Latest Updates
-
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು?
ಇನ್ನು ಕೆಲವೇ ಗಂಟೆಗಳಲ್ಲಿ ದಕ್ಷಿಣ ಭಾರತದಲ್ಲಿ ಸುರಿಯಲಿದೆ ಧಾರಾಕಾರ ಮಳೆ: ಪ್ರವಾಹ ಬರುವ ಮುನ್ನವೇ ಈ ಮುನ್ನೆಚ್ಚರಿಕೆ ಒಳ್ಳೆಯದು
ಈಗಾಗಲೇ ರಾಜ್ಯದ ಹಲವು ಭಾಗಗಳಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಇಡೀ ದಕ್ಷಿಣ ಭಾರತದಲ್ಲಿ ಧಾರಾಕಾರ ಮಳೆ ಸುರಿಯಲಿದೆ ಎಂದು ಸ್ಯಾಟಲೈಟ್ ವರದಿ ಹೇಳಿದೆ, ಈಗಷ್ಟೇ ಸ್ಯಾಟ್‌ಲೈಟ್ ಬಿಡುಗಡೆ ಮಾಡಿರುವ ಚಿತ್ರದಲ್ಲಿ ತುಂಬಾನೇ ಮಳೆ ಬರುವ ಸೂಚನೆ ಕಂಡು ಬಂದಿದೆ, ಸಮುದ್ರ ತೀರದಲ್ಲಿರುವ ಜನರಿಗೆ ಹಾಗೂ ನೀರು ಬಂದು ಮುಳುಗಡೆ ಆಗುವಂಥ ಪ್ರದೇಶದವರಿಗೆ ಮುನ್ನೆಚ್ಚರಿಕೆವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ.

ಮಳೆಯ ಪ್ರಮಾಣ ಹೆಚ್ಚಾದರೆ ಪ್ರವಾಹದ ಪರಿಸ್ಥಿತಿ ಬರುವುದು, ಹಾಗಾಗಿ ಒಂದು ವೇಳೆ ಮಳೆ ಹೆಚ್ಚಾಗಿ ನಿಮ್ಮ ಸುತ್ತ ಮುತ್ತ ನೀರಿನ ಮಟ್ಟ ಹೆಚ್ಚಾಗುತ್ತಿದೆ ಎಂದು ಕಂಡು ಬಂದ ತಕ್ಷಣ ಈ ಬಗೆಯ ಮುನ್ನೆಚ್ಚರಿಕೆವಹಿಸುವುದು ಒಳ್ಳೆಯದು
ನೀರು ಮುಳುಗಡೆ ಆಗುವ ಪ್ರದೇಶವಾದರೆ ಬೆಲೆಬಾಳುವ ವಸ್ತುಗಳು ಹಾಗೂ ಡಾಕ್ಯೂಮೆಂಟ್ ನಾಶವಾಗದಂತೆ ಜಾಗ್ರತೆವಹಿಸಿ
ಪ್ರಕೃತ್ತಿ ಮುಂದೆ ಹುಲು ಮಾನವನಿಗೆ ನಿಲ್ಲಲು ಸಾಧ್ಯವೇ? ಆದರೆ ಸ್ವಲ್ಪ ಮುಂಜಾಗ್ರತೆ ವಹಿಸಿದರೆ ದೊಡ್ಡ ನಷ್ಟ ಉಂಟಾಗುವುದರಿಂದ, ಪ್ರಾಣ ಹಾನಿಯಿಂದ ಪಾರಾಗಬಹುದು. ಹಾಗಾಗಿ ಪ್ರಮುಖ ದಾಖಲೆ ಪತ್ರಗಳು ಹಾಗೂ ಚಿನ್ನ, ಬೆಳ್ಳಿ ಹೀಗೆ ಬೆಲೆ ಬಾಳುವ ವಸ್ತುಗಳನ್ನು ತೆಗೆದುಕೊಂಡು ಸುರಕ್ಷಿತ ಸ್ಥಳದಲ್ಲಿರಿ. ಅದರಲ್ಲಿಯೂ ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ 3-4 ದಿನದ ಮಟ್ಟಿಗೆ ನಿಮ್ಮ ನೆಂಟರಿಷ್ಟರ ಮನೆಗೆ ಹೋಗುವುದು ಸುರಕ್ಷಿತ, ಮಹಡಿ ಇದ್ದರೆ ಆಹಾರವನ್ನು ಮೇಲಿನ ಫ್ಲೋರ್‌ನಲ್ಲಿ ಸಂಗ್ರಹಿಸಿಡಿ. ಸಾಕು ಪ್ರಾಣಿಗಳನ್ನು ಕೂಡ ಸುರಕ್ಷಿತ ಜಾಗಕ್ಕೆ ಸಾಗಿಸಿ.
ಮನೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿ
ಹೌದು ಮನೆಯಿಂದ ಹೊರಡುವ ಮುನ್ನ ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ಇದರಿಂದ ಮರಳಿ ಮನೆಗೆ ಬಂದಾಗ ಒಂದು ವೇಳೆ ಮನೆಗೆ ನೀರು ಬಂದಿದ್ದರೆ ಉಂಟಾಗುವ ಶಾರ್ಟ್ ಸರ್ಕ್ಯೂಟ್‌ನಿಂದ ಪಾರಾಗಬಹುದು. ಹಾಗಾಗಿ ನೀವು ಸುರಕ್ಷತೆ ಕ್ರಮ ಅನುಸರಿಸಲೇಬೇಕು.
ನೀರು ಹೆಚ್ಚಾಗುತ್ತಿರುವಾಗ ಸಾಹಸ ಮಾಡಲು ಹೋಗಬೇಡಿ
ನೀರು ತುಂಬಿ ಹರಿಯುತ್ತಿದ್ದರೂ ನದಿಯಲ್ಲಿ ಈಜಲು ಹೋಗುವುದು ಅಥವಾ ಸೇತುವೆ ಇರುವ ಕಡೆ ನೀರು ತುಂಬಿ ಹರಿಯುತ್ತಿದ್ದರು ಆ ಕಡೆ ಚಲಾಯಿಸಿಕೊಂಡು ಹೋಗುವುದು ಮಾಡಿದರೆ ಸಮಸ್ಯೆ ಉಂಟಾಗುವುದು, ಆದ್ದರಿಂದ ಆ ಬಗ್ಗೆ ಜಾಗ್ರತೆವಹಿಸಿ.
ಇನ್ನು ಮಳೆಗಾಲದಲ್ಲಿ ಈ ಬಗೆಯ ಕಾಯಿಲೆ ಕಡೆಯೂ ಗಮನಹರಿಸಬೇಕು:
ಡೆಂಗ್ಯೂ: ಈಗ ಕರ್ನಾಟಕದಲ್ಲಿ ಡೆಂಗ್ಯೂ ಸಮಸ್ಯೆ ಹೆಚ್ಚಾಗುತ್ತಿದೆ, ಡೆಂಗ್ಯೂವಿಗೆ ಹಲವು ಜನರು ಸಾವನ್ನಪ್ಪಿದ್ದಾರೆ, ಈ ಡೆಂಗ್ಯೂ ವಿಪರೀತವಾಗುತ್ತಿರುವಾಗ ಈ ಬಗ್ಗೆಯೂ ಜಾಗ್ರತೆವಹಿಸಿ.
ಚಿಕನ್‌ಗುನ್ಯಾ: ಮಳೆಗಾಲದಲ್ಲಿ ಹಲವು ಕಡೆ ಚಿಕನ್ ಗುನ್ಯಯಾ ಸಮಸ್ಯೆಯೂ ಕಂಡು ಬರುತ್ತಿದೆ.
ಮಲೇರಿಯಾ: ಇದು ಕೂಡ ಹೆಚ್ಚಾಗಿ ಕಮಡು ಬರುತ್ತಿದೆ.
ಬೇಧಿ: ಕಲುಷಿತ ನೀರು ಕುಡಿಯುವುದರಿಂದ ಬೇಧಿ ಸಮಸ್ಯೆ ಉಂಟಾಗುತ್ತಿದೆ
ವಾಂತಿ: ಕಲುಷಿತ ನೀರು ನೀರು ಕುಡಿಯುವುದರಿಂದ ವಾಂತಿ, ಹೊಟ್ಟೆನೋವು ಈ ಬಗೆಯ ಸಮಸ್ಯೆ ಕೂಡ ಕಂಡು ಬರುವುದು.
ವೈರಲ್ ಸೋಂಕು: ಈಗಂತೂ ಎಲ್ಲಾ ಕಡೆ ವೈರಲ್ ಸೋಂಕಿನ ಸಮಸ್ಯೆಯೂ ಕಂಡು ಬರುತ್ತಿದೆ, ಈ ಬಗ್ಗೆ ಜಾಗ್ರತೆವಹಿಸಿ.
ಟೈಫಾಯ್ಡ್: ಜ್ವರಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ ಅದು ಟೈಫಾಯ್ಡ್ ಆಗಿ ಬದಲಾಗುವುದು.
ಕಾಲರಾ: ಕಲುಷಿತ ನೀರು ಕುಡಿಯುವುದರಿಂದ ಕಾಲರಾ ಬರುವ ಅಪಾಯಕೂಡ ಇದೆ.
ಹಾಗಾಗಿ ಮಳೆಗಾಲದಲ್ಲಿ ಕಾಯಿಸಿದ ನೀರನ್ನೇ ಕುಡಿಯಿರಿ, ಮಕ್ಕಳನ್ನು ನೀರಿನಲ್ಲಿ ಆಡಲು ಬಿಡಬೇಡಿ, ಸ್ವಲ್ಪ ಶೀತ , ಕೆಮ್ಮು ಇದ್ದರೂ ತುಂಬಾನೇ ಆರೈಕೆ ಮಾಡಬೇಕು. ಮನೆಮದ್ದು ಮಾಡುತ್ತಾ ಕೂರಬೇಡಿ, ವೈದ್ಯರಿಗೆ ತೋರಿಸಿ.



Click it and Unblock the Notifications
