Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ನಾಗರ ಹಾವಿಗೂ ಇವೆ ಗೋರಿಗಳು..! ಬನಗಳು ಹುಟ್ಟಿಕೊಂಡಿದ್ದು ಏಕೆ ಗೊತ್ತಾ?
ಹಿಂದುಗಳ ಹಬ್ಬವಾಗಿರುವ ನಾಗರ ಪಂಚಮಿಯಂದು ಶ್ರದ್ಧಾ ಭಕ್ತಿಯಿಂದ ನಾಗರ ಶಿಲೆಗಳಿಗೆ ಪೂಜೆ ಮಾಡಲಾಗುತ್ತದೆ. ನಾಗರ ಬನದಲ್ಲಿ ವಿಶೇಷ ಪೂಜೆ ಹಾಗೂ ಕಲ್ಲಿಗೆ ಹಾಲೆರೆದು ಜನ ಪೂಜೆ ಸಲ್ಲಿಸುತ್ತಾರೆ. ಹೀಗಾಗಿ ನಾಗರ ಪಂಚಮಿ ಹಿಂದೂಗಳಿಗೆ ಪ್ರಮುಖ ಹಬ್ಬವಾಗಿದೆ. ಈ ನಾಗ ದೇವತೆಯ ಆಚರಣೆಯ, ಪೂಜೆಯ ಮತ್ತು ನೈವೇಧ್ಯಗಳ ಹಿಂದೆ ಕೆಲವೊಂದು ಪುರಾಣ ಕತೆಗಳು ಮತ್ತು ಸತ್ಯಾಂಶಗಳು ಇವೆ.
ನಾಗರ ಪಂಚಮಿಯನ್ನು ಶ್ರಾವಣ ಮಾಸದ ಶುಕ್ಲಪಕ್ಷದಲ್ಲಿ ಬರುವ ಐದನೆ ದಿನ ಅಂದರೆ ಪಂಚಮಿಯಂದು ಆಚರಿಸಲಾಗುತ್ತದೆ. ಇದು ಜುಲೈ ಅಥವಾ ಆಗಸ್ಟ್ ತಿಂಗಳಿನಲ್ಲಿ ಬರುತ್ತದೆ. ನಂಬಿಕೆಗಳ ಪ್ರಕಾರ ಶ್ರೀ ಕೃಷ್ಣನು ಕಾಳಿಯ ಎಂಬ ಹಾವಿನ ಉಪಟಳದಿಂದ ಜನರನ್ನು ರಕ್ಷಿಸಿದ ದಿನವೆಂದು ಈ ದಿನವನ್ನು ಕರೆಯಲಾಗುತ್ತದೆ. ಆದರೆ ನಿಮಗೆ ಗೊತ್ತಾ ನಾಗರಬನಗಳು ಹುಟ್ಟಿಕೊಂಡಿದ್ದು ಹೇಗೆ? ಈ ಹಬ್ಬ ಹುಟ್ಟಿದ್ದು ಹೇಗೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಪ್ರತಿ ಊರಲ್ಲೂ ಒಂದೊಂದು ನಾಗರ ಬನ ಇರುವುದು ನಾವು ನೋಡುತ್ತೇವೆ. ನಿಮಗೆ ಅಚ್ಚರಿಯಾಗಬಹುದು. ಕಾಡುಗಳಲ್ಲಿಯೂ ನಾಗರ ಕಲ್ಲುಗಳು ಪತ್ತೆಯಾಗುತ್ತೆ. ಗ್ರಾಮದಲ್ಲೊಂದು ನಾಗರ ಬನ ಇರುವುದನ್ನು ನಾವು ನೋಡಿರುತ್ತೇವೆ. ಹಾಗಾದ್ರೆ ಈ ನಾಗರ ಬನಗಳು ಹುಟ್ಟಿಕೊಂಡಿದ್ದು ಹೇಗೆ ಎಂಬುದೇ ಅಚ್ಚರಿಯ ಮಾಹಿತಿಯಾಗಿದೆ.
ಪ್ರತಿ ಊರಿನಲ್ಲಿ ನಾಗರ ಹಾವುಗಳನ್ನು ದೇವರ ಸ್ವರೂಪ ಎಂದು ಪೂಜಿಸಲಾಗಿತ್ತು. ಊರಿನಲ್ಲಿ ಯಾವುದಾದರು ನಾಗರ ಹಾವು ಸತ್ತಿದ್ದರೆ ಅಂತಹ ಹಾವುಗಳಿಗೆ ಅಂತ್ಯ ಸಂಸ್ಕಾರ ನೆರವೇರಿಸುತ್ತಿದ್ದರು. ನಮ್ಮ ಪೂರ್ವಜರು ಈ ರೀತಿ ಸತ್ತ ಹಾವುಗಳಿಗೆ ಕಾರ್ಯ ಮಾಡಲು ಮಾಡಿಟ್ಟ ಸ್ಥಳ ಇದಾಗಿದ್ದವಂತೆ. ಬಳಿಕ ಅದೇ ಜಾಗದಲ್ಲಿ ಕಲ್ಲುಗಳ ಇಟ್ಟು ಪೂಜಿಸಲು ಮುಂದಾದರು, ಬರು ಬರುತ್ತಾ ಈ ಜಾಗಗಳು ನಾಗರ ಬನಗಳಾದವು. ನೀವು ಕಾಡಿನಲ್ಲಿ ಕೆಲವೊಮ್ಮೆ ಒಂದೇ ಒಂದು ನಾಗರ ಕಲ್ಲು ಸಿಕ್ಕುವುದು ಸಮಾನ್ಯ, ಈ ರೀತಿ ಪೂರ್ವಜರು ಹಾವಿನ ಅಂತ್ಯ ಸಂಸ್ಕಾರದ ಬಳಿಕ ಅಲ್ಲಿ ಕಲ್ಲುಗಳನ್ನು ಗುರುತುಗಳಿಗಾಗಿ ಇಡುತ್ತಿದ್ದರು ಎಂದು ಹೇಳಲಾಗಿದೆ.
ಹೀಗಾಗಿ ನಾಗರ ಪಂಚಮಿ ಎಂದು ಈ ದಿನ ಜನರು ಭೂಮಿಯನ್ನು ಅಗೆಯಲು ಹೋಗುವುದಿಲ್ಲ. ಅದರ ಬದಲಿಗೆ ನಾಗರ ಕಲ್ಲು, ಮಣ್ಣಿನ ನಾಗ ಅಥವಾ ಚಿತ್ರ ಪಟದ ಮುಂದೆ ಉರಿದ ಭತ್ತ, ಧೂರ್ವವನ್ನು ಇಟ್ಟು ಪೂಜಿಸಲಾಗುತ್ತದೆ. ಇನ್ನು ಹಿಂದೆ ಇದು ಮಳೆಗಾಲದ ಸಮಯದಲ್ಲಿ ಹೆಚ್ಚಾಗಿ ಹಾವುಗಳು ಹೊರಗೆ ಕಾಣಿಸಿಕೊಳ್ಳುತ್ತಿದ್ದ ಕಾರಣದಿಂದ ಪೂರ್ವಜರು ಭಯಗೊಂಡು ಅವುಗಳಿಗೆ ಪೂಜೆ ಮಾಡಲು ಮುಂದಾದರಂತೆ. ಇದರಿಂದ ನಾಗರ ಪಂಚಮಿ ಆರಂಭಗೊಂಡಿತು ಎಂದು ಹೇಳಲಾಗಿದೆ.
ನಾಗನಿಗೆ ಇದೆ ಗೋರಿಗಳು
ಮನುಷ್ಯರಿಗೆ ಮಾತ್ರವಲ್ಲ ನಾಗರ ಹಾವಿಗೂ ಗೋರಿ ಕಟ್ಟಿರುವುದನ್ನು ನಾವು ನೋಡಬಹುದು. ಮಂಗಳೂರು ಸಮೀಪದ ಮೂಡುಬಿದ್ರೆ ಬಳಿಯ ಬೆಟಗೇರಿ ಎಂಬಲ್ಲಿ ಇಂದಿಗೂ ಹತ್ತಾರು ನಾಗನ ಗೋರಿಗಳು ಕಾಣಸಿಗುತ್ತವೆ. ಇವು ಹತ್ತಾರು ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ಗೋರಿಗಳಾಗಿವೆ. ನಾಗರ ಹಾವು ಮೃತಪಟ್ಟ ಬಳಿಕ ಅವುಗಳ ಅಂತಿಮ ಸಂಸ್ಕಾರ ನೆರವೇರಿಸಿ ಮಾಡಲಾಗಿರುವ ಗೋರಿಗಳು ಎನ್ನಲಾಗುತ್ತದೆ.
ಇಲ್ಲಿರುವ ನಾಗಬನದಲ್ಲಿ ಇಲ್ಲಿನ ಆದಿವಾಸಿಗಳಿಂದ ಪಾದೆಕಲ್ಲನ್ನು ಹಾಸಿ ನಾಗನನ್ನು ನಂಬಿದ್ದಾರೆ. ಇಲ್ಲಿ ಜೈನರ ನಾಗನ ಗೋರಿ ಇಲ್ಲ.ಮೂಲ ನಾಗನ ಕಲ್ಲಿಗೆ ವೈಷ್ಣವರ ಶೈಲಿಯಲ್ಲಿ ನಾಗನ ಪ್ರತಿಮೆಯನ್ನು ಪ್ರತಿಷ್ಟೆ ಮಾಡಲಾಗಿದೆ. ಈ ರೀತಿಯ ರಚನೆಗಳು ಬೇರೆ ಎಲ್ಲಿಯೂ ನೋಡಲು ಸಾಧ್ಯವಾಗುವುದಿಲ್ಲ. ಇನ್ನು ಹಳ್ಳಿ ಹಳ್ಳಿಗಳಲ್ಲು ನಾಗರ ಬನಗಳು ಕಾಣಸಿಗೋದು ಸಹ ನಮ್ಮ ಪೂರ್ವಜರ ಕೊಡುಗೆಯಾಗಿದೆ.



Click it and Unblock the Notifications

