Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ವಿನೇಶ್ ಫೋಗಟ್‌ಗೆ 4 ಕೋಟಿ ಹಣ ಸಮ್ಮಾನವಾಗಿ ನೀಡುವುದಾಗಿ ಘೋಷಿಸಿದ ಮುಖ್ಯಮಂತ್ರಿ ನಯಾಬ್ ಸೈನಿ
ವಿನೇಶ್ ಫೋಗೆಟ್‌ಗೆ ಪದಕ ಸಿಗದಿದ್ದರೆ ಏನಂತೆ ಅವರು ನಮಗೆ ಒಲಿಂಪಿಕ್ಸ್ ಪದಕ ತಂದು ಕೊಡಲಿಲ್ಲ ಎಂಬ ಯಾವ ಬೇಸರವೂ ನಮಗಿಲ್ಲ, ಬದಲಿಗೆ ಆ ಪ್ರತಿಭೆ ಮೇಲಿನ ಗೌರವ 10 ಪಟ್ಟು ಹೆಚ್ಚಾಗಿದೆ, ಪದಕ ತಂದರೆ ಅವರನ್ನು ಹೇಗೆ ಕೊಂಡಾಡುತ್ತಿದ್ದೆವೋ ಅಷ್ಟೇ ಅದ್ಧೂರಿಯಾಗಿ ಕೊಂಡಾಡುತ್ತೇವೆ.... ವಿನೇಶ್ ಫೋಗಟ್ ಆದ ಆಘಾತ ಬರಿ ಅವರಿಗಾದ್ದಲ್ಲ, ಆ ಆಘಾತ ಪ್ರತಿಯೊಬ್ಬ ಭಾರತೀಯನಿಗೆ ಉಂಟಾಗಿದೆ.

ಚಿನ್ನ ಗೆದ್ದ ಸ್ಪರ್ಧಿಗೆ ಸಿಗುವ ಸ್ವಾಗತ ವಿನೇಶ್ ಪೋಗೆಟ್‌ಗೆ ಸಿಗಲಿದೆ ಎಂದು ಮುಖ್ಯಮಂತ್ರ ಘೋಷಣೆ
ಚಿನ್ನ ಅಥವಾ ಬೆಳ್ಳಿ ಖಂಡಿತ ಸಿಕ್ಕೇ ಸಿಗುತ್ತದೆ, ಬೆಳ್ಳಿಯೇಕೆ, ಚಿನ್ನ ಪಕ್ಕಾ ಎಂದು ನಾವೆಲ್ಲಾ ಸಂತೋಷದಿಂದ ಬೀಗಿದ್ದೆವು, ಏಕೆಂದರೆ ವಿನೆಶ್ ಫೋಗಟ್ ನಮ್ಮೆಲ್ಲರ ಮನಸ್ಸಿನಲ್ಲಿ ಅಂಥದ್ದೊಂದು ಭರವಸೆ ಮೂಡಿಸಿದ್ದರು. ಆದರೆ ಯಾರೂ ಊಹಿಸಿರದ ಆಘಾತ ಎದುರಾಯ್ತು, ಈ ಆಘಾತದಿಂದ ವಿನೇಶ್ ಫೋಗಟ್ ಆಸ್ಪತ್ರೆಗೆ ದಾಖಲಾದರು. ಆದರೆ ವಿನೇಶ್ ಫೋಗಟ್ ಅವರಿಗೆ ಹೆದರಬೇಡಿ ನಿಮ್ಮ ಜೊತೆ ನಾವಿದ್ದೇವೆ ಎಂದು ಇಡೀ ದೇಶದ ಜನತೆ ಹೇಳುತ್ತಿದ್ದಾರೆ.ಹರಿಯಾಣದ ಮುಖ್ಯಮಂತ್ರಿ ನಯಾಬ್ ಸೈನಿ ಟ್ವೀಟ್ ಮಾಡಿ ಬೆಳ್ಳಿ ಪದಕ ಗೆದ್ದ ಕ್ರೀಡಾಪಟುವಿಗೆ ಸಿಗುವ ಎಲ್ಲಾ ಸೌಲಭ್ಯ, ಸಮ್ಮಾನಗಳನ್ನು ಫೋಗಟ್ ನೀಡಲಾಗುವುದು ಎಂದು ಘೋಷಿಸಿದ್ದಾರೆ.
4 ಕೋಟಿ ಹಣ ನೀಡಲಿದೆ ಸರಕಾರ
ಹರಿಯಾಣದ ಬಿಜೆಪಿ ಸರ್ಕಾರ ವಿನೇಶ್ ಫೋಗಟ್ ಅವರಿಗೆ ಅದ್ಧೂರಿ ಸನ್ಮಾನದ ಜೊತೆಗೆ 4 ಕೋಟಿ ಹಣವನ್ನು ಕೂಡ ನೀಡಿ ಗೌರವಿಸಲಿದೆ.
ಕುಸ್ತಿಗೆ ವಿದಾಯ ಹೇಳಿರುವ ಫೋಗಟ್
ವಿನೇಶ್ ಫೋಗಟ್‌ಗೆ ಅಗಿರಬಹುದಾದ ಆಘಾತ ಎಂಥದ್ದು ಎಂಬುವುದು ಊಹಿಸಲೂ ಸಾಧ್ಯ. ಯಾವುದೇ ಕ್ರೀಡಾಪಟುವಾಗಿರಲಿ ವಿಜಯಶಾಲಿಯಾಗಬೇಕೆಂಬ ಗುರಿಯನ್ನು ಹೊಂದಿರುತ್ತಾರೆ, ಅದಕ್ಕಾಗಿ ಅಷ್ಟೊಂದು ಕಷ್ಟ ಕೂಡ ಪಡುತ್ತಾರೆ. ಅದರಲ್ಲಿ ವಿನೇಶ್ ಫೋಗತ್ ಸ್ಪರ್ಧೆಯ ಹಿಂದಿನ ರಾತ್ರಿ ಪೂರ್ತಿ ತೂಕ ಇಳಿಸಲು ಅಷ್ಟೊಂದು ವರ್ಕೌಟ್ ಮಾಡಿದರು ಎಂದು ಪಿಟಿ ಉಷಾ ಅವರು ಹೇಳಿರುವುದನ್ನು ಕೇಳಿದಾಗ ಆ ಕ್ರೀಡಾಪಟು ಪಟ್ಟ ಕಷ್ಟ ಏನೆಂಬುವುದು ತಿಳಿಯುತ್ತದೆ.
ಅವರ ಕೂದಲನ್ನು ಕತ್ತರಿಸಲಾಯ್ತು, ಉಗುರು ಟ್ರಿಮ್ ಮಾಡಲಾಯ್ತು, ಬಟ್ಟೆಯಲ್ಲಿ ಆಲ್ಟ್ರಾರೇಷನ್ ಮಾಡಲಾಯಿತು ಆದರೂ 500 ಕೆಜಿಗಿಂತ ನೂರು ಗ್ರಾಂ ಹೆಚ್ಚಿದ್ದರು ಅಷ್ಟೇ ಒಲಿಂಪಿಕ್ಸ್‌ನಿಂದ ಅನರ್ಹಗೊಳಿಸಿದರು.
ಇಂಥ ಘಟನೆ ಭಾರತಕ್ಕೆ ಇದೇ ಮೊದಲು
ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಗಾದೆಯಂತೆ ನಡೆದಿದೆ. ಚಿನ್ನ ತಪ್ಪಿದರೆ ಬೆಳ್ಳಿ ಪದಕ ಪಕ್ಕ ಎಂದೇ ಭಾವಿಸಿದ್ದೆವು, ಆದರೆ ಬಯಸಿದ್ದು ಒಂದು ಆಗಿದ್ದು ಮತ್ತೊಂದು.
ಎಲ್ಲಾ ಕಹಿ ಘಟನೆಗಳಿಂದ ಕಲಿಯುವ ಪಾಠವಿದೆ
ಇದು ಒಂದು ರೀತಿಯಲ್ಲಿ ಬದುಕಿನ ಪಾಠವೂ ಹೌದು, ನಾವು ಚಿಕ್ಕ ಪುಟ್ಟ ವಿಷಯವನ್ನು ನಿರ್ಲಕ್ಷ್ಯ ಮಾಡುತ್ತೇವೆ, ಆದರೆ ಇಂಥ ನಿರ್ಲಕ್ಷ್ಯಕ್ಕೆ ತುಂಬಾನೇ ಬೆಲೆತೆರಬೇಕಾಗುತ್ತದೆ ಎಂಬುವುದಕ್ಕೆ ದೊಡ್ಡ ಉದಾಹರಣೆ ಈ ಘಟನೆ.
ಒಲಿಂಪಿಕ್ಸ್ ಆಡಲಿತ ಮಂಡಳಿ ಈ ಬಗ್ಗೆ ಏಕೆ ನಿರ್ಲಕ್ಷ್ಯ ವಹಿಸಿತು?
ವಿನೇಶ್ ಫೋಗಟ್ ತೂಕವನ್ನು ಏಕೆ ಅವರು ಪ್ರತಿದಿನ ಪರೀಕ್ಷೆ ಮಾಡಲಿಲ್ಲ, ಹಾಗೆ ಮಾಡಿದ್ದರೆ ಈ ರೀತಿ ನಡೆಯುತ್ತಿರಲಿಲ್ಲ ಏನೋ, ಸ್ಪರ್ಧೆಯ ಹಿಂದಿನ ದಿನ ಪರೀಕ್ಷೆ ಮಾಡಿರಬಹುದು ಆದರೆ 100ಗ್ರಾಂ ತೂಕದಿಂದಾಗಿ ಆ ಕ್ರೀಡಾಪಟುವಿನ ಕನಸು ಭಗ್ನವಾಗಿದೆ, ದೇಶಕ್ಕೂ ದೊಡ್ಡ ನಷ್ಟವಾಗಿದೆ. ಎಲ್ಲಾ ಘಟನೆಗಳು ಪಾಠ ಕಲಿಸುತ್ತದೆ, ಇನ್ಮುಂದೆ ಇಂಥ ವಿಷಯಗಳಲ್ಲಿ ಜಾಗ್ರತೆವಹಿಸಬೇಕು.
ವಿನೇಶ್ ಫೋಗಟ್ ಅವರ ಬಗ್ಗೆ ಹೆಮ್ಮೆಯಿದೆ, ಅವರ ಶ್ರಮಕ್ಕೆ ಗೌರವಿದೆ, ಅವರಿಗಾದ ಆಘಾತ ನಮಗೂ ನೋವು ತಂದಿದೆ, ನಿಮ್ಮ ಜೊತೆ ನಾವಿದ್ದೇವೆ ಎಂದು ಪ್ರತಿಯೊಬ್ಬ ಭಾರತೀಯರು ವಿನೇಶ್ ಫೋಗಟ್ ಜೊತೆ ನಿಂತಿದ್ದಾರೆ. ವಿನೇಶ್ ಫೋಗಟ್ ನೀವು ಗೆದ್ದಿಲ್ಲ ಅಂತ ಬೆಸರ ಪಡಬೆಡಿ, ನಿಮ್ಮ ಜೊತೆ ನಾವಿದ್ದೇವೆ.



Click it and Unblock the Notifications
