Latest Updates
-
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ!
ಗಣಪನಿಗೆ ಏಕದಂತ ಹೆಸರು ಏಕೆ ಬಂತು.? ಒಂದು ದಂತ ಮಾತ್ರ ಏಕಿದೆ ಗೊತ್ತಾ?
ಹಿಂದೂ ಧರ್ಮದಲ್ಲಿ ಗಣೇಶನಿಗೆ ಪ್ರಮುಖ ಸ್ಥಾನವಿದೆ. ಆತನಿಗೆ ಮೊದಲ ಪೂಜೆ ಸಲ್ಲಬೇಕು ಎಂಬ ನಿಯಮವೂ ಇದೆ. ಗಣೇಶನ ಹಿಂದೆ ಹತ್ತಾರು ಪುರಾಣ ಪ್ರಸಿದ್ಧ ಕಥೆಗಳಿವ. ಹೀಗಾಗಿ ಗಣಪತಿ ಮಕ್ಕಳಿಗೆ ಅಚ್ಚುಮೆಚ್ಚಿನ ದೇವರು. ಗಣೇಶನಿಗೆ ಏಕೆ ಆನೆ ತಲೆ ಜೋಡಿಸಲಾಯತು ಎಂಬುದಕ್ಕೆ ಒಂದು ಕಥೆ ಇದೆ. ಹಾಗೆ ಆತನಿಗೆ ಹತ್ತಾರು ಬಿರುದುಗಳು, ಹೆಸರುಗಳ ಹಿಂದೆ ಒಂದೊಂದು ಕಥೆ ಇದೆ.
ಗಣೇಶನಿಗೆ ಹಲವು ಹೆಸರ ಸಾಲಿನಲ್ಲಿ ಏಕದಂತ ಸಹ ಒಂದು. ನೀವು ಯಾವುದೇ ಗಣೇಶನ ಮೂರ್ತಿಯಲ್ಲಿ ನೋಡಿರಬಹುದು. ಒಂದೇ ಬಾಲ ಗಣಪನಿಗೆ ಒಂದೂ ಕೋರೆ ಇರುವುದಿಲ್ಲ, ಇಲ್ಲವೆ ಅರ್ಧ ಮುರಿದು ಹೋದ ಕೋರೆ ಇರುತ್ತದೆ. ಹೀಗಾಗಿಯೇ ಆತನಿಗೆ ಏಕದಂತ ಎಂಬ ಹೆಸರು ಸಹ ಬಂದಿದೆ. ಆದ್ರೆ ಒಂದು ಕೋರೆ ಅರ್ಧ ತುಂಡಾಗಿರುವುದು ಏಕೆ?

ಈ ಏಕದಂತ ಹೆಸರಿನ ಹಿಂದೆ ಒಂದು ಕಥೆ ಇದೆ. ಪದ್ಮ ಪುರಾಣದ ಪ್ರಕಾರ, ಒಮ್ಮೆ ಪರಶುರಾಮ ಶಿವನ ಮಹಾನ್ ಭಕ್ತ, ಶಿವನನ್ನು ಭೇಟಿಯಾಗಲು ಕೈಲಾಸಕ್ಕೆ ಬಂದನು. ಆ ಸಮಯದಲ್ಲಿ ಶಿವನು ಧ್ಯಾನ ಮಾಡುತ್ತಿದ್ದನು, ಆದ್ದರಿಂದ ಪರಶುರಾಮನನ್ನು ಒಳಬರುವುದನ್ನು ಗಣೇಶ ತಡೆದನು. ಇದು ಪರಶುರಾಮನ ಕೋಪಕ್ಕೆ ಕಾರಣವಾಯಿತು. ಆತ ತನ್ನ ಕೈನಲ್ಲಿದ್ದ ಮಂತ್ರದಂಡದಿಂದ ಒಂದು ಏಟು ಹೊಡೆದ ಈ ವೇಳೆ ಗಣೇಶನ ಒಂದು ಕೋರೆ ಅರ್ಧಕ್ಕೆ ಮುರಿದು ಬಿಟ್ಟಿತು ಎಂದು ಹೇಳಲಾಗುತ್ತೆ.
ಬಳಿಕ ಪರಶುರಾಮನಿಗೆ ತನ್ನ ತಪ್ಪಿನ ಅರಿವಾಗಿ ಶಿವ-ಪಾರ್ವತಿ ಬಳಿ ಕ್ಷಮೆಯಾಚಿಸಿದನು. ಇನ್ನೆಂದು ಈ ಮಂತ್ರದಂಡವನ್ನು ಪ್ರಯೋಗಿಸುವುದಿಲ್ಲ ಎಂದು ಶಪಥ ಮಾಡಿದ ಎಂದು ಹೇಳಲಾಗಿದೆ. ಹಾಗೆ ಆತನಿಗೆ ಒಂದು ದಂತ ಇರಲು ಮತ್ತೊಂದು ಕಥೆ ಸಹ ಇದೆ. ಅದೇನು ಎಂಬುದನ್ನು ನೋಡಿ.
ಒಮ್ಮೆ ಕೈಲಾಸದಲ್ಲಿದ್ದ ಗಣಪನಿಗೆ ಔತಣಕೂಟದ ಆಹ್ವಾನ ಬಂದಿತ್ತು. ಆತ ದೇವಾನುದೇವತೆಗಳ ಮನೆಗೆ ತೆರಳಿ ಹೊಟ್ಟೆ ತುಂಬ ಲಾಡು ಮತ್ತು ಸಿಹಿ ಕಡಬನ್ನು ಸವಿದನು. ಹೀಗೆ ದಾರಿಯಲ್ಲಿ ನಡೆದು ಬರುವಾಗ ಹಾವೊಂದು ಇಲಿಯನ್ನ ಓಡಿಸಿಕೊಂಡು ಬರುವಾಗ ಗಣೇಶನ ಕಾಲಿನ ಬಳಿಕ ಇಲಿ ಬಂದಾಗ ಆತ ಹೆದರಿ ಎಡವಿ ಬಿದ್ದನಂತೆ, ಈವೇಳೆ ಹೊಟ್ಟೆಯೊಳಗಿದ್ದ ಎಲ್ಲಾ ಲಾಡುಗಳು ಹೊರಬಂದವು. ಈ ವೇಳೆ ಆತ ಇಲಿಯನ್ನು ಹಿಡಿದು ನಿಲ್ಲಿಸಿ ತನ್ನ ವಾಹನ ಮಾಡಿಕೊಂಡ ಹಾಗೆ ಹೊಟ್ಟೆಗೆ ನಾಗರಹಾವನ್ನು ಕಟ್ಟಿಕೊಂಡನು.
ಈ ಪ್ರಸಂಗ ನೋಡಿದ ಚಂದ್ರನ ಮುಗುಳು ನಕ್ಕಿದ್ದನಂತೆ, ಹೀಗಾಗಿ ಕೋಪಗೊಂಡ ಗಣೇಶ ತನ್ನ ಒಂದು ದಂತವನ್ನು ಮುರಿದು ಚಂದ್ರನತ್ತ ಎಸೆದನಂತೆ. ಅಲ್ಲದೆ ಈ ದಿನ ನಿನ್ನನ್ನು ಯಾರು ನೋಡುತ್ತಾರೋ ಅವರು ಕೆಟ್ಟ ದಿನಗಳ ಕಳೆಯುವಂತಾಗಲಿ, ನಿನ್ನನ್ನು ಜೀವನದ ಉದ್ದಕ್ಕೂ ಶಪಿಸುವಂತಾಗಲಿ ಎಂದನಂತೆ. ಹೀಗಾಗಿ ಗಣಪನಲ್ಲಿ ಒಂದೇ ದಂತ ಇರುವುದು ನಾವು ನೋಡಬಹುದು.
ಇನ್ನು ಗಣೇಶನಿಗೆ ಮೋದಕ ಏಕೆ ಇಷ್ಟ ಎಂಬುದಕ್ಕೆ ಕೂಡ ಒಂದು ಕತೆ ಇದೆ. ಇನ್ನೊಂದು ಕಥೆಯ ಪ್ರಕಾರ ದೇವಾನುದೇವತೆಗಳು ಶಿವ ಪಾರ್ವತಿ ಮನೆಗೆ ಭೇಟಿ ನೀಡುತ್ತಾರೆ. ಆಗ ಒಂದು ಮೋದಕವನ್ನು ಪಾರ್ವತಿಗೆ ಕೊಡುತ್ತಾರೆ. ಗಣೇಶ, ಕಾರ್ತಿಕ ಇಬ್ಬರಲ್ಲಿ ಯಾರಿಗೆ ಕೊಡುವುದು ಎಂಬ ಗೊಂದಲ ಪಾರ್ವತಿಗೆ ಮೂಡುತ್ತದೆ. ಈ ವೇಳೆ ಇಬ್ಬರಿಗೂ ಭೂಮಿಯನ್ನು ಮೊದಲು ಸುತ್ತಿ ಬರುವವರಿಗೆ ಈ ಮೋದಕ ಸಿಗುತ್ತದೆ ಎನ್ನುತ್ತಾಳೆ. ಇದಾದ ಬಳಿಕ ಏನಾಯಿತು ಎಂಬುದು ನಿಮಗೂ ಗೊತ್ತಿದೆ. ಶಿವ-ಪಾರ್ವತಿಯನ್ನೇ ಸುತ್ತಿ ಮೋದಕವನ್ನ ಗಣೇಶ ಸವಿದು ಬಿಟ್ಟಿದ್ದ ಎಂಬ ಕಥೆ ಇದೆ.



Click it and Unblock the Notifications
