Latest Updates
-
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು!
ಕಶ್ಯಪಪುರ್ ಕಾಶ್ಮೀರ ಆಗಿದ್ದು ಹೇಗೆ? ಕಾಶ್ಮೀರದ ಈ ಕಥೆ ನಿಮಗೆ ಗೊತ್ತಾ?
ಭೂ ಲೋಕದ ಸ್ವರ್ಗ ಎಂದು ಕರೆಯಲ್ಪಡುವ ಕಾಶ್ಮೀರ, ನೈಸರ್ಗಿಕ ಸೌಂದರ್ಯ ತನ್ನಲ್ಲಿಟ್ಟುಕೊಂಡಿರುವ ಪ್ರದೇಶ. ಕಣಿವೆಗಳು, ಪರ್ವತ ಶ್ರೇಣಿಗಳು ಅದ್ಭುತ ಮಂಜಿನ ಬೆಟ್ಟಗಳು ಹಾಗೆ ಹಿಮ ನದಿಗಳ ಹೊತ್ತಿರುವ ಪ್ರದೇಶ. ವಿಶ್ವದ ಹಲವು ಭಾಗದಿಂದ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಭಾರತದ ಕಿರೀಟ ಎನ್ನಬಹುದು. ಹಾಗೆ ಕಾಶ್ಮೀರ ಸ್ವರ್ಗದಂತಿದ್ದರೂ ಅಲ್ಲಿನ ಜನರ ಸ್ಥಿತಿ ಮಾತ್ರ ಇಂದಿಗೂ ಸೋಚನೀಯ. ಪ್ರವಾಸಿಗರ ನೆಚ್ಚಿಕೊಂಡಿರುವ ಪ್ರದೇಶವಿದು. ಹಾಗೆ ಸೇಬು ಅಲ್ಲಿನ ಪ್ರಮುಖ ವಾಣಿಜ್ಯ ಬೆಳೆಯಾಗಿದೆ.
ಕಾಶ್ಮೀರ ಭಾರತದ ಇತಿಹಾಸದಲ್ಲೇ ವಿಶೇಷ ಸ್ಥಳವಾಗಿ ಗುರುತಿಸಿಕೊಂಡಿದೆ. ಕಾಶ್ಮೀರದ ಇತಿಹಾಸ ಜಾನಪದದಿಂದ ಹಿಡಿದು ಶತಮಾನಗಳ ಹಿಂದಿನ ಇತಿಹಾಸ ಪುಸ್ತಕದಲ್ಲೂ ಅಚ್ಚಳಿಯದೆ ಮುದ್ರಿತವಾಗಿದೆ. ಇಂದು ಕಾಶ್ಮೀರ ಎಂದು ಕರೆಯಲ್ಪಡುವ ಭೂಮಿ ಒಂದು ಕಾಲದಲ್ಲಿ ಕೇವಲ ಒಂದು ದೊಡ್ಡ ಸರೋವರವಾಗಿತ್ತು. ಬಾರಾಮುಲ್ಲಾದಲ್ಲಿ ಬೆಟ್ಟಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಸರೋವರವನ್ನು ಬರಿದು ಮಾಡಲಾಗಿತ್ತಂತೆ.

ಸಾಧು ಕಶ್ಯಪ ಎಂಬಾತ (ಹಿಂದೂ ಧರ್ಮದ ಪೂಜ್ಯ ವೈದಿಕ ಋಷಿ . ಅವರು ಸಪ್ತಋಷಿಗಳಲ್ಲಿ ಒಬ್ಬರು) ಸರೋವರವನ್ನು ಬರಿದು ಮಾಡಿದ ಬಳಿಕ ಅಲ್ಲಿನ ನೀರನ್ನು ಹೊರಹಾಕಿ ಸಮತಟ್ಟಾದ ಜಾಗ ಮಾಡಿದ್ದನಂತೆ. ನಂತರ ಅಲ್ಲಿ ಬ್ರಾಹ್ಮಣರು ನೆಲೆಸಲು ಆರಂಭಿಸಿದರಂತೆ. ಹೀಗಾಗಿ ಕಣಿವೆ ರಾಜ್ಯವನ್ನು ಮೊದಲು ಕಶ್ಯಪಪುರ ಎಂದು ಕರೆಯಲಾಗುತ್ತಿತ್ತು. ಈಗಿನ ಕಾಶ್ಮೀರವನ್ನು ಹಿಂದೆ ಕಶ್ಯಪಪುರ ಎಂಬುದಾಗಿ ಕರೆಯಲಾಗಿತ್ತು.
12 ನೇ ಶತಮಾನದ ಆಸ್ಥಾನ ಬರಹಗಾರ ಕಲ್ಹಣ ಅವರ ರಾಜತರಿಂಗಿಣಿಯಲ್ಲಿ ಕಾಶ್ಮೀರದ ಭೌಗೋಳಿಕ ಲಕ್ಷಣಗಳ ಕುರಿತು ಉಲ್ಲೇಖವಿದೆ. ಅಲ್ಲಿ ಕೇವಲ ಸರೋವರ ಮಾತ್ರವಿತ್ತಂತೆ. ಹಾಗೆ ಬೆಟ್ಟ ಗುಡ್ಡಗಳ ನಡುವೆ ಹಸಿರು ಹೊದಿಕೆಯ ಭೂಮಿ, ಅದರ ನಡುವೆ ಸರೋವರಗಳು ಸೂರ್ಯನ ಕಿರಣಗಳಿಂದ ಹೊಳೆಯುತ್ತಿದ್ದ ಕುರಿತಾದ ಉಲ್ಲೇಖವಿದೆ.
ಕಾಶ್ಮೀರ ಎಂದರೇನು?
ಕಶ್ಯಪಪುರ ಬರುಬರುತ್ತಾ ಕಾಶ್ಮೀರವಾಗಿ ಬದಲಾಗಿತ್ತು. ಹಾಗೆ ಕಾಶ್ಮೀರ ಎಂದರೆ ಬತ್ತಿದ ಭೂಮಿ ಎಂದರ್ಥ. ಸಂಸ್ಕೃತದಲ್ಲಿ ಕಾ ಎಂದರೆ ನೀರು. ಶಿಮೀರಾ ಎಂದರೆ ಒಣಗಿರುವ ಪ್ರದೇಶ ಎಂದು ಅರ್ಥೈಸಬಹುದು. ಹಾಗೆ ಕಾಸ್ ಎಂದರೆ ಕಾಲುವೆ ಮಿರ್ ಎಂದರೆ ಪರ್ವತ ಅಂತಲೂ ಅರ್ಥೈಸಲಾಗಿದೆ.
ಹಾಗೆ ಹೆಕಾಟಿಯಸ್ ಎಂಬ ಭೂಗೋಳ ಶಾಸ್ತ್ರಜ್ಞ ಕ್ರಿ.ಪು 550-476ರ ನಡುವೆ ಬರೆದ ಪುಸ್ತಕದಲ್ಲಿ ಕಾಶ್ಮೀರವನ್ನು ಕಾಸ್ಪಪೈರೋಸ್ ಎಂದು ಉಲ್ಲೇಖಿಸಿರುವುದು ಸಹ ನೋಡಬಹುದು. ರೋಮನ್ ಗಣಿತಜ್ಞ ಮತ್ತು ಖಗೋಳಶಾಸ್ತ್ರಜ್ಞ ಟಾಲೆಮಿ ಸುಮಾರು ಕ್ರಿ.ಶ 150 ರಲ್ಲಿ ಕಾಶ್ಮೀರವನ್ನು ಕಾಸ್ಪೇರಿಯಾ ಎಂದೂ ಕರೆಯುತ್ತಾರೆ. ಇವರಲ್ಲದೆ ಹತ್ತಾರು ಖಗೋಳಶಾಸ್ತ್ರಜ್ಞರು ಕೂಡ ಈ ಕಾಶ್ಮೀರ ಕುರಿತಾಗಿ ಉಲ್ಲೇಖಿಸಿದ್ದಾರೆ.
ಇತ್ತ ಮೊದಲ ಮೊಘಲ್ ಚಕ್ರವರ್ತಿ ಬಾಬರ್‌ನ ಆತ್ಮ ಚರಿತ್ರೆಯಾದ ತುಜಕ್-ಇ-ಬಾಬರಿ (ಬಾಬರ್ ನಾಮ)ದಲ್ಲಿ ಕಾಶ್ಮೀರ ಕುರಿತಾಗಿ ಉಲ್ಲೇಖಿಸಿರುವುದು ಹಾಗೆ ಬೆಟ್ಟ ಪ್ರದೇಶದಲ್ಲಿ ನೆಲೆಸಿದ್ದ ಕಾಸ್ ಎಂಬ ಹೆಸರಿನ ಜನಾಂಗ ಕುರಿತಾದ ವಿವರಣೆ ಇರುವುದು ನೋಡಬಹುದು.
ಪ್ರೊಫೆಸರ್ ಫಿದಾ ಎಂ ಹಸ್ನೈನ್ ಅವರು ಬರೆದಿರುವ 'ಕಾಶ್ಮೀರಿಸ್ ವಿಥ್ ಜ್ಯೂಯಿಶ್ ರೂಟ್ಸ್' ಎಂಬ ಪುಸ್ತಕವೊಂದರಲ್ಲಿ ಕಾಶ್ಮೀರ ಕುರಿತಾಗಿ ಬಹುದೊಡ್ಡ ದಾಖಲೆ ನೀಡುತ್ತದೆ. ಅದರ ಪ್ರಕಾರ ಬಾಗ್ದಾದ್ ಬಳಿಯ ಕಾಶ್ ಗ್ರಾಮದೊಂದಿಗೆ ಕಾಶ್ಮೀರದ ಜನರ ಮೂಲವನ್ನು ಗುರುತಿಸುತ್ತದೆ. ಸಿದ್ಧಾಂತದ ಪ್ರಕಾರ ಹ್ಯಾಮ್ ಅವರ ಮಗನಾದ ಕುಶ್, ಪೂರ್ವದಲ್ಲಿ ನೆಲೆಸಿದ ಕಾಶ್ ಅಥವಾ ಕುಶ್ ಬುಡಕಟ್ಟು ಜನಾಂಗವನ್ನು ಸ್ಥಾಪಿಸಿದರು ಎಂದು ಹೇಳಲಾಗಿದೆ. ಹಾಗೆ ಬಾಗ್ದಾದ್ ಬಳಿ ತಮ್ಮ ಗ್ರಾಮವಿತ್ತು. ಅಲ್ಲಿಂದಲೇ ಈ ಪ್ರದೇಶವನ್ನು ಕಾಶ್ಮೀರ ಎಂದು ಕರೆಯಲಾಗಿದೆ ಎಂಬ ಉಲ್ಲೇಖವಿದೆ.
ಹಾಗೆ ಕಾಶ್ಮೀರವನ್ನು ನಂತರದಲ್ಲಿ ಕಣಿವೆಗಳ ರಾಜ್ಯವೆಂದು ಭಾರತದ ಕಿರೀಟವೆಂದು, ಭೂಲೋಕದ ಸ್ವರ್ಗವೆಂದು ಕರೆಯಲಾಗಿದೆ. ಚಳಿಗಾಲದ ಸಮಯದಲ್ಲಿ ಇಡೀ ಪ್ರದೇಶ ಸಂಪೂರ್ಣ ಮಂಜಿನಿಂದ ಆವೃತವಾಗಿರುವುದು ಸಹ ನೋಡಬಹುದು.



Click it and Unblock the Notifications











