Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಪುಣ್ಯ ಕ್ಷೇತ್ರದಲ್ಲಿ ಪಾಪದ ಕೆಲಸ..! ಕುಂಭ ಮೇಳದಲ್ಲಿ ಪೋಷಕರ ಬಿಟ್ಟು ಹೋದ ಮಗ-ಸೊಸೆ!!
ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಅವರನ್ನು ಬೆಳೆಸುವ ದಾರಿಯಲ್ಲಿ ಎಲ್ಲವನ್ನೂ ತ್ಯಾಗ ಮಾಡಲು ಸಿದ್ದರಿರುತ್ತಾರೆ. ಮಕ್ಕಳು ಬಯಸಿದ್ದಂತಹ ಜೀವನ ಅವರಿಗೆ ಕೈ ಸೇರಲು ಪೋಷಕರು ನಿದ್ರೆ ಬಿಟ್ಟು ಕೆಲಸ ಮಾಡಿ ಅವರನ್ನು ಸಾಕಿರುತ್ತಾರೆ. ತಮ್ಮ ಕಷ್ಟ ಮಕ್ಕಳಿಗೆ ಬರಬಾರದು ಅನ್ನೋದು ಎಲ್ಲಾ ಪೋಷಕರ ಮನದಾಳದ ಮಾತಾಗಿರುತ್ತೆ. ಆದ್ರೆ ಕೆಲವೊಂದು ಮಕ್ಕಳ ಕಥೆ ಕೇಳಿದರೆ ಪೋಷಕರು ಇಷ್ಟೇಲ್ಲಾ ಕಷ್ಟಪಟ್ಟು ಮಕ್ಕಳನ್ನು ಸಾಕಿದ್ದು ಏಕೆ ಎನ್ನುವಂತಹ ಪ್ರಶ್ನೆ ನಿಮ್ಮ ಮುಂದೆ ಬರುತ್ತೆ.
ಪೋಷಕರು ತಮ್ಮ ಮಕ್ಕಳನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ, ಕೊರತೆಗಳು ಬಾರದಂತೆ ಸಾಕುತ್ತಾರೆ. ಆದ್ರೆ ಇತ್ತೀಚಿಗೆ ಮಕ್ಕಳು ದೊಡ್ಡವರಾದ ಬಳಿಕ ಪೋಷಕರನ್ನು ವೃದ್ಧಾಶ್ರಮದಲ್ಲಿ ಬಿಡುವುದು, ಇಲ್ಲವೆ ಬೇರೆಯವರ ಆಶ್ರಯದಲ್ಲಿ ಬಿಟ್ಟು ಬರುವುದು ನೋಡುತ್ತಿದ್ದೇವೆ. ಮತ್ತೊಂದಿಷ್ಟು ಪ್ರಕರಣದಲ್ಲಿ ಮಕ್ಕಳು ತಂದೆ ತಾಯಿಯನ್ನು ಮನೆಯಿಂದಲೇ ಹೊರಹಾಕುವ ಘೋರ ಘಟನೆಗಳನ್ನು ಕೂಡ ನಾವು ನೋಡುತ್ತಿರುತ್ತೇವೆ.

ಹಾಗೆ ಇಲ್ಲೊಬ್ಬ ಮಗ ಕೂಡ ತಂದೆ ತಾಯಿಗೆ ಇದೇ ರೀತಿ ದ್ರೋಹ ಬಗೆದಿದ್ದಾರೆ. ಆದ್ರೆ ಈ ಪಾಪ ಕಾರ್ಯಕ್ಕೆ ಆತ ಬಳಸಿಕೊಂಡಿದ್ದು ಮಾತ್ರ ಪುಣ್ಯ ಕ್ಷೇತ್ರವನ್ನು. ಆತ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ತನ್ನ ಪೋಷಕರನ್ನು ಬಿಟ್ಟು ಮನೆಗೆ ವಾಪಾಸಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಇದನ್ನು ತಿಳಿಯದ ತಂದೆ ತಾಯಿ ಕಣ್ಣೀರು ಹಾಕಿದ್ದಾರೆ.
ಪುತ್ರ ಹಾಗೂ ಸೊಸೆಯ ಜೊತೆಗೆ ಮಹಾ ಕುಂಭ ವೀಕ್ಷಿಸಲು ಬಂದಿದ್ದ ಪೋಷಕರು ಈಗ ಮನೆಯ ದಾರಿ ಸಿಗದೆ, ಪುತ್ರನ ಕಾರ್ಯ ಕಂಡು ಕಣ್ಣೀರಿಟ್ಟಿದ್ದಾರೆ. ಆತ ಜನಸ್ತೋಮದ ನಡುವೆ ಇಬ್ಬರನ್ನು ಕೂರಿಸಿ ಮನೆಗೆ ವಾಪಾಸಾಗಿದ್ದಾನೆ. ಮಗನ ಬರುವಿಕೆಯನ್ನು ಕಾಯುತ್ತಾ ಕುಳಿತಿದ್ದ ತಂದೆ ತಾಯಿ ಕಣ್ಣೀರಿಟ್ಟಿದ್ದಾರೆ.
ಪ್ರಯಾಗ್‌ರಾಜ್‌ನಲ್ಲಿ ತಂದೆ ತಾಯಿ ಇಬ್ಬರು ದಿಕ್ಕು ಕಾಣದೆ ಕಣ್ಣೀರು ಹಾಕುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇಂತಹ ಮಗನಿಗೆ ಜನ್ಮ ಕೊಟ್ಟ ತಂದೆ ತಾಯಿ ನಡುಬೀದಿಗೆ ಬಂದಿರುವುದನ್ನು ಕಂಡ ಜನರು ಅವರ ಸಹಾಯಕ್ಕೆ ಮುಂದಾಗಿರುವುದು ವಿಡಿಯೋದಲ್ಲಿ ನಾವು ನೋಡಬಹುದಾಗಿದೆ.
ವಿಡಿಯೋದಲ್ಲಿ ಪೋಷಕರಿಬ್ಬರು ಕೊರೆಯುವ ಚಳಿಯಲ್ಲಿ ಕಂಬಳಿಯ ಹೊದ್ದು ಅಳುತ್ತಿದ್ದಾರೆ. ಏನೆಲ್ಲಾ ನಡೆಯಿತು ಅನ್ನೋದನ್ನು ಕಣ್ಣೀರ ನಡುವೆ ಹೇಳುತ್ತಿದ್ದಾರೆ. ನನಗೆ ಮೂವರು ಗಂಡು ಮಕ್ಕಳಿದ್ದಾರೆ. ಅವರು ನಮ್ಮನ್ನು ಬಿಟ್ಟು ಹೋಗಿದ್ದಾರೆ. ಮೂವರು ಸೊಸೆಯಂದಿರು, ಆ ಮೂವರು ದುಷ್ಟರು ಎಂದು ಆತ ಹೇಳುತ್ತಿದ್ದಾನೆ. ಹಾಗೆ ಸಹಾಯಕ್ಕೆ ಬಂದಾತ ನಿಮ್ಮ ಮನೆಯ ವಿಳಾಸ ಹೇಳುವಂತೆ ಕೇಳುತ್ತಿದ್ದಾನೆ. ಇಲ್ಲವೇ ಬೆಳಗ್ಗೆ ಆಶ್ರಮಕ್ಕೆ ಬಿಟ್ಟು ಬರುತ್ತೇವೆ, ಚಿಂತಿಸಬೇಡಿ ಎಂದು ಹೇಳುತ್ತಿರುವುದು ನೋಡಬಹುದು.
ಈ ವಿಡಿಯೊವನ್ನು @shantanu_media ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೃದ್ಧ ಪೋಷಕರನ್ನು ಕುಂಭದಲ್ಲಿ ತೀವ್ರ ಚಳಿಯಲ್ಲಿ ಬಿಟ್ಟು ಹೋದೆ' ಎಂಬ ಶೀರ್ಷಿಕೆ ಬರೆಯಲಾಗಿದೆ. ಎರಡು ದಿನಗಳ ಹಿಂದೆ ಹಂಚಿಕೊಂಡಿದ್ದ ಈ ವಿಡಿಯೋಗೆ ಸಾವಿರಾರು ಮಂದಿ ಪ್ರತಿಕ್ರಿಯಿಸಿದ್ದಾರೆ. ಜನರು ತಪ್ಪ ಪಾಪಗಳನ್ನು ತೊಳೆದುಕೊಳ್ಳಲು ಗಂಗೆಯಲ್ಲಿ ಪವಿತ್ರ ಸ್ನಾನ ಮಾಡಲು ಬರುತ್ತಾರೆ. ಆದ್ರೆ ಈ ಪುತ್ರ ಪಾಪ ಕಾರ್ಯಗಳ ಮಾಡಲೆಂದೇ ಪುಣ್ಯ ಕ್ಷೇತ್ರಕ್ಕೆ ಬಂದಿದ್ದ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.
ಈ ಜಗತ್ತಿನಲ್ಲಿ ಎಂತಹ ಗಂಡು ಮಕ್ಕಳಿದ್ದಾರೆ, ಯಾಕೆ ಇಂತಹ ವೃದ್ಧ ಪೋಷಕರಿಗೆ ತೊಂದರೆ ಕೊಡುತ್ತಾರೆ. ಅವನು ಮಗನಲ್ಲ ಆದರೆ ಕೆಟ್ಟ ಮಗ, ನೀನು ಒಳ್ಳೆಯ ಕೆಲಸ ಮಾಡಿದ್ದೀರಿ. ಮಕ್ಕಳು ತಮ್ಮ ಹೆತ್ತವರ ಬಗ್ಗೆ ಇಷ್ಟೊಂದು ಬೇಜವಾಬ್ದಾರಿಯಿಂದ ವರ್ತಿಸಬಾರದು ಎಂದು ಹೇಳಿದ್ದಾರೆ. ಹಾಗೆ ಇಂತಹ ಮಕ್ಕಳು ಯಾವ ತಂದೆ ತಾಯಿಗೂ ಜನಿಸಬಾರದು ಎಂದು ಮತ್ತೊಬ್ಬರು ಹೇಳಿದ್ದಾರೆ.



Click it and Unblock the Notifications