Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಆಂಜನೇಯನಿಗೆ ಆರತಿ ಬೆಳಗುವಾಗ ಈ ತಪ್ಪುಗಳನ್ನು ಖಂಡಿತ ಮಾಡಬೇಡಿ!
ಭಗವಾನ್ ಹನುಮಂತ ಹಿಂದೂಗಳು ಪೂಜಿಸುವ ಪ್ರಮುಖ ದೇವರು. ಹನುಮಂತ ರಾಮನ ಪರಮ ಭಕ್ತ. ಆದ್ದರಿಂದ ಹನುಮಂತನನ್ನು ಭಕ್ತ ಹನುಮಾನ್ ಅಂತಲೂ ಕರೆಯಲಾಗುತ್ತದೆ. ಆಂಜನೇಯ ಅಷ್ಟ ಚಿರಂಜೀವಿಗಳಲ್ಲಿ ಒಬ್ಬರಾಗಿದ್ದು, ಭೂ ಲೋಕದಲ್ಲಿ ಇಂದಿಗೂ ಜೀವಂತವಾಗಿದ್ದು, ಭಕ್ತರನ್ನು ರಕ್ಷಿಸುತ್ತಿದ್ದಾರೆ ಎಂದು ನಂಬಲಾಗಿದೆ.
ಹನುಮಂತನು ಹಿಂದೂ ಪಂಚಾಂಗದ ಚೈತ್ರ ಮಾಸದ ಹುಣ್ಣಿಮೆಯಂದು ಮಂಗಳವಾರ ಚಿತ್ರ ನಕ್ಷತ್ರ ಮತ್ತು ಮೇಷ ರಾಶಿಯಲ್ಲಿ ಜನಿಸಿದನು. ಆಂಜನೇಯನ ತಾಯಿಯ ಹೆಸರು ಅಂಜನಾ ಮತ್ತು ತಂದೆಯ ಹೆಸರು ಕೇಸರಿ. ಅದಕ್ಕಾಗಿಯೇ ಅವರನ್ನು ಅಂಜನಿ ಪುತ್ರ, ಕೇಸರಿ ನಂದನ್ ಎಂದು ಕರೆಯಲಾಗುತ್ತದೆ. ಇನ್ನೂ ಕೆಲವು ಗ್ರಂಥಗಳಲ್ಲಿ ಅವನನ್ನು ವಾಯುಪುತ್ರ ಎಂದೂ ಕರೆಯಲಾಗಿದೆ.

ದುಷ್ಟರ ಸಂಹಾರಧಾತ!
ಆಂಜನೇಯನನ್ನು ಭಕ್ತಿಯಿಂದ ಪೂಜಿಸಿದರೆ ಕಷ್ಟಗಳೆಲ್ಲಾ ದೂರ ಆಗುತ್ತೆ ಎನ್ನುವ ನಂಬಿಕೆ ಹಿಂದಿನಿಂದಲೂ ಇದೆ. ಇದೇ ಕಾರಣಕ್ಕಾಗಿ ಅವನನ್ನು ಸಂಕಟ ಮೋಚನ ಎಂದು ಕೂಡ ಕರೆಯಲಾಗುತ್ತದೆ. ಹನುಮಂತನನ್ನು ಪೂಜೆ ಮಾಡೋದ್ರಿಂದ ಎಲ್ಲಾ ರೀತಿಯ ತೊಂದರೆಗಳು, ರೋಗಗಳು, ಭಯ ದೂರವಾಗುತ್ತಂತೆ. ಆದರೆ ಹನುಮಂತನನ್ನು ಪೂಜಿಸುವಾಗ ಕೆಲವೊಂದು ಕ್ರಮಗಳನ್ನು ನಾವು ಅಗತ್ಯವಾಗಿ ಕೈಗೊಳ್ಳಬೇಕಾಗುತ್ತದೆ. ಪೂಜೆಯ ವಿಧಿ-ವಿಧಾನಗಳಲ್ಲಿ ಯಾವುದೇ ರೀತಿ ತಪ್ಪಾಗದಂತೆ ನೋಡಿಕೊಳ್ಳಬೇಕು. ಅಷ್ಟಕ್ಕು ಆಂಜನೇಯನ ಪೂಜಾ ವಿಧಿ-ವಿಧಾನ ಹೇಗಿರಬೇಕು ಅನ್ನೋದನ್ನು ತಿಳಿಯೋಣ.
ಹನುಮಂತನಿಗೆ ಆರತಿ ಯಾವಾಗ ಬೆಳಗಬೇಕು?
ಸಾಮಾನ್ಯವಾಗಿ ಹಿಂದೂ ಧರ್ಮದಲ್ಲಿ ಪ್ರತಿಯೊಬ್ಬ ದೇವರಿಗೂ ಆರತಿ ಬೆಳಗುವ ಪದ್ಧತಿಯಿದೆ. ಅದೇ ರೀತಿ ಆಂಜನೇಯನಿಗೂ ಆರತಿಯನ್ನು ಬೆಳಗಲಾಗುತ್ತದೆ. ಆಂಜನೇಯನಿಗೆ ಬೆಳಗ್ಗೆ ಹಾಗೂ ರಾತ್ರಿ ಆರತಿ ಬೆಳಗೋದ್ರಿಂದ ಒಳ್ಳೆಯದಾಗುತ್ತಂತೆ. ಒಂದು ವೇಳೆ ಬೆಳಗ್ಗಿನ ಸಮಯ ಆರತಿ ಬೆಳಗೋದಕ್ಕೆ ಸಾಧ್ಯವಾಗದಿದ್ದರೂ ಕೂಡ ಸಂಜೆ ಆರತಿ ಬೆಳಗಲೇಬೇಕು. ಸಂಜೆಯ ಸಮಯದಲ್ಲಿ ಆರತಿ ಬೆಳಗೋದು ಉತ್ತಮವೆಂದು ಪರಿಗಣಿಸಲಾಗಿದೆ. ಹಗಲು ಮುಗಿದು ರಾತ್ರಿ ಆರಂಭವಾಗುತ್ತಿರುವ ಸಂದರ್ಭದಲ್ಲಿ ಹನುಮಂತನಿಗೆ ಆರತಿಯನ್ನು ಮಾಡುವುದರಿಂದ ಇಷ್ಟಾರ್ಥಗಳು ಈಡೇರುತ್ತಂತೆ.
ಆರತಿ ಮಾಡುವ ವಿಧಾನ ಹೇಗಿರಬೇಕು?
ಆಂಜನೇಯನಿಗೆ ಆರತಿಯನ್ನು ಮಾಡುವ ಮೊದಲು ಶಂಖವನ್ನು 3 ಬಾರಿ ಊದಬೇಕು. ಶಂಖವನ್ನು ಊದುವಾಗ ಮೊದಲು ಮೆಲ್ಲಗೆ ಊದಲು ಆರಂಭಿಸಿ ನಂತರ ಜೋರಾಗಿ ಊದಬೇಕು. ಇನ್ನೂ ಆರತಿ ಮಾಡುವಾಗ ಗಂಟೆ ಬಾರಿಸಬೇಕು. ಈ ಸಂದರ್ಭದಲ್ಲಿ ಹಾಡಿದರೆ ಉತ್ತಮ. ಆದರೆ ಹಾಡುವಾಗ ಸ್ವರ ಹಾಗೂ ಲಯದ ಕಡೆಗೆ ಗಮನ ಕೊಡಬೇಕು. ಬೇರೆ ಯಾವುದಾದರೂ ವಾದ್ಯಗಳನ್ನು ಕೂಡ ನುಡಿಸಬಹುದು.
ದೀಪ ಯಾವ ರೀತಿ ಹಚ್ಚಬೇಕು?
ಆಂಜನೇಯನಿಗೆ ದೀಪ ಹಚ್ಚುವಾಗಲೂ ಕೆಲವೊಂದು ಕ್ರಮಗಳನ್ನು ಕೈಗೊಳ್ಳುವುದು ತುಂಬಾನೇ ಮುಖ್ಯವಾಗುತ್ತದೆ. ಶುದ್ಧ ಹತ್ತಿಯಿಂದ ಮಾಡಿದ ಬತ್ತಿಯನ್ನೇ ಬಳಕೆ ಮಾಡಬೇಕು. ಎಣ್ಣೆಯನ್ನು ಬಳಸೋದಕ್ಕೆ ಹೋಗಬೇಡಿ. ಸಾಧ್ಯವಾದರೆ ತುಪ್ಪದ ದೀಪವನ್ನೇ ಹಚ್ಚಿರಿ. ಇನ್ನೂ ಕರ್ಪೂರ ಆರತಿಯನ್ನು ಬೆಳಗಿದರೆ ಒಳ್ಳೆಯದು. ದೀಪಗಳ ಸಂಖ್ಯೆ ಒಂದು, ಐದು, ಒಂಬತ್ತು, ಹನ್ನೊಂದು ಅಥವಾ ಇಪ್ಪತ್ತೊಂದು ಆಗಿರಬೇಕು. ಇನ್ನು ಆರತಿ ಬೆಳಗುವಾಗ ಗಡಿಯಾರದ ದಿಕ್ಕಿನಲ್ಲಿ ಲಯ ಬದ್ಧವಾಗಿ ಆರತಿ ಮಾಡೋದನ್ನು ಮರೀಬೇಡಿ.
ಕುಂಕುಮ ಮತ್ತು ಹೂವುಗಳು ಆರತಿ ತಟ್ಟೆಯಲ್ಲಿರಲಿ!
ಕುಂಕುಮವು ಆಂಜನೇಯನಿಗೆ ಪ್ರಿಯವಾದ ವಸ್ತುವಾಗಿದೆ. ಹೀಗಾಗಿ ಆಂಜನೇಯನಿಗೆ ಆರತಿ ಮಾಡುವ ತಟ್ಟೆಯಲ್ಲಿ ಹೂವುಗಳು ಮತ್ತು ಕುಂಕುಮ ಇರಲೇಬೇಕು. ಆಂಜನೇಯ ದೇವಸ್ಥಾನಗಳಲ್ಲಿ ಹೆಚ್ಚಾಗಿ ಕೇಸರಿ ಬಣ್ಣದ ಕುಂಕುಮವನ್ನೇ ಬಳಕೆ ಮಾಡಲಾಗುತ್ತದೆ.
ನಾವು ಪೂಜೆ ಮಾಡುವಾಗ ಆರತಿ ತಟ್ಟೆಯಲ್ಲಿ ಕೆಂಪು ಬಣ್ಣದ ಹೂವುಗಳಿದ್ದರೆ ಆಂಜನೇಯ ಸಂತುಷ್ಟನಾಗುತ್ತಾನೆ ಎಂಬ ನಂಬಿಕೆಯಿದೆ. ಒಂದು ವೇಳೆ ಕೆಂಪು ಹೂಗಳು ಇಲ್ಲದಿದ್ದರೆ, ಚೆಂಡು ಹೂವನ್ನು ಆಂಜನೇಯನಿಗೆ ಸಮರ್ಪಣೆಯನ್ನು ಮಾಡಬಹುದು.
ಆರತಿಯನ್ನು ಯಾವ ರೀತಿ ಮಾಡಬೇಕು?
ಆಂಜನೇಯನಿಗೆ ಆರತಿ ಮಾಡುವಾಗ ಆರತಿ ತಟ್ಟೆಯನ್ನು ಆಂಜನೇಯನ ಹೊಕ್ಕಳ ಬಳಿ ಎರಡು ಬಾರಿ ತಿರುಗಿಸಿ ಮತ್ತು ನಂತರ ಅವರ ಪಾದಗಳ ಬಳಿ ನಾಲ್ಕು ಬಾರಿ ತಿರುಗಿಸಬೇಕು. ಇನ್ನೂ ಸಂಪೂರ್ಣವಾಗಿ ಏಳುಬಾರಿ ಆರತಿಯನ್ನು ಆಂಜನೇಯನಿಗೆ ಬೆಳಗಬೇಕು. ಇನ್ನೂ ಆಂಜನೇಯನ ಮುಖದ ಹತ್ತಿರ ಒಂದು ಬಾರಿ ಆರತಿಯನ್ನು ಬೆಳೆಗಬೇಕು.
ಈ ಮಂತ್ರಗಳನ್ನು ಪಠಿಸಿ :
ಅತುಲಿತ ಬಾಲ ಧಾಮಂ ಹೇಮ ಶೈಲಾಭ ದೇಹಮ್
ದನುಜ ವನ ಕೃಶಾನುಂ ಜ್ಞಾನಿನಾಂ ಅಗ್ರಗನ್ನ್ಯಾಂ
ಸಕಲ ಗುನ್ನ ನಿಧಾನಂ ವಾನರಾನ್ನಂ ಅಧೀಶಮ್
ರಘುಪತಿ ಪ್ರಿಯಾ ಭಕ್ತಂ ವಾತ ಆತ್ಮಜಂ ನಮಾಮಿ
ಆಂಜನೇಯನಿಗೆ ಆರತಿ ಮಾಡುವಾಗ ಈ ಎಲ್ಲಾ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಿ. ಹಾಗೂ ಯಾವುದೇ ರೀತಿ ತಪ್ಪುಗಳಾಗದಂತೆ ನೋಡಿಕೊಳ್ಳಿ.



Click it and Unblock the Notifications

