Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಾಹ್ಯಾಕಾಶದಲ್ಲಿ ಬೇಳೆ ಕಾಳು ಬೆಳೆಯುವ ಸಾಹಸ: ಕೈಗೂಡಲಿದ್ಯಾ ಭಾರತೀಯ ವಿಜ್ಞಾನಿಗಳ ಕನಸು!
ಇಂದು Axiom_Space ನ Ax-4 ಮಿಷನ್ ಬಾಹ್ಯಾಕಾಶ ನಿಲ್ದಾಣಕ್ಕೆ ಉಡಾವಣೆ ಮಾಡಲು ಸಿದ್ಧತೆ ನಡೆದಿದೆ. ಹಲವು ಬಾರಿ ಹವಾಮಾನ ವೈಪರಿತ್ಯದ ಕಾರಣದಿಂದಾಗಿ ಮುಂದೂಡಲ್ಪಟ್ಟ ಗಗನಯಾತ್ರೆಯು ಇಂದು ಪೂರ್ಣಗೊಳ್ಳುತ್ತಿದೆ. ನಾಸಾ ನಾಲ್ವರು ಗಗನಯಾತ್ರಿಗಳನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲು ಸಿದ್ಧತೆಯಲ್ಲಿದೆ. ಫ್ಲೋರಿಡಾದ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿರುವ ಲಾಂಚ್ ಕಾಂಪ್ಲೆಕ್ಸ್ 39A ನಿಂದ ರಾಕೆಟ್ ಉಡಾವಣೆಯಾಗಲಿದೆ.
ಫಾಲ್ಕನ್ 9 ರಾಕೆಟ್‌ನಲ್ಲಿ ಇಂದು ನಾಲ್ವರು ಗಗನಯಾತ್ರಿಗಳು ಬಾಹ್ಯಾಕಾಶಕ್ಕೆ ತೆರಳಲಿದ್ದಾರೆ. ಅನಂತರ ಸ್ಪೇಸ್ ಎಕ್ಸ್ ಡ್ರ್ಯಾಗನ್ ಬ್ಯಾಹಾಕಾಶ ಕಕ್ಷೆಯ ಪ್ರಯೋಗಾಲಯದಲ್ಲಿ ಉಳಿಯಲಿದ್ದಾರೆ. ಸದ್ಯ ಈ ನಾಲ್ವರು ಗಗನಯಾತ್ರಿಗಳಲ್ಲಿ ಓರ್ವ ಭಾರತ ಮೂಲದ ಗಗನಯಾತ್ರಿಯಾಗಿದ್ದಾರೆ. ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ಗೆ ಭೇಟಿ ನೀಡುವ ಮೊದಲ ಭಾರತೀಯರಾಗಲಿದ್ದಾರೆ.

ಭಾರತೀಯ ವಾಯುಪಡೆಯ ಅಧಿಕಾರಿ ಆಗಿರುವ ಶುಭಾಂಶು ಶುಕ್ಲಾ ಆಕ್ಸಿಯಮ್-4 ನ ಕಾರ್ಯಾಚರಣೆಯಲ್ಲಿ ಪೈಲಟ್ ಪಾತ್ರ ನಿರ್ವಹಿಸಲಿದ್ದಾರೆ. ಈ ಕಾರ್ಯಾಚರಣೆಯ ಮುಖ್ಯಸ್ಥರಾಗಿ ನಾಸಾದ ಗಗನಯಾತ್ರಿ ಪೆಗ್ಗಿ ವಿಟ್ಸನ್ ನೇತೃತ್ವ ವಹಿಸಿಕೊಳ್ಳಲಿದ್ದಾರೆ. ಉಳಿದಂತೆ ಇನ್ನಿಬ್ಬರು ಪೋಲೆಂಡ್‌ನ ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಯೋಜನೆಯ ಗಗನಯಾತ್ರಿ ಸ್ಲಾಮೋಸ್ಜ್ ಉಜ್ನಾಸಿ ಹಾಗೂ ಹಂಗೇರಿಯಾದ ಟಿಬೋರ್ ಕಪು ಆಗಿದ್ದಾರೆ.
ಆಕ್ಸಿಯಮ್-4 ಬಾಹ್ಯಾಕಾಶ ಮಿಷನ್ ಎಂದರೇನು?
ಆಕ್ಸಿಯಮ್-4 ಮಿಷನ್ ಭಾರತ, ಪೋಲೆಂಡ್ ಮತ್ತು ಹಂಗೇರಿಯಾದ ಮೊದಲ ಬಾಹ್ಯಾಕಾಶ ಪ್ರವೇಶ ಎನ್ನಬಹುದು. 40 ವರ್ಷಗಳಲ್ಲಿ ಇದೆ ಮೊದಲ ಬಾರಿಗೆ ಸರ್ಕಾರಿ ಪ್ರಾಯೋಜಿತ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತಿದೆ. ಹಾಗೆ ಮೂರು ದೇಶಗಳ ಗಗನಯಾತ್ರಿಗಳು ಮೊದಲ ಬಾರಿಗೆ ಒಟ್ಟಿಗೆ ಗಗನಯಾತ್ರೆಯಲ್ಲಿ ಭಾಗಿಯಾಗುತ್ತಿದ್ದಾರೆ.
ಆಕ್ಸಿಯಮ್-4 ಹಲವು ರೀತಿಯ ಪ್ರಾಯೋಗಿಕ ಪ್ರಯೋಗಗಳನ್ನು ನಡೆಯಲು ಅನುವು ಮಾಡಿಕೊಡಲಿದೆ. ಅದರಲ್ಲಿ ಸುಮಾರು 7 ಪ್ರಯೋಗಗಳು ಭಾರತದಿಂದ ಬಂದಿರಲಿದೆ. ಅಂದರೆ ಭಾರತದ ಶುಭಾಂಶು ಶುಕ್ಲಾ ಬಾಹ್ಯಾಕಾಶದಲ್ಲಿ 7 ಅಧ್ಯಯನಗಳ ನಡೆಸಲಿದ್ದಾರೆ. ಇದು ಬಾಹ್ಯಾಕಾಶದಲ್ಲಿ ಮಾನವನ ಭವಿಷ್ಯದ ಪ್ರಯಾಣಗಳಿಗೆ ಅನುವು ಮಾಡಿಕೊಡುವುದು ಹಾಗೆ ಮತ್ತಷ್ಟು ಗಗನಯಾತ್ರಿಗಳಿಗೆ ಸಹಾಯ ಮಾಡುವ ಉದ್ದೇಶ ಹೊಂದಲಾಗಿದೆಯಂತೆ.
ಶುಭಾಂಶು ಶುಕ್ಲಾ ಅವರು ಪ್ರಮುಖವಾಗಿ ಬಾಹ್ಯಾಕಾಶದಲ್ಲಿ ಮೆಂತ್ಯ, ಹೆಸರುಕಾಳು ಸೇರಿ ವಿವಿಧ ಆಹಾರೋತ್ಪನ್ನಗಳನ್ನು ಬೆಳೆಸುವುದು ಹಾಗೆ ಅವುಗಳ ಬೆಳವಣಿಗೆಗೆ ಬಾಹ್ಯಾಕಾಶದಲ್ಲಿ ಯಾವ ರೀತಿಯ ಪೂರಕ ವಾತಾವರಣದ ಅವಶ್ಯಕತೆ ಇದೆ ಎಂಬುದನ್ನು ಅಧ್ಯಯನ ಮಾಡಲಿದ್ದಾರೆ.
ಔಷಧೀಯ ಗುಣಗಳನ್ನು ಹೊಂದಿರುವ ಹೆಸರುಕಾಳು ಮತ್ತು ಮೆಂತ್ಯ ಮೊಳಕೆಯೊಡೆಯಲು ಪ್ರಯತ್ನಿಸುವ ಪ್ರಯೋಗ ನಮ್ಮಲ್ಲಿದೆ ಎಂದು ಮೈಕ್ರೋಗ್ರಾವಿಟಿ ಪ್ಲಾಟ್‌ಫಾರ್ಮ್‌ಗಳು ಮತ್ತು ಸಂಶೋಧನಾ ಗುಂಪಿನ ಮುಖ್ಯಸ್ಥ ತುಷಾರ್ ಫಡ್ನಿಸ್ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಇದಲ್ಲದೆ ಬಾಹ್ಯಾಕಾಶದಲ್ಲಿ ಪ್ರಾಣಿಗಳು ಹೇಗೆ ಬದುಕಬಲ್ಲವು ಎಂಬುದನ್ನು ಕೂಡ ಅಧ್ಯಯನಕ್ಕೊಳಪಡಿಸಲಾಗುತ್ತಿದೆ. ಇದರಲ್ಲಿ ನೀರು ಕರಡಿಗಳು,
ಅಥವಾ "ಪಾಚಿ ಹಂದಿಮರಿಗಳು" ಎಂದು ಕರೆಯಲ್ಪಡುವ ಟಾರ್ಡಿಗ್ರೇಡ್‌ಗಳು, ತೀವ್ರ ಪರಿಸ್ಥಿತಿಗಳಲ್ಲಿ ಬದುಕುವ ಸಾಮರ್ಥ್ಯ ಹೊಂದಿವೆ. ಇವು 8 ಕಾಲಿನ ಸೂಕ್ಷ್ಮ ಜೀವಿಗಳಾಗಿವೆ. ಹೀಗಾಗಿ ಈ ಕುರಿತ ಅಧ್ಯಯನಕ್ಕಾಗಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಎರಡು ಪ್ರಯೋಗಗಳನ್ನು ಅಭಿವೃದ್ಧಿ ಪಡಿಸಿದೆ. ಇನ್ನು ಕೂಡ ಬಾಹ್ಯಾಕಾಶದಲ್ಲಿ ಪ್ರಯೋಗಕ್ಕೆ ಒಳಪಡಿಸಲಾಗುತ್ತದೆ.
ಬಾಹ್ಯಾಕಾಶದಲ್ಲಿ ನೂರಾರು ದಿನಗಳ ಕಾಲ ಗಗನಯಾತ್ರಿಗಳು ಉಳಿಯಬೇಕಾಗುತ್ತದೆ. ಏಕೆಂದರೆ ಈ ಬಾಹ್ಯಾಕಾಶ ಯಾತ್ರೆ ಬಹಳ ದುಬಾರಿಯಾಗಿರಲಿದೆ. ಇನ್ನು ಅಲ್ಲಿಯೇ ಉಳಿಯಬೇಕಾದರೆ ಅಗತ್ಯ ಆಹಾರ ಪದಾರ್ಥಗಳ ಅವಶ್ಯಕತೆ ಇರಲಿದೆ. ಪ್ಯಾಕ್ ಮಾಡಲಾದ ಆಹಾರ ಭೂಮಿಯಿಂದ ತೆಗೆದುಕೊಂಡು ಹೋಗುವುದು ಕೂಡ ಬಹಳ ತ್ರಾಸದಾಯಕ ಹೀಗಾಗಿ ಬಾಹ್ಯಾಕಾಶದಲ್ಲೇ ಆಹಾರ ಸಾಮಗ್ರಿಗಳ ಬೆಳೆಯುವ ಉದ್ದೇಶದಿಂದ ಹಲವು ಪ್ರಯೋಗಗಳು ನಡೆಯಲಿವೆ.



Click it and Unblock the Notifications