Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಬಿಸಿಗಾಳಿ ಎಫೆಕ್ಟ್.! ಶಾಲಾ ಕೊಠಡಿಯನ್ನೇ ಮಿನಿ ಈಜುಕೊಳ ಮಾಡಿದ ಶಿಕ್ಷಕರು..!
ಬೇಸಿಗೆಯ ತಾಪಮಾನ ಏರಿಕೆ ಜನರನ್ನು ಕಂಗೆಡಿಸಿದೆ. ಜನರು ಮನೆಯಿಂದ ಹೊರಬರಲು ಅಕ್ಷರಶಃ ಹಿಂದೇಟು ಹಾಕುವಂತಾಗಿದೆ. ಅದರಲ್ಲೂ ಹೀಟ್ ವೇವ್ ಜನರ ಪ್ರಾಣಕ್ಕೂ ಸಂಚಕಾರ ತರುತ್ತಿದೆ. ಹೀಗಾಗಿ ಜನ ಮಧ್ಯಾಹ್ನದ ಉರಿ ಬಿಸಿಲಿಗೆ ಬಾರದೆ ಮನೆಯಲ್ಲೇ ಉಳಿಯುವಂತಾಗಿದೆ.
ಬಿಸಿಲಿನ ತಾಪ ಎಷ್ಟಿದೆ ಎಂದರೆ ಜನರು ಬಿಸಿ ನೀರಿನ ಬಳಕೆಯನ್ನೇ ಮರೆತು ಬಿಟ್ಟಿದ್ದಾರೆ. ಇನ್ನು ಪ್ರಾಣಿ ಪಕ್ಷಿಗಳ ಪಾಡಂತು ಕೇಳುವುದೇ ಬೇಡ ಎನ್ನುವಂತಾಗಿದೆ. ಇತ್ತ ವೃದ್ಧರು ಮತ್ತು ಮಕ್ಕಳು ಸಹ ಬಿಸಿಗಾಳಿಯಿಂದ ತತ್ತರಿಸಿದ್ದಾರೆ. ಅವರಿಗೆ ಮನೆಯಿಂದ ಹೊರಬಾರದಿರುವ ಪರಿಸ್ಥಿತಿಯಲ್ಲೂ ಬೇಸಿಗೆಯ ಉರಿ ತಡೆಯಲಾಗುತ್ತಿಲ್ಲ.

ಇನ್ನು ಈ ಬಿಸಿಗಾಳಿಯ ಪರಿಣಾಮವಾಗಿ ಹತ್ತು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಲವರು ಆಸ್ಪತ್ರೆಗೆ ದಾಖಲಾಗುವಂತಹ ಪ್ರಸಂಗಗಳು ಸಹ ನಾವು ನೋಡಬಹುದು. ಏಕೆಂದರೆ ಹೆಚ್ಚು ನೀರು ಕುಡಿಯದಿದ್ದರೆ ನಮ್ಮ ದೇಹ ಡಿಹೈಡ್ರೇಷನ್‌ಗೆ ಒಳಗಾಗುತ್ತದೆ. ಇದು ಹಲವು ಸಮಸ್ಯೆಗೆ ಕಾರಣವಾಗುತ್ತದೆ.
ಇತ್ತ ಬೇಸಿಗೆಯಿಂದ ಮಕ್ಕಳು ಶಾಲೆಗೆ ಬರಲು ಸಮಸ್ಯೆ ಎದುರಾಗಬಾರದು ಎಂದು ಶಾಲೆಗಳಿಗೆ ರಜೆ ನೀಡಲಾಗಿರುತ್ತದೆ. ಆದರೆ ಇಲ್ಲೊಂದು ಶಾಲೆಯಲ್ಲಿ ಕ್ಲಾಸ್ ರೂಮ್ ಅನ್ನೇ ಸ್ವಿಮ್ಮಿಂಗ್ ಪೂಲ್ ಮಾಡಲಾಗಿದ್ದು, ಮಕ್ಕಳಿಗೆ ಮಜಾವೋ ಮಜಾ ಎನ್ನುವಂತಾಗಿದೆ.
ಉತ್ತರ ಪ್ರದೇಶದ ಕನೌಜ್‌ನಲ್ಲಿರುವ ಶಾಲೆಯೊಂದರಲ್ಲಿ ಕ್ಲಾಸ್ ರೂಮಿಗೆ ತಣ್ಣನೆಯ ನೀರು ಹಾಕಿ ಅಲ್ಲಿ ಮಕ್ಕಳು ಆಟವಾಡುತ್ತಿದ್ದಾರೆ. ಬೇಸಿಗೆಯಿಂದ ಬಸವಳಿದಿದ್ದ ಮಕ್ಕಳು ನೀರಿನಲ್ಲಿ ಚೆಲ್ಲಾಟವಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಮಕ್ಕಳ ಖುಷಿಗೆ ಜನರೂ ಮರಳಾಗಿದ್ದಾರೆ.
ಉತ್ತರ ಪ್ರದೇಶದ ಹಲವು ಭಾಗದಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿದೆ. ಹೀಗಾಗಿ ಶಾಲೆಯಲ್ಲಿ ಮಕ್ಕಳು ಕೂರುವುದು ಸಾಧ್ಯವಿಲ್ಲದ ಪರಿಸ್ಥಿತಿ ಆಗಿದೆ. ಹೀಗಾಗಿ ಶಾಲೆಯ ಕೊಠಡಿಯೊಂದಕ್ಕೆ ನೀರು ಹಾಕಿ ಅಲ್ಲಿ ಮಕ್ಕಳು ಆಡಿಕೊಳ್ಳಲು ಬಿಡಲಾಗಿದೆ. ಬೇಸಿಗೆಯ ಉರಿಯಲ್ಲಿ ಪಾಠ ಕೇಳುತ್ತಿದ್ದ ಮಕ್ಕಳು ನೀರಿನಲ್ಲಿ ಆಟವಾಡಲು ಬಿಟ್ಟಾಗ ಕುಣಿದು ಕುಪ್ಪಳಿಸಿದ್ದಾರೆ.
ಈ ಶಾಲೆಗೆ ಬೇಸಿಗೆಯಲ್ಲಿ ಮಕ್ಕಳು ಬರುತ್ತಿಲ್ಲ ಎಂಬ ಕಾರಣಕ್ಕೆ ಈ ಕ್ರಮಕ್ಕೆ ಮುಂದಾಗಲಾಗಿದೆಯಂತೆ. ಇಲ್ಲಿ ಬೇಸಿಗೆಯ ಕಾರಣ ನೀಡಿ ಮಕ್ಕಳು ಶಾಲೆಗೆ ಬರುತ್ತಿಲ್ಲ ಹೀಗಾಗಿ ಶಾಲೆಯಲ್ಲೇ ಮಿನಿ ವಾಟರ್ ಪಾರ್ಕ್ ಮಾಡಿ ಮಕ್ಕಳನ್ನು ಶಾಲೆ ಕಡೆ ಆಕರ್ಷಿಸಲು ಮುಂದಾಗಲಾಗಿದೆ. ಕಳೆದ 15 ದಿನಗಳಿಂದ ಈ ಭಾಗದಲ್ಲಿ ತಾಪಮಾನ ಏರಿಕೆಯಾಗಿದ್ದು, ಮಕ್ಕಳು ಶಾಲೆಯತ್ತ ತಿರುಗಿಯೂ ನೋಡುತ್ತಿಲ್ಲ. ಹೀಗಾಗಿ ಅವರನ್ನು ಹೀಗೆ ಬಿಟ್ಟರೆ ಶಾಶ್ವತವಾಗಿ ಶಾಲೆಯಿಂದ ಹೊರಗುಳಿಯುವ ಸಾಧ್ಯತೆ ಇರುವ ಕಾರಣ ಮಕ್ಕಳ ಶಾಲೆಯತ್ತ ಸೆಳೆಯುವ ಸಲುವಾಗಿ ಈ ರೀತಿ ವ್ಯವಸ್ಥೆ ಮಾಡಲಾಗಿದೆ.
ಪೂರ್ವ ಭಾರತದಲ್ಲಿ ಮೇ 1 ರವರೆಗೆ ಮತ್ತು ದಕ್ಷಿಣ ಪೆನಿನ್ಸುಲರ್ ಪ್ರದೇಶದಲ್ಲಿ ಮುಂದಿನ ಐದು ದಿನಗಳಲ್ಲಿ ತೀವ್ರತರವಾದ ಬಿಸಿಗಾಳಿಯ ವಾತಾವರಣವನ್ನು ನಿರೀಕ್ಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಸೋಮವಾರ ತಿಳಿಸಿದೆ.
ಹವಾಮಾನ ಇಲಾಖೆಯು ಇತ್ತೀಚಿಗೆ ಕೆಲವು ಭಾಗಗಳಿಗೆ ರೆಡ್ ಅಲರ್ಟ್ ಸಹ ಘೋಷಿಸಿದೆ. ಮುಂದಿನ ಎರಡು ಮೂರು ದಿನಗಳಲ್ಲಿ ಆಂಧ್ರಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಒಡಿಶಾದ ಕೆಲವು ಭಾಗಗಳಲ್ಲಿ ತೀವ್ರವಾದ ಬಿಸಿಗಾಳಿ ಇರುವ ಸಾಧ್ಯತೆ ಇದ್ದು, ಅಗತ್ಯ ಕ್ರಮ ತೆಗೆದುಕೊಳ್ಳಲು ಸೂಚಿಸಿದೆ.
ಈ ರೀತಿ ಮಕ್ಕಳಿಗೆ ಬೇಸಿಗೆಯಲ್ಲಿ ಅನುಕೂಲವಾಗುವಂತೆ, ಬಿಸಿಗಾಳಿಯ ಹೊಡೆತದಿಂದ ಕೆಲ ಕಾಲ ತಂಪಾಗಿರಿಸಲು ಶಾಲೆ ಮಾಡಿರುವ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಮಕ್ಕಳ ಆರೋಗ್ಯದ ಕಡೆ ಶಿಕ್ಷಕರ ಕಾಳಜಿಗೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.



Click it and Unblock the Notifications
