Latest Updates
-
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: AQI ಏರಿಕೆ, ಹೊರಗೆ ಹೋಗುವ ಮುನ್ನ ಈ ಮಾಸ್ಕ್ ಧರಿಸುವುದು ಕಡ್ಡಾಯ! -
ವಿಶ್ವ ಶಿಕ್ಷಕರ ದಿನ: ಶಿಕ್ಷಕರಿಗೆ ಗೌರವ ಸಲ್ಲಿಸುವಾಗ ಪೋಷಕರು ಪಾಲಿಸಬೇಕಾದ ಶಿಷ್ಟಾಚಾರಗಳೇನು? -
ಕೇರಳ-ತಮಿಳುನಾಡು ಮಳೆ ಅಲರ್ಟ್: ನಿಮ್ಮ ಮನೆ ಮತ್ತು ಕಾರನ್ನು ಸುರಕ್ಷಿತವಾಗಿಡಲು ಈ 5 ತಕ್ಷಣದ ಕ್ರಮಗಳನ್ನು ಕೈಗೊಳ್ಳಿ! -
ಜಿಮ್ಗೆ ಹೋಗುವವರೇ ಎಚ್ಚರ! ಪ್ರೊಟೀನ್ ಸಪ್ಲಿಮೆಂಟ್ಸ್ ಮೇಲೆ FDA ದಾಳಿ, ನಕಲಿ ಉತ್ಪನ್ನ ಪತ್ತೆಹಚ್ಚುವುದು ಹೇಗೆ? -
ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್: ಭಾರತದ ಗೆಲುವಿನ ಸಂಭ್ರಮಕ್ಕೆ ಇಲ್ಲಿದೆ ವೈರಲ್ ಮೀಮ್ಸ್ ಮತ್ತು ಸೇಫ್ ಸೆಲೆಬ್ರೇಷನ್ ಗೈಡ್! -
ಕೋಲ್ಕತ್ತಾದಲ್ಲಿ ಕಳಪೆ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಸುರಕ್ಷಿತ ಸಮಯ ಮತ್ತು ಮಾರ್ಗಗಳನ್ನು ತಪ್ಪದೇ ತಿಳಿಯಿರಿ
ಸರ್ಕಾರಿ ಶಾಲೆಯಲ್ಲಿ ಓದಿದ ಬಾಲಕಿಗೆ ಮೈಕ್ರೋಸಾಫ್ಟ್‌ನಿಂದ ₹31 ಲಕ್ಷ ವೇತನ..!
ಸರ್ಕಾರಿ ಶಾಲೆಯಲ್ಲಿ ಓದಿದವರಿಗೆ ಹೆಚ್ಚು ಸಂಬಳ ಸಿಗುವ ನೌಕರಿ ಸಿಗುವುದಿಲ್ಲ ಎಂದು ಪೋಷಕರು ಮಕ್ಕಳನ್ನು ಇಂಗ್ಲೀಷ್ ಮೀಡಿಯಂನಲ್ಲಿ ಲಕ್ಷ ಲಕ್ಷ ಶುಲ್ಕ ನೀಡಿ ಓದಿಸುತ್ತಾರೆ. ಸರ್ಕಾರಿ ಶಾಲೆ ಎಂದರೆ ಮೂಗು ಮುರಿದು ಮುಂದೆ ಸಾಗುವವರೇ ಹೆಚ್ಚಾಗಿದ್ದಾರೆ. ಆದರೆ ಇಲ್ಲೊಬ್ಬಳು ಸರ್ಕಾರಿ ಶಾಲೆಯಲ್ಲಿ ಓದಿ ಸಾಫ್ಟ್‌ವೇರ್ ಕಂಪನಿಯಲ್ಲಿ ಯಾರು ಊಹಿಸದ ವೇತನಕ್ಕೆ ಆಯ್ಕೆಯಾಗಿದ್ದಾಳೆ.
ಹರಿಯಾಣದ ಫತೇಹಾಬಾದ್‌ನ ಕಾಜಲ್ ಎಂಬಾಕೆ ಈಗ ಮೈಕ್ರೋಸಾಫ್ಟ್‌ನಲ್ಲಿ ನೌಕರಿ ಗಿಟ್ಟಿಸಿದ್ದು ಆಕೆಗೆ ವಾರ್ಷಿಕವಾಗಿ ಕಂಪನಿ 31 ಲಕ್ಷ ರೂ.ಗಳ ಆಕರ್ಷಕ ವೇತನ ನೀಡಲು ಮುಂದಾಗಿದೆ. ನಾಲ್ಕು ವರ್ಷಗಳಲ್ಲಿ ಅವರ ಪಟ್ಟುಬಿಡದ ಬದ್ಧತೆಯು ಐಐಟಿ ಬಾಂಬೆಯಲ್ಲಿ ಓದು ಮುಗಿಸಿದ್ದ ಆಕೆ ಈ 25 ವರ್ಷದ ಅವಧಿಯಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿ ಮೈಕ್ರೋಸಾಫ್ಟ್‌ಗೆ ಆಯ್ಕೆಯಾದ ಮೊದಲ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾಳೆ.

ತಾಯಿ ಆಸೆ ಈಡೇರಿಸಿದ ಮಗಳು
ಕಾಜಲ್ ತಾಯಿ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಆಕೆಯ ತಂದೆ ಟಾಟಾ ಸ್ಟೀಲ್‌ನಲ್ಲಿ ಉದ್ಯೋಗಿಯಾಗಿದ್ದಾರೆ. ಕಾಜಲ್ ತಾಯಿಗೆ ಮಗಳನ್ನು ದೊಡ್ಡ ಹುದ್ದೆಯಲ್ಲಿ ನೋಡುವ ಕನಸಿತ್ತು. ಹೀಗಾಗಿ ಆರಂಭಿಕ ಶಿಕ್ಷಣ ಸರ್ಕಾರಿ ಶಾಲೆಯಲ್ಲಿಯೇ ಕೊಡಿಸಿದ್ದರು. ಬಳಿಕ ಕಷ್ಟ ಪಟ್ಟಿ ಆಕೆ ಐಐಟಿ ಬಾಂಬೆಯ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ಹಗಲು ರಾತ್ರಿ ಓದು ಮುಂದುವರೆಸಿದ್ದಳು.
ಅಭಿನಂದಿಸಿದ ಹರಿಯಾಣ ಸಿಎಂ
ಸರ್ಕಾರಿ ಶಾಲೆಯಲ್ಲಿ ಓದಿದ ಬಾಲಕಿ ಮೈಕ್ರೋಸಾಫ್ಟ್‌ನಲ್ಲಿ ಕೆಲಸ ಗಿಟ್ಟಿಸುತ್ತಿದ್ದಂತೆ ಆಕೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರ್ತಿದೆ. ಈ ನಡುವೆ ಹರಿಯಾಣ ಸಿಎಂ ಮನೋಹರ್ ಲಾಲ್ ಕಟ್ಟರ್ ದೂರವಾಣಿ ಕರೆ ಮಾಡಿ ಅಭಿನಂದಿಸಿದ್ದಾರೆ. ಸುಮಾರು 20 ನಿಮಿಷಗಳ ಕಾಲ ಆಕೆಯೊಂದಿಗೆ ಮಾತನಾಡಿದ ಸಿಎಂ ಆಕೆಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹಗಲು-ರಾತ್ರಿ ಓದಿದ ಕಾಜಲ್
ಸರ್ಕಾರಿ ಶಾಲೆಯ 2018-20ನೇ ಬ್ಯಾಚ್‌ನ ವಿದ್ಯಾರ್ಥಿನಿ ಕಾಜಲ್ ತನ್ನ 11 ಮತ್ತು 12ನೇ ತರಗತಿಗಳಲ್ಲಿ ಸೂಪರ್ 100 ಕಾರ್ಯಕ್ರಮದ ಮೂಲಕ ಐಐಟಿ ಜಂಟಿ ಪ್ರವೇಶ ಪರೀಕ್ಷೆಗೆ (ಐಐಟಿ ಜೆಇಇ) ಶ್ರದ್ಧೆಯಿಂದ ತಯಾರಿ ನಡೆಸಿದ್ದಳು. ಐಐಟಿ ಜೆಇಇಯಲ್ಲಿ ಜಯಗಳಿಸಿ, ಐಐಟಿ ಮುಂಬೈನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗಕ್ಕೆ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿದ್ದಳು. ಈ ಪ್ರವೇಶ ಪರೀಕ್ಷೆ ಬರೆಯಲು ಆಕೆ ಹಗಲು ರಾತ್ರಿ ಓದುತ್ತಿದ್ದಳು. ತಾಯಿ ಬೆಂಬಲಕ್ಕೆ ನಿಂತಿದ್ದರಿಂದ ಈ ಪರೀಕ್ಷೆ ಕಠಿಣವಾಗಲಿಲ್ಲ ಎಂದು ಕಾಜಲ್ ಸಂತಸ ಹಂಚಿಕೊಂಡಿದ್ದಾಳೆ.
ಐಐಟಿ ಪ್ರವೇಶ ಪರೀಕ್ಷೆ ಪಾಸ್ ಮಾಡುವುದೇಗೆ?
ಐಐಟಿ ಪ್ರವೇಶ ಪರೀಕ್ಷೆಗಳ ಪಾಸ್ ಮಾಡುವುದೆಂದರೆ ಸುಲಭದ ಮಾತಲ್ಲ. ಈ ಪರೀಕ್ಷೆಗಳು ಅತ್ಯಂತ ಕಷ್ಟಕರವಾಗಿರುತ್ತದೆ. ಈ ಪ್ರವೇಶ ಪರೀಕ್ಷೆ ಪಾಸ್ ಮಾಡಿ ಪ್ರವೇಶಾತಿ ಪಡೆದು ಅಭ್ಯಾಸ ಬಳಿಕ ಒಂದೊಳ್ಳೆ ಕಂಪನಿಯಲ್ಲಿ ಕೆಲಸ ಗಿಟ್ಟಿಸಬೇಕು ಎಂಬುದು ಕನಸಾಗಿರುತ್ತೆ. ಆದ್ರೆ ಈ ರೀತಿ ಐಐಟಿ ಪ್ರವೇಶಾತಿ ಪಡೆಯಲು ವರ್ಷಕ್ಕೂ ಅಧಿಕ ಸಮಯ ಕಠಿಣ ಅಭ್ಯಾಸ ಮಾಡಬೇಕಿದೆ. ಕಾಜಲ್ ಸಹ ಈ ಕುರಿತು ಮಾತನಾಡುತ್ತ ಐಐಟಿ ಪ್ರವೇಶಾತಿ ಪಡೆದ ಬಗ್ಗೆ ಹಂಚಿಕೊಂಡಿದ್ದಾರೆ.
ಪ್ರವೇಶ ಪರೀಕ್ಷೆಗೆ ತಯಾರಾಗುವಾಗ ಆಕೆ ಹೆಚ್ಚು ಸಮಯ ಓದಿಗಾಗಿ ಮೀಸಲಿಡುತ್ತಿದ್ದಳಂತೆ. ಪ್ರತಿನಿತ್ಯ ಪೇಪರ್ ಓದುವ ಹವ್ಯಾಸ ಬೆಳೆಸಿಕೊಂಡಿದ್ದಳಂತೆ. ಪ್ರವೇಶ ಪರೀಕ್ಷೆ ತಯಾರಿಗೆ ಬೇಕಾದ ಪುಸ್ತಕಗಳನ್ನು ಖರೀದಿಸಿ ನಿತ್ಯ ಓದುಬೇಕು. ಜೊತೆಗೆ ಕಠಿಣ ಮೆಂಟಲ್ ಎಬಿಲಿಟಿ ಪ್ರಶ್ನೆಗಳ ಬಿಡಿಸುವ ಯತ್ನ ಮಾಡುತ್ತಿರಬೇಕು ಎಂದು ಸಲಹೆ ನೀಡುತ್ತಾಳೆ.



Click it and Unblock the Notifications
