Latest Updates
-
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ!
Happy Friendship Day: ಸ್ನೇಹಿತರಿಗೆ ಕಳುಹಿಸಲು ಇಲ್ಲವೆ ಕೃಷ್ಣ ಸುಧಾಮರ ಅದ್ಭುತ ಫೋಟೋಗಳು!!
ಗೆಳೆತನ ಎನ್ನುವುದು ಪದಗಳಿಗೆ ಅಥವಾ ಯಾವುದೇ ಕಟ್ಟುಪಾಡುಗಳಿಗೆ ಸಿಗುವ ಬಂಧವಲ್ಲ. ರಕ್ತ ಸಂಬಂಧವನ್ನೇ ಮೀರಿರುವ ಏಕೈಕ ಸಂಬಂಧ ಎಂದು ಸ್ನೇಹವನ್ನು ಕರೆಯಲಾಗಿದೆ. ಸುಖದಲ್ಲಿ ಜೊತೆಗಿದ್ದು, ದುಖಃದಲ್ಲಿ ಕಣ್ಣೊರೆಸುವ ಸ್ನೇಹಿತ ಮಾನವನಿಗೆ ಇರಬೇಕಾದ ಬಹುಮುಖ್ಯ ಅಂಶ. ಸ್ನೇಹಿತರಿಲ್ಲದ ಬದುಕು ಮರುಳುಗಾಡಿನಲ್ಲಿ ಅಲೆದಾಡಿದಂತೆ ಎಂದು ಹೇಳುವ ಮಾತು ನೀವು ಕೇಳಿರಬಹುದು.
ಹಾಗೆ ಈ ಸ್ನೇಹಿತರ ದಿನವನ್ನು ಆಚರಿಸಲೆಂದೇ ಒಂದು ದಿನ ಮೀಸಲಿಡಲಾಗಿದೆ. ಭಾರತದಲ್ಲಿ ಆಗಸ್ಟ್‌ನ ಮೊದಲ ಭಾನುವಾರ ಸ್ನೇಹಿತರ ದಿನ ಆಗಿರಲಿದೆ. ನೀವು ಕೂಡ ನಿಮ್ಮ ಸ್ನೇಹಿತರಿಗೆ ಶುಭಾಶಯ ಕೋರಲು ಇಲ್ಲಿ ಕೆಲವು ಸಂದೇಶಗಳ ನೀಡಲಾಗಿದೆ.

ಅದ್ರಲ್ಲೂ ಸ್ನೇಹ ಎಂದಾಗ ನಮಗೆ ಕೃಷ್ಣ ಹಾಗೂ ಸುಧಾಮನ ನೆನಪು ಬರಬಹುದು, ಇಬ್ಬರು ಬಾಲ್ಯ ಸ್ನೇಹಿತರು ಎಷ್ಟರ ಮಟ್ಟಿಗೆ ಸ್ನೇಹಿತರಾಗಿದ್ರು, ಅವರ ಬಾಲ್ಯ, ಸ್ನೇಹಿತನಿಗಾಗಿ ಕೃಷ್ಣ ಏನು ಮಾಡಿದ ಎಂಬುದೆಲ್ಲಾ ನೀವು ಕೇಳಿರಬಹುದು. ಹೀಗಾಗಿ ಸ್ನೇಹಿತರೆಂದರೆ ಕೃಷ್ಣ ಹಾಗೂ ಸುಧಾಮನಂತಿರಬೇಕು ಎಂಬ ಉದಾಹರಣೆ ನೀಡುತ್ತಾರೆ.

ಹೀಗಾಗಿ ನೀವು ಶುಭಾಶಯ ಹಂಚಿಕೊಳ್ಳಲು ಕೃಷ್ಣ ಸುಧಾಮರ ಸುಂದರ ಫೋಟೋಗಳು ಇಲ್ಲಿವೆ.

ನಾವು ಏನು ಎಂದು ನಮಗಿಂತ ಚೆನ್ನಾಗಿ ಗೊತ್ತಿರುವುದು ನಮ್ಮ ಫ್ರೆಂಡ್ಸ್‌ಗೆ ಮಾತ್ರ. ನಗುವಾಗ ಜೊತೆಗೂಡುವ, ಅಳುವಾಗ ಹೆಗಲು ಕೊಡುವ ಈ ಸಂಬಂಧ ಎಲ್ಲಾ ಬಂಧಗಳನ್ನು ಮೀರಿದ್ದು

ಎಲ್ಲಾ ಬಂಧವೂ ನಮ್ಮಿಂದ ಏನೋ ನಿರೀಕ್ಷಿಸುತ್ತದೆ, ಆದರೆ ಏನೂ ನಿರೀಕ್ಷಿಸದೆ ಬರುವುದು ಸ್ನೇಹವೊಂದೇ.
ನನಗೆ ನಿನ್ನ ಎಲ್ಲಾ ಸಮಸ್ಯೆ ಬಗೆಹರಿಸಲು ಸಾಧ್ಯವಾಗದೇ ಇರಬಹುದು, ಆದರೆ ಅದನ್ನು ಎದುರಿಸಲು ನಿನ್ನೊಬ್ಬನೇ ಖಂಡಿತ ಬಿಡಲ್ಲ ಅಂತ ಬರುವವರೇ ಫ್ರೆಂಡ್ಸ್.

ಸುಖದಲ್ಲಿ ನಮ್ಮ ಜೊತೆಗೆ ಇರುವವರು ಸ್ನೇಹಿತರಲ್ಲ, ಕಷ್ಟಾ ಅಂತ ಬಂದಾಗ ಯಾರು ಜೊತೆಗಿರುತ್ತಾರೋ ಅವರೇ ನಿಜವಾದ ಸ್ನೇಹಿತರು.

ನಿಜವಾದ ಸ್ನೇಹಿತ ಎಂದರೆ ನಿಮ್ಮ ಕಣ್ಣುಗಳಲ್ಲಿನ ನೋವನ್ನು ನೋಡುವವನು, ಉಳಿದವರೆಲ್ಲರೂ ನಿಮ್ಮ ಮುಖದ ಮೇಲಿನ ನಗುವನ್ನು ನಂಬುವವನು.

ಅನೇಕ ಜನರು ನಿಮ್ಮ ಜೀವನದ ಒಳಗೆ ಮತ್ತು ಹೊರಗೆ ಹೋಗುತ್ತಾರೆ, ಆದರೆ ನಿಜವಾದ ಸ್ನೇಹಿತರು ಮಾತ್ರ ನಿಮ್ಮ ಹೃದಯದಲ್ಲಿ ಹೆಜ್ಜೆ ಗುರುತುಗಳನ್ನು ಉಳಿಸುತ್ತಾರೆ.

ಒಬ್ಬ ಸ್ನೇಹಿತ ಎಂದರೆ ನೀವು ಇರುವಂತೆಯೇ ನಿಮ್ಮನ್ನು ತಿಳಿದಿರುವ, ನೀವು ಎಲ್ಲಿದ್ದೀರಿ ಎಂಬುದನ್ನು ಅರ್ಥಮಾಡಿಕೊಳ್ಳುವ, ನೀವು ಏನಾಗಿದ್ದೀರಿ ಎಂಬುದನ್ನು ಸ್ವೀಕರಿಸುವ ಮತ್ತು ಇನ್ನೂ ನಿಧಾನವಾಗಿ ನಿಮ್ಮ ಬೆಳವಣಿಗೆಯನ್ನು ಬೆಂಬಲಿಸುವವರು.
ಉತ್ತಮ ಸ್ನೇಹಕ್ಕೆ ನಿತ್ಯದ ಮಾತುಕತೆ ಅಥವಾ ಒಟ್ಟಿಗೆ ಇರುವ ಅಗತ್ಯವಿಲ್ಲ. ಸಂಬಂಧವು ಹೃದಯದಲ್ಲಿ ವಾಸಿಸುವವರೆಗೆ, ನಿಜವಾದ ಸ್ನೇಹಿತರು ಎಂದಿಗೂ ಬೇರೆಯಾಗುವುದಿಲ್ಲ.
ನನ್ನ ಜೀವನದ ಅತ್ಯಂತ ಶ್ರೇಷ್ಠ ಉಡುಗೊರೆ ಅಂದರೆ ನಿನ್ನ ಸ್ನೇಹ
ಮೂರ್ಖರ ಜೊತೆಗೂ ನೀವು ಸ್ನೇಹ ಬೆಳೆಸಬಹುದು, ಅದು ಸ್ನೇಹದ ಶಕ್ತಿ.
ಸ್ನೇಹಿತನೆಂದರೆ ನೀವು ಒಂಟಿಯಾದಾಗ ಮಾತನಾಡಲು ಸಿಗುವ ವ್ಯಕ್ತಿಯಲ್ಲ. ನಿಮ್ಮ ಒಂಟಿಯಾಗಿರಲು ಬಿಡದೆ ಇರುವವನು.



Click it and Unblock the Notifications
