Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಕೆಲಸದಿಂದ ಮುಕ್ತಿ ಪಡೆಯಲು ಬೆರಳುಗಳ ತುಂಡರಿಸಿಕೊಂಡ ಉದ್ಯೋಗಿ.! ಹೀಗೊಂದು ವಿಚಿತ್ರ ಕಥೆ
ಕೆಲಸದ ಸ್ಥಳದಲ್ಲಿ ನಿಮಗೆ ಹೆಚ್ಚು ಹೊತ್ತು ಕೆಲಸ ನೀಡಿದರೆ ಅಥವಾ ಒತ್ತಡದಿಂದ ಕೆಲಸ ಮಾಡಬೇಕಾದ ಅನಿವಾರ್ಯತೆ ಇದ್ದರೆ ಏನು ಮಾಡುತ್ತೀರಿ? ಒಂದೆರಡು ದಿನ ರಜೆ ಕೇಳಿ ಪಡೆಯುತ್ತಿರಿ. ಈ ಕೆಲಸ ಮಾಡಲು ಆಗುವುದೇ ಇಲ್ಲ ಎಂಬ ಸ್ಥಿತಿಯಲ್ಲಿ ನೀವು ಆ ಕೆಲಸಕ್ಕೆ ಗುಡ್ ಬೈ ಕೂಡ ಹೇಳಿರುತ್ತೀರಿ. ಕೆಲಸ ಮಾಡುವುದು ಬಿಡುವುದು ನಿಮ್ಮ ಆಯ್ಕೆಯ ವಿಚಾರ ಆಗಿರುತ್ತೆ.
ಈಗಂತು ಕೆಲಸದ ಸ್ಥಳದಲ್ಲಿ ಉದ್ಯೋಗಿಗಳು ಎದುರಿಸುವ ಒತ್ತಡ, ಕಿರಿಕಿರಿಯ ಕುರಿತು ನಾವು ಕೇಳುತ್ತಲೇ ಇರುತ್ತೇವೆ. ಹಾಗೆ ಇಲ್ಲೊಂದು ಕಡೆ ವ್ಯಕ್ತಿಯೊಂದು ಕೆಲಸದಿಂದ ಮುಕ್ತಿ ಪಡೆಯಲು ಮಾಡಿದ ಐಡಿಯಾ ಕುರಿತು ಕೇಳಿದರೆ ನಿಮಗೂ ಶಾಕ್ ಆಗುತ್ತೆ. ಸಾಮಾನ್ಯವಾಗಿ ಉದ್ಯೋಗಿಗಳು ಒಂದು ದಿನ ರಜೆಗಾಗಿ ಆರೋಗ್ಯ ಸರಿ ಇಲ್ಲ ಎಂದು ಹೇಳಿ ಮನವಿ ಮಾಡಿ ಪಡೆದಿರಬಹುದು.

ಆದ್ರೆ ಇಲ್ಲೊಬ್ಬ ತನ್ನನ್ನು ಕೆಲಸದಿಂದ ವಜಾ ಮಾಡುವ ಉದ್ದೇಶದಿಂದ ತನ್ನ ಕೈ ಬೆರಳುಗಳನ್ನು ತಾನೆ ಕತ್ತರಿಸಿಕೊಂಡಿರುವ ವಿಲಕ್ಷಣ ಘಟನೆ ವರದಿಯಾಗಿದೆ. ನೀವು ಇದನ್ನು ನಂಬಲು ಸಾಧ್ಯವಾಗದಿದ್ದರೂ ಇಂತಹದೊಂದು ಘಟನೆ ನಡೆದಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಆತ ಕೆಲಸದಿಂದ ಮುಕ್ತಿ ಪಡೆಯಲು ತನ್ನ ಕೈ ಬೆರಳು ಕತ್ತರಿಸಿಕೊಂಡು ನಂತರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.
ಏನಿದು ವಿಚಿತ್ರ ಘಟನೆ?
ಗುಜರಾತ್‌ನ ಸೂರತ್‌ನಲ್ಲಿ ಇಂತಹದೊಂದು ವಿಲಕ್ಷಣ ಘಟನೆ ನಡೆದಿದೆ. ಆಗತ ತನ್ನ ಸಂಬಂಧಿಕರೊಬ್ಬರ ವಜ್ರ ತಯಾರಿಕಾ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದ. ಮಯೂರ್ ತಾರಾಪರಾ ಎಂಬ 32 ವರ್ಷದ ಯುವಕನಿಗೆ ಈ ಕೆಲಸ ಇಷ್ಟವಿರಲಿಲ್ಲ. ಆಧ್ರೆ ಇದನ್ನು ಮಾಲೀಕರ ಬಳಿ ಹೇಳಿ ಕೆಲಸ ಬಿಡಲು ಕೂಡ ಆತನಲ್ಲಿ ಧೈರ್ಯ ಇರಲಿಲ್ಲ. ಹೀಗಾಗಿ ಕಂಪ್ಯೂಟರ್ ಆಪರೇಟರ್ ಆಗಿದ್ದ ಆತ ಕೈ ಬೆರಳು ಇಲ್ಲದೆ ಕೆಲಸ ಮಾಡಲು ಸಾಧ್ಯವಿಲ್ಲ ಎಂಬ ವಿಲಕ್ಷಣ ವಿಚಾರ ಆತನ ತಲೆಗೆ ಹೊಳೆದಿತ್ತು.
ಹೀಗಾಗಿ ಹರಿತವಾದ ಚಾಕುವಿನಿಂದ ತನ್ನ ಕೈನ 4 ಬೆರಳುಗಳನ್ನು ಕತ್ತರಿಸಿಕೊಂಡಿದ್ದಾನೆ, ಹಾಗೆ ಕೆಲ ಹೊತ್ತಿನಲ್ಲಿ ಪೊಲೀಸ್ ಠಾಣೆಗೆ ಬಂದು ಹೈ ಡ್ರಾಮಾ ಮಾಡಿದ್ದಾನೆ. ಆದರೆ ಈ ವಿಚಿತ್ರ ದೂರು ಕೇಳಿದ ಪೊಲೀಸರು ತನಿಖೆ ಆರಂಭಿಸಿದಾಗ ಆತನೇ ಕತ್ತರಿಸಿಕೊಂಡಿರುವುದು ಬೆಳಕಿಗೆ ಬಂದಿದೆ.
ಸೂರತ್ ಕ್ರೈಂ ಬ್ರಾಂಚ್ ಹೇಳಿಕೆಯಲ್ಲಿ, ತಾರಾಪರಾ ಅವರು ವರಾಚಾ ಮಿನಿ ಬಜಾರ್‌ನಲ್ಲಿರುವ ತಮ್ಮ ಸಂಸ್ಥೆ ಅನಭ್ ಜೆಮ್ಸ್‌ನಲ್ಲಿ ಇನ್ನು ಮುಂದೆ ಕೆಲಸ ಬಯಸುವುದಿಲ್ಲ ಎಂದು ತಮ್ಮ ಸಂಬಂಧಿಕರಿಗೆ ಹೇಳುವ ಧೈರ್ಯವಿಲ್ಲದ ಕಾರಣ ಈ ರೀತಿಯ ವಿಲಕ್ಷಣ ಕೆಲಸಕ್ಕೆ ಕೈಹಾಕಿರುವುದಾಗಿ ಒಪ್ಪಿಕೊಂಡಿದ್ದಾರೆ.
ಆದರೆ ಆತ ಪೊಲೀಸರ ಬಳಿ ಬೇರೆಯದ್ದೇ ಹೇಳಿದ್ದ, ತಾನು ಬೈಕ್‌ನಲ್ಲಿ ಸ್ನೇಹಿತರೊಬ್ಬರ ಮನೆಗೆ ತೆರಳುವಾಗ ಇಲ್ಲಿನ ಅಮ್ರೋಲಿಯ ವೇದಾಂತ ವೃತ್ತದ ಬಳಿ ರಿಂಗ್ ರೋಡ್‌ನಲ್ಲಿ ತಲೆ ಸುತ್ತು ಬಂದು ಬಿದ್ದಿದ್ದೆ ಈ ವೇಳೆ ಕೈ ಬೆರಳು ಕತ್ತರಿಸಲಾಗಿದೆ. 10 ನಿಮಿಷ ನನಗೆ ಪ್ರಜ್ಞೆ ಇರಲಿಲ್ಲ ಪ್ರಜ್ಞೆ ಬಂದಾಗ ಎಡಗೈಯ ನಾಲ್ಕು ಬೆರಳುಗಳು ತುಂಡಾಗಿದ್ದವು ಎಂದು ತಾರಾಪರಾ ಪೊಲೀಸರಿಗೆ ತಿಳಿಸಿದ್ದ. ಆರಂಭದಲ್ಲಿ ಮಾಟ ಮಂತ್ರಕ್ಕಾಗಿ ಆತನ ಬೆರಳನ್ನು ಯಾರೋ ಕತ್ತರಿಸಿದ್ದಾರೆ ಅಂತಲೇ ಪೊಲೀಸರು ಕೂಡ ಶಂಕಿಸಿದ್ದರು.
ಈ ಕುರಿತು ಅಮ್ರೋಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಗರದ ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಗಿತ್ತು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅಪಘಾತ ಆಗಿರುವುದು ಕಂಡುಬಂದಿರಲಿಲ್ಲ. ಆದರೆ ಭಾನುವಾರ ರಾತ್ರಿ ಅಮ್ರೋಲಿ ರಿಂಗ್ ರೋಡ್‌ಗೆ ಹೋಗಿ ತನ್ನ ದ್ವಿಚಕ್ರ ವಾಹನವನ್ನು ನಿಲ್ಲಿಸಿ ರಾತ್ರಿ 10 ಗಂಟೆ ಸುಮಾರಿಗೆ ಚಾಕುವಿನಿಂದ ನಾಲ್ಕು ಬೆರಳುಗಳನ್ನು ಕತ್ತರಿಸಿದ್ದಾನೆ. ಹಾಗೆ ಒಂದು ಚೀಲಕ್ಕೆ ಬೆರಳುಗಳನ್ನು ಹಾಕಿ ಅದನ್ನು ಎಸೆದಿದ್ದಾನೆ.
ಈ ಘಟನೆ ಪೊಲೀಸರನ್ನೇ ಬೆಚ್ಚಿ ಬೀಳುವಂತೆ ಮಾಡಿದೆ. ಆತ ಇಷ್ಟೆಲ್ಲಾ ಮಾಡಿದ್ದ ಕೆಲಸದಿಂದ ಮುಕ್ತಿ ಪಡೆಯಲು ಎಂದು ಒಪ್ಪಿಕೊಂಡಿದ್ದಾನೆ.



Click it and Unblock the Notifications
