Latest Updates
-
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ!
ಗೃಹಲಕ್ಷ್ಮಿ ಹಣದ ಬಗ್ಗೆ ಚಿಂತೆ ಬಿಡಿ ಜಮಾ ಆಗಲಿದೆ ಜೂನ್, ಜುಲೈ ತಿಂಗಳ ಹಣ
ಮಹಿಳೆಯರೇ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಹಣ ಬಂದಿದೆಯೇ? ಏಕೆ ಹಣ ಬರ್ತಾ ಇಲ್ಲ ಎಂದು ಯೋಚಿಸುತ್ತಿದ್ದೀರಾ? ಹಾಗಾಗಿ ಸ್ವಲ್ಪ ರಿಲ್ಯಾಕ್ಸ್ ಆಗಿ ಏಕೆಂದರೆ ಎರಡು ಸಾವಿರ ರುಪಾಯಿ ನಿಮ್ಮ ಖಾತೆಗೆ ಜಮಾ ಆಗಲಿದೆ. ಜೂನ್-ತಿಂಗಳ ಹಣ ನಿಮ್ಮ ಖಾತೆಗೆ ಜಮಾ ಆಗಲಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್‌ಕರ್ ಸ್ಪಷ್ಟಪಡಿಸಿದ್ದಾರೆ.

ಮೇ ತಿಂಗಳಿನಿಂದ ಹಣ ಬರ್ತಾ ಇರಲಿಲ್ಲ
ಕಾಂಗ್ರೆಸ್ ನಮಗೆ ಆಡಳಿತ ನೀಡಿದರೆ ಪ್ರತಿ ಮನೆಯ ಯಜಮಾನಿಗೆ ಎರಡು ಸಾವಿರ ರುಪಾಯಿ ನೀಡಲಾಗುವುದು ಎಂದು ಘೋಷಿಸಲಾಯ್ತು. ಅದರಂತೆ ಭರ್ಜರಿ ಗೆಲುವು ಕೂಡ ಕಂಡು ಬಂತು, ರಾಜ್ಯ ಸರ್ಕಾರ ಕೂಡ ಮಹಿಳೆಯರಿಗೆ ಕೆಲ ತಿಂಗಳು ಪ್ರತಿಮಾಸ ಎರಡು ಸಾವಿರ ರುಪಾಯಿ ಹಾಕ್ತು, ಮಹಿಳೆಯರಿಗೆ ಖುಷಿಯೋ ಖುಷಿ, ಆದರೆ ಮೇ ನಂತರ ಪರಿಸ್ಥಿತಿಯೇ ಬದಲಾಯ್ತು, ಮೇ ತಿಂಗಳಿನಲ್ಲಿ ಅಕೌಂಟ್ ಚೆಕ್ ಮಾಡ್ತಾರೆ ಹಣ ಬಂದಿಲ್ಲ, ಜೂನ್‌ನಲ್ಲಿ ನೋಡ್ತಾರೆ ಹಣ ಬಂದಿಲ್ಲ, ಜುಲೈನಲ್ಲಿಯೂ ಬರಲಿಲ್ಲ, ಆವಾಗ ಮಹಿಳೆಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾರಂಭಿಸಿದ್ದಾರೆ.
ಹಣ ನೀಡದಿದ್ದರೆ ಸರ್ಕಾರಕ್ಕೆ ದೊಡ್ಡ ಹೊಡೆತ ಬೀಳುತ್ತದೆ ಎಂಬುವುದು ಸರ್ಕಾರಕ್ಕೆ ಅರಿವಾಗಿದೆ
ಗೃಹಲಕ್ಷ್ಮಿ ಹಣ ನೀಡದಿರಲು ಇಷ್ಟು ದಿನ ಟೆಕ್ನಿಕಲ್ ಕಾರಣ ಹೇಳುತ್ತಿದ್ದ ಸರ್ಕಾರಕ್ಕೆ ಇನ್ನೂ ಅದೇ ಕಾರಣ ಮುಂದೂಡುವುದು ಕಷ್ಟ ಎಂಬುವುದು ಗೊತ್ತು, ಜೊತೆಗೆ ಜನರಿಗೆ ಅದರಲ್ಲಿಯೂ ಮಹಿಳೆಯರಿಗೆ ಸರ್ಕಾರದ ಮೇಲಿನ ನಂಬಿಕೆ ಕಡಿಮೆಯಾಗುತ್ತಿದೆ ಎಂದರ್ಥ ಸರ್ಕಾರ ಜೂನ್-ಜುಲೈ ತಿಂಗಳ ಗೃಹಲಕ್ಷ್ಮಿ ಹಣ ಈ ಎರಡು-ಮೂರು ದಿನದಲ್ಲಿಯೇ ಜಮಾ ಆಗಲಿದೆ ಎಂದು ಸರ್ಕಾರ ಹೇಳಿದೆ.
ಗೃಹ ಲಕ್ಷ್ಮಿ ಉಚಿತ ಹಣವಾದರೂ ಒಂದಿಷ್ಟು ಮಹಿಳೆಯರ ಬದುಕಿಗೆ ಆಧಾರವಾಗುತ್ತಿದೆ
ಮಹಿಳೆಯರಿಗೆ ಹಣ ಫ್ರೀ ಸಿಗುತ್ತಿದೆ, ಜಾಲಿಯಾಗಿ ಟ್ರಿಪ್ ಹೊಡೆಯಬಹುದು ಎಂದು ತಮಾಷೆ ಮಾಡುವವರು ಇದ್ದಾರೆ. ಕೆಲ ಮಹಿಳೆಯರಿಗೆ ಈ ಹಣ ಬಂದರೂ , ಬರದಿದ್ದರೂ ಅವರ ಬದುಕಿನಲ್ಲಿ ಯಾವುದೇ ದೊಡ್ಡ ಬದಲಾವಣೆಯಾಗಲ್ಲ, ಅದರೆ ಇನ್ನು ಕೆಲ ಮಹಿಳೆಯರಿಗೆ ಈ ಹಣ ತುಮಬಾನೇ ಸಹಾಯವಾಗುತ್ತಿದೆ.
ಎಷ್ಟೋ ಕುಟುಂಬದಲ್ಲಿ ಬಡತನ ಎಷ್ಟಿದೆ ಎಂದರೆ ಜ್ವರ ಬಂದರೂ ಒಂದರೆಡು ದಿನ ವಿಶ್ರಾಂತಿ ಪಡೆಯಲು ಸಾಧ್ಯವಾಗಲ್ಲ, ಸರ್ಕಾರಿ ಆಸ್ಪತ್ರೆಯ ಮಾತ್ರೆ ನುಂಗಿ ಕೂಲಿ ಕೆಲಸಕ್ಕೆ ಹೋಗುತ್ತಾರೆ, ಏಕೆಂದರೆ ಸಂಘ ಕಟ್ಟಬೇಕು, ಬಡ್ಡಿ ಹಣ ಪಾವತಿಸಬೇಕು, ಮಕ್ಕಳ ಹೊಟ್ಟೆ ತುಮಬಬೇಕು, ಅವರನ್ನು ಶಾಲೆಗೆ ಕಳುಹಿಸಬೇಕು, ಜೊತೆಗೆ ಕುಡುಕ ಗಂಡ , ಒಂದು ಕೆಜಿ ಅಕ್ಕಿಯೂ ಮನೆಗೆ ತರದ ಕುಡುಕರಿದ್ದಾರೆ, ಅಂಥ ಮನೆಯ ಹೆಣ್ಮಕ್ಕಳಿಗೆ ಈ ಗೃಹಲಕ್ಷ್ಮಿ ತುಂಬಾನೇ ಸಹಕಾರಿಯಾಗುತ್ತಿದೆ.
ಅವರ ಆರ್ಥಿಕ ಸಂಕಷ್ಟಗಳು ಕಡಿಮೆಯಾಗುತ್ತಿದೆ, ಎಷ್ಟೋ ಮಹಿಳೆಯರು ಈ ಹಣವನ್ನು ತುಂಬಾ ಚೆನ್ನಾಗಿ ಬಳಸುತ್ತಿದ್ದಾರೆ.
ಸರ್ಕಾರ ಆರ್ಥಿಕ ಹೊರೆಯಾಗುತ್ತಿದೆ ಎಂದು ಎಲ್ಲರಿಗೂ ಈ ಹಣ ಹಾಕದೆ ಇರುವ ಬದಲಿಗೆ ಈ ಬಗೆಯ ಬದಲಾವಣೆ ಮಾಡಿದರೆ ಒಳ್ಳೆಯದು
ಯಾರಿಗೆ ಈ ಹಣ ನಿಜವಾಗಿಯೂ ಸಲ್ಲಬೇಕು ಅವರ ಬಗ್ಗೆ ಮರುಪಟ್ಟಿ ಮಾಡುವುದು ಒಳ್ಳೆಯದು. ಬಿಪಿಎಎಲ್ ಬಳಕೆದಾರರಿಗೆ , ಕಡು ಬಡತನದಲ್ಲಿ ಇರುವವರೆಗೆ ನೀಡಿ, ಆರ್ಥಿಕವಾಗಿ ಚೆನ್ನಾಗಿರುವವರನ್ನು ಈ ಯೋಜನೆಯಿಂದ ಕೈ ಬಿಟ್ಟು ನಿಜವಾಗಲೂ ಇದರ ಅವಶ್ಯಕತೆ ತುಂಬಾ ಇರುವವರೆಗೆ ಪ್ರತಿ ತಿಂಗಳು ಸರ್ಕಾರ ಹಣ ಜಮಾ ಮಾಡಿದರೆ ಒಳ್ಳೆಯದಿತ್ತು. ಸರ್ಕಾರ ತನ್ನ ಲಾಭದ ದೃಷ್ಟಿಯಿಂದ ಮಾಡುವುದಾದರೂ ಬಡ ಹೆಣ್ಮಕ್ಕಳಿಗೆ ಸಹಾಯವಾಗುವಂತೆ ಆಗಲಿ.



Click it and Unblock the Notifications
