Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
Govardhan Puja 2025: ಗೋಪೂಜೆ ಮುಹೂರ್ತ, ಪೂಜಾ ಸಮಯ, ಪೂಜೆ ಹಿಂದಿನ ಕಥೆ ಏನು? ಇಲ್ಲಿದೆ ಮಾಹಿತಿ!!
Govardhan Puja 2025: ದೀಪಾವಳಿಯ ಸಂದರ್ಭದಲ್ಲಿ ದೀಪಗಳೊಂದಿಗೆ ಹಬ್ಬವನ್ನು ಆಚರಿಸಲಾಗುತ್ತದೆ. ಅದ್ರಲ್ಲೂ ದೀಪಾವಳಿ ವಿವಿಧ ಭಾಗದಲ್ಲಿ ಹಲವು ದಿನಗಳ ಕಾಲ ಆಚರಿಸುವುದು ನೋಡಬಹುದು. ಅದ್ರಲ್ಲೂ ದೀಪಾವಳಿಯಲ್ಲಿ ಹಲವು ರೀತಿಯ ಆಚರಣೆಗಳು ಗಮನ ಸೆಳೆಯುತ್ತವೆ. ದೀಪಾವಳಿ ಲಕ್ಷ್ಮಿ ಪೂಜೆ, ಗೋವರ್ಧನ ಪೂಜೆ ಪ್ರತಿ ವರ್ಷ ನಡೆಯಲಿದೆ.
ಹಾಗೆ ಹಲವು ಭಾಗದಲ್ಲಿ ತುಳಸಿ ಪೂಜೆ ನಡೆಯುವುದು, ದೀಪೋತ್ಸವ, ರಥೋತ್ಸವಗಳು ನಡೆಯುವುದು ಕೂಡ ನಾವು ನೋಡಬಹುದು. ಹಾಗೆ ದೀಪಾವಳಯ ಕೊನೆಯ ಆಚರಣೆಯಾಗಿ ಗೋವರ್ಧನ ಪೂಜೆ ಅಥವಾ ಗೋಪೂಜೆಯಾಗಿದೆ. ಈ ದಿನ ಗೋವುಗಳಿಗೆ ಸ್ನಾನ ಮಾಡಿಸಿ ಪೂಜೆ ಮಾಡುವುದು ಹಾಗೆ ಸಂಜೆ ಜಮೀನು ಪೂಜೆ ಮಾಡುವುದು ನೋಡಬಹುದು.

ಗ್ರಾಮೀಣ ಭಾಗದಲ್ಲಿ ಈ ಪೂಜೆ ಅಥವಾ ಹಬ್ಬ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ದಿನ ಗೋವುಗಳಿಗೆ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಹಾಗಾದ್ರೆ ಗೋಪೂಜೆ ಹಿಂದಿರುವ ಕಥೆ ಏನು? ಈ ಪೂಜೆ ಮಾಡುವುದೇಕೆ? ಶುಭ ಮುಹೂರ್ತ ಯಾವುದು ಎಂಬುದನ್ನು ತಿಳಿದುಕೊಳ್ಳೋಣ.
ಗೋಪೂಜೆ ಮುಹೂರ್ತ
ಗೋಪೂಜೆಯನ್ನು ಅಕ್ಟೋಬರ್ 22ರಂದು ಆಚರಿಸಲಾಗುತ್ತಿದೆ. ಗೋಪೂಜೆಯ ಪ್ರತಿಪಾದ ತಿಥಿಯು ಅಕ್ಟೋಬರ್ 21 ರಂದು ಅಂದರೆ ಇಂದು ಸಂಜೆ 05:54ಕ್ಕೆ ಆರಂಭಗೊಳ್ಳಲಿದೆ. ಹಾಗೆ ಇದು ಅಕ್ಟೋಬರ್ 22ರ ರಾತ್ರಿ 08:16ಕ್ಕೆ ಮುಗಿಯಲಿದೆ. ಈ ಶುಭ ಪೂಜೆಯ ಪ್ರಾತಃಕಾಲ ಅಕ್ಟೋಬರ್ 22ರ ಬೆಳಗ್ಗೆ 06:39ರಿಂದ 8:57ರ ರ ವರೆಗೆ ಇರಲಿದೆ.
ಗೋಪೂಜೆಯ ವಿಧಾನ
ಮೊದಲು ಗೋವುಗಳಿಗೆ ಸ್ನಾನ ಮಾಡಿಸುವುದು. ಹಾಗೆ ಅವುಗಳಿಗೆ ಅಲಂಕಾರ ಮಾಡುವುದು. ನಂತರ ಗೋವುಗಳ ಕಾಲು ತೊಳೆದು ಅರಶಿಣ ಕುಂಕುಮ ಹಚ್ಚಿ ಪೂಜೆ ಮಾಡುವುದು. ಹೂವುಗಳಿಂದ ಅಲಂಕಾರ ಮಾಡಿ ಅವುಗಳಿಗೆ ಆಹಾರ ನೀಡುವುದು.
ಗೋರ್ವಧನ ಪೂಜೆ ಮಾಡುವುದೇಕೆ?
ಈ ಪೂಜೆಯ ಹಿನ್ನಲೆ ಪುರಾಣಗಳಲ್ಲಿಯೇ ಸಿಗುತ್ತದೆ. ಗೋವುಗಳು ಹಾಗೆ ಶ್ರೀಕೃಷ್ಣನ ನೆನೆಯುವ ಸಲುವಾಗಿ ಈ ಪೂಜೆ ಮಾಡಲಾಗುತ್ತದೆ. ಹಿಂದೂ ಪುರಾಣಗಳಲ್ಲಿ ಗೋವುಗಳನ್ನು ಗೋಮಾತೆಯಾಗು ಪೂಜ್ಯನೀಯ ಭಾವದಿಂದ ನೋಡಲಾಗಿದೆ. ಮುಕ್ಕೋಟಿ ದೇವರು ಗೋವಿನಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಹೇಳಲಾಗಿದೆ. ಹಾಗೆ ಈ ಪೂಜೆ ಮಾಡುವುದು ಮುಕ್ಕೋಟಿ ದೇವರ ಆಶಿರ್ವಾದ ಪಡೆದಂತೆ ಎಂದು ನಂಬಲಾಗುತ್ತದೆ.
ಗೋಪೂಜೆಯ ಹಿಂದಿನ ಕಥೆ ಏನು?
ಪುರಾಣಗಳ ಪ್ರಕಾರ ಈ ಗೋಪೂಜೆಗೆ ಬಹಳ ಪ್ರಮುಖ ಮಹತ್ವ ನೀಡಲಾಗಿದೆ. ಇದು ಶ್ರೀಕೃಷ್ಣನ ನೆನೆಯುವ ದಿನ. ಅದ್ರಲ್ಲೂ ಉತ್ತರ ಭಾರತದಲ್ಲಿ ಗೋಪೂಜೆಯ ಮಹತ್ವ ಮತ್ತಷ್ಟು ಹೆಚ್ಚಾಗಿದೆ. ಅಲ್ಲಿನ ಮಥುರಾದ ಬ್ರಜ್ ಪ್ರದೇಶದಲ್ಲಿ ಇಂದ್ರನನ್ನು ಪೂಜಿಸಲಾಗುತ್ತಿತ್ತು. ಆದ್ರೆ ಒಂದು ದಿನ ಶ್ರೀಕೃಷ್ಣನು ಅಲ್ಲಿಗೆ ಬಂದು ಇಂದ್ರನ ಬದಲಾಗಿ ನಮಗೆ ಆಸರೆಯಾದ ಹಸುಗಳಿಗೆ ಆಹಾರ ನೀಡುವಂತಹ ಗೋವರ್ಧನ ಗಿರಿಯನ್ನು ಪೂಜಿಸೋಣ ಎಂದು ಹೇಳಿದನಂತೆ. ಆಗ ಕೃಷ್ಣನು ಹಸುಗಳ ಮೇಯಿಸುವ ಕೆಲಸ ಮಾಡುತ್ತಿದ್ದ. ಜನರೆಲ್ಲ ಇದಕ್ಕೆ ಒಪ್ಪಿಗೆ ನೀಡಿದರಂತೆ. ಆದ್ರೆ ಇದರಿಂದ ಕೋಪಗೊಂಡ ಇಂದ್ರನು ವರುಣ ದೇವನನ್ನು ಕರೆದು ಗೋವರ್ಧನ ಬೆಟ್ಟದ ಮೇಲೆ ಮಳೆ ಸುರಿಸುವಂತೆ ಹೇಳಿದನಂತೆ.
ವರುಣ ಮಳೆ ಸುರಿಸಿದ ಪರಿಣಾಮ ಗೋವರ್ಧನ ಬೆಟ್ಟ ಕುಸಿಯುವಂತಹ ನೀರು ಊರಿನೊಳಗೆ ನುಗ್ಗಿತ್ತಂತೆ. ಈ ಸಮಯದಲ್ಲಿ ಊರಿನವರು ತಮ್ಮ ಹಸುಗಳನ್ನು ರಕ್ಷಿಸಲು ಕೃಷ್ಣನ ಬಳಿ ಬಂದರಂತೆ. ಕೃಷ್ಣ ತನ್ನ ಜನರನ್ನು ರಕ್ಷಿಸಲು ಕಿರು ಬೆರಳಿನಿಂದ ಗೋವರ್ಧನ ಗಿರಿಯನ್ನು ಎತ್ತಿ ವೃಂದಾವನದ ಎಲ್ಲಾ ಜನರನ್ನು ಅದರ ಕೆಳಗೆ ಆಶ್ರಯ ನೀಡಿ ಕಾಪಾಡಿದದನು.
ಅನಂತರ ಎಂದ್ರನು ಕೃಷ್ಣ ಶಕ್ತಿ ಏನೆಂಬುದನ್ನು ಅರಿತನಂತೆ, ಬಳಿಕ ಆತನ ಬಳಿ ಕ್ಷಮೆಯಾಚಿಸಿದನು. ಹಾಗೆ ಅಲ್ಲಿನ ಜನರು ಕೃಷ್ಣನನ್ನು ಪೂಜಿಸಲು ಆರಂಭಿಸಿದರು. ಹಾಗೆ ಗೋವುಗಳಿಗೂ ವಿಶೇಷ ಪೂಜೆ ಅಂದಿನಿಂದ ಆರಂಭಗೊಂಡಿತ್ತು ಎಂದು ಹೇಳಲಾಗಿದೆ.



Click it and Unblock the Notifications