Latest Updates
-
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಬಿಸಿಗಾಳಿ ಕಾಟವೇ? ಈ ತಂಪು ಪಾನೀಯಗಳೇ ನಿಮ್ಮ ರಕ್ಷಕ
ಯದುವೀರ್ ರಾಜಕೀಯ ಪ್ರವೇಶದ ಹಿಂದಿರುವುದು ಹರ್ಷವರ್ಧನ್ ಸಿಂಗ್..!? ಯಾರು ಈ ಪ್ರಭಾವಿ..?
ದೇಶದಲ್ಲಿ ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭಗೊಂಡಿದೆ. ಎಲ್ಲಾ ಪಕ್ಷಗಳು ಸಿದ್ಧತೆಯಲ್ಲಿದ್ದು, ಮತದಾನದ ದಿನಾಂಕ ಘೋಷಣೆಯೊಂದೇ ಬಾಕಿ ಉಳಿದಿದೆ. ಇನ್ನು ರಾಜ್ಯದಲ್ಲು ಈ ಚುನಾವಣೆಯ ಕಾವು ಜೋರಾಗಿದೆ. ಯಾರಿಗೆ ಟಿಕೆಟ್ ಸಿಗಲಿದೆ ಯಾರಿಗೆ ಸಿಗಲ್ಲ ಎಂಬ ಚರ್ಚೆ ಜೋರಾಗಿದೆ. ಅದರಲ್ಲೂ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಈ ಕದನದಲ್ಲಿ ಯಾರಿಗೆಲ್ಲಾ ಟಿಕೆಟ್ ಸಿಗಲಿದೆ ಎಂಬುದೇ ಕುತೂಹಲಕಾರಿಯಾಗಿದೆ.
ಇನ್ನು ಮೈಸೂರು ಸಂಸದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ ಎಂದು ವರದಿಯಾಗುತ್ತಿದ್ದು, ಮೈಸೂರು ರಾಜ ವಂಶದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಬಿಜೆಪಿಯಿಂದ ಟಿಕೆಟ್ ಸಿಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಆದರೆ ಮೈಸೂರು ಲೋಕಸಭೆ ಕ್ಷೇತ್ರದ ಟಿಕೆಟ್ ಯಾರಿಗೆ ಎಂಬ ಕುರಿತು ಅಧಿಕೃತ ಘೋಷಣೆ ಇನ್ನೂ ಹೊರಬಿದ್ದಿಲ್ಲ.

ಹಾಗಾದರೆ ನಾವಿಂದು ಯದುವೀರ್ ಅವರಿಗೆ ಬಿಜೆಪಿ ಟಿಕೆಟ್ ನೀಡಲು ಕಾರಣವೇನು? ಹಾಗೂ ಯದುವೀರ್ ಅವರಿಗೆ ಟಿಕೆಟ್ ಸಿಗುವಲ್ಲಿ ಯಾರು ಶ್ರಮಿಸಿರಬಹುದು ಎಂಬುದನ್ನು ನೋಡೋಣ.
ಮೈಸೂರು ಮಹಾರಾಜರು ಸುಮಾರು 550 ವರ್ಷಗಳ ಕಾಲ ಆಡಳಿತ ನಡೆಸುವ ಮೂಲಕ ಚರಿತ್ರೆಯಲ್ಲಿ ಸುಧೀರ್ಘ ಕಾಲ ಆಡಳಿತ ನಡೆಸಿದ ಹೆಗ್ಗಳಿಕೆಯನ್ನು ಪಡೆದಿದ್ದಾರೆ. ಮೈಸೂರು ರಾಜರ ಆಡಳಿತಾವಧಿ ಚರಿತ್ರೆ ಪ್ರಕಾರ 1399ರಿಂದ ಆರಂಭವಾಗುತ್ತದೆ. ಆದರೆ ಈಗ ಯದುವೀರ್ ಅವರು ರಾಜಕೀಯಕ್ಕೆ ಬರುವುದು ಬಹುತೇಕ ಖಚಿತವಾಗಿದೆ.
ಟಿಕೆಟ್ ಸಿಗುವ ಹಿಂದಿದೆ ರಾಜಸ್ಥಾನ್ ಲಿಂಕ್?
ಬಹುತೇಕರಿಗೆ ಯದುವೀರ್ ರಾಜಕೀಯ ಎಂಟ್ರಿ ಅಚ್ಚರಿ ಮೂಡಿಸಿದೆ. ಅವರು ರಾಜಕೀಯದಿಂದ ದೂರ ಉಳಿದಿದ್ದಾರೆ ಎಂದುಕೊಂಡಿದ್ದವರಿಗೆ ಶಾಕ್ ಆಗಿದೆ. ಇದರ ಜೊತೆ ಸಂಸದ ಪ್ರತಾಪ್ ಸಿಂಹ ಅವರ ಜಾಗದಲ್ಲಿ ಯದುವೀರ್ ಸ್ಪರ್ಧಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದ ಬಳಿಕ ಮತ್ತಷ್ಟು ಅಚ್ಚರಿಗೆ ಕಾರಣವಾಗಿದೆ.
ಯದುವೀರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಬಿಟ್ಟರೆ ಬೇರೆ ಯಾವ ಬಿಜೆಪಿ ನಾಯಕರೊಂದಿಗೂ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಹೀಗಿರುವಾಗ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಹೇಗೆ ಎಂಬ ಪ್ರಶ್ನೆ ಹಲವರಲ್ಲಿ ಮೂಡಿತ್ತು. ಆದ್ರೆ ಇದಕ್ಕೆ ರಾಜಸ್ಥಾನದ ರಾಜವಂಶದ ಲಿಂಕ್ ಇದೆ ಎಂಬ ಮಾತುಗಳು ಹರಿದಾಡುತ್ತಿವೆ.
ಮಾವ ಹರ್ಷವರ್ಧನ್ ಸಿಂಗ್ ಡುಂಗರ್ಪುರ್ ಬಗ್ಗೆ ಗೊತ್ತಾ?
ಯದುವೀರ್ ಪತ್ನಿ ತ್ರಿಷಿಕಾ ಕುಮಾರಿ ದೇವಿ ನಿಮಗೆ ಗೊತ್ತಿರಬಹುದು ಆದ್ರೆ ಅವರ ತಂದೆ ರಾಜಸ್ಥಾನದ ರಾಜ ವಂಶಸ್ಥರಾದ ಹರ್ಷವರ್ಧನ್ ಸಿಂಗ್ ಡುಂಗರ್ಪುರ್ ಈ ಟಿಕೆಟ್ ಹಿಂದೆ ಇದ್ದಾರೆ ಎಂಬ ಸುದ್ದಿ ಹರಿದಾಡಿದೆ. ಅವರು ರಾಜ್ಯಸಭೆಯ ಮಾಜಿ ಸದಸ್ಯರಾಗಿದ್ದಾರೆ. ಜೊತೆಗೆ ಬಿಜೆಪಿ ನಾಯಕರ ಜೊತೆ ಅತ್ಯಾಪ್ತರಾಗಿ ಕಾಣಿಸಿಕೊಂಡಿದ್ದಾರೆ. ಇವರ ಮೂಲಕವೇ ಯದುವೀರ್ ಅವರಿಗೆ ಟಿಕೆಟ್ ನೀಡುವ ಕುರಿತು ಚರ್ಚೆ ನಡೆದಿರಬಹುದು ಎನ್ನಲಾಗಿದೆ.
ಹರ್ಷವರ್ಧನ್ ಸಿಂಗ್ ಡುಂಗರ್ಪುರ್ ಯಾರು..?
ರಾಜಸ್ಥಾನದ ಡುಂಗರ್ಪುರ್ ರಾಜಮನೆತನದ ರಾಜರಾಗಿರುವ ಇವರು ಮಹಾರಾವಲ್ ಮಹಿಪಾಲ್ ಸಿಂಗ್ ಅವರ ಪುತ್ರರಾಗಿದ್ದಾರೆ. ಕಳೆದ ವರ್ಷ ಆಗಸ್ಟ್ 19 ರಲ್ಲಿ ಅವರ ತಂದೆ ನಿಧನದ ಬಳಿಕ ಸಂಪ್ರದಾಯದಂತೆ ಅವರು ಸಿಂಹಾಸನ ಅಲಂಕರಿಸಿದ್ದಾರೆ. ದೊರೆಗಳ ಸಾಲಿನಲ್ಲಿ ಬಹುದೊಡ್ಡ ಜನ ಮನ್ನಣೆ ಹಾಗೂ ರಾಜಕೀಯದಲ್ಲಿ ತಮ್ಮ ಕುಟುಂಬದ ಪ್ರಾಬಲ್ಯ ಉಳಿಸಿಕೊಂಡು ಬಂದಿದ್ದಾರೆ. ಅವರು ಚುನಾವಣೆ ಸಮಯದಲ್ಲಿ ಘೋಷಿಸಿಕೊಂಡಂತೆ ಸುಮಾರು 15 ಕೋಟಿ ರೂ.ಆಸ್ತಿ ತಮ್ಮ ಹೆಸರಲ್ಲಿ ಹೊಂದಿದ್ದಾರೆ. ಅಚ್ಚರಿ ಅಂದರೆ ಅವರ ಬಳಿ ಎಲ್ಲಿಲ್ಲದ ಕಾರುಗಳ ದೊಡ್ಡ ಕಲೆಕ್ಷನ್ ಇದೆ. 1952ರಲ್ಲಿ ಖರೀದಿಸಿರುವ ಕಾರು ಸಹ ಅವರ ಬಳಿ ಇದೆ.



Click it and Unblock the Notifications











