Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಮಾನಸ ಸರೋವರ ಯಾತ್ರೆಗೆ ಅರ್ಜಿ ಸಲ್ಲಿಸೋದು ಹೇಗೆ? ಎಷ್ಟು ಖರ್ಚಾಗಲಿದೆ?
ಕೋವಿಡ್ ಹಾಗೂ ಚೀನಾ ನಡುವಿನ ಬಿಕ್ಕಟ್ಟಿನ ಸಮಯದಲ್ಲಿ ತಾತ್ಕಾಲಿಕವಾಗಿ ಕೊನೆಯಗೊಂಡಿದ್ದ ಕೈಲಾಸ ಮಾನಸ ಸರೋವರ ಯಾತ್ರೆ ಈ ವರ್ಷ ಜುಲೈನಲ್ಲಿ ಆರಂಭಗೊಂಡಿತ್ತು. 5 ವರ್ಷಗಳ ವಿರಾಮದ ಬಳಿಕ ಮತ್ತೆ ಆರಂಭಗೊಂಡ ಯಾತ್ರೆ ಮುಂದುವರೆಸಲು ಯಾತ್ರಿಗಳು ನೋಂದಾಯಿಸಿಕೊಳ್ಳಲು ಮುಂದಾಗಿದ್ದರು. ಅದಾದ ಬಳಿಕ ಸುಮಾರು 36 ಯಾತ್ರಿಗಳ ಮೊದಲ ತಂಡ 5 ವರ್ಷದ ಬಳಿಕ ಸಿಕ್ಕಿಂ ದಾಟಿ ಚೀನಾ ಗಡಿ ದಾಟಿ ಮುಂದೆ ಸಾಗಿದ್ದರು.
ಈ ಯಾತ್ರೆಗೆ ನಿಗದಿತ ಸಮಯದಲ್ಲಿ ಹಾಗೆ ಪೂರ್ವ ನೋಂದಾಯಿತರಿಗೆ ಮಾತ್ರವೇ ಅವಕಾಶ ನೀಡಲಾಗುತ್ತದೆ. ಈ ವರ್ಷ ಸುಮಾರು 750 ಮಂದಿ ಈ ಯಾತ್ರೆಗೆ ಆಯ್ಕೆಯಾಗಿದ್ದರು. ಹಿಂದೂ ನಂಬಿಕೆಗಳ ಪ್ರಕಾರ ಕೈಲಾಸ ಪರ್ವತವು ಶಿವನ ವಾಸಸ್ಥಾನವಾಗಿದ್ದು, ಮತ್ತು ಅದನ್ನು ಪ್ರದಕ್ಷಿಣೆ ಹಾಕಿ ಮಾನಸ ಸರೋವರದಲ್ಲಿ ಸ್ನಾನ ಮಾಡುವುದರಿಂದ ಮೋಕ್ಷ ಸಿಗುತ್ತದೆ ಎಂದು ನಂಬಲಾಗಿದೆ.

ಕೈಲಾಸ ಪರ್ವತ ಮತ್ತು ಮಾನಸ ಸರೋವರದ ಶಾಂತತೆಗೆ ಹೆಸರಾಗಿದೆ. ಕಟ್ಟುನಿಟ್ಟಾದ ಅರ್ಹತಾ ಮಾನದಂಡಗಳು ಮತ್ತು ಎಚ್ಚರಿಕೆಯ ಸಿದ್ಧತೆಯೊಂದಿಗೆ, ಯಾತ್ರಿಕರು ಶಿವನ ವಾಸಸ್ಥಾನ ಮತ್ತು ಮಾನಸ ಸರೋವರದ ಪ್ರಶಾಂತ, ಪವಿತ್ರ ಧಾಮಕ್ಕೆ ಭೇಟಿ ನೀಡುತ್ತಾರೆ. ಈ ಪರ್ವತವು
ಟಿಬೆಟಿಯನ್ ಸ್ವಾಯತ್ತ ಪ್ರದೇಶದ ದೂರದ ಪಶ್ಚಿಮ ಹಿಮಾಲಯ ಶ್ರೇಣಿಗಳಲ್ಲಿ ನೆಲೆಗೊಂಡಿದೆ.
ಬರೋಬ್ಬರಿ 6,638 ಮೀಟರ್ ಎತ್ತರವಿರುವ ಭವ್ಯವಾದ, ವಜ್ರದ ಆಕಾರ ಹೊಂದಿರುವ ಕೈಲಾಸ ಪರ್ವತ ಆಧ್ಯಾತ್ಮಿಕ ವಿಚಾರವಾಗಿ ಶಾಂತಿಯ ಮೂಲವಾಗಿ ಪರಿಗಣಿಸಲಾಗಿದೆ. ಇದು ಕೇವಲ ಹಿಂದುಗಳಿಗೆ ಮಾತ್ರವಲ್ಲದೆ ಜೈನ, ಬೌದ್ಧ ಹಾಗೂ ಬಾನ್ ಸಂಪ್ರದಾಯಿಗಳಿಗೂ ಪ್ರಮುಖ ಯಾತ್ರಾ ಸ್ಥಳವಾಗಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪ್ರತಿ ವರ್ಷ ಜೂನ್ ಮತ್ತು ಸೆಪ್ಟೆಂಬರ್ ನಡುವೆ ಅಧಿಕೃತ ಕೈಲಾಸ ಮಾನಸಸರೋವರ ಯಾತ್ರೆಯನ್ನು ನಡೆಸಲಿದೆ.
ಕೈಲಾಸ ಮಾನಸ ಸರೋವರ ಯಾತ್ರೆಗೆ ಆಯ್ಕೆ ಹೇಗೆ ಮಾಡುತ್ತಾರೆ?
ಕೈಲಾಸ ಮಾನಸ ಯಾತ್ರೆಯ ಸಂಬಂಧ ಎಲ್ಲರನ್ನೂ ಆಯ್ಕೆ ಮಾಡುವುದಿಲ್ಲ. ಈ ಯಾತ್ರೆಗೆ ತೆರಳಲು ಹಲವು ನಿಯಮಗಳು, ಅರ್ಹತಾ ಮಾನದಂಡಗಳಿವೆ. ಅರ್ಜಿ ಸಲ್ಲಿಸುವ ಭಕ್ತರು ಹಲವು ಷರತ್ತುಗಳಿಗೆ ಬದ್ದರಾಗಿರಬೇಕು. ಹಾಗೆ ಇಲಾಖಾ ನಿಯಮಗಳು ಮತ್ತು ಅರ್ಹತೆಯನ್ನು ಹೊಂದಿರಬೇಕು.
ಭಕ್ತರಿಗೆ ಇರಬೇಕಾದ ಅರ್ಹತೆ ಏನು?
ಭಾರತದ ಪ್ರಜೆಯಾಗಿರಬೇಕು
6 ತಿಂಗಳ ಮಾನ್ಯವಾಗಿರುವ ಭಾರತದ ಪಾಸ್‌ಪೋರ್ಟ್ ಹೊಂದಿರಬೇಕು
25 ವರ್ಷ ಮೇಲ್ಪಟ್ಟು 70 ವರ್ಷ ವಯಸ್ಸಿನೊಳಗಿರಬೇಕು
ದೈಹಿಕವಾಗಿ ಸದೃಢರಾಗಿರಬೇಕು ಮತ್ತು ವೈದ್ಯಕೀಯ ಪ್ರಮಾಣ ಪತ್ರ ನೀಡಬೇಕು
ಕೈಲಾಸ ಯಾತ್ರೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮುನ್ನ ಸ್ಕ್ಯಾನ್ ಮಾಡಿದ ಪಾಸ್‌ಪೋರ್ಟ್ ಸೈಜ್ ಫೋಟೋ, ವೈಯಕ್ತಿಕ ಮಾಹಿತಿ ಹೊಂದಿರುವ ದಾಖಲೆಗಳು, ಆಧಾರ್, ಗುರುತಿನ ಚೀಟಿ, ಕುಟುಂಬ ಮಾಹಿತಿಯ ದಾಖಲೆ, ವೈದ್ಯಕೀಯ ಪ್ರಮಾಣ ಪತ್ರ (ಅಗತ್ಯತೆ ಇದ್ದರೆ) ಪಾಸ್‌ಪೋರ್ಟ್ ಸೇರಿ ಕೆಲವು ದಾಖಲೆಗಳ ನೀಡಬೇಕಾಗುತ್ತದೆ.
ಮಾನಸ ಸರೋವರ ಯಾತ್ರೆಗೆ ಅಂದಾಜು ಎಷ್ಟು ಖರ್ಚಾಗುತ್ತದೆ
ತೀರ್ಥಯಾತ್ರೆಯ ವೆಚ್ಚವು ಆಯ್ಕೆ ಮಾಡಿದ ಮಾರ್ಗವನ್ನು ಅವಲಂಬಿಸಿ ಬದಲಾಗುತ್ತದೆ. ಉತ್ತರಾಖಂಡ್ ಮಾರ್ಗವು 1.74 ರೂಪಾಯಿ ವೆಚ್ಚದಾಯಕವಾಗಿದ್ದರೆ ಸಿಕ್ಕಿಂನ ಮಾರ್ಗವು ಪ್ರತಿ ವ್ಯಕ್ತಿಗೆ 2.83 ಲಕ್ಷ ರೂಪಾಯಿ ಖರ್ಚಾಗಲಿದೆ. ಈ ಖರ್ಚು ವೈಯಕ್ತಿಕ ಕಾರಣದಿಂದಾಗಿ ಹೆಚ್ಚು ಕಡಿಮೆ ಆಗಬಹುದು. ಹಾಗೆ ನೀವು ಯಾವ ಭಾಗದಿಂದ ಪ್ರಯಾಣಿಸುತ್ತೀರಿ ಎನ್ನುವುದು ಸೇರಿದಂತೆ ಹಲವು ಕಾರಣಗಳಿಂದ ಈ ಮೊತ್ತ ಬದಲಾಗುತ್ತದೆ. ಹಾಗೆ ಲಘು ವಿಮಾನ ಸೇವೆಯನ್ನು ಸಹ ಆರಂಭಿಸಿದ್ದನ್ನು ಇಲ್ಲಿ ನೆನೆಯಬಹುದು.



Click it and Unblock the Notifications
