Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಕೋಟಿಗಳ ಒಡೆಯ ಹಾರ್ದಿಕ್ ಪಾಂಡ್ಯ ಒಂದು ಸಮಯದಲ್ಲಿ 5-10 ರುಪಾಯಿಗೂ ಕಷ್ಟ ಪಡುತ್ತಿದ್ದರು
ಹಾರ್ದಿಕ್ ಪಾಂಡ್ಯ ಈಗ ಹೆಚ್ಚು ಚರ್ಚೆಯಲ್ಲಿರುವ ಕ್ರಿಕೆಟಿಗ, ಅವರ ವಿವಾಹ ವಿಚ್ಛೇದನದಲ್ಲಿ ಅಂತ್ಯವಾಗುತ್ತಿದೆ ಎಂಬ ರೂಮರ್ ಹರಿದಾಡುತ್ತಿದೆ. ವಿಚ್ಛೇದನ ರೂಮರ್ ಜೊತೆಗೆ ಅವರ ಸಂಪಾದನೆಯಿಂದ ಜೀವನಾಂಶವಾಗಿ ಸುಮಾರು 70 ಕೋಟಿ ಹೋಗಬಹುದು ಎಂಬುವುದಾಗಿದೆ. ಅವರ ಒಟ್ಟು ಆಸ್ತಿ 91 ಕೋಟಿ ಅದರಲ್ಲಿ ಮುಕ್ಕಾಲು ಭಾಗ ಜೀವನಾಂಶವಾಗಿ ಕೊಡಬೇಕಾಗುತ್ತೆ ಎಂದೆಲ್ಲಾ ಸುದ್ದಿ ಹರಿದಾಡುತ್ತಿದೆ.
ಇದೇ ಸಮಯದಲ್ಲಿ ಹಾರ್ದಿಕ್ ಹಿಂದೆ ಇಂಟರ್‌ವ್ಯೂನ್ಲ ಹೇಳಿದ ಮಾತುಗಳು ಕೂಡ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ, ತನ್ನೆಲ್ಲಾ ಆಸ್ತಿ, ಕಾರುಗಳು ಅಮ್ಮನ ಹೆಸರಿನಲ್ಲಿ ಇರುವುದಾಗಿಯೂ, ತಾನು ದುಡಿದ ಹಣವನ್ನು ಯಾರಿಗೋ 50% ಕೊಡುವುದು ಇಷ್ಟವಿಲ್ಲ ಎಂಬುವುದಾಗಿ ಹೇಳಿದ್ದರು.

ಅವರು ಈ ಜೀವನಾಂಶದ ಕುರಿತಂತೆಯೇ ಆ ರೀತಿ ಹೇಳಿದ್ದು ಮದುವೆಯಾದ ಮೇಲೆ ವಿಚ್ಛೇದನವಾದರೆ ಆಸ್ತಿಯಿಂದ ದುಬಾರಿ ಹಣವನ್ನೇ ಜೀವನಾಂಶವಾಗಿ ನೀಡಬೇಕಾಗುತ್ತದೆ, ಇವರು ಕ್ರಿಕೆಟಿಗ ಹತ್ರ ಹತ್ರ ನೂರು ಕೋಟಿಗಳ ಒಡೆಯ. ಹಾಗಾಗಿ ವಿಚ್ಛೇದನ ಅಂತ ಬಂದರೆ ಕೋಟಿ ಕೋಟಿ ಹಣ ನೀಡಬೇಕಾಗುತ್ತೆ ಈ ಕಾರಣಕ್ಕಾಗಿ ಹಾರ್ದಿಕ್ ಪಾಂಡ್ಯ ತನ್ನ ಹೆಸರಿನಲ್ಲಿ ಯಾವುದೇ ಆಸ್ತಿ ಇಟ್ಟಿಲ್ಲ.
ಒಂದು ರುಪಾಯಿ ಬೆಲೆ ಕೂಡ ಹಾರ್ದಿಕ್ ಪಾಂಡ್ಯ ಅವರಿಗೆ ಚೆನ್ನಾಗಿಯೇ ಗೊತ್ತಿದೆ, ಏಕೆಂದರೆ ಹದಿಹರೆಯದ ಪ್ರಾಯದಲ್ಲಿ ಅಂಥ ಕಡು ಬಡತನ ಕಂಡು ಬೆಳೆದವರು, ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದ ಹುಡುಗ, ಹಾಗಾಗಿಯೇ ತಾನು ದುಡಿದ ಹಣ ಅಷ್ಟು ಸುಲಭವಾಗಿ ಬೇರೆಯವರಿಗೆ ಕೊಟ್ಟು ಬಿಡುತ್ತಾರಾ? ಅದಕ್ಕೆ ಮುಂದೆ ಏನಾಗುತ್ತೋ ಗೊತ್ತಿಲ್ಲ, ಆದರೆ ತಾಯಿ ಎಂದೆಂದಿಗೂ ಮಗನ ಜೊತೆ ಇರುತ್ತಾಳೆ, ಹಾಗಾಗಿ ತಾನು ದುಡಿದ ಅಷ್ಟೂ ಹಣವನ್ನು ಅಮ್ಮನ ಹೆಸರಿನಲ್ಲಿ ಇಟ್ಟಿದ್ದಾರೆ.
ಅನುಕೂಲಸ್ಥ ಕುಟುಂಬದಲ್ಲಿ ಜನನ, ಹದಿಹರೆಯದ ಪ್ರಾಯದಲ್ಲಿದ್ದಾಗ ಬೀದಿಗೆ ಬಿದ್ದರು
ಹಾರ್ದಿಕ್ ಪಾಂಡ್ಯ ಅನುಕೂಲಸ್ಥ ಕುಟುಂಬದಲ್ಲಿ ಜನಿಸಿದವರು, ಅವರ ತಂದೆ ಕಾರ್ ಫೈನಾನ್ಸ್ ಬ್ಯುಸ್‌ನೆಸ್ ಮಾಡುತ್ತಿದ್ದರು, ಮಕ್ಕಳಿಗೆ ಕ್ರಿಕೆಟ್ ಕೋಚಿಂಗ್‌ಗೆ ಕಳುಹಿಸುತ್ತಿದ್ದರು. ಮಕ್ಕಳ ಕ್ರಿಕೆಟ್ ಭವಿಷ್ಯಕ್ಕಾಗಿ ತಮ್ಮ ಬ್ಯುಸ್‌ನೆಸ್ ಮುಚ್ಚಿ ವಡೋದರಾಗೆ ಹೋಗುತ್ತಾರೆ.
ಎಲ್ಲವೂ ಚೆನ್ನಾಗಿತ್ತು, ಆದರೆ ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಎದುರಾಗುತ್ತೆ. ಅವರ ತಂದೆ ಮಕ್ಕಳಿಗಾಗಿ ಏನು ಸಿಗುತ್ತೋ ಆ ಕೆಲಸವನ್ನು ಮಾಡುತ್ತಾರೆ, ಆದರೂ ಮಕ್ಕಳು ಕ್ರಿಕೆಟ್ ಟ್ರೈನಿಂಗ್ ಮಾಡಲಿ ಎಂದು ಬಯಸಿದರು, ಹೀಗಿರುವಾಗ ಅವರ ತಂದೆ ಒಂದೇ ದಿನ ಎರಡು ಬಾರಿ ಹೃದಯಾಘಾತ ಉಂಟಾಗುತ್ತೆ, ಅವರ ಕುಟುಂಬ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು. ಅದಾಗಿ 6 ತಿಂಗಳಿಗೆ ಮತ್ತೆ ಅವರ ತಂದೆಗೆ ಹೃದಯಾಘಾತವಾಯ್ತು, ಆದರೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಕ್ಕಿದ್ದರಿಮದ ಬದುಕಿಳಿದರು. ಆವಾಗ ಹಾರ್ದಿಕ್ ಪಾಂಡ್ಯ ಮತ್ತು ಅಣ್ಣ ಕುಟುಂಬ ನೋಡಿಕೊಳ್ಳುವ ಜವಾಬ್ದಾರಿ ತೆಗೆದುಕೊಂಡು ದುಡಿಯಲಾರಂಭಿಸುತ್ತಾರೆ. ಮೂರು ವರ್ಷ ಒಂದೊಂದು ರುಪಾಯಿಗೂ ಅಣ್ಣ-ತಮ್ಮ ತುಂಬಾನೇ ಕಷ್ಟ ಪಡುತ್ತಾರೆ. ಹಣಕ್ಕಾಗಿ ಬೇರೆ-ಬೇರೆ ಟೂರ್ನಿಮೆಂಟ್‌ನಲ್ಲಿ ಆಡುತ್ತಿದ್ದರು.
2015ರಲ್ಲಿ ಹಾರ್ದಿಕ್ ಪಾಂಡ್ಯ ಅದೃಷ್ಟ ಬದಲಾಯ್ತು
ಹಾರ್ದಿಕ್ ಪಾಂಡ್ಯ ಪ್ರತಿಭೆಯನ್ನು ಕ್ರಿಕೆಟ್ ಜಗತ್ತು ಗುರುತಿಸಿತು. 2015ರಲ್ಲಿ ಮುಂಬೈ ಇಂಡಿಯನ್ಸ್ 50 ಲಕ್ಷ ಕೊಟ್ಟು ಖರೀದಿಸಿತು. 5-10 ರುಪಾಯಿಗೆ ಕಷ್ಟ ಪಡುತ್ತಿದ್ದ ಹಾರ್ದಿಕ್ ಕುಟುಂಬ ಅಲ್ಲಿಂದ ಚೇತರಿಸಿಕೊಂಡಿತು.
ಆ ಹಣದಿಂದ ಕಾರಿನ ಸಾಲ ತೀರಿಸುತ್ತಾರೆ, ಕೈ ಸಾಲಗಳನ್ನು ತೀರಿಸುತ್ತಾರೆ. ನಂತರ ಹಾರ್ದಿಕ್ ಪಾಂಡ್ಯರ ವೃತ್ತಿ ಜೀವನದಲ್ಲಿ ಗ್ರಾಫ್ ಹೆಚ್ಚಾಗುತ್ತಲೇ ಹೋಗುತ್ತದೆ, ಈ ಬಾರಿ ಐಪಿಎಲ್ ಮ್ಯಾಚ್‌ಗೆ ಮುಂ ಬೈ ಇಂಡಿಯನ್ಸ್ 15 ಕೋಟಿಗೆ ಖರೀದಿಸಿತು. ಜಾಹೀತಾತುಗಳನ್ನು ಮಾಡುತ್ತಾರೆ ಈಗ ಸುಮಾರು 100 ಕೋಟಿಗಳ ಒಡೆಯ ತುಂಬಾನೇ ಲಕ್ಷುರಿ ಬದುಕು ಸಾಗಿಸುತ್ತಿದ್ದಾರೆ.
ಮಗು ಮಾಡಿ ಮದುವೆಯಾದರು
ಇನ್ನು ಇವರ ಮದುವೆ ಕೂಡ ತುಂಬಾನೇ ಚರ್ಚೆಗೆ ಕಾರಣವಾಯ್ತು, ಇವರು ಮದುವೆಯಾಗುವ ಮುನ್ನವೇ ಗಂಡು ಮಗುವಿಗೆ ತಂದೆಯಾದರು. ನಟಾಶಾ ಗರ್ಭಿಣಿಯಾಗಿದ್ದರು, ಈ ಮದುವೆಗೆ ಮೊದಲು ಅನೇಕ ಲವ್ ಅಫೇರ್ಸ್ ಮೂಲಕ ಇಬ್ಬರೂ ಗಮನ ಸೆಳೆದಿದ್ದರು.



Click it and Unblock the Notifications
