Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಒಂದು ಎಪಿಸೋಡ್ ನಟನೆಗೆ ಸ್ಮೃತಿ ಇರಾನಿ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?
ಕೇಂದ್ರ ಸಚಿವೆಯಾಗಿ ಯಶಸ್ವಿ ಆಡಳಿತ ನಡೆಸಿದ ಮಹಿಳಾ ರಾಜಕಾರಣಿ ಸ್ಮೃತಿ ಇರಾನಿ ಈಗ ಮತ್ತೆ ನಟನೆ ಕಡೆಗೆ ಒಲವು ತೋರಿದ್ದಾರೆ. ಮಾಡೆಲಿಂಗ್ ಮೂಲಕ ವೃತ್ತಿ ಜೀವನ ಆರಂಭಿಸಿದ್ದ ಅವರು ಧಾರಾವಾಹಿ ಮೂಲಕ ಮನೆ ಮಾತಾಗಿದ್ದರು. ಈಗ ಮತ್ತೆ ಧಾರಾವಾಹಿಯಲ್ಲಿ ನಟಿಸಲು ಮುಂದಾಗುತ್ತಿದ್ದಾರೆ. ಹಿಂದಿ ಧಾರಾವಾಹಿಗಳಲ್ಲಿ ನಟನೆ ಆರಂಭಿಸಿದ್ದ ಅವರು ಮನೆ ಮಾತಾದರು. ಈಗ ಮತ್ತೆ ಭಾಗ 2ರಲ್ಲಿ ನಟಿಸಲು ಮುಂದಾಗಿದ್ದಾರೆ.
'ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ' ಧಾರಾವಾಹಿಯು ಮತ್ತೆ ಆರಂಭವಾಗುತ್ತಿದ್ದು, ಇದರಲ್ಲಿ ನಟಿಸಲು ಸ್ಮೃತಿ ಇರಾನಿ ಒಪ್ಪಿಕೊಂಡಿದ್ದಾರೆ. ಈಗ ಅವರ ಫಸ್ಟ್ ಲುಕ್ ಕೂಡ ಹೊರಬಿದ್ದಿದ್ದು ಭಾರೀ ವೈರಲ್ ಆಗಿದೆ. ಆ ಧಾರವಾಹಿಯಲ್ಲಿ ತುಳಸಿ ಪಾತ್ರದಲ್ಲಿ ಸ್ಮೃತಿ ಇರಾನಿ ಅವರು ಕಾಣಿಸಿಕೊಂಡಿದ್ದರು. ಇದಾದ ಬಳಿಕ ಅವರನ್ನು ತುಳಸಿ ಅಂತಲೇ ಹಲವು ಕರೆಯುತ್ತಿದ್ದರು.

ಬಳಿಕ ಅವರು ಚುನಾವಣೆ ಕಣಕ್ಕೆ ಎಂಟ್ರಿಕೊಟ್ಟು ವಿಧಾನ ಸಭೆಗೆ ಆಯ್ಕೆಯಾದ ಪರಿಣಾಮ ಧಾರಾವಾಹಿಯಿಂದ ಹೊರಬಂದರು. ಆದ್ರೆ ಹಲಗವು ವರ್ಷಗಳ ಬಳಿಕ ಈಗ ಅದೇ ಧಾರಾವಾಹಿಯು ಪುನರ್ ಆರಂಭವಾಗುತ್ತಿದೆ. ಹಾಗೆ ತುಳಸಿ ಪಾತ್ರದಾರಿಯಾಗಿ ಮತ್ತೆ ಸ್ಮೃತಿ ಇರಾನಿ ಬಣ್ಣ ಹಚ್ಚಲಿದ್ದಾರೆ.
ಸ್ಮೃತಿ ಇರಾನಿ ವೇತನ ಎಷ್ಟು ಲಕ್ಷ ಗೊತ್ತಾ?
ಪ್ರಸ್ತುತ ಸಕ್ರೀಯ ರಾಜಕಾರಣದಲ್ಲಿದ್ದು ಧಾರಾವಾಹಿಯಲ್ಲಿ ನಟಿಸಲು ಅವರು ಒಪ್ಪಿಕೊಂಡಿದ್ದಾರೆ. ಕಿರುತೆರೆ ಕ್ವೀನ್ ಎಂದು ಹೆಸರಾಗಿರುವ ಏಕ್ತಾ ಕಪೂರ್ ಈ ಧಾರಾವಾಹಿಯ ನಿರ್ಮಾಪಕಿಯಾಗಿದ್ದಾರೆ. ಇನ್ನು 2000ನೇ ಇಸವಿಯಲ್ಲಿ ಆರಂಭಗೊಂಡಿದ್ದ ಈ ಸೀರಿಯಲ್‌ನಲ್ಲಿ ನಟಿಸಲು ಒಂದು ಎಪಿಸೋಡ್‌ಗೆ ಸ್ಮೃತಿ ಇರಾನಿಯು ಸುಮಾರು 1,800 ರೂಪಾಯಿ ಸಂಭಾವನೆ ಪಡೆಯುತ್ತದ್ದರಂತೆ.
ಆ ಸೀರಿಯಲ್‌ನಲ್ಲಿ ನಟಿಯಾಗಿ ಅವರು ಕಾಣಿಸಿಕೊಂಡಿದ್ದರು, ಹಾಗೆ ಆ ಕಾಲಕ್ಕೆ 1,800 ರೂಪಾಯಿ ಕೂಡ ಹೆಚ್ಚಿನ ಸಂಭಾವನೆ ಆಗಿತ್ತು. ಆದರೆ ಈಗ ಹೊಸದಾಗಿ ಆರಂಭವಾಗುತ್ತಿರುವ ಸೀರಿಯಲ್‌ನ ಪ್ರತಿ ಸಂಚಿಕೆಗೆ ಅವರು ಬರೋಬ್ಬರಿ 14 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಈ ಸೀರಿಯಲ್ ಸ್ಟಾರ್ ಪ್ಲಾಸ್ ವಾಹಿನಿಯಲ್ಲಿ ಇದೇ ಜುಲೈ 29 ರಂದು ರಾತ್ರಿ 10:30 ಕ್ಕೆ ಸ್ಟಾರ್ ಪ್ಲಸ್‌ನಲ್ಲಿ ಪ್ರಸಾರವಾಗುತ್ತಿದೆ. ಈ ಸೀರಿಯಲ್‌ಗೆ ವರ್ಷಗಳಿಂದಕೂ ಅಭಿಮಾನಿಗಳು ಇದ್ದಾರೆ. ಹಾಗೆ ಹಲವರು ಈ ಸೀರಿಯಲ್‌ಗಾಗಿ ಕಾಯುತ್ತಿದ್ದಾರೆ. ಅಲ್ಲದೆ ಆ ಕಾಲದಲ್ಲಿ ನಂಬರ್ ಒನ್ ಸೀರಿಯಲ್ ಎಂಬ ಖ್ಯಾತಿಗೆ ಇದು ಕಾರಣವಾಗಿತ್ತು.
ಮಿಸ್ ಇಂಡಿಯಾ ಸ್ಪರ್ಧೆಯಿಂದ ಸೀರಿಯಲ್ ಜರ್ನಿ!
ಸ್ಮೃತಿ ಇರಾನಿ ಆರಂಭದಲ್ಲೇ ಸೀರಿಯಲ್ ನಟಿಯಾಗಿ ಗುರುತಿಸಿಕೊಂಡವರಲ್ಲ. ತಮ್ಮ ಚಿಕ್ಕ ವಯಸ್ಸಿನಲ್ಲಿ ಅವರು ಮಾಡಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಲು ಮುಂಬೈಗೆ ಬಂದಿದ್ದರು. ಈ ನಡುವೆ 1998ರಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದರು. ಇದಾದ ಬಳಿಕ ಅವರು ಪರಿಚಿತರಾದರು. ನಂತರ ಧಾರಾವಾಯಿಯ ಕಡೆ ಒಲವು ಹುಟ್ಟಿತು. ಬಳಿಕ ಏಕ್ತಾ ಕಪೂರ್ ನಿರ್ಮಾಣದ ಈ ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ ಸೀರಿಯಲ್ ಆಡಿಷನ್‌ಗೆ ಆಗಮಿಸಿದ್ದರು. ಅಲ್ಲಿ ಆಯ್ಕೆಯಾದ ಬಳಿಕ ನಟಿಯಾಗಿ ತುಳಸಿ ಪಾತ್ರದಲ್ಲಿ ಮಿಂಚಿದ್ದರು. ಇದಾದ ಬಳಿಕ ವರ್ಷಗಳ ಕಾಲ ಈ ಸೀರಿಯಲ್ ಜನಮನ್ನಣೆ ಗಳಿಸಿತ್ತು. ಆದ್ರೆ ಚುನಾವಣೆಗೆ ಧುಮುಕಿದ ಅವರು ಜಯಗಳಿಸಿದ ಕಾರಣ ಸೀರಿಯಲ್ ನಟನೆ ಕೈಬಿಟ್ಟಿದ್ದರು. ಇದಾದ ಬಳಿಕ ಅವರು ಸೀರಿಯಲ್ ನಟನೆಗೆ ಮತ್ತೆ ಮರಳಿದ್ದಾರೆ. ದಶಕದ ಬಳಿಕ ಮತ್ತೆ ಅವರು ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.



Click it and Unblock the Notifications
