Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಈ ಸ್ಥಳಗಳಲ್ಲಿ ಬಣ್ಣಗಳ ಹಬ್ಬವೇ ಬ್ಯಾನ್..! ಬಣ್ಣ ಅಂದ್ರೆ ಭಯಪಡುವ ಮಂದಿ..! ಏಕೆ ಗೊತ್ತಾ?
ಹಿಂದೂಗಳ ಹಬ್ಬವಾದ ಹೋಳಿ ಇನ್ನೇನು ಸಮೀಪಿಸುತ್ತಿದೆ. ದೇಶದ ಮೂಲೆ ಮೂಲೆಯಲ್ಲಿ ಬಣ್ಣಗಳು ತುಂಬಿಕೊಳ್ಳುತ್ತವೆ. ಮಕ್ಕಳಿಂದ ಹಿಡಿದು ಹಿರಿಯರವರೆಗೂ ಹೋಳಿಯ ಬಣ್ಣದಲ್ಲಿ ಮಿಂದೇಳುತ್ತಾರೆ. ಈ ವರ್ಷ ಇದೆ ಮಾರ್ಚ್ 25ರಂದು ಹೋಳಿ ಆಚರಿಸಲಾಗುತ್ತಿದೆ. ಪೂರ್ಣ ಹುಣ್ಣಿಮೆಯ ದಿನದಂದು ಹೋಳಿ ಆಚರಣೆಯ ಹಿಂದೆ ಪುರಾತನ ಕಥೆಗಳಿವೆ.
ಇನ್ನು ದೇಶದ ಎಲ್ಲಾ ಭಾಗದಲ್ಲೂ ಈ ಹಬ್ಬವನ್ನು ಆಚರಿಸಲಾಗುತ್ತದೆ. ಅದರಲ್ಲು ಉತ್ತರ ಭಾರತದಲ್ಲಿ ಈ ಹಬ್ಬ ವಿಶಿಷ್ಟ ಆಚರಣೆಯಿಂದ ಕೂಡಿರುತ್ತದೆ. ಕೆಲವು ಕಡೆ ಒಂದು ವಾರಗಳ ಕಾಲ ಈ ಸಂಭ್ರಮ ಮನೆ ಮಾಡಿರುತ್ತದೆ. ಇನ್ನು ಹಲವೆಡೆ ವಿಶೇಷ ಖಾದ್ಯಗಳು, ಕ್ರೀಡೆಗಳು, ಜಾನಪದ ಹಬ್ಬವಾಗಿಯೂ ಹೋಳಿ ಆಚರಣೆಯಲ್ಲಿದೆ.
{image-holi-festival-banned-in-these-places1-1710238126.jpg kannada.boldsky.com}
ಆದ್ರೆ ದೇಶದ ಕೆಲವು ಸ್ಥಳದಲ್ಲಿ ಈ ಹೋಳಿ ಆಚರಣೆ ನಿಷೇಧಗೊಂಡಿದೆ. ಹೌದು ನಿಮಗೆ ಅಚ್ಚರಿ ಎನಿಸಬಹುದು. ಕೆಲವು ಗ್ರಾಮಗಳು ಹೋಳಿ ಆಚರಣೆಯನ್ನು ಬ್ಯಾನ್ ಮಾಡಿವೆ. ಅಲ್ಲಿ ಹೋಳಿ ಬಣ್ಣ ಅಂದರೆ ಭಯ, ಭೀತಿ. ಹಾಗಾದರೆ ಯಾವ ಸ್ಥಳದಲ್ಲಿ ಹೋಳಿ ಆಚರಣೆ ಮಾಡುವುದಿಲ್ಲ. ಇಲ್ಲಿ ಯಾವ ನಂಬಿಕೆ ಅಸ್ಥಿತ್ವದಲ್ಲಿದೆ ಎಂಬುದನ್ನು ನಾವಿಂದು ತಿಳಿಯೋಣ.
ರುದ್ರಪ್ರಯಾಗ, ಉತ್ತರಾಖಂಡ್
ಉತ್ತರಾಖಂಡ್‌ನ ರುದ್ರಪ್ರಯಾಗ ಜಿಲ್ಲೆಯಲ್ಲಿ ಕೆಲವು ಗ್ರಾಮಗಳು ಶತಮಾನದಿಂದಲೂ ಹೋಳಿ ಆಚರಿಸುತ್ತಿಲ್ಲ. ಇಲ್ಲಿಮ ಕ್ವಿಲಿ, ಕುರ್ಜಾನ್ ಹಳ್ಳಿಗಳಲ್ಲಿ ಕಳೆದ 150 ವರ್ಷದಿಂದ ಬಣ್ಣಗಳ ಹಬ್ಬಕ್ಕೆ ನಿಷೇಧ ಹೇರಲಾಗಿದೆ. ಹೀಗೆ ನಿಷೇಧ ಹೇರಿದ್ದು ಬೇರೆ ಯಾರು ಅಲ್ಲ ಬದಲಿಗೆ ಅಲ್ಲಿನ ಗ್ರಾಮಸ್ಥರೇ ಈ ಕಾರ್ಯ ಮಾಡಿದ್ದಾರೆ.
ಇಲ್ಲಿನ ಗ್ರಾಮದೇವತೆ ತ್ರಿಪುರ ಸುಂದರಿಯು ಹಬ್ಬದ ಸಡಗರ, ಶಬ್ದ, ಬಣ್ಣವನ್ನು ಇಷ್ಟಪಡುವುದಿಲ್ಲ ಎಂಬುದು ಗ್ರಾಮಸ್ಥರ ನಂಬಿಕೆಯಾಗಿದೆ. ಒಂದು ವೇಳೆ ಹೋಳಿ ಆಚರಿಸಿದರೆ ದೇವಿ ಮುನಿಸಿಕೊಂಡು ಇಡೀ ಗ್ರಾಮವನ್ನೇ ನಾಶ ಮಾಡುತ್ತಾಳೆ ಎಂಬ ನಂಬಿಕೆ ಅವರಲ್ಲಿದೆ.
ರುದ್ರಪ್ರಯಾಗ್‌ನಲ್ಲಿದೆ ಪ್ರಸಿದ್ಧ ದೇವಾಲಯ
ರುದ್ರಪ್ರಯಾಗ್ ಎಂಬ ಹೆಸರು ಕೇಳಿದ ತಕ್ಷಣ ನಮಗೆ ಶಿವನ ದೇವಾಲಯ ನೆನಪಾಗುತ್ತದೆ. ಇಲ್ಲಿರುವ ಶಿವನ ದೇವಾಲಯ ದೇಶವ್ಯಾಪಿ ಹೆಸರಾಗಿದೆ. ಒಮ್ಮೆ ಭಸ್ಮಾಸುರನು ಶಿವನ ಬೆನ್ನಟ್ಟಿ ಬಂದಾಗ ಶಿವ ಅಡಗಿಕೊಳ್ಳಲು ಜಾಗ ಹುಡುಕಿದ್ದನಂತೆ. ಈ ವೇಳೆ ಒಂದು ಗುಹೆ ಕಂಡು ಅಲ್ಲಿಯೇ ಅಡಗಿ ಕುಳಿತನಂತೆ. ಬಳಿಕ ಅಲ್ಲಿಯೇ ಕಲ್ಲಾದನು ಎಂದು ನಂಬಲಾಗಿದೆ. ಈಗಲೂ ಈ ಗುಹೆಯೊಳಗೆ ವಿಶೇಷ ಪೂಜೆ ನೆರವೇರುತ್ತದೆ.
ಗುಜರಾತ್‌ನ ರಾಮ್ಸಾನ್
ಹೋಳಿ ಹಬ್ಬದಂದು ನಿರ್ಜನವಾಗಿ ಕಾಣುವ ಮತ್ತೊಂದು ತಾಣವೆಂದರೆ ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ರಾಮ್ಸಾನ್ ಗ್ರಾಮ. ಈ ಗ್ರಾಮದಲ್ಲಿ ಹೋಳಿ ಆಚರಣೆ ನಡೆದು 200 ವರ್ಷಗಳು ಕಳೆದಿವೆ. ಈ ಗ್ರಾಮಕ್ಕೆ ಶ್ರೀರಾಮ ಭೇಟಿ ನೀಡಿದ್ದ ಕಾರಣ ಹಿಂದೆ ರಾಮೇಶ್ವರ ಎಂದು ಕರೆಯಲಾಗುತ್ತಿತ್ತು. ಆದರೆ ಇಲ್ಲಿನ ರಾಜನೊಬ್ಬ ಹೋಳಿ ಆಚರಣೆ ಮಾಡುವಾಗ ಖುಷಿ ಮುನಿಗಳ ತಪಸ್ಸಿಗೆ ಭಂಗ ತಂದಿದ್ದನಂತೆ, ಈ ವೇಳೆ ಮುನಿಸಿಕೊಂಡ ಮುನಿಗಳು ಶಾಪ ಕೊಟ್ಟಿದ್ದರಂತೆ. ಹೀಗಾಗಿ ಈ ಗ್ರಾಮದಲ್ಲಿ ಇಂದಿಗೂ ಹೋಳಿ ಆಚರಣೆ ನಿಷಿದ್ಧವಾಗಿದೆ.
ಜಾರ್ಖಂಡ್‌ನ ದುರ್ಗಾಪುರ
ಜಾರ್ಖಂಡ್‌ನ ಈ ದುರ್ಗಾಪುರ ಎಂಬ ಗ್ರಾಮದಲ್ಲಿ ಹೋಳಿ ಹಬ್ಬದ ದಿನ ನಡೆದ ಘಟನೆಯಿಂದ ಇಲ್ಲಿ ಯಾರು ಬಣ್ಣಗಳ ಹಬ್ಬ ಆಚರಿಸುವುದಿಲ್ಲ. 100 ವರ್ಷಗಳ ಹಿಂದೆ ಇಲ್ಲಿನ ರಾಜನೊಬ್ಬನ ಮಗ ಹೋಳಿಯ ದಿನವೇ ಮೃತಪಟ್ಟನಂತೆ. ಇದಾದ ಬಳಿಕ ತಂದೆ ಸಹ ಹೋಳಿಯ ದಿನವೇ ಮೃತಪಟ್ಟನಂತೆ. ಆದರೆ ಆತ ಸಾಯುವ ಮುನ್ನ ಹೋಳಿ ಆಚರಿಸಬೇಡಿ ಎಂದು ಮನವಿ ಮಾಡಿದನಂತೆ. ಹೀಗಾಗಿ ಈ ಮಂದಿ ಹೋಳಿ ಆಚರಿಸಲು ಪಕ್ಕದ ಗ್ರಾಮಕ್ಕೆ ತೆರಳುತ್ತಾರೆ. ಹೋಳಿ ದಿನದಂದು ಈ ಗ್ರಾಮದಲ್ಲಿ ಸೂತಕದ ಛಾಯೆ ಇರುತ್ತದೆ.



Click it and Unblock the Notifications
