Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಈ 4 ರಾಶಿಯವರನ್ನು ಆಂಜನೇಯ ಯಾವತ್ತೂ ಕೈ ಬಿಡೋದಿಲ್ಲ!
ರಾಮಭಕ್ತ ಆಂಜನೇಯನ ಮಹಿಮೆ ಅಪಾರ. ಆಂಜನೇಯನನ್ನು ನೆನೆದರೆ ಸಾಕು ಬೆಟ್ಟದಂತೆ ಬಂದಂತಹ ಕಷ್ಟಗಳೆಲ್ಲಾ ಮಂಜಿನ ಹಾಗೆ ಕರಗಿ ಹೋಗುತ್ತದೆ. ನಮ್ಮ ಧರ್ಮಗ್ರಂಥಗಳಲ್ಲಿ ಉಲ್ಲೇಖವಾಗಿರುವಂತೆ ಯಾರು ನಿತ್ಯ ಹನುಮಂತನನ್ನು ಆರಾಧನೆ ಮಾಡುತ್ತಾರೆ ಅವರ ಜೀವನದಲ್ಲಿ ಯಾವತ್ತೂ ಸುಖ, ಶಾಂತಿ ತುಂಬಿರುತ್ತಂತೆ. ಅದ್ರಲ್ಲಿ ಆ ನಾಲ್ಕು ರಾಶಿಯವರ ಮೇಲೆ ಆಂಜನೇಯನ ಆಶೀರ್ವಾದ ಸದಾ ಇರುತ್ತಂತೆ. ಹಾಗಾದ್ರೆ ಆ ನಾಲ್ಕು ರಾಶಿಯವರು ಯಾರು ಅನ್ನೋದನ್ನು ತಿಳಿಯೋಣ.
ಮೇಷ ರಾಶಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇಷ ರಾಶಿಯ ಅಧಿಪತಿ ಮಂಗಳ. ಅಷ್ಟೇ ಅಲ್ಲದೇ ಮೇಷರಾಶಿಯು ಆಂಜನೇಯನಿಗೆ ಪ್ರಿಯವಾದ ರಾಶಿಗಳಲ್ಲಿ ಒಂದಾಗಿದೆ. ಹೀಗಾಗಿ ಮೇಷ ರಾಶಿಯವರು ಮಂಗಳವಾರದ ದಿನ ಆಂಜನೇಯನನ್ನು ಭಕ್ತಿಯಿಂದ ಪೂಜಿಸಿದರೆ ಅವರ ಸಂಕಷ್ಟಗೆಳೆಲ್ಲಾ ಪರಿಹಾರವಾಗುತ್ತೆ ಅನ್ನೋ ನಂಬಿಕೆಯಿದೆ.

ಸಿಂಹ ರಾಶಿ
ಸಿಂಹ ರಾಶಿಯ ಅಧಿಪತಿ ಸೂರ್ಯ. ಜೊತೆಗೆ ಸೂರ್ಯ ದೇವನು ಆಂಜನೇಯನ ಗುರುವಾಗಿದ್ದಾನೆ. ಹೀಗಾಗಿ ಸಿಂಹ ರಾಶಿಯೂ ಕೂಡ ಆಂಜನೇಯನಿಗೆ ಪ್ರಿಯವಾದ ಗ್ರಹವಾಗಿದೆ. ನಂಬಿಕೆಗಳ ಪ್ರಕಾರ ಸಿಂಹ ರಾಶಿಯವರು ಹನುಮಂತನನ್ನು ಆರಾಧನೆ ಮಾಡಿದರೆ ಸಂಕಷ್ಟಗಳೆಲ್ಲಾ ದೂರವಾಗಿ ಖುಷಿ ಹಾಗೂ ಸಮೃದ್ಧಿ ತುಂಬಿರುತ್ತಂತೆ.
ವೃಶ್ಚಿಕ ರಾಶಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವೃಶ್ಚಿಕ ರಾಶಿಯ ಅಧಿಪತಿ ಮಂಗಳ. ಹೀಗಾಗಿ ವೃಶ್ಚಿಕ ರಾಶಿಯವರ ಮೇಲೆ ಹನುಮಂತನ ಆಶೀರ್ವಾದ ಸದಾ ಇರುತ್ತಂತೆ. ನಂಬಿಕೆಗಳ ಪ್ರಕಾರ ವೃಶ್ಚಿಕ ರಾಶಿಯವರು ಮಂಗಳವಾರದ ದಿನ ಹನುಮಂತನನ್ನು ಪೂಜೆ ಮಾಡೋದ್ರಿಂದ ಆರ್ಥಿಕ ಸಮಸ್ಯೆಗಳೆಲ್ಲಾ ಬಗೆ ಹರಿಯುತ್ತಂತೆ ಜೊತೆಗೆ ಅವರ ಸಾಮರ್ಥ್ಯ ಹಾಗೂ ಬುದ್ಧಿಶಕ್ತಿ ಹೆಚ್ಚಾಗುತ್ತಂತೆ.
ಕುಂಭ ರಾಶಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕುಂಭ ರಾಶಿಯೂ ಕೂಡ ಆಂಜನೇಯನಿಗೆ ಪ್ರಿಯವಾದ ರಾಶಿಯಾಗಿದೆ. ಶನಿದೇವನು ಕುಂಭ ರಾಶಿಯ ಅಧಿಪತಿಯಾಗಿದ್ದಾನೆ. ನಂಬಿಕೆಗಳ ಪ್ರಕಾರ ಕುಂಭ ರಾಶಿಯವರು ಆಂಜನೇಯನನ್ನೂ ಭಕ್ತಿಯಿಂದ ಪೂಜೆ ಮಾಡಿದ್ರೆ ಅವರ ಮೇಲೆ ಸದಾ ಆಂಜನೇಯನ ಅನುಗ್ರಹ ಇದ್ದೇ ಇರುತ್ತಂತೆ. ಹೀಗಾಗಿ ಶನಿವಾರದ ದಿನ ಆಂಜನೇಯನ್ನು ಪೂಜೆ ಮಾಡೋದ್ರಿಂದ ಎಲ್ಲಾ ಸಮಸ್ಯೆಗಳು ದೂರವಾಗುತ್ತಂತೆ.
ಆಂಜನೇಯನನ್ನು ಒಲಿಸಿಕೊಳ್ಳಲು ಈ ಮಂತ್ರಗಳನ್ನು ನಿತ್ಯ ಪಠಿಸಿ :
ಓಂ ಹ್ರಾನ್ ಹ್ರೀಂ ಹ್ರಾನ್ ಹ್ರಾನ್ ಹ್ರಾನ್ ಹ್ರಃ ॥ ಹಾಂ ಹನುಮತೇ ರುದ್ರಾತ್ಮಕಾಯ ಹೂಂ ಫಟ್ । ಓಂ ಹನುಮಂತಾಯ ನಮಃ ।
ಓಂ ನಮೋ ಹನುಮತೇ ರುದ್ರಾವತಾರಾಯ ಸರ್ವಶತ್ರುಸಹರಣಾಯ ಹರಾಯ ಸರ್ವವಶೀಕರಣಾಯ ರಾಮದೂತಾಯ ಸ್ವಾಹಾ ।
ಓಂ ಹನುಮಂತೇ ನಮಃ
ಓಂ ಹನುಮತೇ ರುದ್ರಾತ್ಮಕಾಯ ಹೂಂ ಫಟ್ ।
ಮಹಾಬಲಯ ವೀರೈ ಚಿರಂಜೀವಿನ್ ಉದ್ದತೇ. ಹರಿಣೇ ವಜ್ರ ದೇಹೇ ಚೋಲಂಘಿತ್ ಮಹಾವ್ಯಯೇ ।
ಓಂ ನಮೋ ಹನುಮತೇ ರುದ್ರಾವತಾರೈ, ಸರ್ವ ಶತ್ರುನಾಶಕ, ಸರ್ವ ರೋಗಗಳ ನಾಶಕ, ಸರ್ವ ಶತ್ರುನಾಶಕ.
ಶತ್ರುನಾಶಕನೇ ಓಂ ನಮೋ ಹನುಮತೇ ರುದ್ರಾವತಾರಾಯ!
ಓಂ ನಮೋ ಹನುಮತೇ ಆವೇಶಯ ಆವೇಶ ಸ್ವಾಹಾ ।
ನಿತ್ಯವು ಆಂಜನೇಯನ ಈ ಮಂತ್ರಗಳ ಜೊತೆಗೆ ಹನುಮಾನ್ ಚಾಲೀಸ ಪಠಿಸೋದ್ರಿಂದ ಸಂಕಷ್ಟಗಳೆಲ್ಲಾ ದೂರವಾಗುತ್ತಂತೆ.



Click it and Unblock the Notifications

