Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಸೈಫ್ ಅಲಿ ಖಾನ್ ಆಸ್ಪತ್ರೆಗೆ ಸೇರಿಸಿದ ಆಟೋ ಡ್ರೈವರ್ ಯಾರು? ಆತ ಎಷ್ಟು ಹಣ ಪಡೆದ ಗೊತ್ತಾ?
ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ದರೋಡೆಕೋರ ಚಾಕುವಿನಿಂದ ಹಲ್ಲೆ ನಡೆಸಿದ್ದ ಘಟನೆ ನಡೆದು ವಾರ ಕಳೆದಿದೆ. ಹಾಗೆ ಹಲ್ಲೆ ಮಾಡಿದಾತ ಈಗ ಪೊಲೀಸ್ ತನಿಖೆ ಎದುರಿಸುತ್ತಿದ್ದಾನೆ. ಭದ್ರತೆಯ ನಡುವೆ ಆತ ಮನೆಗೆ ನುಗ್ಗಿದ್ದು ಹೇಗೆ? ಹಲ್ಲೆಗೆ ಕಾರಣವೇನು ಎಂಬುದನ್ನು ತನಿಖೆ ಮಾಡಲಾಗುತ್ತಿದೆ. ಹಾಗೆ ಸೈಫ್ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ನಟ ಸೈಫ್‌ಗೆ ಹಲವು ಬಾರಿ ಆತ ಚಾಕು ಇರಿದಿದ್ದ ಹಾಗೆ ಶಸ್ತ್ರ ಚಿಕಿತ್ಸೆ ನೆರವೇರಿಸಿ ದೇಹದೊಳಗಿದ್ದ ಚಾಕುವನ್ನು ವೈದ್ಯರು ಹೊರತೆಗೆದಿದ್ದಾರೆ. ಆಧ್ರೆ ಹಲ್ಲೆ ನಡೆದಿದ್ದು ರಾತ್ರಿ ಆಗಿತ್ತು. ಹೀಗಾಗಿ ಸೈಫ್ ಕಾರು ಚಾಲನೆ ಮಾಡದೆ ಆಟೋದಲ್ಲಿ ಆಸ್ಪತ್ರೆಗೆ ಧಾವಿಸಿದ್ದರು, ಖುದ್ದು ಪತ್ನಿ ಕರೀನಾ ಕಪೂರ್ ಆಟೋವನ್ನು ಕೂಗಿ ಕರೆದಿದ್ದರಂತೆ. ಈಗ ಆಟೋ ಡ್ರೈವರ್ ಆ ದಿನ ಏನೆಲ್ಲಾ ನಡೆದಿತ್ತು ಎಂಬುದನ್ನು ವಿವರಿಸಿದ್ದಾನೆ.

ಸ್ಥಳೀಯ ಆಟೋ ಚಾಲಕ ಭಜನ್ ಸಿಂಗ್ ಆ ದಿನ ಸುಮಾರು 2 ಗಂಟೆ ಸುಮಾರಿಗೆ ಏನೆಲ್ಲಾ ನಡೆಯಿತು, ಕರೀನಾ ಕಪೂರ್ ಕರೆದು ಏನು ಹೇಳಿದರು, ಎಷ್ಟು ಹಣ ನೀಡಿದರು ಎಂಬೆಲ್ಲಾ ಮಾಹಿತಿಯನ್ನು ಹೇಳಿದ್ದಾನೆ. ತನಿಖೆಯ ಹಿನ್ನೆಲೆ ಆತ ಕೂಡ ಪೊಲೀಸ್ ಠಾಣೆಯಲ್ಲಿ ತನ್ನ ಹೇಳಿಕೆ ನೀಡಿದ್ದಾನೆ. ಆತ ತನ್ನ ಆಟೋದಲ್ಲಿ ಸೈಫ್ ಅಲಿ ಖಾನ್ ಅವರನ್ನು ಕೂರಿಸಿದ್ದನಂತೆ. ಹಾಗೆ ಸೈಫ್ ಅವರೇ ಲೀಲಾವತಿ ಆಸ್ಪತ್ರೆಗೆ ಹೋಗುವಂತೆ ಹೇಳಿದ್ದರಂತೆ.
ನನ್ನನ್ನು ವಿಚಾರಣೆಗಾಗಿ ಬಾಂದ್ರಾ ಪೊಲೀಸ್ ಠಾಣೆಗೆ ಕರೆಯಲಾಯಿತು. ಆ ರಾತ್ರಿ ನಾನು ಹಣದ ಬಗ್ಗೆ ಯೋಚಿಸಲಿಲ್ಲ. ಇಲ್ಲಿಯವರೆಗೆ ಕರೀನಾ ಕಪೂರ್ ಅಥವಾ ಬೇರೆ ಯಾರೂ ನನ್ನನ್ನು ಸಂಪರ್ಕಿಸಿಲ್ಲ. ನಾನು ಅವರೊಂದಿಗೆ ಯಾವುದೇ ಸಂಭಾಷಣೆ ನಡೆಸಿಲ್ಲ ಎಂದು ಆಟೋ ಚಾಲಕ ಹೇಳಿಕೊಂಡಿದ್ದಾರೆ.
ಅವರ ಬೆನ್ನಿನ ಭಾಗದಿಂದ ರಕ್ತ ಸುರಿಯುತ್ತಿರುವುದು ನನಗೆ ಕಾಣಿಸಿತು, ಇದು ನನಗೂ ನೋವುಂಟು ಮಾಡಿತ್ತು. ಆರಂಭದಲ್ಲಿ ಸೈಫ್ ಅಲಿ ಖಾನ್ ನನ್ನ ರಿಕ್ಷಾದಲ್ಲಿ ಕುಳಿತಿದ್ದಾರೆಂದು ನನಗೆ ತಿಳಿದಿರಲಿಲ್ಲ. ಯಾರೋ ಗಾಯಗೊಂಡ ವ್ಯಕ್ತಿ ನನ್ನ ಆಟೋ ಹತ್ತಿದ್ದಾರೆ ಅಂತಲೇ ನಾನು ಭಾವಿಸಿದ್ದೆ. ಆದ್ರೆ ಲೀಲಾವತಿ ಆಸ್ಪತ್ರೆಯಲ್ಲಿ ಅವರನ್ನು ಇಳಿಸಿದಾಗ ಅವರ ಮಗ ಹಾಗೂ ಸೈಫ್ ಮುಖ ನನಗೆ ಕಂಡಿತು. ಆಗ ನಟನಿಗೆ ಏನೋ ಆಗಿದೆ ಎಂಬುದನ್ನು ನನಗೆ ತಿಳಿಯಿತು ಎಂದು ಆಟೋ ಚಾಲಕ ಹೇಳಿದ್ದಾರೆ.
ಆಸ್ಪತ್ರೆಯ ಗೇಟ್ ಮುಂದೆ ನಾನು ಆಟೋ ನಿಲ್ಲಿಸಿದಾಗ ಆಂಬ್ಯುಲೆನ್ಸ್ ಶಬ್ದ ಸಿಬ್ಬಂದಿ ಬರುವುದು ಎಲ್ಲಾ ಕಾಣಿಸಿತು. ಅಷ್ಟರಾಗಲೇ ಆಸ್ಪತ್ರೆ ಸಿಬ್ಬಂದಿಗೂ ಇದು ನಟ ಸೈಫ್ ಅಲಿ ಖಾಬ್ ಎಂದು ತಿಳಿದುಬಂದಿತ್ತು. ಹೀಗಾಗಿ ವೇಗವಾಗಿ ಧಾವಿಸಿದರು. ಅವರ ಬೆನ್ನಿನಿಂದ ರಕ್ತ ವಿಪರೀತವಾಗಿ ಬರುತ್ತಿತ್ತು. ಆದ್ರೆ ಆಟೋದಲ್ಲಿದ್ದಾಗ ನನಗೆ ಅವರು ಎಂದು ತಿಳಿದಿರಲಿಲ್ಲ. ಎಷ್ಟು ಬೇಗ ಸಾಧ್ಯವೋ ಅಷ್ಟು ವೇಗವಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸುವುದು ನನ್ನ ಗಮನದಲ್ಲಿತ್ತು. ಆಸ್ಪತ್ರೆ ಗೇಟ್ ಬಳಿ ಬಂದ ನಂತರ ಅವರನ್ನು ನೋಡಲು ಅವಕಾಶ ಸಿಗಲಿಲ್ಲ ಎಂದು ಆತ ಹೇಳಿಕೊಂಡಿದ್ದಾನೆ.
ಆದ್ರೆ ಅವರ ಬಳಿ ನಾನು ಯಾವುದೇ ಹಣ ಪಡೆಯಲಿಲ್ಲ. ಹಾಗೆ ಅಲ್ಲಿಂದ ಮರಳಿದೆ. ಇದಾದ ಬಳಿಕ ಯಾರು ಕೂಡ ನನ್ನ ಸಂಪರ್ಕಿಸಿರಲಿಲ್ಲ, ಪೊಲೀಸರ ಮುಂದೆ ನನಗೆ ತಿಳಿದ ವಿಚಾರ ಹೇಳಿದ್ದೇನೆ ಎಂದು ಆಟೋ ಚಾಲಕ ಅಂದು ನಡೆದ ಘಟನೆಯನ್ನು ವಿವರಿಸಿದ್ದಾನೆ.



Click it and Unblock the Notifications
