Latest Updates
-
ಫ್ರೆಂಡ್ಶಿಪ್ ಡೇ ವಿಶ್ ಮಾಡೋಕೆ ಮರೆತಿದ್ದೀರಾ? ನಿಮ್ಮ ಸ್ನೇಹಿತರ ಮನ ಗೆಲ್ಲಲು ಇಲ್ಲಿದೆ ಸಿಂಪಲ್ ಟಿಪ್ಸ್! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು!
ಗುರು ಪೂರ್ಣಿಮಾ 2024: ಗುರು ಪೂರ್ಣಿಮೆ ಆಚರಿಸುವುದು ಏಕೆ? ಇದರ ವಿಶೇಷತೆ ನಿಮಗೆ ಗೊತ್ತಾ?
ಹಿಂದೂ ಧರ್ಮದಲ್ಲಿ ತಂದೆ ತಾಯಿಯ ಬಳಿಕ ಗೌರವಯುತ ಸ್ಥಾನ ನೀಡಿರುವುದು ಗುರುಗಳಿಗೆ. ಗುರುವನ್ನು ಜೀವನದ ಕೊನೆಯವರೆಗೂ ಮರೆಯಬಾರದಂತೆ, ಬದುಕು ಕಟ್ಟಿಕೊಳ್ಳು ಬೆನ್ನ ಹಿಂದೆ ನಿಲ್ಲುವುದು ತಂದೆ ತಾಯಿಯಾದರೆ ಸರಿ ದಾರಿ ಯಾವುದು ಎಂದು ತಿಳಿಸುವುದು ಗುರು. ಹೀಗಾಗಿ ಗುರುವಿಗೆ ಬಹಳ ಮಹತ್ವ ನೀಡಲಾಗಿದೆ. '
ಈಗ ಗುರು ಪೂರ್ಣಿಮೆಯ ಸಮಯದಲ್ಲಿ ಗುರುಗಳ ನೆನೆಯುವ ಸುಸಂದರ್ಭವಾಗಿದೆ. ಹಸಿಮಣ್ಣಿಗೆ ಆಕಾರ ಕೊಡುವ ಗುರು ಎಂಬ ಮಾರ್ಗದರ್ಶಿ ತಂದೆ ತಾಯಿಯ ಸ್ಥಾನಕ್ಕೆ ಸಮಾನರು. ಜ್ಞಾನ ಎಂಬ ಬೆಳಕಿನೆಡೆಗೆ ನಮ್ಮನ್ನು ಕೊಂಡೊಯ್ಯುವ ಈ ಮಹಾನುಭಾವರಾದ ಗುರುಗಳು ನಮ್ಮ ಜೀವನದ ದಿಕ್ಕನ್ನು ಬದಲಾಯಿಸುವವರಲ್ಲಿ ಪ್ರಮುಖರು ಎಂದು ಪರಿಗಣಿಸಲಾಗಿದೆ.

ಗುರುಪೂರ್ಣಿಮೆ ಆಚರಣೆಯ ಮಹತ್ವ ಏನು?
ಹಿಂದೂಗಳಿಗಾಗಿ ಗುರುಪೂರ್ಣಿಮೆಯಂದು ಚಾತುರ್ಮಾಸ ಆರಂಭವಾಗುತ್ತದೆ. ರೈತರಿಗೆ ಈ ದಿನ ಅತ್ಯಂತ ಮಹತ್ವದ್ದಾಗಿದೆ. ವ್ಯವಸಾಯ ಆರಂಭಿಸಲು ಸೂಕ್ತ ದಿನ ಎಂದು ಪರಿಗಣಿಸಲಾಗಿದೆ. ಹೊಸ ಪೈರು ಆರಂಭಕ್ಕೆ ಈ ದಿನ ಅತ್ಯುತ್ತಮ ಎನ್ನಲಾಗುತ್ತದೆ. ಪಂಚಾಂಗದ ಪ್ರಕಾರ, ಗುರು ಪೂರ್ಣಿಮಾವನ್ನು ಆಷಾಢ ಮಾಸದ ಪೂರ್ಣಿಮಾ ತಿಥಿಯಂದು (ಹುಣ್ಣಿಮೆಯ ದಿನ) ಆಚರಿಸಲಾಗುತ್ತದೆ. ಈ ವರ್ಷ, ಗುರು ಪೂರ್ಣಿಮೆಯನ್ನು ಜುಲೈ 21, 2024 ರಂದು ಆಚರಿಸಲಾಗುತ್ತಿದೆ.
ಪೂರ್ಣಿಮಾ ತಿಥಿ ಆರಂಭ - ಜುಲೈ 20, 2024 - 05:59 PM
ಪೂರ್ಣಿಮಾ ತಿಥಿ ಕೊನೆಗೊಳ್ಳುವ ಸಮಯ - ಜುಲೈ 21, 2024 - 03:46 PM
ಗುರು ಪೂರ್ಣಿಮೆ ಆಚರಿಸುವುದು ಏಕೆ?
ಹಿಂದೂ ಪುರಾಣಗಳ ಪ್ರಕಾರ ಈ ಮಂಗಳಕರ ದಿನವು ಅತ್ಯಂತ ಪ್ರಸಿದ್ಧ ಋಷಿಗಳಲ್ಲಿ ಒಬ್ಬರು ಮತ್ತು ಋಷಿ ಪರಾಶರ ಪುತ್ರ ವ್ಯಾಸನ ಜನ್ಮವನ್ನು ಸೂಚಿಸುತ್ತದೆ. ಅಂದರೆ ವೇದ ವ್ಯಾಸರ ಜನನವಾದ ದಿನ ಎಂದು ಆಚರಿಸಲಾಗುತ್ತದೆ. ಇದರ ಜೊತೆಗೆ ಹಿಂದೂ ಪುರಾಣದ ಪ್ರಕಾರ, ಈ ದಿನ ಶಿವನು ಯೋಗದ ಜ್ಞಾನವನ್ನು ಏಳು ಅನುಯಾಯಿಗಳಿಗೆ ಅಥವಾ "ಸಪ್ತಾರಿಶಿಗಳಿಗೆ" ರವಾನಿಸುವ ಮೂಲಕ ಗುರುನಾದನೆಂದು ನಂಬಲಾಗಿದೆ.
ಬೌದ್ಧ ಧರ್ಮದಲ್ಲಿ ಗುರು ಪೂರ್ಣಿಮೆ
ಬೌದ್ಧ ಧರ್ಮದಲ್ಲಿ ಈ ಗುರು ಪೂರ್ಣಿಮೆ ಆಚರಣೆಗೆ ಬಹಳ ಮಹತ್ವವಿದೆ. ಧರ್ಮದ ಸಂಸ್ಥಾಪಕ ಭಗವಾನ್ ಬುದ್ಧನಿಗೆ ಅವರು ಗೌರವ ಸಲ್ಲಿಸುತ್ತಾರೆ. ಈ ಹುಣ್ಣಿಮೆಯ ದಿನದಂದು, ಭಗವಾನ್ ಬುದ್ಧಗಯದಲ್ಲಿನ ಬೋಧಿ ಮರದ ಕೆಳಗೆ ಜ್ಞಾನೋದಯ ಪಡೆದ ನಂತರ ಉತ್ತರ ಪ್ರದೇಶದ ಸಾರನಾಥದಲ್ಲಿ ತಮ್ಮ ಮೊದಲ ಧರ್ಮೋಪದೇಶವನ್ನು ನೀಡಿದರು ಎಂದು ಬೌದ್ಧರು ನಂಬುತ್ತಾರೆ.
ಬುದ್ಧನು ತನಗೆ ಜ್ಞಾನೋದಯವಾದ ನಂತರ ಬೋಧಗಯಾದಿಂದ ಸಾರನಾಥಕ್ಕೆ ತೆರಳಿ ಅಲ್ಲಿ ನೆಲಸಿದನು. ಇಲ್ಲಿಯೇ ತಪಸ್ಸಿಗೆ ಕುಳಿತನು. ತೀವ್ರ ತಪಸ್ಸನ್ನು ಒಂದು ದಿನ ಬಿಟ್ಟು ಲೋಕಕಲ್ಯಾಣಕ್ಕೆ ತೆರಳಿದರು ಎಂದು ನಂಬಲಾಗಿದೆ. ಇದಾಗಿ ಆತ ಗಂಗಾ ನದಿ ದಾಟುವಾಗ ಆತನ ಹಳೆಯ ಅನುಯಾಯಿಗಳು ಸಿಕ್ಕರಂತೆ, ಈ ವೇಳೆ ಅವರಿಗೆ ಧರ್ಮ ಭೋದನೆ ಮಾಡಿದನು ಎನ್ನಲಾಗಿದ್ದು, ಈ ದಿನವೂ ಹುಣ್ಣಿಮೆಯಾಗಿತ್ತು, ಅಂದಿನಿಂದ ಗುರು ಪೂರ್ಣಿಮೆ ಎಂದು ಆಚರಿಸಲಾಗಿತು ಎಂದು ನಂಬಲಾಗಿದೆ. ಇನ್ನು ಜೈನ ಧರ್ಮದಲ್ಲಿ ಪ್ರಸಿದ್ಧ 24 ನೇ ತೀರ್ಥಂಕರರಾದ ಮಹಾವೀರನನ್ನು ಗೌರವಿಸಲು ಗುರು ಪೂರ್ಣಿಮಾವನ್ನು ತ್ರಿನೋಕ್ ಗುಹಾ ಪೂರ್ಣಿಮಾ ಎಂದು ಆಚರಿಸಲಾಗುತ್ತದೆ.
ಹೀಗಾಗಿಯೇ ಹಿಂದೂ ಸನ್ಯಾಸಿಗಳು ಸಹ ಚತುರ್ಮಾಸದ ಸಂದರ್ಭದಲ್ಲಿ ತಮ್ಮ ಗುರುಗಳ ಗೌರವಾರ್ಥವಾಗಿ ಪೂಜೆ ಮಾಡುವ ಮೂಲಕ ಈ ದಿನವನ್ನು ಆಚರಿಸುತ್ತಾರೆ. ಮತ್ತೆ ಕೆಲವರು ಇದೇ ದಿನದಂದು ಸನ್ಯಾಸತ್ವ ಸ್ವಕರಿಸುತ್ತಾರೆ. ಅಲ್ಲದೆ ಪೋಷಕರಿಗೆ ವಿಶೇಷ ಪೂಜೆ ಹಾಗೂ ಗುರುಗಳಿಗೆ ಗೌರವ ಸಲ್ಲಿಸಲು ಈ ದಿನ ಮೀಸಲಿಡಲಾಗಿದೆ.



Click it and Unblock the Notifications