Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಕರಾವಳಿ ಭಾಗದಲ್ಲಿ ಹೆಚ್ಚಾಯ್ತು ಬಿಸಿಗಾಳಿ ಅಬ್ಬರ..! ಹೀಗೆ ಆಗೋದ್ಯಾಕೆ ಗೊತ್ತಾ?
ಫೆಬ್ರವರಿಯಲ್ಲಿ ಮಂಜು ಕವಿದು ಚಳಿಯ ವಾತಾವರಣ ಇರಬೇಕಿತ್ತು. ಆದ್ರೆ ರಾಜ್ಯದಲ್ಲಿ ಹಾಗೆ ದೇಶದ ಹಲವು ಭಾಗದಲ್ಲಿ ಚಳಿಯ ವಾತಾವರಣದ ಬದಲಿಗೆ ಬೇಸಿಗೆಯ ಬಿಸಿಲು ಸುಡುತ್ತಿದೆ. ಹಾಗೆ ಹಲವು ಕಡೆ ಹೀಟ್ ವೇವ್ (ಬಿಸಿಗಾಳಿ) ಜನರಿಗೆ ಸಂಕಷ್ಟ ತರುತ್ತಿದೆ. ಅದರಲ್ಲೂ ಮಹಾನಗರಗಳಲ್ಲಿ ಈ ತಾಪಮಾನ ಏರಿಕೆಯಿಂದ ಜನರು ಹೊರಬರಲಾಗದ ಸ್ಥಿತಿ ಇದೆ. ಈಗಿನ್ನು ಚಳಿಗಾಲ ಮುಗಿಯುತ್ತಿದ್ದಂತೆ ಇಷ್ಟೊಂದು ಪ್ರಮಾಣದ ಬಿಸಿಲು ಕಾಡುತ್ತಿರುವುದು ಮುಂದೆ ತಾಪಮಾನ ಗರಿಷ್ಠ ಮಟ್ಟ ತಲುಪುವ ಭೀತಿ ಎದುರಾಗುವಂತೆ ಮಾಡಿದೆ.
ಸಾಮಾನ್ಯವಾಗಿ ಫೆಬ್ರವರಿಯನ್ನು ಚಳಿಗಾಲದ ಸಮಯ ಎಂದೇ ಪರಿಗಣಿಸಲಾಗಿದೆ. ಮಾರ್ಚ್ ಅಂತ್ಯದವರೆಗೂ ಚಳಿ ಕಾಡುತ್ತಿರಬೇಕಿತ್ತು, ಹಾಗೆ ಸೂರ್ಯನ ಕಿರಣಗಳು ಪ್ರಖಾಶಮಾನವಾಗಿ ಬೀಳಲು ಈಗಷ್ಟೇ ಆರಂಭವಾಗುತ್ತಿರುತ್ತದೆ. ಆದ್ರೆ ಇದರ ಉರಿ ಇನ್ನು ಜನರಿಗೆ ತಟ್ಟಿರುವುದಿಲ್ಲ. ಆದ್ರೆ ಈ ವರ್ಷ ಫೆಬ್ರವರಿಯಲ್ಲಿಯೇ ತಾಪಮಾನ ಏರಿಕೆ ನಿದ್ದೆ ಗೆಡಿಸಿದೆ.

ಮುಂಬೈ, ಬೆಂಗಳೂರು, ಹೈದರಾಬಾದ್ ನಂತರ ದೊಡ್ಡ ನಗರದಲ್ಲಿ ತಾಪಮಾನ ಏರಿಕೆ ನೋಡುತ್ತಿದ್ದೇವೆ. ಹಾಗೆ ಕರಾವಳಿ ಪ್ರದೇಶದಲ್ಲೂ ಬಿಸಿಗಾಳಿಯ ಎಚ್ಚರಿಕೆ ನೀಡಲಾಗಿದೆ. ದಕ್ಷಣ ಕನ್ನಡ, ಉಡುಪಿಯಲ್ಲಿ ಹೀಟ್‌ವೇವ್ ಎಚ್ಚರಿಕೆ ನೀಡಿ ಎಲ್ಲೋ ಅಲರ್ಟ್ ಘೋಷಿಸಿರುವುದು ಇಲ್ಲಿ ಗಮನಿಸಬಹುದು. ಇದು ಆರೋಗ್ಯದ ಮೇಲೆ ಪರಿಣಾಮ ಬೀರಬಹುದಾದ ಹಾಗೆ ಅಸಹಜ ಬೆಳವಣಿಗೆಯ ಕಾರಣದಿಂದ ಕಳವಳ ಹುಟ್ಟುಹಾಕಿದೆ.
ಮುಂಬೈನಲ್ಲಿ ದಿಢೀರ್ ತಾಪಮಾನ ಏರಿಕೆಗೆ ಜನ ಜೀವನದ ಮೇಲೆ ಪರಿಣಾಮ ಬೀರುವುದು ನೋಡಬಹುದು. ಸಾಮಾನ್ಯವಾಗಿ ಅಲ್ಲಿ ಈಗ 38 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ. ಈ ರೀತಿಯ ತಾಪಮಾನ ಏರಿಕೆಯ ಹಿಂದೆ ಒಂದು ಕಾರಣ ಕೂಡ ಇದೆ. ಅದೇ ಬಿಸಿ ಅಲೆ.
ಮುಂಬೈ ಮಹಾನಗರಕ್ಕೆ ಬಿಸಿ ಅಲೆಯ ತೀವ್ರತೆ ಹೆಚ್ಚಾಗಿದೆ. ಶಾಖದ ಅಲೆಯು ಅಸಹಜವಾಗಿ ಬಿಸಿಯಾದ ಹವಾಮಾನದ ದೀರ್ಘಾವಧಿಯಾಗಿದ್ದು, ಸಾಮಾನ್ಯವಾಗಿ ಗರಿಷ್ಠ ತಾಪಮಾನವು 37°C ದಾಟಿದಾಗ ಮತ್ತು ಆ ಪ್ರದೇಶದ ಸರಾಸರಿ ತಾಪಮಾನಕ್ಕಿಂತ 4 ಡಿಗ್ರಿ ಹೆಚ್ಚಳವಾದಾಗ ಇಂತಹ ಹೀಟ್ ವೇವ್ ಅಥವಾ ಬಿಸಿ ಶಾಖದ ಅಲೆಯನ್ನು ನಾವು ನೋಡಬಹುದು.
ಕರಾವಳಿ ನಗರಗಳು ಹೆಚ್ಚಿನ ತಾಪಮಾನ ಎದುರಿಸುವುದೇಕೆ?
ಸಮುದ್ರದ ಗಾಳಿಯು ನಗರದಲ್ಲಿ ತಂಪನೆಯ ಮೇಲ್ಮೈ ಸೃಷ್ಟಿಗೆ ಪ್ರಮುಖ ಕಾರಣವಾಗಿರುತ್ತದೆ. ಆದರೆ ಪೂರ್ವದ ಭಾಗದಿಂದ ಬಿಸಿ ಗಾಳಿ ಬೀಸುವುದು, ಹಾಗೆ ಗಾಳಿಯ ಮಾರುತವು ಆಕಾಶದ ಮೇಲೆ ಹೋದಾಗ ಮತ್ತಷ್ಟು ಬಿಸಿಯಾದಾಗ ಅಲ್ಲಿ ಆಂಟಿಸೈಕ್ಲೋನ್ ಮಟ್ಟ ಸಂಯೋಜನೆಯಾಗಿ ತಾಪಮಾನ ಹೆಚ್ಚಳವಾಗುತ್ತದೆ. ಈ ಬಿಸಿಗಾಳಿ ನಗರದ ಕಡೆಗೆ ಬೀಸುತ್ತದೆ. ಮೊದಲೇ ತಾಪಮಾನ ಏರಿರುವುದು ಹಾಗೆ ಈ ಬಿಸಿಗಾಳಿಯು ಸೇರಿ ಶಾಖದ ಅಲೆಗಳು ಜನರ ನಿದ್ದೆಗೆಡಿಸುತ್ತವೆ.
ಭಾರತ ಮಧ್ಯಪ್ರಾಚ್ಯ ಮತ್ತು ಮೆಡಿಟರೇನಿಯನ್ ಪ್ರದೇಶದಿಂದ ಬೀಸುತ್ತಿರುವ ಗಾಳಿಯನ್ನು ಪಡೆಯುತ್ತಿದೆ, ಇವು ಹೆಚ್ಚಾಗಿ ಮರುಭೂಮಿ ಪ್ರದೇಶಗಳಾಗಿವೆ, ಈ ಗಾಳಿಯನ್ನು ಮತ್ತಷ್ಟು ಬಿಸಿಯಾಗಿ ಮಾಡುತ್ತದೆ. ಇದರಿಂದ ಬಿಸಿಗಾಳಿಯ ಅನುಭವ ಕರಾವಳಿ ಭಾಗದಲ್ಲಿ ಹೆಚ್ಚಾಗಿರುತ್ತದೆ.
ಮುಂದಿನ 4-5 ದಿನಗಳಲ್ಲಿ ಕೊಂಕಣದ ಒಳಭಾಗಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಕ್ರಮೇಣ 2-3 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಬಹುದು. ಅಂದರೆ ಮುಂಬೈ, ಗೋವಾ, ಕರ್ನಾಟಕ ಭಾಗದಲ್ಲಿ ತಾಪಮಾನ ಏರಿಕೆಯಾಗಬಹುದು ಎಂದು ಐಎಂಡಿ ತಿಳಿಸಿದೆ. ಹಾಗೆ ಜನರಿಗೂ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಹೇಳಲಾಗಿದೆ. ಬಿಸಿಲಿನ ಧಗೆ ಹೆಚ್ಚಾಗಿರುವ ಸಮಯದಲ್ಲಿ ಮನೆಯಿಂದ ಹೊರಬಾರದಂತೆ. ಹಾಗೆ ಬಿಸಿಲಿನಲ್ಲಿ ಮಾಡುವ ಕೆಲಸವನ್ನು ಮುಂದೂಡುವುದು ಉತ್ತಮವಾಗಿದೆ. ಹಾಗೆ ಹೆಚ್ಚು ನೀರು ಕುಡಿಯುವುದು ದೇಹಕ್ಕೆ ಬಿಸಿಗಾಳಿಯ ಪರಿಣಾಮ ತಡೆಯಲು ಸಹಕಾರಿಯಾಗಲಿದೆ.



Click it and Unblock the Notifications
