Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಹನುಮಾನ್ ಚಾಲೀಸ್ ಪಠಿಸುವಾಗ ಅಪ್ಪಿ-ತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ!
ಆಂಜನೇಯ ಸಂಕಷ್ಟಹರ. ನಮ್ಮೆಲ್ಲಾ ಸಂಕಷ್ಟಗಳಿಂದ ನಮಗೆ ಮಕ್ತಿಯನ್ನು ಕರುಣಿಸುವವನು. ಯಾರು ಆಂಜನೇಯನನ್ನು ಭಕ್ತಿಯಿಂದ ಪೂಜಿಸುತ್ತಾರೆಯೋ ಅವರ ಮೇಲೆ ಆಂಜನೇಯನ ಆಶೀರ್ವಾದ ಸದಾ ಇದ್ದೇ ಇರುತ್ತಂತೆ. ಪುರಾಣಗಳ ಪ್ರಕಾರ ಯಾರು ಆಂಜನೇಯನನ್ನು ಪೂಜಿಸುತ್ತಾರೆಯೋ ಅವರು ಹನುಂತನ ಕೃಪೆಯಿಂದ ಆರೋಗ್ಯ, ಸಮೃದ್ಧಿ, ಕೌಟುಂಬಿಕ ಸುಖ, ಧನಾತ್ಮಕ ಶಕ್ತಿಯನ್ನು ಪಡೆದುಕೊಳ್ಳುತ್ತಾರಂತೆ.
ಶ್ರೀರಾಮನ ಮೇಲೆ ಆಂಜನೇಯನ ಅತೀವ ಭಕ್ತಿ ಇತ್ತು. ಆಂಜನೇಯನನ್ನು ಸರಳವಾದ, ಪ್ರೇಮದಾತ ಹಾಗೂ ದೈರ್ಯವಂತ ಎಂದು ಕರೆಯಲಾಗುತ್ತದೆ. ನಿಮಗೆಲ್ಲಾ ಹನುಮಾನ್ ಚಾಲೀಸದ ಬಗ್ಗೆ ಚೆನ್ನಾಗಿ ಗೊತ್ತಿರುತ್ತೆ. ಯಾರು ನಿತ್ಯ ಹನುಮಾನ್ ಚಾಲೀಸ್ ಅನ್ನು ಪಠಿಸುತ್ತಾರೆಯೋ ಅವರನ್ನು ಆಂಜನೇಯ ರಕ್ಷಿಸುತ್ತಾನೆ ಎಂಬ ನಂಬಿಕೆಯಿದೆ.

ಅಷ್ಟೇ ಅಲ್ಲದೇ, ಎಂತಹದ್ದೇ ದುಷ್ಟ ಶಕ್ತಿಗಳ ಭಯ ನಮ್ಮನ್ನು ಕಾಡುತ್ತಿದ್ದರೂ ಕೂಡ ಈ ಹನುಮಾನ್ ಚಾಲೀಸ್ ಪಠನೆ ಮಾಡಿದ್ರೆ ಭಯವೆಲ್ಲಾ ದೂರವಾಗುತ್ತಂತೆ. ಹನುಮಾನ್ ಚಾಲೀಸ್ ಆಂಜನೇಯನಷ್ಟೇ ಪವಿತ್ರವಾಗಿದೆ. ಹೀಗಾಗಿ ಹನುಮಾನ್ ಚಾಲೀಸ್ ಅನ್ನು ಹೇಗಂದರೆ ಹಾಗೆ, ನಮಗೆ ಇಷ್ಟ ಬಂದ ಸಮಯದಲ್ಲಿ ಪಠಿಸೋ ಹಾಗಿಲ್ಲ. ಇದನ್ನು ಪಠಿಸುವಾಗ ಕೆಲವೊಂದು ನಿಯಮಗಳನ್ನು ಪಾಲನೆ ಮಾಡಲೇಬೇಕು. ಹಾಗಾದ್ರೆ ಆ ನಿಯಮಗಳು ಯಾವುದು ಅನ್ನೋದನ್ನು ತಿಳಿಯೋಣ.
ಹನುಮಾನ್ ಚಾಲೀಸ್ ಪಠಿಸುವಾಗ ಎದ್ದು ಹೋಗಬೇಡಿ!
ಹನುಮಾನ್ ಚಾಲೀಸ್ ಅನ್ನು ಯಾರು ಭಕ್ತಿಯಿಂದ ಪಠಿಸುತ್ತಾರೆಯೋ ಅವರ ಮೇಲೆ ಆಂಜನೇಯನ ಆಶೀರ್ವಾದ ಸದಾ ಇದ್ದೇ ಇರುತ್ತದೆ. ಆದರೆ ನೀವು ಒಂದು ಸಾರಿ ಹನುಮಾನ್ ಚಾಲೀಸ್ ಅನ್ನು ಪಠಿಸೋದಕ್ಕೆ ಶುರು ಮಾಡಿದ್ರೆ ಅದು ಸಂಪೂರ್ಣ ಆಗೋವರೆಗೂ ಎದ್ದು ಹೋಗೋ ಹಾಗಿಲ್ಲ. ಹಾಗೊಂದು ವೇಳೆ ನಿಮಗೆ ಬೇರೆ ಕೆಲಸ ಇದೆ ಅನ್ನೋ ಕಾರಣಕ್ಕೆ ಅರ್ಧದಲ್ಲಿ ಎದ್ದು ಹೋದರೆ ಹನುಮಂತನ ಕೋಪಕ್ಕೆ ಗುರಿಯಾಗಬಹುದಂತೆ.
ಮದ್ಯಪಾನ ಹಾಗೂ ಮಾಂಸಾಹಾರದಿಂದ ದೂರವಿರಿ!
ಆಂಜನೇಯನು ಬ್ರಹ್ಮಾಚಾರಿ. ಹಾಗೂ ಆತ ಮಾಂಸಾಹಾರ ಮತ್ತು ಮದ್ಯಪಾನದಿಂದ ದೂರ ಇದ್ದನು. ನೀವು ನಿತ್ಯ ಹನುಮಾನ್ ಚಾಲೀಸ್ ಪಠಿಸುತ್ತಾ, ಅದರ ಜೊತೆಗೆ ನಿಮಗೆ ಮದ್ಯಪಾನ ಮಾಡುವ ಅಭ್ಯಾಸವೂ ಇದ್ದರೆ ಖಂಡಿತ ನಿಮ್ಮ ಭಕ್ತಿ ತಕ್ಕ ಪ್ರತಿಫಲ ಸಿಗೋದಿಲ್ಲ. ಆಂಜನೇಯನ ಆಶೀರ್ವಾದ ಸದಾ ನಿಮ್ಮ ಮೇಲೆ ಇರಬೇಕೆಂದರೆ ನೀವು ಮದ್ಯಪಾನ ಹಾಗೂ ಮಾಂಸಾಹಾರದಿಂದ ದೂರ ಇರಲೇಬೇಕು.
ಅತಿಯಾದ ದುರಾಸೆಯುಳ್ಳ ವ್ಯಕ್ತಿಗಳಿಂದ ದೂರವಿರಿ!
ನೀವು ಸಾಧ್ಯವಾದಷ್ಟು ದೂರಾಸೆಯುಳ್ಳ ವ್ಯಕ್ತಿಗಳ ಸಂಘ ಮಾಡೋದನ್ನು ಬಿಟ್ಟು ಬಿಡಿ. ಅಂತವರಿಂದ ದೂರ ಇದ್ದರೆ ನಿಮಗೆ ತುಂಬಾನೇ ಒಳ್ಳೆಯದು. ಯಾಕಂದ್ರೆ ಹನುಮಾನ್ ಚಾಲೀಸ್ ಪಠನೆ ಮಾಡುವ ಉದ್ದೇಶವೇ ನಮ್ಮನ್ನು ದುರಾಸೆ ಮತ್ತು ಕೆಟ್ಟ ಆಲೋಚನೆಗಳನ್ನು ದೂರವಿಡುವುದು. ಹೀಗಾಗಿ ಯಾವತ್ತೂ ಕೆಟ್ಟ ಮನುಷ್ಯರ ಸಂಘ ಮಾಡೋದಕ್ಕೆ ಹೋಗಬೇಡಿ.
ಆಂಜನೇಯನು ಯಾವಾಗ್ಲೂ ಕಷ್ಟದಲ್ಲಿರುವವರಿಗೆ ಸಹಾಯ ಮಾಡೋದಕ್ಕೆ ಬಯಸುತ್ತಾನೆ. ಹಾಗೂ ಈ ಜಗತ್ತು ಅಪರಾಧಗಳಿಂದ ಮುಕ್ತವಾಗಿರಲಿ ಎಂದು ಬಯಸಿದವನು. ಹೀಗಾಗಿ ಹನುಮಾನ್ ಚಾಲೀಸ್ ಪಠಿಸುವವರ ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳಾಗಿ, ಅಥವಾ ಕೆಟ್ಟ ಉದ್ದೇಶ ಯಾವ ಕಾರಣಕ್ಕೂ ಇರಲೇಬಾರದು.
ಯಾರಿಗೂ ಮೋಸ ಮಾಡೋ ಉದ್ದೇಶ ಹೊಂದಿರಬಾರದು!
ನೀವು ಮದುವೆಯಾಗಿದ್ದವರಾಗಿದ್ದರೆ ಅಥವಾ ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ, ಸಾಧ್ಯವಾದಷ್ಟು ಒಂದೇ ಸಂಬಂಧಕ್ಕೆ ಸೀಮಿತವಾಗಿರಿ. ಅದನ್ನು ಪರ ಪುರುಷ/ಮಹಿಳೆ ಮೇಲೆ ಹಣ್ಣು ಹಾಕಿದರೆ ನಿಮ್ಮ ಸಂಗಾತಿಗೆ ಮೋಸ ಮಾಡಿದಂತಾಗುತ್ತದೆ. ಇದರಿಂದ ನೀವು ಆಂಜನೇಯನ ಕೋಪಕ್ಕೆ ಗುರಿಯಾಗುತ್ತೀರಿ.
ಅಪರಾಧಗಳನ್ನು ಮಾಡದಿರಿ!
ಯಾರು ಹನುಮಾನ್ ಚಾಲೀಸ್ ನಿತ್ಯ ಭಕ್ತಿಯಿಂದ ಪಠಿಸುತ್ತಾರೆಯೋ ಅವರ ಮೇಲೆ ಆಂಜನೇಯನ ಆಶೀರ್ವಾದ ಇದ್ದೇ ಇರುತ್ತದೆ. ಆದರೆ ಅವರು ಯಾವುದೇ ರೀತಿಯ ಅಪರಾಧ ಮಾಡರಬಾರದು. ನಿಮ್ಮಿಂದ ಆದಷ್ಟು ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ, ಯಾರ ಭಾವನೆಗಳಿಗೂ ನೋವಾಗದಂತೆ ನೋಡಿಕೊಳ್ಳಿ, ನಿಮ್ಮ ಮನಸ್ಸು ನಿಷ್ಕಲ್ಮಶವಾಗಿದ್ದು, ನೀವು ಪ್ರಾಮಾಣಿಕರಾಗಿದ್ದರೆ ಖಂಡಿತ ಆಂಜನೇಯ ನಿಮ್ಮ ಕೈ ಬಿಡೋದಿಲ್ಲ.
ಹನುಮಾನ್ ಚಾಲೀಸ್ ಅನ್ನು 7-21 ದಿನಗಳವರೆಗೆ ಪಠಿಸಿ!
ಹನುಮಾನ್ ಚಾಲೀಸ್ ನ ಸಂಪೂರ್ಣ ಫಲ ಪಡೆದುಕೊಳ್ಳಬೇಕಾದರೆ ಅದನ್ನು ಒಂದೆರಡು ದಿನ ಪಠಿಸಿದರೆ ಆಗೋದಿಲ್ಲ. ಒಂದು ಸಲ ಹನುಮಾನ್ ಚಾಲೀಸ್ ಪಠಿಸೋದಕ್ಕೆ ಶುರು ಮಾಡಿದ್ರೆ ಅದನ್ನು ಮುಂದಿನ 7 ಅಥವಾ 21 ದಿನಗಳವರೆಗೆ ನಿರಂತರವಾಗಿ ಪಠಿಸಲೇಬೇಕು.
ಭಕ್ತರು ಹನುಮಾನ್ ಚಾಲೀಸ್ ಪಠಿಸುವಾಗ ಈ ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಂಡು ಯಾವುದೇ ತಪ್ಪುಗಳು ಆಗದಂತೆ ಎಚ್ಚರ ವಹಿಸೋದು ಉತ್ತಮ.



Click it and Unblock the Notifications

