Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಮುಂದಿನ 5 ದಿನ ಹೀಟ್‌ವೇವ್, ಬಿರುಗಾಳಿ ಮಳೆ ಎಚ್ಚರಿಕೆ: ಐಎಂಡಿ ವರದಿ
ತಾಪಮಾನ ಏರಿಕೆ ಒಂದು ಕಡೆಯಾದರೆ ಮತ್ತೊಂದು ಕಡೆ ಮಳೆಯ ಆಗಮನ ಕೂಡ ಜನರಲ್ಲಿ ಹೊಸ ರೀತಿ ಗೊಂದಲ ಮೂಡಿಸಿದೆ. ಬಿಸಿಲಿನ ನಡುವೆ ಸಂಜೆ ಸಮಯದಲ್ಲಿ ಹಲವು ಕಡೆ ಮಳೆಯಾಗುವುದು ನೋಡಬಹುದು. ಈ ನಡುವೆ ಈಗ ಭಾರತೀಯ ಹವಾಮಾನ ಇಲಾಖೆ ಮುಂದಿನ 5 ದಿನಗಳ ಕಾಲ ಹೀಟ್ ವೇವ್‌ನ ಎಚ್ಚರಿಕೆ ನೀಡಿದೆ. ಉತ್ತರ ಭಾರತದಲ್ಲಿ ಈ ಪ್ರಮಾಣ ಅಧಿಕವಾಗಿರಲಿದ್ದು, ನಿಗದಿಗಿಂತ ಹೆಚ್ಚು ತಾಪಮಾನ ವರದಿಯಾಗಲಿದೆ.
ಭಾರತದ ಮಧ್ಯ ಭಾಗದಲ್ಲಿ ಉಂಟಾದ ಮಳೆಯ ಕಾರಣದಿಂದಾಗಿ ಈಗ ಬಿಸಿ ಗಾಳಿಯ ಸೃಷ್ಟಿಯಾಗಿದೆ. ಹೀಗಾಗಿ ಉತ್ತರ ಭಾರತ ಹಾಗೂ ವಾಯುವ್ಯ ಭಾಗದಲ್ಲಿ ಗರಿಷ್ಠ 2ರಿಂದ 3 ಡಿಗ್ರಿ ತಾಪಮಾನ ಏರಿಕೆಯಾಗುವ ಸಾಧ್ಯತೆ ಇದೆ ಎಂಬ ಮುನ್ನೆಚ್ಚರಿಕೆ ನೀಡಿದೆ. ಇದು ಹಲವು ಭಾಗದ ಮೇಲೆ ಪರಿಣಾಮ ಬೀರಲಿದ್ದು ಅತ್ಯಧಿಕ ತಾಪಮಾದ ಜೊತೆಗೆ ಉರಿ ಹೆಚ್ಚಾಗುವ ಸಂಭವವಿದೆ.

ಏಪ್ರಿಲ್ 22-24ರ ಅವಧಿಯಲ್ಲಿ ಉತ್ತರ ಪ್ರದೇಶದ ದಕ್ಷಿಣ ಭಾಗ ಮತ್ತು ಮಧ್ಯಪ್ರದೇಶದ ಹಲವು ಭಾಗದಲ್ಲಿ, ಏಪ್ರಿಲ್ 23-24ರಂದು ರಾಜಸ್ಥಾನ ಮತ್ತು ಹರಿಯಾಣದ ಹಲವು ಭಾಗದಲ್ಲಿ ತೀವ್ರ ಪ್ರಮಾಣದ ಹೀಟ್ ವೇವ್ ನೋಡಬಹುದು ಎಂದು ಐಎಂಡಿ ಮುನ್ಸೂಚನೆ ನೀಡಿದೆ. ಹಾಗೆ ಹಳದಿ ಅಲರ್ಟ್ ಕೂಡ ನೀಡಲಾಗಿದೆ. ಈ ಸಮಯದಲ್ಲಿ ಮನೆಯಿಂದ ಹೊರಬರುವುದು ಸೇರಿದಂತೆ ಶಿಶುಗಳ ಆರೋಗ್ಯದ ಕುರಿತು ಹೆಚ್ಚು ಕಾಳಜಿ ವಹಿಸಲು ಸೂಚಿಸಲಾಗಿದೆ.
ಈ ಭಾನುವಾರವು ಮಹಾರಾಷ್ಟ್ರದ ಚಂದ್ರಾಪುರವು ಭಾರತದ ಅತ್ಯಂತ ಗರಿಷ್ಠ ತಾಪಮಾನಕ್ಕೆ ಸಾಕ್ಷಿಯಾಗಿದೆ. ಅಂದು 44.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಜಮ್ಮು ಮತ್ತು ಕಾಶ್ಮೀರ, ಲಡಾಖ್‌ನಲ್ಲಿ ಗುಡುಗು, ಮಿಂಚು, ಬಿರುಗಾಳಿ ಎಚ್ಚರಿಕೆ
ಉತ್ತರ ಭಾರತದ ಕೆಲವು ಭಾಗದಲ್ಲಿ ಹೀಟ್ ವೇವ್ ಆತಂಕವಿದ್ದರೆ ಇತ್ತ ಜಮ್ಮು ಮತ್ತು ಕಾಶ್ಮೀರ ಭಾಗದಲ್ಲಿ ಇದಕ್ಕೆ ವ್ಯತಿರಿಕ್ತ ಹವಾಮಾನ ವರದಿಯಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರ, ಲಡಾಖ್, ಗಿಲ್ಗಿಟ್, ಬಾಲ್ಟಿಸ್ತಾನ್ ಮತ್ತು ಮುಜಫರಾಬಾದ್‌ನ ಪ್ರತ್ಯೇಕ ಸ್ಥಳಗಳಲ್ಲಿ ಇಂದು ಗುಡುಗು ಮತ್ತು ಮಿಂಚಿನಿಂದ ಕೂಡಿದ ಮಳೆಯಾಗಲಿದೆ ಎಂದಿದೆ. ಹೀಗಾಗಿ ಈ ಭಾಗದ ಪ್ರದೇಶಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಛತ್ತೀಸ್‌ಗಢ, ಒಡಿಶಾ, ಉಪ-ಹಿಮಾಲಯನ್ ಪಶ್ಚಿಮ ಬಂಗಾಳ, ಸಿಕ್ಕಿಂ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರ ಮತ್ತು ಆಂಧ್ರ ಕರಾವಳಿ ಭಾಗಗಳಲ್ಲಿ ಮುಂದಿನ 2 ದಿನಗೋ ಕಾಲ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಸೂಚಿಸಿದೆ.
ಹಾಗೆ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ಕೂಡ ಮುಂದಿನ 2 ದಿನಗಳಲ್ಲಿ ಒಣ ಹವೆ ಇರಲಿದ್ದು, ತಾಪಮಾನ ಏರಿಕೆಯಾಗುವ ಸಾಧ್ಯತೆ ಎಂದು ಕೂಡ ತಿಳಿಸಿದೆ. ಇನ್ನು ಕರ್ನಾಟಕದ ಒಳನಾಡು, ಆಂಧ್ರಪ್ರದೇಶದ ಕರಾವಳಿ ಮತ್ತು ರಾಯಲಸೀಮಾ ಮತ್ತು ಕೇರಳ, ತೆಲಂಗಾಣದಲ್ಲಿ ಮುಂದಿನ 4 ದಿನಗಳಲ್ಲಿ ಗುಡುಗು ಸಹಿತ ಮಳೆ ಮತ್ತು ಗಂಟೆಗೆ 30 ರಿಂದ 50 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆ ಹೆಚ್ಚಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಏಪ್ರಿಲ್ 22-24 ರವರೆಗೆ ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇನ್ನು ದಕ್ಷಿಣ ಭಾರತದ ಹಲವು ರಾಜ್ಯದಲ್ಲಿ ಒಣ ಹವೆಯ ಜೊತೆಗೆ ಮಳೆಬೀಳುವ ಸಾಧ್ಯತೆಯೂ ಇದೆ. ಹಗಲಿನಲ್ಲಿ ತಾಪಮಾಣ ಏರಿಕೆ ನೋಡಬಹುದು. ಹಾಗೆ ಸಂಜೆ ಸಮಯದಲ್ಲಿ ಮಳೆಯಾಗಲಿದೆ.



Click it and Unblock the Notifications