Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ನಾನು ಸತ್ತಿಲ್ಲ, ಬದುಕಿದ್ದೇನೆ ಎಂದು ಸರ್ಕಾರಕ್ಕೆ ಸಾಬೀತು ಮಾಡಲು ಕ್ರಿಮಿನಲ್ ಕೃತ್ಯ ಮಾಡಿದ ವ್ಯಕ್ತಿಯ ಕತೆ
ಸರ್ಕಾರದ ಕಡೆಯಿಂದ ಆದ ತಪ್ಪಿಗೆ ಆದ ಕ್ರಿಮಿನಲ್ ಆಗಿದ್ದಾನೆ, ಅದರಲ್ಲಿಯೂ ತಾನು ಬದುಕಿದ್ದೇನೆ ಎಂಬುವುದನ್ನು ಸಾಬೀತು ಮಾಡಲು ಆತ ಕ್ರಿಮಿನಲ್ ಆಗಬೆಕಾಯಿತು, ಕೇಳಿದಾಗ ಎಷ್ಟೊಂದು ವಿಚಿತ್ರ ಎಂದನಿಸುವುದು ಅಲ್ವಾ? ಆದರೆ ಇದು ನಿಜವಾಗಿ ನಡೆದ ಘಟನೆ. ಏನಿದು ಪ್ರಕರಣ, ಅಷ್ಟಕ್ಕೂ ಆತನಿಗೆ ತಾನು ಬದುಕಿದ್ದೇನೆ ಎಂದು ತೋರಿಸಬೇಕಾದ ಅನಿವಾರ್ಯ ಏಕಾಯ್ತು , ಏನಿದು ಘಟನೆ ನೋಡೋಣ ಬನ್ನಿ:

ಈತನ ಹೆಸರು ಬಾಬೂರಾಮ್ ಬಿಹಿಲ್, ರಾಜಾಸ್ಥಾನದ ಬಲ್ಹೋತ್ರ ಜಿಲ್ಲೆಯವನು. ಈತ ಬದುಕಿರುವಾಗಲೇ ಆತ ಸತ್ತಿದ್ದಾನೆ ಎಂದು ಡೆತ್ ಸರ್ಟಿಫಿಕೇಟ್ ನೀಡಲಾಯ್ತು, ಆದರೆ ಆತ ಇಲ್ಲ ನಾನು ಬದುಕಿದ್ದೇನೆ ನಿಮ್ಮಿಂದ ಆದ ತಪ್ಪು ಸರಿಪಡಿಸಿ ಎಂದು ಅಧಿಕಾರಿಗಳಿಗೆ ಹೇಳಿದರೆ ಯಾರೂ ತಮ್ಮ ತಪ್ಪನ್ನು ಸರಿಪಡಿಸಲು ಮನಸ್ಸು ಮಾಡದೆ ಬೇಜಾವ್ದಾರಿಯಿಂದ ನಡೆದುಕೊಳ್ಳುತ್ತಾರೆ. ಆತ 70 ವರ್ಷದ ಬಡ ಮುದುಕ, ನಾನು ಬದುಕಿರುವಾಗಲೇ ಸತ್ತಿದೆ ಎಂದು ಸರ್ಟಿಫಿಕೇಟ್ ಮಾಡಿ ನನ್ನ ಆಸ್ತಿ ಹೊಡೆಯಲು ಪ್ಲ್ಯಾನ್ ಮಾಡುತ್ತಿದ್ದಾರೆ ಎಂದು ಆ ಬಡಪಾಯಿಗೆ ಆತಂಕ ಉಂಟಾಗುತ್ತದೆ.
ನಾನು ಬದುಕಿದ್ದೇನೆ ಎಂದು ಸಾಬೀತು ಮಾಡಬೇಕು, ಆದರೆ ಹೇಗೆ ... ಹೇಗೆ? ಎಂದು ಚಿಂತೆ ಮಾಡಲಾರಂಭಿಸುತ್ತಾನೆ. ಹೇಗಾದರು ಸರಿ ಸರ್ಕಾರದ ಗಮನ ನನ್ನ ಕಡೆಗೆ ಸೆಳೆಯಬೇಕೆಂದು ಯೋಚಿಸುತ್ತಿದ್ದಾಗ ಆತ ಒಂದು ಆಲೋಚನೆ ಮಾಡುತ್ತಾನೆ, ಅದು ಮಾತ್ರ ಕಾನೂನು ಬಾಹಿರ ದಾರಿಯಾಗಿರುತ್ತದೆ.
ಜುಲೈ 19ಕ್ಕೆ ಒಂದು ಚಾಕು ಹಾಗೂ ಪೆಟ್ರೋಲ್ ಬಾಟಲಿಗೆ ತುಂಬಿ ಅಲ್ಲಿಯ ಶಾಲೆಗೆ ಹೋಗುತ್ತಾನೆ, ಇಬ್ಬರು ಟೀಚರ್‌ಗಳಿಗೆ ಗಾಯ ಮಾಡುತ್ತಾನೆ, ಅಲ್ಲಿದ್ದ ಪೋಷಕರಿಗೆ ಗಾಯ ಮಾಡುತ್ತಾನೆ, ಆವಾಗ ಅಲ್ಲಿಗೆ ಬಂದ ಪೊಲೀಸರು ಆತನನ್ನು ಅರೆಸ್ಟ್ ಮಾಡುತ್ತಾರೆ. ನಂತರ ಏಕೆ ಈ ಕೃತ್ಯ ಮಾಡಿದೆ ಎಂದು ಕೇಳಿದಾಗ ಆತ ಹೇಳಿದ ಉತ್ತರ ಕೇಳಿ ಪೊಲೀಸರು ತಬ್ಬಿಬ್ಬಾಗುತ್ತಾರೆ.
ನಾನು ಬದುಕಿದ್ದೇನೆ ಎಂದು ತೋರಿಸಲು ಹೀಗೆ ಮಾಡಿದೆ ಎಂದು ಹೇಳುತ್ತಾನೆ
ಆತ ಪೊಲೀಸರಿಗೆ ನಾನು ಬದುಕಿದ್ದೇನೆ ಎಂದು ಸರ್ಕಾರಕ್ಕೆ ಸಾಬೀತು ಮಾಡಲು ಹೀಗೆ ಮಾಡಿದೆ ಎಂದು ಹೇಳಿದ್ದಾನೆ, ಈತನ ಪರಿಸ್ಥಿತಿಗೆ ಯಾರನ್ನು ದೂರಬೇಕು, ವ್ಯವಸ್ಥೆಯನ್ನಾ ಅಥವಾ ಆತನನ್ನಾ? ಈತ ಮಾಡಿದ ತಪ್ಪಿನ ಬಗ್ಗೆ ಸರಿಯೋ? ತಪ್ಪೋ ಎಂಬ ಪ್ರಶ್ನೆ ಮಾಡುವಂತಿದೆ ಈತ ಮಾಡಿದ ಕ್ರೈಮ್.
ಈತನಿಗೆ ತಾನು ಬದುಕಿರುವುದು ಸಾಬೀತು ಪಡಿಸುವುದು ಹೇಗೆ ಎಂಬುವುದೇ ದೊಡ್ಡ ಸಮಸ್ಯೆಯಾಗಿತ್ತು?
ಈತನಿಗೆ ತಾನು ಬದುಕಿದ್ದೇನೆ ಎಂದು ಸಾಬೀತು ಮಾಡುವುದೇ ಸಮಸ್ಯೆಯಾಗಿತ್ತು, ಅಯ್ಯೋ ಏಕಪ್ಪಾ ಡೆತ್ ಸರ್ಟಿಫಿಕೇಟ್ ನೀಡಿದ್ದೀರಿ, ನಾನು ಬದುಕಿದ್ದೇನೆ ಎಂದು ಹೇಳಿದರೂ ಯಾರೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ, ಆವಾಗ ಪೊಲೀಸರು ಅರೆಸ್ಟ್ ಮಾಡಿದರೆ ನನ್ನ ಹೆಸರಿನಲ್ಲಿ ಕೇಸ್ ದಾಖಲಾಗುತ್ತದೆ, ಆವಾಗ ಅದೇ ಸರ್ಕಾರದ ದಾಖಲೆಯಲ್ಲಿ ನಾನು ಬದುಕಿರುವುದು ದಾಖಲಾಗುತ್ತೆ ಅಲ್ವಾ ಅದೇ ಸಾಕು ಎಂದು ಮನಸ್ಸಿಗೆ ಬಂದಿದ್ದೇ ಸಮೀಪದ ಶಾಲೆಯತ್ತ ನುಗಿದ್ದಾನೆ. ಆತನನ್ನು ಅರೆಸ್ಟ್ ಮಾಡಿರುವ ಪೊಲೀಸರು ಈಗ ಆತನನ್ನು ಕೋರ್ಟ್ ಮುಂದೆ ಹಾಜರು ಪಡಿಸಿದಾಗ ಅವನು ತನ್ನ ಗೋಳು ಹೆಳಿಕೊಂಡಿದ್ದಾನೆ.
ತಾನು ಬದುಕಿರುವುದು ಸಾಬೀತು ಪಡಿಸಲು ಬೇರೆಯವರನ್ನು ಸಾಯಿಸಲು ನೋಡಿದ್ದು ತಪ್ಪು
ಈತ ಬೇರೆಯವರಿಗೆ ತೊಂದರೆ ಮಾಡಿದಿರುವ ಮಾರ್ಗ ಹುಡುಕ ಬಹುದಿತ್ತು, ಆದರೆ ತಾನು ಬದುಕಿದ್ದೇನೆ ಎಂದು ಸಾಬೀತು ಮಾಡಲು ಬೇರೆಯವರಿಗೆ ತೊಂದರೆ ಮಾಡಿದ್ದಾನೆ.
ಕಳೆದ ವರ್ಷ ನವೆಂಬರ್‌ನಲ್ಲಿ ನಾನು ಬದುಕಿದ್ದೇನೆ ಎಂದು ಬೋರ್ಡ್ ಹಿಡಿದು ಓಡಾಡಿದ್ದ
ಈತ ಸತ್ತಿದ್ದಾನೆ ಎಂದು ಡೆತ್ ಸರ್ಟಿಫಿಕೇಟ್ ಬಂದಾಗ ಇಲ್ಲಾ ಬದುಕಿದ್ದೇನೆ ಎಂದು ಬೋರ್ಡ್ ಹಿಡಿದು ಓಡಾಡಿದ್ದ, ಆದರೂ ಆತನ ಕಡೆಗೆ ಗಮನ ನೀಡಿರಲಿಲ್ಲ, ಆವಾಗ ಅಧಿಕಾರಿಗಳು ಎಚ್ಚೆತ್ತುಕೊಂಡು ತಪ್ಪು ಸರಿಪಡಿಸಿದ್ದರೆ ಆತನಿಂದ ಕ್ರೈಮ್ ನೀಡುತ್ತಿರಲಿಲ್ಲ, ಈಗ ಆತನ ಅಪರಾಧಕ್ಕೆ ಅಧಿಕಾರಿಗಳೂ ಕಾರಣ, ಆತನಿಗೆ ಮಾತ್ರ ಶಿಕ್ಷೆ ಆದರೆ ಸಾಕೇ? ಆತನಿಗೆ ಡೆತ್ ಸರ್ಟಿಫಿಕೇಟ್ ನೀಡಿರುವ ಅಧಿಕಾರಿಗಳೇ ಶಿಕ್ಷೆ ಆಗಬೇಕಲ್ಲವೇ?



Click it and Unblock the Notifications
