Latest Updates
-
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ!
ಅನಂತ್-ರಾಧಿಕಾ ಮದುವೆ ಮಾಡಿಸಿದ್ದ ಅರ್ಚಕರಿಗೆ ಇಷ್ಟು ಕಡಿಮೆ ಹಣ ಏಕೆ.!! ಎಷ್ಟು ಗೊತ್ತಾ?
ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ವಿವಾಹ ಬಹಳ ಅದ್ದೂರಿಯಾಗಿ ನಡೆದಿದೆ. ಈ ಮದುವೆಗೆ ಇಡೀ ವಿಶ್ವವೇ ತಿರುಗಿ ನೋಡಿದೆ. ಸುಮಾರು 5 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿರುವ ಮದುವೆ ಎಲ್ಲಾ ಕಡೆ ಸುದ್ದಿಯಾಗಿತ್ತು.
ಈ ಮದುವೆಯ ಅದ್ದೂರಿತನವೇ ಎಲ್ಲರ ಕಣ್ಣು ಕುಕ್ಕಿತ್ತು. ಉದ್ಯಮ ಲೋಕದ ದಿಗ್ಗಜರಾಗಿರುವ ಬಿಲ್ ಗೇಟ್ಸ್, ಮಾರ್ಕ್ ಜುಕರ್‌ಬರ್ಗ್, ಇವಾಂಕಾ ಟ್ರಂಪ್ ಸೇರಿ ನೂರಾರು ಮಂದಿ ಭಾಗಿಯಾಗಿದ್ದರು. ಇಡೀ ಬಾಲಿವುಡ್ ಅವರ ಮನೆಯಲ್ಲಿತ್ತು. ಇದರ ಕ್ರಿಕೆಟರ್‌ಗಳು, ಅಂತಾರಾಷ್ಟ್ರೀಯ ಫೇಮ್‌ನ ಸಿಂಗರ್‌ಗಳು ಸೇರಿ ಹಲವರು ಭಾಗಿಯಾಗಿದ್ದರು.

ಜಾಮ್‌ನಗರದಲ್ಲಿ ನಡೆದ ಪ್ರಿ ವೆಡ್ಡಿಂಗ್ ಆಚರಣೆಯ ನಂತರ, ಅಂಬಾನಿ ಕುಟುಂಬವು ಇಟಲಿಯ ವಿಹಾರದಲ್ಲಿ ಮತ್ತೊಂದು ವಿವಾಹಪೂರ್ವ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮಗಳಲ್ಲಿ ಸ್ವರ್ಗವನ್ನೇ ಅವರು ಭೂಮಿಗೆ ಇಳಿಸಿದ್ದರು. ಇದಕ್ಕಾಗಿ ಪಾಪ್ ಸಿಂಗರ್ ಜಸ್ಟಿನ್ ಬೈಬರ್ ಕಾರ್ಯಕ್ರಮಕ್ಕಾಗಿ ಆತನಿಗೆ ಬರೋಬ್ಬರಿ 80 ಕೋಟಿ ರೂಪಾಯಿ ನೀಡಲಾಗಿತ್ತು.
ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ದಶಕದ ವಿವಾಹದ ಘಟನೆ ಎಂದು ಬಣ್ಣಿಸಲಾದ ದಂಪತಿಗಳ ಮದುವೆಯ ಪ್ರಯಾಣವು ಐಷಾರಾಮಿ ಮತ್ತು ಸಂಪ್ರದಾಯದ ಕೈಗನ್ನಡಿಯಾಗಿತ್ತು.
ಆದರೆ ನಿಮಗೆ ಗೊತ್ತಾ ಈ ಮದುವೆಯಲ್ಲಿ ಕೇಂದ್ರ ಬಿಂದುವಾಗಿದ್ದ ಅರ್ಚಕರಿಗೆ ಅಂಬಾನಿ ನೀಡಿದ್ದ ಹಣವೆಷ್ಟು? ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹ ನೆರವೇರಿಸಿದ್ದ ಅರ್ಚಕರಾದ ಪಂಡಿತ್ ಚಂದ್ರಶೇಖರ್ ಶರ್ಮಾ ಅವರಿಗೆ ನೋವು ಊಹಿಸದಷ್ಟು ಹಣ ನೀಡಿದ್ದಾರೆ.
ಅಂಬಾನಿ ಕುಟುಂಬದ ಅರ್ಚಕರಾಗಿರುವ ಇವರು ಅಂಬಾನಿ ಕುಟುಂಬದ ಎಲ್ಲಾ ಕಾರ್ಯಕ್ರಮಗಳನ್ನು ಸಹ ನೆರೆವೇರಿಸಿಕೊಟ್ಟಿದ್ದಾರೆ. ಪಂಡಿತ್ ಶರ್ಮಾ ಅವರು ಜಾಮ್‌ನಗರದಲ್ಲಿ ವಿವಾಹ ಪೂರ್ವ ಸಂಭ್ರಮದಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಜ್ಯೋತಿಷಿ ಮತ್ತು ಪುರೋಹಿತರಾಗಿರುವ ಚಂದ್ರಶೇಖರ್ ಶರ್ಮಾ ಅವರು ಪ್ರಸಿದ್ಧ ಜ್ಯೋತಿಷ್ಯರು, ತಮ್ಮದೇ ಹೆಸರಿನ ವೆಬ್‌ಸೈಟ್ ಹೊಂದಿರುವ ಅವರು ಆಧ್ಯಾತ್ಮಿಕ ಭೋದನೆ ಹಾಗೂ ಜೀವನ ಶೈಲಿಯ, ಆರೋಗ್ಯಕರ ಜೀವನ ಸಾಧಿಸಲು ಸಹಾಯ ಮಾಡುವ ಉದ್ದೇಶದಿಂದ ಮಾರ್ಗದರ್ಶನ ನೀಡುತ್ತಾರೆ.
ಪಂಡಿತ್ ಶರ್ಮಾ ಅವರಿಗೆ ನೀಡಿದ ಹಣವೆಷ್ಟು?
ಅನಂತ್ ಅಂಬಾನಿಯ ಮದುವೆ ಸಮಾರಂಭದಲ್ಲಿ ಸುಮಾರು ವಾರಗಳಿಗೂ ಅಧಿಕ ಕಾಲ ಪಂಡಿತ್ ಶಾಸ್ತ್ರ, ಸಂಪ್ರದಾಯದಲ್ಲಿ ಭಾಗಿಯಾಗಿದ್ದರು. ಕೆಲವು ಮಾಧ್ಯಮವರದಿಗಳ ಪ್ರಕಾರ ಪಂಡಿತ್ ಶರ್ಮಾ ದಿನಕ್ಕೆ 25 ಸಾವಿರ ರೂಪಾಯಿ ಹಣ ಪಡೆದಿದ್ದಾರೆ. ಇದು ಕೆಲವರಿಗೆ ಅಚ್ಚರಿ ಮೂಡಿಸಿದೆ.
ಇಷ್ಟೊಂದು ಕಡಿಮೆ ಏಕೆ?
ಹಾಲಿವುಡ್ ಸಿಂಗರ್‌ಗೆ ಒಂದು ದಿನಕ್ಕೆ 80 ಕೋಟಿ ನೀಡಿದ್ದ ಅಂಬಾನಿ, ಮಕ್ಕಳ ಮದುವೆ ಶಾಸ್ತ್ರೋಕ್ತವಾಗಿ ನೆರವೇರಿಸಿದ್ದ ಅರ್ಚಕರಿಗೆ ಇಷ್ಟೊಂದು ಕಡಿಮೆ ಶುಲ್ಕ ನೀಡಿದ್ದಾರಲ್ಲ ಎಂಬ ಅಚ್ಚರಿ ಮೂಡಿದೆ. ಆದ್ರೆ ಪಂಡಿತ್ ಚಂದ್ರಶೇಖರ್ ಶರ್ಮಾ ಅವರು 25 ಸಾವಿರ ರೂಪಾಯಿಗಿಂತ ಹೆಚ್ಚಿನ ಶುಲ್ಕ ಪಡೆಯುವುದಿಲ್ಲವಂತೆ. ಹೀಗಾಗಿ ಅವರ ನಿಗಧಿಯಂತೆ ಹಣ ಪಡೆದಿದ್ದಾರೆ ಎಂದು ವರದಿಗಳಾಗಿವೆ.
ಚಂದ್ರಶೇಖರ್ ಶರ್ಮಾ ಅವರು ಕೇವಲ ಅಂಬಾನಿ ಅವರ ಕುಟುಂಬ ಮಾತ್ರವಲ್ಲ ಬಾಲಿವುಡ್‌ನ ಹಲವು ಸೆಲೆಬ್ರಿಟಿಗಳು ಸೇರಿ ಉದ್ಯಮಿಗಳ ಮನೆಯ ಎಲ್ಲಾ ಶುಭ ಕಾರ್ಯಕ್ರಮಗಳ ನಡೆಸಿಕೊಟ್ಟಿದ್ದಾರೆ. ಆದರೆ ಎಲ್ಲಿಯೂ ಅವರು ದುಬಾರಿ ಹಣ ಪಡೆದಿಲ್ಲವಂತೆ. ಈಗ ಅಂಬಾನಿ ಮದುವೆಯಲ್ಲೂ 25 ಸಾವಿರ ಪಡೆದು ಎಲ್ಲರ ಗಮನ ಸೆಳೆದಿದ್ದಾರೆ. ಅಂಬಾನಿ ಮದುವೆಯಲ್ಲಿ ಅತ್ಯಂತ ಕಡಿಮೆ ಹಣ ಸಂಪಾದಿಸಿದ್ದು ಇವರೇ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.



Click it and Unblock the Notifications