗಿದ್ದರೆ ರಾಜ್ಮಾ ಮಸಾಲೆ ಸವಿದಿರುತ್ತೀರಿ. ಮದುವೆ ಮನೆಯಲ್ಲಿ, ಶುಭ ಕಾರ್ಯಗಳಲ್ಲಿ ಮಾಡಿರುವುದನ್ನು ಸವಿದಿರಬಹುದು. ಬಹಳ ರುಚಿಕರವಾದ ಈ ರಾಜ್ಮಾ ಮಸಾಲೆ ಆರೋಗ್ಯಕ್ಕೂ ಬಹಳ ಉತ್ತಮ.

ರಾಜ್ಮಾ ಮಸಾಲೆ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ. ರಾಜ್ಮಾ ಮಸಾಲೆಯ ಘಮಲು ಮೂಗಿನ ಮೇಲೆ ಬಿದ್ದರೆ ಬಾಯಲ್ಲಿ ನೀರು ಬರುವುದು ಪಕ್ಕ. ರಾಜ್ಮಾ ಮಸಾಲವನ್ನು ನಾವು ಹೋಟೆಲ್‌ನಲ್ಲಿ ಸವಿದ ರುಚಿಯಂತೆಯೇ ಮನೆಯಲ್ಲೂ ಮಾಡಬಹುದು. ನಾವಿಂದು ಈ ರಾಜ್ಮಾ ಮಸಾಲೆ ಮಾಡುವ ಕುರಿತು ತಿಳಿದುಕೊಳ್ಳೋಣ.
ರಾಜ್ಮಾ ಮಸಾಲೆ ಮನೆಯಲ್ಲೇ ಮಾಡಲು ಬೇಕಾಗುವ ಪದಾರ್ಥಗಳು ಯಾವುದು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ರಾಜ್ಮಾ ಮಸಾಲೆ ಮಾಡಲು ಬೇಕಾಗುವ ಪದಾರ್ಥಗಳು
- ರಾಜ್ಮಾ ಕಾಳು
- ಟೊಮೆಟೋ
- ಈರುಳ್ಳಿ
- ಎಣ್ಣೆ
- ಮೊಸರು
- ಅರಶಿಣ
- ಬೆಳ್ಳುಳ್ಳಿ
- ಖಾರದ ಪುಡಿ
- ಗರಂ ಮಸಾಲೆ
- ಜೀರಿಗೆ
- ಹಸಿ ಮೆಣಸು
- ಶುಂಠಿ ಬೆಳ್ಳುಳ್ಳಿ ಪೇಸ್ಟ್
ರಾಜ್ಮಾ ಮಸಾಲೆ ಮಾಡುವುದು ಹೇಗೆ?
ಮೊದಲು ರಾಜ್ಮಾ ಕಾಳನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ಹಾಕಿ ನೆನೆಸಿಡಬೇಕು. ಮೊದಲು ಒಂದು ಕುಕ್ಕರ್ ಇಟ್ಟು ಅದಕ್ಕೆ 2 ಗ್ಲಾಸ್ ನೀರು ಹಾಕಿ ಪಲಾವ್ ಎಲೆ, ಲವಂಗ, ಚೆಕ್ಕೆ ಹಾಕಬೇಕು. ಅನಂತರ ನೆನೆಸಿಟ್ಟಿರುವ ರಾಜ್ಮಾ ಕಾಳುಗಳ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿಕೊಂಡು ಮಿಕ್ಸ್ ಮಾಡಿ ಕುಕ್ಕರ್ ಮುಚ್ಚಳ ಮುಚ್ಚಿ ಸುಮಾರು 8 ಸೀಟಿ ಹೊಡೆಯಲು ಬಿಡಬೇಕು.
8 ಸೀಟಿ ಹೊಡೆಯಲು ಬಿಟ್ಟು ಈಗ ಒಂದು ಮಿಕ್ಸಿ ಜಾರ್‌ಗೆ ಟೊಮೆಟೋ ಹಾಕಿಕೊಂಡಿ ಪೇಸ್ಟ್ ಮಾಡಿಕೊಳ್ಳಿ. ಈಗ ಕುಕ್ಕರ್ ಸೀಟಿ ಹೊಡೆದ ಬಳಿಕ ಮುಚ್ಚಳ ತೆಗೆದು ಬೆಂದಿದೆಯೇ ನೋಡಿಕೊಳ್ಳಿ. ಈಗ ಒಂದು ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಎಣ್ಣೆ ಬಿಸಿಯಾಗಲು ಬಿಡಿ. ನಂತರ ಇದಕ್ಕೆ ಜಿರಿಗೆ, ಹಸಿ ಮೆಣಸು, ಈರುಳ್ಳಿ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
ಅನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಶಿಣ ಹಾಕಿ ಮಿಕ್ಸ್ ಮಾಡಿಕೊಂಡು ಇದಕ್ಕೆ ಮಿಕ್ಸಿಯಲ್ಲಿ ಪೇಸ್ಟ್ ಮಾಡಿದ್ದ ಟೊಮೆಟೋವನ್ನು ಹಾಕಿಕೊಂಡು ಗರಂ ಮಸಾಲೆ, ಖಾರದ ಪುಡಿ ಸಹ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಬೇಕು 3 ನಿಮಿಷ ಫ್ರೈ ಮಾಡಿಕೊಳ್ಳಬೇಕು. ಈಗ ಸ್ವಲ್ಪ ಮೊಸರು ಇದಕ್ಕೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಅನಂತರ ನೀರು ಹಾಕಿಕೊಂಡು ಮುಚ್ಚಳ ಮುಚ್ಚಿ ಬೇಯಲು ಬಿಡಿ.
ಇನ್ನೂ ಇದು ರುಚಿಯಾಗಿ ಬರಬೇಕು ಅಂದ್ರೆ ಸ್ವಲ್ಪ ಗೋಡಂಬಿಯನ್ನು ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿ ಹಾಕುತ್ತಾರೆ. ಹಾಗೆ ಸ್ವಲ್ಪ ಬೆಣ್ಣೆ ಮಿಕ್ಸ್ ಮಾಡಿದರೆ ಮತ್ತಷ್ಟು ರುಚಿ ಬರುವುದು ಖಚಿತ. ಇದು ಚಪಾತಿ, ಅನ್ನ, ಪರೋಟ, ದೋಸೆ, ಇಡ್ಲಿ ಹೀಗೆ ಯಾವುದೇ ಖಾದ್ಯದ ಜೊತೆಗೂ ಸವಿಯಬಹುದು.



Click it and Unblock the Notifications