Latest Updates
-
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ!
ರಾಜ್ಯದ ಹಲವು ಕಡೆ ಭಾರೀ ಮಳೆಯ ಸೂಚನೆ: ಮುಂಗಾರು ಆರಂಭ ಯಾವಾಗ?
ಬೇಸಿಗೆಯ ದಿನ ಉರಿ ಬಿಸಿಲಿನ ನಡುವೆಯೇ ಈಗ ಮಳೆಯ ಸಿಂಚನವಾಗುತ್ತಿದೆ. ಅದರಲ್ಲೂ ಸಂಜೆಯ ಸಮಯದಲ್ಲಿ ಕಳೆದೊಂದು ವಾರದಿಂದಲೂ ಮಳೆಯಾಗುತ್ತಿದೆ, ಇದರಿಂದ ಹವಾಮಾನದಲ್ಲಿ ಬದಲಾವಣೆಯಾಗುತ್ತಿರುವುದು ನೋಡಬಹುದು. ಒಂದೇ ದಿನ ಬೇಸಿಗೆಯ ಬಿಸಿಲು ಹಾಗೆ ಮಳೆ ನೋಡುತ್ತಿದ್ದೇವೆ. ಸಂಜೆಯ ಸಮಯದಲ್ಲೂ ಬಹುತೇಖ ಕಡೆಗಳಲ್ಲಿ ಮಳೆಯಾಗುತ್ತಿದೆ. ಇದು ಮುಂಗಾರು ಆರಂಭಿಕ ಸೂಚನೆ ಎನ್ನಲಾಗಿದೆ.
ಹಾಗೆ ಕಳೆದೊಂದು ವಾರದಿಂದಲೂ ರಾಜ್ಯದ ಹಲವು ಕಡೆಗಳಲ್ಲಿ ಮಳೆಯಾಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗಿದೆ. ಗುಡುಗು, ಸಿಡಿಲು ಸಹಿತ ಮಳೆಯಾಗಿದೆ. ಇದರ ಬೆನ್ನಲ್ಲೆ ರಾಜ್ಯ ಹವಾಮಾನ ಇಲಾಖೆ ಮುಂದಿನ ಮೂರು ದಿನಗಳ ಕಾಲ ರಾಜ್ಯದ ಹಲವು ಭಾಗದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ಅದರಲ್ಲೂ ಚಿತ್ರದುರ್ಗ, ಬಳ್ಳಾರಿ, ವಿಜಯನಗರ, ಬೀದರ್, ರಾಯಚೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.

ಹಾಗೆ ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲೂ ಮಳೆಯಾಗಲಿದೆ. ಇನ್ನು ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಇನ್ನು ಕರಾವಳಿ ಪ್ರದೇಶದಲ್ಲಿ ರಾತ್ರಿ ಮಳೆಯಾಗುವ ನಿರೀಕ್ಷೆ ಇದೆ. ಉತ್ತರ ಕನ್ನಡ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಹಾಗೆ ನಿನ್ನೆ ಸುರಿದ ಮಳೆಗೆ 7 ಮಂದಿ ಮೃತಪಟ್ಟಿರುವುದು ವರದಿಯಾಗಿದೆ. ಸದ್ಯ ಈಗ ರಾಜ್ಯದ ಹಲವು ಭಾಗದಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ.
ಮೈಸೂರು, ಮಂಡ್ಯ, ಹಾಸನ, ರಾಮನಗರ, ಶಿವಮೊಗ್ಗ, ತುಮಕೂರು, ಬಳ್ಳಾರಿ, ವಿಜಯನಗರ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗುವ ನಿರೀಕ್ಷೆ ಕೂಡ ಇದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ , ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೊಡಗು ಮತ್ತು ಕೋಲಾರ ಜಿಲ್ಲೆಗಳಲ್ಲಿ ಲಘು ಅಥವಾ ಸಾಧಾರಣ ಮಳೆಯಾಗಲಿದೆ ಎಂದು ಹೇಳಲಾಗಿದೆ.
ಮುಂಗಾರು ಯಾವಾಗ ಆರಂಭ?
ಸದ್ಯ ಈಗ ಸಂಜೆ ಸಮಯದಲ್ಲಿ ಮಾತ್ರವೇ ಮಳೆಯಾಗುತ್ತಿದೆ. ಹಾಗೆ ಮಾನ್ಸುನ್ ಮಳೆ ಆರಂಭದ ಮುನ್ಸೂಚನೆಯೂ ಸಿಕ್ಕಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಮೊದಲೇ ಮಾನ್ಸೂನ್ ಆರಂಭವಾಗಲಿದೆ. ಒಂದು ವಾರ ಮೊದಲೇ ಮಾನ್ಸೂನ್ ಮಾರುತಗಳು ಭಾರತ ಪ್ರವೇಸಿಸಲಿವೆ ಎಂದು ತಿಳಿದುಬಂದಿದೆ. ಅದರಲ್ಲೂ ಮೇ 27ರಂದು ಮಾನ್ಸೂನ್ ಆಗಮನದ ನಿರೀಕ್ಷೆ ಇದೆ. ಪ್ರತಿ ಬಾರಿ ಜೂನ್‌ನಲ್ಲಿ ಮುಂಗಾರು ಮಾರುತಗಳ ಆಗಮನದ ನಿರೀಕ್ಷೆ ಮಾಡಲಾಗುತ್ತಿತ್ತು ಆದ್ರೆ ಈ ಬಾರಿ ಮೇ ಅಂತ್ಯದಲ್ಲೇ ಮಳೆ ಆರಂಭವಾಗಲಿದೆ.
ಇದು ವಿಶೇಷವಾಗಿ ಕೃಷಿಗೆ ಮುಂಚಿತವಾಗಿ ಆರಂಭವಾಗುವುದು ಗಮನಾರ್ಹ ಪರಿಣಾಮ ಬೀರುತ್ತದೆ. ಖಾರಿಫ್ ಬೆಳೆಗಳ ಬೆಳೆಯಲು ಚಟುವಟಿಕೆ ಪ್ರಗತಿಯಾಗಲಿದೆ. ಹೀಗಾಗಿ ರೈತರಿಗೆ ಇದು ಸಂತಸ ತರಲಿದೆ. ಹಾಗೆ ಈ ನೈರುತ್ಯ ಮುಂಗಾರ ಮುಂಬೈ ಮತ್ತು ಕೋಲ್ಕತ್ತಾಕ್ಕೆ ಜೂನ್ 10 ಮತ್ತು 15 ರ ನಡುವೆ ಆಗಮಿಸಬಹುದು. ಆದ್ರೆ ದಕ್ಷಿಣ ಭಾಗದಲ್ಲಿ ಮೇ ಅಂತ್ಯದಲ್ಲೇ ಕಾಣಿಸಿಕೊಳ್ಳಬಹುದು.
ಮಳೆ ನಕ್ಷತ್ರಗಳ ಪ್ರಕಾರ ಮಳೆ ಯಾವಾಗ ಆರಂಭ?
ಜ್ಯೋತಿಷ್ಯ ಶಾಸ್ತ್ರದ ಪ್ರಕಾರವಾಗಿ ಏಪ್ರಿಲ್ 14ರಂದು ಅಶ್ವಿನಿ ಮಳೆ ನಕ್ಷತ್ರ ಆತಂಭಗೊಳ್ಳುತ್ತದೆ. ಆದರೆ ಮೇ 11ರಂದು ಅಧಿಕೃತವಾಗಿ ಕೃತಿಕಾ ಮಳೆಯು ಉತ್ತಮ ಮಳೆ ಆರಂಭ ನೀಡಲಿದೆ ಎಂದು ಹೇಳಲಾಗುತ್ತದೆ. ಹೀಗಾಗಿ ಮೇ ದ್ವಿತಿಯಾರ್ಧದಿಂದ ಉತ್ತಮ ಮಳೆ ನಿರೀಕ್ಷಿಸಬಹುದಾಗಿದೆ. ಹಾಗೆ ರಾಜ್ಯದ ಹಲವೆಡೆ ಈ ಮಳೆಯಾಗುತ್ತಿದ್ದು, ವಾರ್ಷಿಕವಾಗಿ ನಿಗದಿತ ಸಮಯಕ್ಕೂ ಮೊದಲು ಮುಂಗಾರು ಆರಂಭದ ಸೂಚನೆ ಸಿಕ್ಕಿದೆ. ಸದ್ಯ ಮಳೆಗಾಲದ ಆರಂಭವು ರೈತರು ಸೇರಿದಂತೆ ನಾಗರಿಕರಲ್ಲಿ ಸಂತಸ ಮೂಡಿಸಿದೆ.



Click it and Unblock the Notifications
