Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಎಲ್ಲಾ ಕಡೆ ಬರೆಕುಸಿತ, ಪ್ರವಾಹ ಭೀತಿ: ಈ ಸಮಯದಲ್ಲಿ ಪ್ರಯಾಣ ಮಾಡುವುದಾದರೆ ಈ ಮುನ್ನೆಚ್ಚರಿಕೆವಹಿಸಿ
ಈ ವಾರ ಟ್ರಾವೆಲ್ ಮಾಡುವ ಪ್ಲ್ಯಾನ್‌ನಲ್ಲಿದ್ದೀರಾ? ನಿಮ್ಮ ಪ್ಲ್ಯಾನ್‌ನ ಸ್ವಲ್ಪ ಹಿಡಿದರೆ ಒಳ್ಳೆಯದು, ಏಕೆಂದರೆ ರಾಜ್ಯದ ಬಹುತೇಕ ಕಡೆ ಬರೆ ಕುಸಿತ ಉಂಟಾಗುತ್ತಿದೆ, ಪ್ರವಾಹದ ಭೀತಿ ಉಂಟಾಗಿದೆ, ಈ ಸಮಯದಲ್ಲಿ ಪ್ರಯಾಣ ಮಾಡಿದರೆ ರಿಸ್ಕ್ (ಅಪಾಯ) ಹೆಚ್ಚು. ಇನ್ನು ಪ್ರಯಾಣ ಮಾಡಿಯೇ ಆಗಬೇಕೆಂದಿದ್ದರೆ ನಿಮ್ಮ ಸುರಕ್ಷತೆಗಾಗಿ ಈ ಪ್ಲ್ಯಾನ್ ಮಾಡಿ ಮುಂದುವರೆಯುವುದು ಒಳ್ಳೆಯದು

ಟ್ರಿಪ್‌ಗೆ ಮೊದಲೇ ನೀವು ಹೊಗುವ ದಾರಿಯ ಸ್ಥಿತಿಗತಿ ತಿಳಿದುಕೊಳ್ಳಿ
ಬಹುತೇಕ ಕಡೆ ಬರೆ ಕುಸಿತದಿಂದಾಗಿ ಸಂಚಾರಕ್ಕೆ ಅಡಚಣೆ ಉಂಟಾಗಿದೆ, ಹೀಗಾಗಿ ರೋಡ್‌ಗಳನ್ನು ಬ್ಲಾಕ್ ಮಾಡಲಾಗಿದೆ, ನೀವು ಹೊರಡುವ ಸಮಯದಲ್ಲಿ ಯಾವುದೇ ಸಮಸ್ಯೆ ಇಲ್ಲದಿರಬಹುದು, ಆದರೆ ಆ ದಾರಿಯಲ್ಲಿ ಬೆಟ್ಟ-ಗುಡ್ಡಗಳಿದ್ದು ವಿಪರೀತ ಮಳೆ ಸುರಿಯುತ್ತಿದ್ದರೆ ಆ ದಾರಿಯಲ್ಲಿ ಹೋಗದಿರುವುದೇ ಈಗೀನ ಪರಿಸ್ಥಿತಿಯಲ್ಲಿ ಸುರಕ್ಷಿತ. ಬರೆ ಕುಸಿತ, ನೀರಿನ ಮಟ್ಟ ಹೆಚ್ಚಾಗಿ ರಸ್ತೆ ಬ್ಲಾಕ್ ಆಗುವುದು ಈ ಬಗೆಯ ಸಾಧ್ಯತೆ ಇದೆ.
ಹವಾಮಾನ ವರದಿಯನ್ನು ಗಮನಿಸಿ
ನಿಮಗೆ ಹವಾಮಾನ ವರದಿ ಮುಂಚಿತವಾಗಿಯೇ ದೊರೆಯುವುದು. ಇನ್ನು ಎರಡು ಮೂರು ದಿನ ತುಂಬಾ ಮಳೆ ಇದೆಯೇ ಇಲ್ಲವೇ ಎಂಬುವುದೆಲ್ಲಾ ಹವಾಮಾನ ವರದಿಯಿಂದ ತಿಳಿದು ಬರುವುದು. ಅದರ ಪಕ್ಕ ಪ್ಲ್ಯಾನ್ ಮಾಡಿ.
ನೀವು ಯಾವ ಕಡೆ ಹೋಗುತ್ತಿದ್ದೀರಿ ಆ ಕಡೆಯವರ ಕೆಲವರ ಫೋನ್ ನಂಬರ್ ಪಡೆದುಕೊಳ್ಳಿ
ಅವರು ನಿಮಗೆ ಸೂಕ್ತ ಮಾಹಿತಿ ನೀಡುತ್ತಾರೆ, ಹಾಗಾಗಿ ಈ ಸಮಯದಲ್ಲಿ ಪ್ರಯಾಣ ಮಾಡುವಾಗ ಈ ರೀತಿ ಮಾಹಿತಿ ಪಡೆಯುವುದು ತುಂಬಾ ಒಳ್ಳೆಯದು, ಯಾರೂ ಪರಿಚಯವಿಲ್ಲದಿದ್ದರೆ ಸೋಷಿಯಲ್ ಮೀಡಿಯಾದ ಮೂಲಕ ನೀವು ತಿಳಿಯಬಹುದು.
ಸುರಕ್ಷಿತ ಜಾಗದಲ್ಲಿ ತಂಗಿ
ಈ ಸಮಯದಲ್ಲಿ ಗುಡ್ಡದ ಮೇಲಿನ ರೆಸಾರ್ಟ್‌ಗಳಲ್ಲಿ ತಂಗುವುದು ಅಷ್ಟೊಂದು ಸುರಕ್ಷಿತವಲ್ಲ. ಹಾಗಾಗಿ ಅಂಥ ಕಡೆ ತಂಗಬೇಡಿ, ನೀವು ಸುರಕ್ಷಿತವಾದ ಜಾಗದಲ್ಲಿ ಮಾತ್ರ ತಂಗಿ, ಗುಡ್ಡ, ಬೆಟ್ಟ, ರಸ್ತೆ ಬಿಡುಕು ಬಿಟ್ಟಿರುವ ಕಡೆಯಲ್ಲಾ ಹೋಗಬೇಡಿ.
ತುರ್ತು ಸಂದರ್ಭಕ್ಕೆ ಸಿದ್ಧರಾಗಿ
ಈ ಸಮಯದಲ್ಲಿ ಯಾವಾಗ ಏನಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಒಂದು ವೇಳೆ ರೋಡ್ ಬ್ಲಾಕ್ ಆದರೆ ಹಿಂದೆ ಹೋಗುವುದಕ್ಕೆ ಆಗುವುದಿಲ್ಲ, ಮುಂದೆ ಹೋಗುವುದಕ್ಕೆ ಸಾಧ್ಯವಿಲ್ಲ ಎಂದಾದರೆ ನೀರು, ತಿನ್ನಲು ವಸ್ತುಗಳು ನಿಮ್ಮ ಬಲಿ ಇರಲಿ.
ಬರೆಕುಸಿತದ ಅಪಾಯವಿರುವಾಗ ಯಾವ ರೀತಿಯ ಮುನ್ನೆಚ್ಚರಿಕೆವಹಿಸಬೇಕು?
ಜಾಗ್ರತೆಯಿಂದ ಇರಿ
ಒಂದು ವೇಳೆ ಅಲ್ಲಿಯ ಜಿಲ್ಲಾಡಿಳಿತ ಆ ಜಾಗ ಬಿಟ್ಟು ತೆರಳಬೇಕು ಎಂದು ಕೋರಿದಾಗ ಹಠಮಾಡಿ ಅಲ್ಲೇ ಇರುವ ಪ್ರಯತ್ನ ಮಾಡಬೇಡಿ.
ಸುರಕ್ಷಿತ ತಾಣದತ್ತ ಹೋಗಬೇಕು.
ಸ್ಥಳೀಯ ನ್ಯೂಸ್ ಗಮನಿಸುತ್ತಲೇ ಇರಿ.
ಬರೆಕುಸಿತದ ಸಮಯದಲ್ಲಿ ಏನು ಮಾಡಬಾರದು?
ಗಾಬರಿಯಾಗಿ ವರ್ತಿಸಬೇಡಿ
ಜಿಲ್ಲಾಡಳಿತದ ಸೂಚನೆ ನಿರ್ಲಕ್ಷ್ಯ ಮಾಡಬೇಡಿ
ಹೆಚ್ಚು ಅಪಾಯ ಇರುವ ಕಡೆ ಡ್ರೈ ಮಾಡಬೇಡಿ
ಸ್ಥಳೀಯ ಸುದ್ದಿಗಳು ಬರುವಾಗ ರೂಮರ್ ಅಂತ ನಿರ್ಲಕ್ಷ್ಯ ಬೇಡ.



Click it and Unblock the Notifications
