Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಅಯೋಧ್ಯೆಗಾಗಿ ಕೆತ್ತಲಾಗಿದ್ದ ರಾಮನ ಮತ್ತೆರಡು ಮೂರ್ತಿಗಳಿವು..! ಈಗ ಎಲ್ಲಿವೆ ಗೊತ್ತಾ?
ಅಯೋಧ್ಯೆ ರಾಮ ಮಂದಿರದಲ್ಲಿ ಶ್ರೀರಾಮ ವಿರಾಜಮಾನರಾಗಿದ್ದಾರೆ. 500 ವರ್ಷಗಳ ನಿರಂತರ ಹೋರಾಟದ ಬಳಿಕ ರಾಮ ಭಕ್ತರು ರಾಮನ ದರ್ಶನ ಪಡೆದಿದ್ದಾರೆ. ಅಲ್ಲದೆ ಕಪ್ಪು ಶಿಲೆಯಲ್ಲಿ 51 ಅಡಿ ಎತ್ತರ ರಾಮಲಲ್ಲಾನ ವಿಗ್ರಹ ಮೋಹಕವಾಗಿದ್ದು, ಬಾಲರಾಮನ ನೋಡಲು ಭಕ್ತರು ಅಯೋಧ್ಯೆಗೆ ಆಗಮಿಸುತ್ತಿದ್ದಾರೆ.
ಕರ್ನಾಟಕದಿಂದಲೇ ಈ ಮೂರ್ತಿ ಕೆತ್ತನೆಗೆ ಕಲ್ಲು ಹೋಗಿರುವುದಲ್ಲದೆ ಮೈಸೂರಿನ ಅರುಣ್ ಯೋಗಿರಾಜ್ ಈ ರಾಮನನ್ನು ಅತ್ಯಂತ ಸುಂದರವಾಗಿ ಚಿತ್ರಿಸಿದ್ದಾರೆ. ಅವರು ಹಗಲು ರಾತ್ರಿ ಎನ್ನದೆ ಈ ಮೂರ್ತಿ ಕೆತ್ತನೆಗೆ ಶ್ರಮಿಸಿದ್ದಾರೆ. ಹೀಗಾಗಿಯೆ ಮೂರ್ತಿ ನೋಡಲು ಜೀವ ತಳೆದು ನಿಂತಿರುವಂತೆ ಗೋಚರವಾಗುತ್ತಿದೆ.

ರಾಮ ಮಂದಿರಕ್ಕೆ ಮೂರ್ತಿ ಕೆತ್ತನೆ ಮಾಡಿರುವುದು ಕೇವಲ ಅರುಣ್ ಯೋಗಿರಾಜ್ ಮಾತ್ರ ಅಲ್ಲ. ಇನ್ನೂ ಇಬ್ಬರು ರಾಮ ಮಂದಿರಕ್ಕಾಗಿ ಮೂರ್ತಿ ಕೆತ್ತನೆ ಮಾಡಿದ್ದರು. ಆದರೆ ಕೊನೆಯಲ್ಲಿ ಅರುಣ್ ಯೋಗಿರಾಜ್ ಅವರ ಮೂರ್ತಿಯನ್ನು ರಾಮ ಜನ್ಮ ಭೂಮಿ ಟ್ರಸ್ಟ್ ಅಂತಿಮಗೊಳಿಸಿತ್ತು.
ಹೊಯ್ಸಳ ಶೈಲಿಯಲ್ಲಿತ್ತು ಮತ್ತೊಂದು ಮೂರ್ತಿ
ಇನ್ನೊಂದು ಮೂರ್ತಿಯನ್ನು ಶಿಲ್ಪಿ ಗಣೇಶ್ ಭಟ್ ಅವರು ಕಪ್ಪು ಕಲ್ಲಿನಿಂದ ಕೆತ್ತಿದ್ದಾರೆ. ಮೈಸೂರಿನ ಹೆಗಡದೇವನ ಕೋಟೆ ಪ್ರದೇಶದ ಕೃಷಿ ಭೂಮಿಯಲ್ಲಿ ದೊರೆತ ಕಪ್ಪು ಕಲ್ಲಿನಿಂದ ಈ ಮೂರ್ತಿಯನ್ನು ಕೆತ್ತಲಾಗಿತ್ತು. ಈ ಮೂರ್ತಿಯು ಸಹ ಅರುಣ್ ಯೋಗಿರಾಜ್ ಅವರ ಮೂರ್ತಿಯಂತೆಯೇ ಇದೆ. ಆದರೆ ಬಾಲ ರಾಮನಿಗೆ ಹೋಲಿಕೆಯಲ್ಲಿ ಕೊಂಚ ಬದಲಾವಣೆ ಕಂಡುಬರುತ್ತಿದೆ.
ಈ ಮೂರ್ತಿಯನ್ನು ಹೊಯ್ಸಳರ ಶೈಲಿಯಲ್ಲಿ ಕೆತ್ತಲಾಗಿದೆ ಮತ್ತು ವಿಗ್ರಹದ ಪಕ್ಕದಲ್ಲಿ ಭಗವಾನ್ ಬ್ರಹ್ಮ,ಲಕ್ಷ್ಮಿ,ಹನುಮಂತ,ಗರುಡ ಕೆತ್ತನೆಯನ್ನು ಕಾಣಬಹುದಾಗಿದೆ. ಈ ಮೂರ್ತಿಯನ್ನು ಏಕಶಿಲೆಯಿಂದ ಕೆತ್ತಲಾಗಿತ್ತು. ಕೈಯಲ್ಲಿ ಬಿಲ್ಲು ಬಾಣ ಪಾದದಡಿ ಕಮಲದ ದಳದ ಪೀಠವಿರುವುದನ್ನು ಕಾಣಬಹುದು.
ಅಮೃತಶಿಲೆಯಲ್ಲಿ ಅರಳಿದ ಬಾಲರಾಮ
ಇವರನ್ನು ಹೊರತುಪಡಿಸಿ ಮೂರನೇ ಮೂರ್ತಿಯನ್ನು ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಅವರು ಕೆತ್ತನೆ ಮಾಡಿದ್ದಾರೆ. ಇದು ಬಿಳಿ ಅಮೃತಶಿಲೆಯಿಂದ ಮಾಡಲ್ಪಟ್ಟಿದ್ದು, ಈ ಮೊದಲೆರಡು ಮೂರ್ತಿಗಳಿಗಿಂತಲೂ ಕೊಂಚ ಭಿನ್ನವಾಗಿದೆ.
ಅರುಣ್ ಯೋಗಿರಾಜ್ ಅವರ ಕಪ್ಪು ಗ್ರಾನೈಟ್ ವಿಗ್ರಹವು ಈಗ ದೇವಾಲಯದ ಗರ್ಭಗುಡಿಯನ್ನು ಅಲಂಕರಿಸಿದರೆ, ಇತರ ಇಬ್ಬರು ಸ್ಪರ್ಧಿಗಳ ಮೂರ್ತಿಯು ದೇವಾಲಯದ ಪವಿತ್ರ ಆವರಣದಲ್ಲಿ ಸ್ಥಾನ ಪಡೆಯಲಿವೆ.ಅವುಗಳಲ್ಲಿ ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಕೆತ್ತಿಸಿದ ಬಿಳಿ ಅಮೃತಶಿಲೆಯ ವಿಗ್ರಹವಿದೆ.
ಬಿಳಿ ಅಮೃತಶಿಲೆಯ ವಿಗ್ರಹವು ಅಮೃತಶಿಲೆಯ ಆಭರಣಗಳು ಮತ್ತು ಬಟ್ಟೆ ಧರಿಸಿದೆ ಜೊತೆಗೆ ಈಗ ಪ್ರತಿಷ್ಠಾಪನೆಗೊಂಡಿರುವ ಅರುಣ್ ಯೋಗಿರಾಜ್ ಅವರ ಮೂರ್ತಿಯಂತೆ ವಿಷ್ಣುವಿನ ವಿವಿಧ ಅವತಾರಗಳನ್ನು ಪ್ರತಿನಿಧಿಸುವ ಸಣ್ಣ ಶಿಲ್ಪಗಳಿಂದ ಅಲಂಕರಿಸಲ್ಪಟ್ಟ ಕಮಾನಿನಂತಹ ರಚನೆಯು ಇದೆ.
ಇನ್ನುಳಿದ ಎರಡು ಮೂರ್ತಿ ಎಲ್ಲಿವೆ?
ಶ್ರೀ ಯೋಗಿರಾಜ್ ಅವರ 51 ಇಂಚಿನ ಕಪ್ಪು ಗ್ರಾನೈಟ್ ವಿಗ್ರಹವು ದೇವಾಲಯದ ಗರ್ಭಗುಡಿಯಲ್ಲಿ ತನ್ನ ಸ್ಥಾನವನ್ನು ಹೊಂದಿದೆ ಎಂದು ಹೇಳಿಕೊಳ್ಳುವುದು 2.5 ಶತಕೋಟಿ ವರ್ಷಗಳ ಹಿಂದಿನ ಬಂಡೆಯಿಂದ ಕೆತ್ತಲಾಗಿದೆ ಎಂದು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ರಾಕ್ ಮೆಕ್ಯಾನಿಕ್ಸ್‌ನಿಂದ ಎಚ್‌ಎಸ್ ವೆಂಕಟೇಶ್ ಬಹಿರಂಗಪಡಿಸಿದ್ದಾರೆ. ಶ್ರೀ ವೆಂಕಟೇಶ್ ಮಾತನಾಡಿ, ಬಂಡೆಯ ಬಾಳಿಕೆ ಮತ್ತು ಹವಾಮಾನ ಬದಲಾವಣೆಗಳಿಗೆ ಪ್ರತಿರೋಧ, ಇದು ಉಪೋಷ್ಣವಲಯದ ವಲಯದಲ್ಲಿ ಕನಿಷ್ಠ ನಿರ್ವಹಣೆಯೊಂದಿಗೆ ಸಾವಿರಾರು ವರ್ಷಗಳವರೆಗೆ ಉಳಿಯುತ್ತದೆ ಎಂದು ಖಚಿತಪಡಿಸುತ್ತದೆ.
ಇದೆಲ್ಲಾ ಕಾರಣಗಳಿಗಾಗಿ ಅರುಣ್ ಯೋಗಿರಾಜ್ ಅವರ ಮೂರ್ತಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಜೊತೆಗೆ ಬಾಲರಾಮನ ಹೋಲಿಕೆಗೆ ಹತ್ತಿರವಿದ್ದ ಕಾರಣ ಈ ಮೂರ್ತಿಯನ್ನೇ ಟ್ರಸ್ಟ್ ಪ್ರತಿಷ್ಠಾಪನೆಗೆ ಆಯ್ಕೆ ಮಾಡಿಕೊಂಡಿತ್ತು. ಇನ್ನು ಉಳಿದ ಎರಡು ಮೂರ್ತಿಗಳು ಸಹ ರಾಮ ಮಂದಿರದಲ್ಲೇ ಸೂಕ್ತ ಪೂಜೆ ಪಡೆಯಲಿವೆ ಎಂದು ಟ್ರಸ್ಟ್ ತಿಳಿಸಿದೆ.



Click it and Unblock the Notifications


