Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮಂಗಳವಾರ ಹನುಮನ ಈ ರೀತಿ ಪೂಜಿಸಿ..! ಬೇಡಿಕೊಂಡಿದ್ದೆಲ್ಲಾ ನೆರವೇರಲಿದೆ..!
ಮಂಗಳವಾರ ಭಗವಾನ್ ಹನುಮಂತನಿಗೆ ಮೀಡಲಿಟ್ಟಿರುವ ದಿನ ಎಂದು ಶಾಸ್ತ್ರ ಹೇಳುತ್ತದೆ. ಮಂಗಳವಾರ ಹನುಮಂತನ ಪೂಜೆಯಿಂದ ಒಳಿತಾಗಲಿದೆ ಎಂದು ನಂಬಲಾಗಿದೆ. ಶ್ರೀ ರಾಮನ ಪರಮಭಕ್ತನಾದ ಹನುಮ೦ತನು ಶಕ್ತಿ, ವಿವೇಕ, ಹಾಗೂ ಜ್ಞಾನಗಳ ಅಧಿದೇವತೆಯೆ೦ದೇ ಪರಿಗಣಿಸಲ್ಪಟ್ಟಿದ್ದಾನೆ. ಹಿ೦ದೂ ಪುರಾಣಶಾಸ್ತ್ರಗಳ ಪ್ರಕಾರ, ರಕ್ಕಸರನ್ನೆಲ್ಲಾ ಸ೦ಹರಿಸಿ ಜಗತ್ತಿನಲ್ಲಿ ನಡೆಯುತ್ತಿದ್ದ ಅನ್ಯಾಯಗಳನ್ನು ನಿವಾರಸಲು ಭಗವಾನ್ ಶಿವನು ಹನುಮ೦ತನ ಅವತಾರವನ್ನು ಧರಿಸಿದನೆ೦ದು ಹೇಳಲಾಗುತ್ತಿದೆ.
ರಾಮ ಭಕ್ತ ಹನುಮಂತನನ್ನು ಬಜರಂಗಿ ಆಂಜನೇಯ ಮುಂತಾದ ಹೆಸರುಗಳಿಂದ ಪ್ರಪಂಚದಾದ್ಯಂತ ಭಕ್ತರು ಪೂಜಿಸುತ್ತಾರೆ. ಧೈರ್ಯ, ಸ್ಥೈರ್ಯಗಳಿಗೆ ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಆಂಜನೇಯ ಸ್ವಾಮಿ ನಿಷ್ಠೆಗೆ ಹೆಸರುವಾಸಿಯಾದವರು. ರಾಮ ಸೀತೆಯರನ್ನು ತಮ್ಮ ಹೃದಯದಲ್ಲಿಟ್ಟು ಪೂಜಿಸುವಷ್ಟು ಕಟ್ಟಾ ಭಕ್ತರಾಗಿದ್ದಾರೆ. ಹನುಮಂತನಿಗೆ ತನ್ನ ಸಾಹಸಗಳಿಂದ ಹೋದಲ್ಲೆಲ್ಲಾ ಹಲವಾರು ಹೆಸರುಗಳಿವೆ. ಮಾರುತಿ, ಪವನ ಪುತ್ರ, ಆಂಜನೀಪುತ್ರ ಹೀಗೆ ಭಕ್ತರ ಭಕ್ತಿಗೆ ಅನುಗುಣವಾಗಿ ಕರೆಯಲ್ಪಟ್ಟ ಹೆಸರುಗಳಿಂದ ಹನುಮಾನ್ ಪ್ರಸಿದ್ಧರು.

ಮಂಗಳವಾರದಂದು ವಿಶೇಷವಾಗಿ ಹನಮಂತನ ಪೂಜೆಯನ್ನು ಮಾಡಲಾಗುತ್ತದೆ. ಪ್ರಾತಃ ಕಾಲದಲ್ಲಿಯೇ ಎದ್ದು ಹನುಮಾನ್ ಪೂಜೆಯನ್ನು ಮಾಡಿದರೆ ಭಕ್ತರು ಹನುಮಂತನ ಕೃಪಾಕಟಾಕ್ಷಕ್ಕೆ ಪಾತ್ರರಾಗಬಹುದು ಎಂಬುದು ಹಿಂದಿನಿಂದಲೂ ನಂಬಿಕೊಂಡು ಬಂದಿರುವ ಆಚರಣೆಯಾಗಿದೆ. ಶಕ್ತಿ, ಬಲ ಮತ್ತು ಗೌರವವನ್ನು ಹೆಚ್ಚಿಸಿಕೊಳ್ಳಲು ಹನಮಂತನ ಪೂಜೆಯನ್ನು ಮಾಡಬೇಕು. ಹಾಗಾದರೆ ಮಂಗಳವಾರಂದು ಹನುಮನ ಪೂಜಾ ವಿಧಾನಗಳೇನು? ಯಾವ ಸಮಯದಲ್ಲಿ ಪೂಜೆ ಮಾಡಬೇಕು ಎಂಬುದನ್ನು ತಿಳಿಯಿರಿ.
ಹನುಮಾನ್ ಪೂಜಾ ವಿಧಿ
- ನೀವು ಪೂಜೆ ಮಾಡಬೇಕಾಗಿರುವ ಸ್ಥಳವನ್ನು ಶುದ್ಧ ಮಾಡಿ
- ಹನುಮಂತನಿಗೆ ಪೂಜೆಯನ್ನು ಅರ್ಪಿಸಿ
- ಹನುಮಂತನ ವಿಗ್ರಹವನ್ನು ನೀರಿನಿಂದ ಶುದ್ಧೀಕರಿಸಿ
- ನೀವು ಪೂಜೆ ಮಾಡಬೇಕಾಗಿರುವ ಸ್ಥಳಕ್ಕೆ ನೀರಿನ ಪ್ರೋಕ್ಷಣೆಯನ್ನು ಮಾಡಿ
- ಕೆಂಪು ಬಟ್ಟೆಯ ಮೇಲೆ ಹನುಮಾನ್ ವಿಗ್ರಹವನ್ನು ಇರಿಸಿ
- ಹನುಮಂತನ ಮೂರ್ತಿಯ ಮೇಲೆ ಕುಂಕುಮದ ಪೇಸ್ಟ್ ಹಚ್ಚಿ
- ಅಗರ್‌ಬತ್ತಿ ಮತ್ತು ದೀಪವನ್ನು ಹಚ್ಚಿ
- ದೇವರಿಗೆ ಹೂವು ಮತ್ತು ಹಣ್ಣು ಸಮರ್ಪಿಸಿ
- 108 ಅಕ್ಷತೆ, 108 ವೀಳ್ಯದೆಲೆ, 108 ಹಣ್ಣುಗಳನ್ನು ಇರಿಸಿ
- ಈ ದಿನ ಸಾತ್ವಿಕ ಆಹಾರವನ್ನು ಸೇವಿಸಿ. ಮಾಂಸಾಹಾರ ಸೇವನೆ ಬೇಡ
- ಹನುಮಂತನಿಗೆ 5 ಬಾಳೆಹಣ್ಣು ಅರ್ಪಿಸಿ
- ಈಶಾನ್ಯ ದಿಕ್ಕಿನಲ್ಲಿ ಹನುಮಂತನ ಪ್ರಾರ್ಥನೆಯನ್ನು ಮಾಡಿ
ಮಂಗಳವಾರದ ವ್ರತ ವಿಧಾನ
21 ದಿನಗಳ ಕಾಲ ಸತತವಾಗಿ ಉಪವಾಸವನ್ನು ಕೈಗೊಳ್ಳಬೇಕು. ಪ್ರಾತಃ ಕಾಲದಲ್ಲಿ ಏಳಬೇಕು. ಸ್ನಾನವನ್ನು ಮಾಡಿ ಗಂಗಾಜಲವನ್ನು ಮನೆಯಲ್ಲಿ ಪ್ರೋಕ್ಷಿಸಿ ಕೆಂಪು ವಸ್ತ್ರವನ್ನು ಧರಿಸಿ. ಮೇಲೆ ತಿಳಿಸಿದ ವಿಧಾನದಲ್ಲಿ ಪೂಜೆಯನ್ನು ಮಾಡಿ. ಪೂಜೆಯ ನಂತರ ಹನುಮಾನ್ ಚಾಲೀಸವನ್ನು ಪಠಿಸಿ 15 ನಿಮಿಷ ಧ್ಯಾನ ಮಾಡಿ ನಿಮ್ಮ ಪ್ರಾರ್ಥನೆಗಳನ್ನು ದೇವರಿಗೆ ಅರ್ಪಿಸಿ. ಬೆಲ್ಲದಿಂದ ಮಾಡಿದ ಆಹಾರವನ್ನು ಒಂದು ಬಾರಿ ಸೇವಿಸಿ. ಸಂಜೆ ಚಾಲೀಸವನ್ನು ಪಠಿಸಿ ಮತ್ತು ವೃತವನ್ನು ಮುರಿಯುವ ಮೊದಲು ದೇವರಿಗೆ ನೈವೇದ್ಯ ಅರ್ಪಿಸಿ.
ಹನುಮಂತನಿಗೆ ಆರತಿ ಮಾಡುವುದರಿಂದಾಗುವ ಪ್ರಯೋಜನಗಳು
- ಬಲ ಮತ್ತು ಶಕ್ತಿ ಸಾಧನೆ
- ಧನ ಲಾಭ ಎಲ್ಲಾ ಆರ್ಥಿಕ ಸಂಕಷ್ಟ ದೂರಾಗುತ್ತದೆ
- ನಿಮ್ಮ ಇಚ್ಛೆಯ ಕೆಲಸ ದೊರೆಯುತ್ತದೆ
- ಮಕ್ಕಳ ಭಾಗ್ಯ
- ಪಾಪ ವಿಮೋಚನೆ
- ನಿಮ್ಮ ಉದ್ಯೋಗವನ್ನು ಯಶಸ್ವಿಯಾಗಿಸುತ್ತದೆ
- ಬುದ್ಧಿವಂತಿಕೆ ಮತ್ತು ಜಾಣ್ಮೆಯನ್ನು ಹೆಚ್ಚಿಸಲು ಹುಡುಗರು
- ಶನಿ ದೋಷ ನಿವಾರಣೆ



Click it and Unblock the Notifications

