Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ರಾಮನ ಬಗ್ಗೆ ನೀವೆಂದೂ ಕೇಳಿರದ ಅಚ್ಚರಿಯ ಕಥೆಗಳು ಇಲ್ಲಿವೆ...!
ಸೂರ್ಯವಂಶ, ರಘುವಂಶದ ಶ್ರೀರಾಮಚಂದ್ರ ಅಂದರೆ ಶ್ರೀಮಹಾವಿಷ್ಣುವಿನ ಅವತಾರ ರಾಮನ ಬಗ್ಗೆ ಎಷ್ಟು ತಿಳಿದುಕೊಂಡಷ್ಟು ಕಡಿಮೆಯೇ. ಹಿಂದೂಗಳ ಪವಿತ್ರ ಗ್ರಂಥ ರಾಮಾಯಣವು ಶೀರಾಮನ ಕುರಿತಾದ ಒಂದು ಭಾಗ. ಆದರೆ ರಾಮನ ಬಗ್ಗೆ ಅರಿತಷ್ಟು ಓದಿದಷ್ಟು ಕಥೆಗಳಿವೆ. ರಾಮನ ಕಥೆ ಕೇಳಲು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಅಯೋಧ್ಯೆ ಇತಿಹಾಸ, ರಾಮನ ಬಾಲ್ಯ, ಸೀತಾದೇವಿ, ಲಕ್ಷ್ಮಣ ಹೀಗೆ ರಾಮನ ಕಥೆಯಲ್ಲಿ ಒಂದೊಂದು ಸುಂದರ ಅನುಭವ ನೀಡುವ ಅಂಶವಿದೆ.
ವಿಷ್ಣುವಿನ 7ನೇ ಅವತಾರ ಶ್ರೀರಾಮ ಮತ್ತು ನಂತರ ಕೃಷ್ಣ ಎಂಬುದು ನಮಗೆ ತಿಳಿಸಿದೆ. ಲೋಕದ ಕೇಡುಗಳ ನಾಶ ಮಾಡಲು ವಿಷ್ಣು ರಾಮನ ಅವತಾರ ತಾಳಿದರೆ ಕೌರವರ ನಾಶಕ್ಕಾಗಿ ಕೃಷ್ಣನ ಅವತಾರ ಎತ್ತಿದ ಎಂಬ ಮಾತಿದೆ. ಇಷ್ಟೇ ಅಲ್ಲ ನಾವೀಗ ರಾಮನ ಕುರಿತು ನೀವೆಲ್ಲೂ ಕೇಳಿರದ ಒಂದಿಷ್ಟು ಕಥೆಗಳನ್ನು ಕುತೂಹಲಕಾರಿ ವಿಚಾರಗಳನ್ನು ತಿಳಿದುಕೊಳ್ಳೋಣ.

ರಾಮನ ಸಹೋದರರು ಯಾರ ಅವತಾರ ಗೊತ್ತಾ?
ಶ್ರೀರಾಮ ವಿಷ್ಣುವಿನ ಅವತಾರ ಎಂದಾದರೆ ಆತನ ಸಹೋದರರು ಯಾರ ಅವತಾರ ಎಂಬುದಕ್ಕೆ ಕುತೂಹಲಕಾರಿ ವಿಚಾರವಿದೆ. ಲಕ್ಷ್ಮಣ ಶೇಷನಾಗನ ಅವತಾರವಾದರೆ, ಭರತ ಮತ್ತು ಶತ್ರುಘ್ನರು ಕ್ರಮವಾಗಿ ಸುದರ್ಶನ-ಚಕ್ರ ಮತ್ತು ಶಂಖದ ಅವತಾರ ಎಂದು ನಂಬಲಾಗಿದೆ. ಇವುಗಳನ್ನು ಭಗವಾನ್ ವಿಷ್ಣು ಹೊತ್ತಿರುವುದನ್ನು ನೆನೆಪಿಸಿಕೊಳ್ಳಬಹುದು.
ಸೀತೆಯ ಸ್ವಯಂವರದಲ್ಲಿ ರಾಮ ಹಿಡಿದ ಬಿಲ್ಲು ಯಾವುದು?
ರಾಮ ಸೀತೆಯನ್ನು ಸ್ವಯಂವರದ ಮೂಲಕ ವಿವಾಹವಾಗುತ್ತಾನೆ. ಸ್ವಯಂವರದಲ್ಲಿದ್ದ ಎಲ್ಲಾ ರಾಜರು ಅವರ ಮುಂದೆ ಇದ್ದ ಬಿಲ್ಲನ್ನು ಎತ್ತಿ ಬಾಣವನ್ನು ಪ್ರಯೋಗಿಸಬೇಕಿತ್ತು. ಈ ಬಿಲ್ಲಿನ ಹೆಸರು ಪಿನಾಕ, ಇದು ಶಿವನ ಧನಸ್ಸು ಎಂದು ನಂಬಲಾಗಿದೆ. ಶಿವನನ್ನು ಬಿಟ್ಟರೆ ಈ ಬಿಲ್ಲನ್ನು ಮೇಲೆತ್ತಲು ಸಾಧ್ಯವಾಗಿದ್ದು, ಶ್ರೀರಾಮನಿಗೆ ಮಾತ್ರ ಎಂದು ನಂಬಲಾಗಿದೆ. ಹೀಗಾಗಿಯೇ ಶಿವನಿಗೆ ಪಿನಾಕಪಾಣಿ ಅಂತಲೂ ಕರೆಯುತ್ತಾರೆ.
ರಾಮ ವನವಾಸದಲ್ಲಿದ್ದ ಕಾಡು ಯಾವುದು?
ರಾಮ, ಲಕ್ಷ್ಮಣ ಮತ್ತು ಸೀತೆ ಕಾಡಿನಲ್ಲಿ ಹಲವು ವರ್ಷಗಳ ವನವಾಸ ಕಳೆದಿದ್ದಾರೆ. ಆದರೆ ಆ ಕಾಡಿನ ಹೆಸರು ಕೆಲವೇ ಜನರಿಗೆ ತಿಳಿದಿರುತ್ತದೆ. ಆ ಅರಣ್ಯದ ಹೆಸರು 'ದಂಡಕಾರಣ್ಯ', ಇದರಲ್ಲಿ ರಾಮ, ಸೀತೆ ಮತ್ತು ಲಕ್ಷ್ಮಣ ತಮ್ಮ ವನವಾಸವನ್ನು ಕಳೆದರು. ಇಂದಿನ ಛತ್ತೀಸ್‌ಗಢ, ಒರಿಸ್ಸಾ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ಭಾಗಗಳನ್ನು ಒಳಗೊಂಡಂತೆ 35,600 ಚದರ ಮೈಲಿಗಳಲ್ಲಿ ಈ ಕಾಡು ಹರಡಿಕೊಂಡಿದೆ. ಆ ಸಮಯದಲ್ಲಿ ಈ ಕಾಡನ್ನು ಅತ್ಯಂತ ಉಗ್ರ ರಾಕ್ಷಸರ ಮನೆ ಎಂದು ಪರಿಗಣಿಸಲಾಗಿತ್ತು. ಆದ್ದರಿಂದ ಇದಕ್ಕೆ ದಂಡಕಾರಣ್ಯ ಎಂಬ ಹೆಸರು ಇಲ್ಲಿ "ದಂಡ" ಎಂದರೆ "ಶಿಕ್ಷಿಸಲು" ಮತ್ತು "ಅರಣ್ಯ" ಎಂದರೆ "ಕಾಡು" ಎಂದರ್ಥ.
ಲಕ್ಷ್ಮಣನಿಗೆ ಪ್ರಾಣ ಕೊಡಲು ರಾಮ ಹೇಳಿದ್ದೇಕೆ?
ಶ್ರೀರಾಮನು ತನ್ನ ಕಿರಿಯ ಸಹೋದರ ಲಕ್ಷ್ಮಣನಿಗೆ ಮರಣದಂಡನೆ ವಿಧಿಸಿದನೆಂದು ರಾಮಾಯಣದಲ್ಲಿ ಉಲ್ಲೇಖಿಸಲಾಗಿದೆ, ಈ ಘಟನೆಯು ಲಂಕಾ ವಿಜಯದ ನಂತರ ಶ್ರೀರಾಮನು ಅಯೋಧ್ಯೆಗೆ ಹಿಂದಿರುಗಿ ಅಯೋಧ್ಯೆಯ ರಾಜನಾದ ಸಮಯದಲ್ಲಿ ನಡೆದಿದ್ದು ಎನ್ನಲಾಗಿದೆ. ಒಂದು ದಿನ ನರಕಾಧಿಪತಿ ಯಮ ಶ್ರೀರಾಮನನ್ನು ನೋಡಲು ಮತ್ತು ಒಂದು ಪ್ರಮುಖ ವಿಷಯವನ್ನು ಚರ್ಚಿಸಲು ಅಯೋಧ್ಯೆಗೆ ಬಂದಿದ್ದನಂತೆ. ಚರ್ಚೆಯನ್ನು ಪ್ರಾರಂಭಿಸುವ ಮೊದಲು, ಈ ಸಂಭಾಷಣೆ ಮುಗಿಯುವವರೆಗೆ ಯಾರೂ ಅಡ್ಡಿಪಡಿಸಬಾರದು, ಅಡ್ಡಿಯಾದರೆ ಆ ವ್ಯಕ್ತಿಗೆ ಮರಣದಂಡನೆ ವಿಧಿಸಬೇಕು ಎಂದು ಭಗವಾನ್ ರಾಮನ ಬಳಿ ಮಾತು ತೆಗೆದುಕೊಂಡಿದ್ದನಂತೆ.
ಈ ಮಾತಿನಂತೆ ಲಕ್ಷ್ಮಣನನ್ನು ಕರೆದ ರಾಮ ಬಾಗಿಲ ಬಳಿ ನಿಲ್ಲಿಸಿ ಯಾರು ಒಳಗೆ ಬಾರದಂತೆ ನೋಡಿಕೊಳ್ಳಲು ಸೂಚಿಸಿದ್ದ. ಆದರೆ ಸ್ವಲ್ಪ ಸಮಯದ ನಂತರ, ದೂರ್ವಾಸ ಮುನಿಗಳು ಅಲ್ಲಿಗೆ ಬಂದರು ಮತ್ತು ಲಕ್ಷ್ಮಣನು ತನ್ನ ಆಗಮನದ ಬಗ್ಗೆ ರಾಮನಿಗೆ ತಿಳಿಸಲು ಕೇಳಿಕೊಂಡಿದ್ದರು. ಆದರೆ ಲಕ್ಷ್ಮಣ ತಿರಸ್ಕರಿಸಿ ಅಣ್ಣ ಯಾರ ಬಳಿಯೂ ಈಗ ಮಾತನಾಡುವುದಿಲ್ಲ ಎಂದು ಹೇಳಿದ.
ಇದರಿಂದ ಕೋಪಗೊಂಡ ದುರ್ವಾಸ ಮುನಿಗಳು ಇಡೀ ಅಯೋಧ್ಯೆ ನಾಶ ಮಾಡುವಂತಹ ಶಾಪ ನೀಡುವುದಾಗಿ ಎಚ್ಚರಿಸಿದರು. ಈ ವೇಳೆ ಅಯೋಧ್ಯೆಯನ್ನು ಉಳಿಸಲು ತನ್ನ ಪ್ರಾಣ ಬೇಕಾದರು ತ್ಯಾಗ ಮಾಡುವುದಾಗಿ ಲಕ್ಷ್ಮಣ ನಿರ್ಧರಿಸಿದ. ಬಳಿಕ ಶ್ರೀರಾಮನಿಗೆ ವಿಷಯ ತಿಳಿಸಲು ಓಡೋಡಿ ಬಂದಿದ್ದ.
ಈಗ ಶ್ರೀರಾಮನು ತನ್ನ ವಾಗ್ದಾನದ ಪ್ರಕಾರ ಲಕ್ಷ್ಮಣನಿಗೆ ಮರಣದಂಡನೆಯನ್ನು ನೀಡಬೇಕಾಗಿರುವುದರಿಂದ ಗೊಂದಲಕ್ಕೊಳಗಾದನು. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಶ್ರೀರಾಮನು ತನ್ನ ಗುರು ವಸಿಷ್ಠರನ್ನು ಸ್ಮರಿಸಿ ಬೇರೆ ದಾರಿಯನ್ನು ತೋರಿಸಲು ಮನವಿ ಮಾಡಿಕೊಂಡ.
ಗುರು ವಸಿಷ್ಠರು, ನೀನು ಲಕ್ಷ್ಮಣನಿಂದ ದೂರಾಗಬಹುದು ಅದು ಆತನಿಗೆ ಮರಣದಂಡನೆಯನ್ನು ನೀಡಿದಂತೆಯೇ. ಇದನ್ನು ಕೇಳಿದ ಲಕ್ಷ್ಮಣ ತನ್ನ ಸಹೋದರನಿಂದ ಜೀವನಪೂರ್ತಿ ದೂರ ಉಳಿಯಲು ಸಾಧ್ಯವಿಲ್ಲ ಎಂದು ಹೇಳಿದ. ಅಣ್ಣನ ಮಾತಿಗೆ ಮಣಿದು ಸಾವನ್ನು ಅಪ್ಪಿಕೊಳ್ಳಲು ಲಕ್ಷ್ಮಣ ನಿರ್ಧರಿಸಿ ಬಳಿಕ ಸರಯೂ ನದಿಯಲ್ಲಿ ಜಲಸಮಾಧಿಯಾದ ಎಂದು ಕಥೆ ಹೇಳುತ್ತದೆ.



Click it and Unblock the Notifications












