Latest Updates
-
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ?
ದೇವಾಲಯದಲ್ಲಿ ಎಷ್ಟು ಪ್ರದಕ್ಷಿಣೆ ಹಾಕಬೇಕು..! ಇಲ್ಲಿದೆ ಸರಿಯಾದ ಮಾಹಿತಿ
ನಾವು ವಾರದಲ್ಲಿ ಒಮ್ಮೆಯಾದರು ಅಥವಾ ಆಗಾಗ ದೇವಾಲಯಗಳಿಗೆ ಭೇಟಿ ನೀಡುವ ಅಭ್ಯಾಸ ಇಟ್ಟುಕೊಂಡಿರುತ್ತೇವೆ. ಕೆಲವರು ವಾರದಲ್ಲಿ ಒಮ್ಮೆ ಕಡ್ಡಾಯವಾಗಿ ದೇವಾಲಯಕ್ಕೆ ಹೋಗಿಯೇ ಹೋಗುತ್ತಾರೆ. ಅವರಲ್ಲದೆ ಮತ್ತೆ ಕೆಲವರು ದೇವಾಲಯಳಿಗೆ ಪ್ರವಾಸ ಸಹ ಹೋಗುತ್ತಾರೆ.
ಆದ್ರೆ ಈ ದೇವಾಲಯಗಳಿಗೆ ಭೇಟಿ ನೀಡುವ ನಾವು ಅಲ್ಲಿ ಯಾವ ರೀತಿಯ ಅಲಿಖಿತ ನಿಯಮಗಳ ಪಾಲಿಸಬೇಕು ಅನ್ನೋದನ್ನೇ ಮರೆತಿರುತ್ತೇವೆ. ಉದಾಹರಣೆಗೆ ದೇವಾಲಯಕ್ಕೆ ಯಾವ ರೀತಿ ಬಟ್ಟೆ ಧರಿಸಿ ಹೋಗಬೇಕು ಅನ್ನೋದು. ಈಗಂತು ಕೆಲವು ದೇವಾಲಯದಲ್ಲಿ ಡ್ರೆಸ್ ಕೋಡ್ ಸಹ ಬಂದಿದೆ.

ಇನ್ನು ದೇವಾಲಯಕ್ಕೆ ತೆರಳಿದ ಬಳಿಕ ನಾವು ಪ್ರದಕ್ಷಿಣೆಯಂತು ಹಾಕುತ್ತೇವೆ. ಪೂಜೆ ಬಳಿಕ ಮಂಗಳಾರತಿ ಪಡೆದು ದೇವಾಲಯಕ್ಕೆ ಪ್ರದಕ್ಷಿಣೆ ಹಾಕುವುದು ನಿಯಮ. ಆದ್ರೆ ನಿಮಗೆ ಗೊತ್ತಾ ಎಷ್ಟು ಪ್ರದಕ್ಷಿಣೆ ಹಾಕಬೇಕು? ಯಾವ ದೇವರಿಗೆ ಎಷ್ಟು ಪ್ರದಕ್ಷಿಣೆ ಹಾಕಬೇಕು ಎಂಬ ನಿಯಮವೂ ಇದೆ.
ಆದರೆ ನಾವು ಮನಸ್ಸಿಗೆ ಬಂದಂತೆ 3,5,9 ಸುತ್ತು ಹೊಡೆದು ಕೈ ಮುಗಿದು ದೇವಾಲಯದಿಂದ ವಾಪಾಸು ಬರುತ್ತೇವೆ. ಆದರೆ ಪ್ರದಕ್ಷಿಣೆ ಹಾಕುವುದಕ್ಕೂ ನಿಯಮಗಳಿವೆ. ಅದರಲ್ಲೂ ಒಂದೊಂದು ದೇವರಿಗೆ ಒಂದೊಂದು ರೀತಿ ಪ್ರದಕ್ಷಿಣೆಹಾಕಬೇಕಿದೆ.
ಮೊದಲು ಪ್ರದಕ್ಷಿಣೆ ಯಾವ ದಿಕ್ಕಿನಿಂದ ಹಾಕಬೇಕು ಎಂಬ ನಿಯಮವಿದೆ. ಎಂದಿಗೂ ಬಲ ಬದಿಯಿಂದ ಪ್ರದಕ್ಷಿಣೆ ಹಾಕಬೇಕು. ಏಕೆಂದರೆ ಬಲಬದಿಯಲ್ಲಿ ಪ್ರದಕ್ಷಿಣೆ ಹಾಕುವುದು ದೇವರ ಅನುಗ್ರಹಕ್ಕೆ ಕಾರಣವಾಗಲಿದೆ. ನೀವು ಬ್ರಹ್ಮ ದೇವರ ದೇವಸ್ಥಾನಕ್ಕೆ ಹೋಗಿದ್ದರೆ ಅಲ್ಲಿ ಕೇವಲ 4 ಬಾರಿ ಮಾತ್ರ ಪ್ರದಕ್ಷಿಣೆ ಹಾಕಬೇಕು. ಹನುಮನ ದೇವಾಲಯವಾಗಿದ್ದರೆ ಮೂರು ಬಾರಿ, ಸೂರ್ಯ ದೇವನಿಗೆ 7 ಬಾರಿ ಗಣಪತಿ ದೇವಾಲಯ ಆಗಿದ್ದರೆ 4 ಬಾರಿ ಪ್ರದಕ್ಷಿಣೆ ಹಾಕಬೇಕಂತೆ.
ಆದರೆ ದುರ್ಗೆ, ಚಾಮುಂಡಿ, ಆದಿ ಶಕ್ತಿ ಯಂತಹ ದೇವಾಲಯಗಳಿಗೆ ನೀವು ಭೇಟಿ ನೀಡಿದರೆ ಕೇವಲ ಒಂದು ಬಾರಿ ಬಲಬದಿಯಿಂದ ಪ್ರದಕ್ಷಿಣೆ ಹಾಕಬೇಕಂತೆ. ಇನ್ನು ಅರಳಿ ಮರಕ್ಕೆ 108 ಬಾರಿ ಪ್ರದಕ್ಷಿಣೆ ಹಾಕಬೇಕು ಎಂದು ಹೇಳಲಾಗಿದೆ. ಆದರೆ ಇದು ಸಾಧ್ಯವಾಗದ ಕಾರಣ 18 ಬಾರಿ ಆದರೂ ಪ್ರದಕ್ಷಿಣೆ ಹಾಕಬೇಕಂತೆ.
ಇತ್ತ ಶಿವನಿಗೆ ಅರ್ಧ ಪ್ರದಕ್ಷಿಣೆ ಹಾಕಬೇಕಂತೆ. ಶಿವನಿಗೆ ಅಭಿಷೇಕ ಮಾಡಿದ ನೀರು ದೇವಾಲಯದ ಹೊರಗೆ ಹರಿಯುತ್ತಿದ್ದರೆ ಆ ನೀರು ದಾಟಬಾರದಂತೆ ಅಲ್ಲಿಯವರೆಗೆ ಹೋಗಿ ಮತ್ತೆ ವಾಪಾಸು ಬರಬೇಕು. ಬಳಿಕ ಮತ್ತೆ ಇನ್ನೊಂದು ಬದಿಯಿಂದ ಪ್ರದಕ್ಷಿಣೆ ಹಾಕಿ ಅಲ್ಲಿಂದ ಮತ್ತೆ ವಾಪಾಸು ಬರಬೇಕು ಎಂದು ಹೇಳಲಾಗುತ್ತದೆ.
ದೇವಾಲಯದಲ್ಲಿ ಪ್ರದಕ್ಷಿಣೆ ಹಾಕುವುದರಿಂದ ಎಲ್ಲಾ ಪಾಪ ಕರ್ಮಗಳು ನಿವಾರಣೆಯಾಗಲಿದೆ ಎಂದು ನಂಬಲಾಗಿದೆ. ಜೊತೆಗೆ ಕ್ತರಿಗೆ ಮಂಗಳಕರ ಫಲಿತಾಂಶಗಳನ್ನು ತರುತ್ತದೆ ಎಂಬ ನಂಬಿಕೆಯಿದೆ. ಇದರಿಂದ ಜನರು ತಮ್ಮ ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತಾರೆ. ನಕಾರಾತ್ಮಕ ಶಕ್ತಿಯಿಂದ ಮುಕ್ತರಾಗುತ್ತಾರೆ ಎಂದು ನಂಬಲಾಗಿದೆ. ಪ್ರದಕ್ಷಿಣೆಯನ್ನು ಪ್ರಾರಂಭಿಸಿದ ನಂತರ ಮಧ್ಯದಲ್ಲೇ ಅಂತ್ಯಗೊಳಿಸಬಾರದು. ಎಲ್ಲಿಂದ ಆರಂಭಿಸಿದ್ದೀರೋ ಅಲ್ಲಿಗೆ ಬಂದು ತಲುಪಬೇಕು.
ಪ್ರದಕ್ಷಿಣೆ ಸಮಯದಲ್ಲಿ ಯಾರೊಂದಿಗೂ ಮಾತನಾಡಬಾರದು, ಪ್ರದಕ್ಷಿಣೆ ಮಾಡುತ್ತಿರುವ ದೇವರತ್ತ ಗಮನ ನೀಡಿ. ದೇವರ ನಾಮ ಸ್ಮರಣೆ ಹಾಗೂ ಜಪ ಮಾಡುತ್ತಾ ಪ್ರದಕ್ಷಿಣೆ ಮಾಡಬೇಕಂತೆ. ಪ್ರದಕ್ಷಿಣೆ ಮಾಡುವಾಗ ಪ್ರಸಾದ ಸೇವಿಸುವುದು, ಬಾಳೆ ಹಣ್ಣು ತಿನ್ನುವುದು ಮಾಡಬೇಡಿ.
ಕೊನೆಯದಾಗಿ ದೇವಾಲಯದಿಂದ ಬರುವಾಗ ದೇವರಿಗೆ ಬೆನ್ನು ತೋರಿಸಿ ಬರಬಾರದು ಅಂತಲೂ ಹೇಳಲಾಗುತ್ತದೆ. ದೇವರಿಗೆ ಕೈಮುಗಿದು ಹಿಂದೆ ತಿರುಗದೆ ಹಾಗೆಯೇ ಬರಬೇಕು ಇಲ್ಲವೇ ಹಿಂದಿನ ದಿಕ್ಕಿನಲ್ಲಿ ಮತ್ತೊಂದು ದ್ವಾರವಿದ್ದರೆ ಅಲ್ಲಿಂದ ಬರಬೇಕು ಎಂಬ ಮಾತಿದೆ.



Click it and Unblock the Notifications