Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಗುರು ಚಂಡಾಲ ಯೋಗ: ಪ್ರತಿಯೊಂದು ರಾಶಿಯ ಮೇಲೆ ಯಾವ ಪ್ರಭಾವ ಬೀರಿದೆ ನೋಡಿ
ಗುರು ಮತ್ತು ಸಂಯೋಗದಿಂದಾಗಿ ಚಂಡಾಲ ಯೋಗ ಏರ್ಪಡುವುದು. ಈ ಯೋಗ ಒಳ್ಳೆಯ ಪ್ರಭಾವ ಬೀರುವುದಿಲ್ಲ, ಈ ಚಂಡಾಲ ಯೋಗದಿಂದಾಗಿ ಗುರುವಿಗೆ ತನ್ನ ಶುಭ ಪ್ರಭಾವ ಸಂಪೂರ್ಣವಾಗಿ ಬೀರಲು ಸಾಧ್ಯವಾಗುವುದಿಲ್ಲ ಎಂದು ವೈದಿಕ ಶಾಸ್ತ್ರ ಹೇಳುತ್ತದೆ.
ಗುರು ಮೇಷ ರಾಶಿಗೆ ಪ್ರವೇಶಿಸಿದಾಗ ಗುರು ಚಂಡಾಲ ಯೋಗ ಏರ್ಪಟ್ಟರೂ ಇದರ ಪ್ರಭಾವ 12 ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಇದರ ಪ್ರಭಾವ 7 ತಿಂಗಳವರೆಗೆ ಇರಲಿದೆ. ಗುರು ಚಂಡಾಲ ಯೋಗ 12 ರಾಶಗಳಿಗೆ ಹೇಗಿರಲಿದೆ ಎಂದು ನೋಡೋಣ:

ಮೇಷ ರಾಶಿ: ಈ ಅವಧಿಯಲ್ಲಿ ಮೇಷ ರಾಶಿಯವರು ಎಚ್ಚರವಹಿಸಬೇಕು. ಆರೋಗ್ಯ ಸಮಸ್ಯೆಗಳು ಉಂಟಾಗುವುದು, ಅಲ್ಲದೆ ಸಾಮಾಜಿಕ ಸ್ಥಾನಮಾನದ ಮೇಲೆ ಕೂಡ ಪ್ರಭಾವ ಬೀರಲಿದೆ.
ವೃಷಭ ರಾಶಿ: ವೃಷಭ ರಾಶಿಯವರ ಆರ್ಥಿಕ ಸ್ಥಿತಿಯ ಮೇಲೆ ಪ್ರಭಾವ ಬೀರಲಿದೆ, ಈ ಅವಧಿಯಲ್ಲಿ ಆರ್ಥಿಕ ಸಮಸ್ಯೆ ಎದುರಾಗಬಹುದು ಅಲ್ಲದೆ ಯಾವುದೇ ದೊಡ್ಡ ಹೂಡಿಕೆ ಮಾಡಲು ಹೋಗಬೇಡಿ. ಕುಟುಂಬ ಜೀವನದಲ್ಲೂ ಏರಳಿತಗಳು ಇರಲಿದೆ.
ಮಿಥುನ ರಾಶಿ: ಗುರು ಚಂಡಾಲ ಯೋಗದಿಂದಾಗಿ ಸಹೋದರ ಸಂಬಂಧದಲ್ಲಿ ಸಮಸ್ಯೆ ಉಂಟಾಗಬಹುದು. ಉದ್ಯಮ ಅಥವಾ ರಾಜಕೀಯದಲ್ಲಿ ಇರುವವರು ಈ ಅವಧಿಯಲ್ಲಿ ಹಲವಾರು ಸವಾಲುಗಳನ್ನು ಎದುರಿಸಬಹುದು.
ಕರ್ಕ ರಾಶಿ: ಕರ್ಕ ರಾಶಿಯವರಿಗೆ ಈ ಅವಧಿಯಲ್ಲಿ ಆರ್ಥಿಕ ತೊಂದರೆ ಉಂಟಾಗುವುದು, ಅಲ್ಲದೆ ಈ ಸಮಯದಲ್ಲಿ ನಿಮ್ಮ ಮಾತಿನ ಮೇಲೆ ಕೂಡ ನಿಗಾವಹಿಸುವಂತೆ ಸಲಹೆ ನೀಡಲಾಗಿದೆ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಈ ಅವಧಿಯಲ್ಲಿ ವೃತ್ತಿ ಜೀವನದಲ್ಲಿ ಸಮಸ್ಯೆಗಳು ಎದುರಾಗುವುದು, ಅಲ್ಲದೆ ಕೌಟುಂಬಿಕ ಜೀವನದಲ್ಲಿ ಕೆಲ ಸಮಸ್ಯೆಗಳು ಉಂಟಾಗುವುದು, ಇದರಿಂದಾಗಿ ನಿಮ್ಮ ಮಾನಸಿಕ ಒತ್ತಡ ಮತ್ತಷ್ಟು ಹೆಚ್ಚಾಗುವುದು.
ಕನ್ಯಾ ರಾಶಿ: ಈ ಅವಧಿಯಲ್ಲಿ ಪ್ರಯಾಣ ಮಾಡುವಾಗ ತುಂಬಾನೇ ಜಾಗ್ರತೆವಹಿಸಿ. ಕೌಟುಂಬಿಕ ಜೀವನದಲ್ಲೂ ಕೆಲ ಸಮಸ್ಯೆಗಳು ಉದ್ಭವವಾಗುವುದು, ಮನೆಯಲ್ಲಿ ಅನಗ್ಯತ ಚರ್ಚೆಯಿಂದ ದೂರವಿರುವುದು ಒಳ್ಳೆಯದು.
ತುಲಾ ರಾಶಿ: ಈ ಅವಧಿಯಲ್ಲಿ ಕಾನೂನು ಬಾಹಿರ ಚಟುವಟಿಕೆ ಮಾಡಿದರೆ ಅದರಿಂದ ತುಂಬಾ ನಷ್ಟ ಅನುಭವಿಸಬೇಕಾಗುವುದು, ಅಡ್ಡ ಮಾರ್ಗದಲ್ಲಿ ಹೋಗಲು ಯತ್ನಿಸಬೇಡಿ. ಅಲ್ಲದೆ ಈ ಅವಧಿಯಲ್ಲಿ ನಿಮ್ಮ ಸಹೋದರ ಜೊತೆ ಮನಸ್ತಾಪ ಉಂಟಾಗಬಹುದು.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರ ವೃತ್ತಿ ಜೀವನದ ಮೇಲೆ ಪ್ರಭಾವ ಬೀರಲಿದೆ. ಸ್ವಂತ ಉದ್ಯೋಗ ಮಾಡುವವರು ಅಥವಾ ಉದ್ಯಮಿಗಳು ಆರ್ಥಿಕ ವಿಷಯದಲ್ಲಿ ತುಂಬಾನೇ ಜಾಗ್ರತೆವಹಿಸಬೇಕು, ಇಲ್ಲದಿದ್ದರೆ ತುಂಬಾನೇ ನಷ್ಟ ಉಂಟಾಗಬಹುದು.
ಧನು ರಾಶಿ: ಈ ಅವಧಿಯಲ್ಲಿ ಅದೃಷ್ಟದ ಬೆಂಬಲ ಕಡಿಮೆ ಇರುವುದರಿಂದ ಯಾವುದೇ ಹೊಸ ಹೂಡಿಕೆ ಮಾಡಲು ಹೋಗಬೇಡಿ. ಅಲ್ಲದೆ ಕೌಟುಂಬಿಕ ಜೀವನದಲ್ಲಿ ಏರಳಿತಗಳಿರುವುದರಿಂದ ಮಾನಸಿಕ ಒತ್ತಡ ಅಧಿಕವಿರಲಿದೆ.
ಮಕರ ರಾಶಿ: ಈ ಅವಧಿಯಲ್ಲಿ ನೀವು ನಿಮ್ಮ ಶತ್ರುಗಳ ಬಗ್ಗೆ ತುಂಬಾ ಎಚ್ಚರದಿಂದಿರಬೇಕು. ಈ ಅವಧಿಯಲ್ಲಿ ನಿಮ್ಮ ಆರೋಗ್ಯದ ಕಡೆ ಗಮನ ನೀಡಿ.
ಕುಂಭ ರಾಶಿ: ಈ ಅವಧಿಯಲ್ಲಿ ಕುಂಭ ರಾಶಿಯವರು ಆರ್ಥಿಕ ಏರಳಿತ ಅನುಭವಿಸುವಿರಿ, ಈ ಅವಧಿಯಲ್ಲಿ ಆದಾಯ ಕಡಿಮೆ ಇರಲಿದೆ, ನೀವು ಖರ್ಚನ್ನು ಮಿತಿಯಲ್ಲಿ ಮಾಡಿ.
ಮೀನ ರಾಶಿ: ಕೋರ್ಟ್‌ನಲ್ಲಿ ಏನಾದರೂ ಕೇಸ್ ನಡೆಯುತ್ತಿದ್ದರೆ ನೀವು ಬಯಸಿದಂತೆ ತೀರ್ಪು ಬಾರದೇ ಹೋಗಬಹುದು. ಅಲ್ಲದೆ ಈ ಅವಧಿಯಲ್ಲಿ ಪೋಷಕರ ಆರೋಗ್ಯದ ಕಡೆಗೆ ಗಮನ ನೀಡಿ.
* ಪ್ರತಿದಿನ ನಿಮ್ಮ ಹಣೆಗೆ ಕೇಸರಿ ತಿಲಕ ಹಚ್ಚಿ
* ಹಸುವಿಗೆ ಮೇವು ದಾನ ಮಾಡಿ
* ಪ್ರತಿದಿನ ವಿಷ್ಣು ಸಹಸ್ರನಾಮ ಪಠಿಸಿ
* ಮಹಾಮೃತ್ಯುಂಜಯ ಮಂತ್ರ ಪಠಿಸಿ
* 108 ಬಾರಿ ಗಾಯತ್ರಿ ಮಂತ್ರ ಪಠಿಸಿ.



Click it and Unblock the Notifications

