Latest Updates
-
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ!
ಹರ್ ಘರ್ ತಿರಂಗಾ:ಸಂಜೆ ರಾಷ್ಟ್ರ ಧ್ವಜ ಮಡಚಿಡುವಾಗ ಈ ನಿಯಮ ಪಾಲಿಸಲೇಬೇಕು
78ನೇ ಸ್ವಾತಂತ್ರ್ಯೋತ್ಸವ ಸಂಭ್ರಮ. ಬ್ರಿಟಿಷರ ದಾಸ್ಯದಿಂದ ಹೊರಬಂದು ಸ್ವತಂತ್ರರಾದ ದಿವಸ. ಯಾವ
ಭಾರತವನ್ನು ಬ್ರಿಟಿಷರು ತನ್ನ ವಶಕ್ಕೆ ಪಡೆದುಕೊಂಡಿತ್ತೋ ಈಗ ಅದೇ ಭಾರತ ವಿಶ್ವವೇ ತಿರುಗಿ ನೋಡುವಂತೆ ಶಕ್ತಿಶಾಲಿಯಾಗಿ ಗುರುತಿಸಿಕೊಳ್ಳುತ್ತಿರುವುದು ಭಾರತೀಯರಾದ ನಮ್ಮೆಲ್ಲರ ಹೆಮ್ಮೆ.

ಈ ದಿನ ಹರ್ ಘರ್ ತಿರಂಗಾ ಅಭಿಯಾನದ ಅಡಿಯಲ್ಲಿ ಮನೆ-ಮನೆಗಳಲ್ಲಿ ತಿರಂಗ ಧ್ವಜ ಹಾರಾಡುತ್ತಿದೆ, ಅಲ್ಲದೆ ಮಕ್ಕಳು ಇಂದು ಶಾಲೆಗೆ ಹೋಗುವಾಗ ತಿರಂಗಾ ಬಣ್ಣದ ಬಾವುಟ ಹಿಡಿದು ಹೋಗಿರುತ್ತಾರೆ, ಎಲ್ಲಿ ನೋಡಿದರು ಕೇಸರ-ಬಿಳಿ-ಹಸಿರು ಬಣ್ಣದ ಉಡುಪುಗಳು, ಧ್ವಜಗಳು, ಬಾವುಟಗಳಿಂದ ಕಂಗೊಳಿಸುತ್ತಿದೆ, ಅವುಗಳನ್ನು ನೋಡುವುದೇ ಕಣ್ಣಿಗೆ ಹಬ್ಬ, ಆದರೆ ನಾಳೆ ಬೆಳಗ್ಗೆ ಒಂದೇ ಒಂದು ತಿರಂಗಾ ಬಾವುಟವಾಗಲಿ ಅಥವಾ ರಾಷ್ಟ್ರಧ್ವಜ ಬಣ್ಣಕ್ಕೆ ಹೋಲುವ ವಸ್ತುಗಳನ್ನಾಗಲಿ ರಸ್ತೆಯಲ್ಲಿ ಬಿಸಾಡದೆ ಇರುವುದು ಕೂಡ ನಮ್ಮೆಲ್ಲರ ಕರ್ತವ್ಯವಾಗಿದೆ, ನಮ್ಮ ಮಕ್ಕಳಿಗೆ ಈ ಬಗ್ಗೆ ತಿಳಿದಿರಲ್ಲ, ಆದರೂ ಅವರಿಗೆ ಅರಿವು ಮೂಡಿಸಬೇಕು. ಪ್ರೀಕೆಜಿಗೆ ಹೋಗುವ ಮಕ್ಕಳಿಗೆ ಕೂಡ ನಾವು ಈ ಬಗ್ಗೆ ಹೇಳಿಕೊಡಬೇಕು.
ತಿರಂಗಾ ಧ್ವಜ ಇಳಿಸುವಾಗ ಈ ಬಗ್ಗೆ ಜಾಗ್ರತೆವಹಿಸಿ
ನೀವು ಇಂದು ಬೆಳಗ್ಗೆ ಮನೆ ಮೇಲೆ ರಾಷ್ಟ್ರಧ್ವಜ ಹಾರಿಸಿದ್ದರೆ ಅದನ್ನು ಸಂಜೆ ಹೊತ್ತಿನಲ್ಲಿ ಇಳಿಸಲೇಬೇಕು, ಹಾಗೆಯೇ ಬಿಡಬಾರದು. ರಾಷ್ಟ್ರಧ್ವಜಕ್ಕೆ ಚ್ಯುತಿ ಬಾರದಿರಲು ಈ ಬಗ್ಗೆ ಜಾಗ್ರತೆವಹಿಸಿ. ಧ್ವಜವನ್ನು ನಿಧಾನಕ್ಕೆ ಇಳಿಸಬೇಕು. ಇಳಿಸಿದ ಮೇಲೆ ಅದನ್ನು ಸರಿಯಾದ ಕ್ರಮದಲ್ಲಿಯೇ ಮಡಚಿ ಇಡಬೇಕು.
ನೀವು ಧ್ವಜವನ್ನು ಟೇಬಲ್ ಮೇಲೆ ಇಟ್ಟು ನಂತರ ಮೊದಲಿಗೆ ಕೇಸರಿ ಭಾಗವನ್ನು ಬಿಳಿ ಬಣ್ಣದ ಮೇಲೆ ಬರುವಂತೆ, ಹಸಿರು ಬಣ್ಣವು ಬಿಳಿ ಬಣ್ಣದ ಮೇಲೆ ಬರುವಂತೆ ಮಡಚಿ, ಬಟ್ಟೆಯನ್ನು ಆಯಾತಾಕಾರದಲ್ಲಿ ಅಶೋಕಚಕ್ರ ಕಾಣುವಂತೆ ಮಡಚಿ ಅದನ್ನು ಸುರಕ್ಷಿತವಾದ ಜಾಗದಲ್ಲಿ ತೆಗೆದಿಡಿ.
ಎಲ್ಲಿಯೂ ಎಸೆಯಬಾರದು
ಧ್ವಜವನ್ನು ಎಸೆಯುವುದು ಅಪರಾಧ ಅದರಂತೆ ಈ ದಿನ ತಿರಂಗಾ ಬಾವುಟಗಳನ್ನು ಕುಡ ರಸ್ತೆ ಬದಿಯಲ್ಲಿ ಎಸೆಯಬೆಡಿ, ಅವುಗಳನ್ನು ಮನೆಗೆಎ ಕೊಂಡೊಯ್ಯಿರಿ.
ಹರಿದು ಹೋದರೆ ಏನು ಮಾಡಬೇಕು?
ಒಂದು ವೇಳೆ ಧ್ವಜ ಹರಿದು ಹೋದರೆ ಅದನ್ನು ಗೌರವಯುತವಾಗಿ ಸುಡಬೇಕು. ಈ ದಿನ ಬಳಸಿದ ಬಾವುಟಗಳನ್ನು ಕೂಡ ಸುಟ್ಟು ಹಾಕಿ. ಇದರಿಂದ ನಾವು ರಾಷ್ಟ್ರಧ್ವಜಕ್ಕೆ ಚ್ಯುತಿ ಉಂಟಾಗದಂತೆ ನೋಡಿಕೊಳ್ಳಬಹುದು.
ತ್ರಿವರ್ಣ ಧ್ವಜಕ್ಕೆ ಅಪಮಾನವಾದರೆ ಶಿಕ್ಷೆ
ಹೌದು ತ್ರಿವರ್ಣ ಧ್ವಜಕ್ಕೆ ಯಾರೇ ಆಗಲಿ ಅವಮಾನ ಮಾಡಿರೆ ಮೂರು ವರ್ಷ ಶಿಕ್ಷೆಯನ್ನು ಅನುಭವಿಸಬೇಕು. ಇನ್ನು ಸಾರ್ವಜನಿಕ ಸ್ಥಳಗಳಲ್ಲಿ ಧ್ವಜ ಸುಡುವುದು, ಮುದ್ದೆ ಮಾಡಿ ಬಿಸಾಡುವುದು ಮಾಡಬಾರದು.
ಇಂದು ನಾವೆಲ್ಲಾ ಸ್ವಾತಂತ್ರ್ಯವಾಗಿದ್ದೇವೆ, ವಾಕ್ ಸ್ವಾತಂತ್ರ್ಯ ಹೆಸರಿನಲ್ಲಿ ಬಾಯಿಗೆ ಬಂದಂತೆ ಮಾತನಾಡುವವರು ಇದ್ದಾರೆ, ಆದರೆ ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯ ಎಷ್ಟು ಮೌಲ್ಯಯುತವಾದದ್ದು ಎಂದು ತಿಳಿಯಬೇಕಾದರೆ ಸೌತ್‌ಕೊರಿಯಾದಂಥ ರಾಷ್ಟ್ರಗಳಿಗೆ ಹೋದರೆ ತಿಳಿಯುತ್ತೆ, ಚೀನಾಗೆ ಹೋದರೆ ತಿಳಿಯುತ್ತೆ ಹಾಗಾಗಿ ನಾವು ಭಾರತೀಯರು ಅದೃಷ್ಟವಂತರು. ನಮ್ಮೆಲ್ಲಶಾ ಹಕ್ಕುಗಳನ್ನು ಸಂರಕ್ಷಿಸಲು ಸಂವಿಧಾನವಿದೆ. ರಾಷ್ಟ್ರ, ರಾಷ್ಟ್ರದ ಸಂವಿದಾನ ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ.



Click it and Unblock the Notifications