Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಚಾಲಕನಿಲ್ಲದೆ ಜಮ್ಮುವಿನಿಂದ ಪಂಜಾಬ್‌ಗೆ ಚಲಿಸಿದ ರೈಲು..! ಇದೆಲ್ಲಾ ಚಹಾದ ಮಹಿಮೆ..!
ಈಗ ಚಾಲಕರೇ ಇಲ್ಲದ ರೈಲುಗಳು ಓಡುತ್ತಿವೆ. ಭಾರತದಲ್ಲಿ ಡೀಸೆಲ್ ರೈಲುಗಳ ಬದಲಿಗೆ ವಿದ್ಯುತ್ ಚಾಲಿತ ರೈಲುಗಳ ಸಂಖ್ಯೆ ಹೆಚ್ಚಿಸುವ ಕಾರ್ಯ ಭರದಿಂದ ಸಾಗಿದೆ. ಇತ್ತ ರೈಲು ಅಪಘಾತಗಳ ತಡೆಯಲು ಸಹ ಇನ್ನಿಲ್ಲದ ಆಧುನಿಕ ಕಾರ್ಯತಂತ್ರಗಳ ಬಳಕೆಗೆ ರೈಲ್ವೆ ಇಲಾಖೆ ಮುಂದಾಗುತ್ತಿದೆ.
ಆದರೆ ಇಲ್ಲೊಂದು ರೈಲು ಚಾಲಕನೇ ಇಲ್ಲದೆ ಬರೋಬ್ಬರಿ 80 ಕಿ.ಮೀ ಕ್ರಮಿಸಿರುವ ಘಟನೆ ನಡೆದಿದೆ. ಹೌದು ಚಾಲಕ ಇಲ್ಲದೆ 90 ಕಿ,ಮೀ ವೇಗದಲ್ಲಿ 80 ಕಿ.ಮೀಟರ್ ದೂರ ಕ್ರಮಿಸಿದೆ. ಅದೃಷ್ಟವಶಾತ್ ಯಾವ ದುರ್ಘಟನೆಯು ಸಂಭವಿಸಿಲ್ಲ. ಹಾಗಾದರೆ ಈ ಘಟನೆ ನಡೆದಿದ್ದು, ಎಲ್ಲಿ ಬಳಿಕ ರೈಲನ್ನು ನಿಲ್ಲಿಸಿದ್ದು ಹೇಗೆ? ಎಂಬ ಕುರಿತ ನಿಮ್ಮ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.

ಟೀ ತಂದ ಆಪತ್ತು
ಜಮ್ಮು ಕಾಶ್ಮೀರದ ಕಥುವಾ ರೈಲು ನಿಲ್ದಾಣದಿಂದ ಪಂಜಾಬ್‌ನ ಹೋಶಿಯಾರ್‌ಪುರದವರೆಗೆ ಈ ಗೂಡ್ಸ್ ರೈಲು ಚಾಲಕನೇ ಇಲ್ಲದೆ ಚಲಿಸಿದೆ. ಬರೋಬ್ಬರಿ 53 ವ್ಯಾನ್ ಇದ್ದ ಗೂಡ್ಸ್ ರೈಲು ಇದಾಗಿತ್ತು. ಕಥುವಾ ನಿಲ್ದಾಣದಲ್ಲಿ ಟೀ ಕುಡಿಯಲೆಂದು ಚಾಲಕರು ಇಳಿದಿದ್ದಾರೆ. ಆದರೆ ಇಂಜಿನ್ ಆನ್ ಮಾಡಿಯೇ ಇಟ್ಟಿದ್ದ ಆತ ಹ್ಯಾಂಡ್ ಬ್ರೇಕ್ ಸರಿಯಾಗಿ ಹಾಕಿರಲಿಲ್ಲ ಎಂಬ ಶಂಕೆ ವ್ಯಕ್ತವಾಗಿದೆ. ಈ ವೇಳೆ ಇಳಿಜಾರು ಪ್ರದೇಶವಾಗಿದ್ದರಿಂದ ಅಲ್ಲಿಂದ ಚಲಿಸಲು ಆರಂಭಿಸಿದ ರೈಲು 80 ಕಿ.ಮೀ ವರೆಗೂ ಕ್ರಮಿಸಿದೆ.
ಅಪಘಾತ ತಡೆದ ಅಧಿಕಾರಿಗಳು
ಚಾಲಕನಿಲ್ಲದ ಗೂಡ್ಸ್ ರೈಲು ಈ ಮಾರ್ಗವಾಗಿ ಬರುತ್ತಿದೆ ಎಂಬ ಸಂದೇಶ ಸಿಕ್ಕ ತಕ್ಷಣವೇ ಆ ಮಾರ್ಗದಲ್ಲಿ ರೈಲು ಸಂಚಾರ ನಿಲ್ಲಿಸಲಾಗಿತ್ತು. ಎಲ್ಲಾ ನಿಲ್ದಾಣಗಳಲ್ಲು ಆ ಮಾರ್ಗವನ್ನು ಟ್ರಾಫಿಕ್‌ನಿಂದ ತೆರವು ಮಾಡಲಾಯಿತು. ಜಲಂದರ್-ಪಠಾಣ್ ಕೋಟ್ ವಿಭಾಗದ ಎಲ್ಲಾ ರೈಲು - ರಸ್ತೆ ಕ್ರಾಂಸಿಂಗ್‌ಗಳನ್ನು ತಡೆಯಲಾಗಿತ್ತು. ರೈಲಿಗೆ ಅಡ್ಡವಿರುವ ಎಲ್ಲಾ ಇತರ ರೈಲುಗಳನ್ನು ಅಲ್ಲಿಂದ ತೆರವುಗೊಳಿಸಿ ಸಂಭವನೀಯ ಅವಘಡಗಳನ್ನು ತಪ್ಪಿಸಲಾಗಿದೆ.
ರೈಲು ನಿಲ್ಲಿಸಿದ್ದು ಹೇಗೆ ಗೊತ್ತಾ?
ಚಾಲಕನಿಲ್ಲದೆ ವೇಗವಾಗಿ ಬರುತ್ತಿದ್ದ ರೈಲನ್ನು ನಿಲ್ಲಿಸುವುದೇ ಹರಸಾಹಸವಾಗಿತ್ತು. ಎಲ್ಲಿಯಾದರು ರೈಲಿನ ಮೇಲೆ ಹತ್ತಿ ಎಮರ್ಜೆನ್ಸಿ ಬ್ರೇಕ್ ಹಾಕಲು ಅವಕಾಶ ಇದೆಯೇ ಎಂದು ಪರಿಶೀಲಿಸಲಾಯಿತು. ಆದರೆ ರೈಲು ಎಲ್ಲಿಯೂ ತನ್ನ ವೇಗ ಕಡಿಮೆ ಮಾಡಲೇ ಇಲ್ಲ. ಆದರೆ ಪಂಜಾಬ್‌ನ ಉಂಚಿ ಬಸ್ಸಿ ನಿಲ್ದಾಣದ ಬಳಿ ರೈಲ್ವೆ ಹಳಿಗಳು ಏರಿಳಿತವಿದ್ದ ಕಾರಣ ಇಲ್ಲಿ ವೇಗ ಕಡಿಮೆಯಾಗಬಹುದು ಎಂದು ಅಂದಾಜಿಸಲಾಗಿತ್ತು. ಹೀಗಾಗಿ ರೈಲು ಬರುವ ಸಮಯಕ್ಕೆ ಸರಿಯಾಗಿ ಹಳಿಹಗಳಲ್ಲಿ ಮರಳು ತುಂಬಿದ್ದ ಚೀಲಗಳನ್ನು ಹಾಕಲಾಗಿತ್ತು. ಈ ಸ್ಥಳಕ್ಕೆ ಬರುವಾಗ ರೈಲಿನ ವೇಗ ತುಸು ಕಡಿಮೆಯಾಗಿತ್ತು. ಹೀಗಾಗಿ ರೈಲು ಚೀಲಗಳಿಗೆ ಡಿಕ್ಕಿಯಾಗಿ ನಿಂತಿತು.
ಅಧಿಕಾರಿಗಳು ಅಮಾನತು
ಈ ಘಟನೆಗೆ ಸಂಬಂಧಿಸಿದಂತೆ ಟೀ ಕುಡಿಯಲೆಂದು ಇಳಿದಿದ್ದ ಇಬ್ಬರು ಚಾಲಕರು ಸೇರಿ 6 ಮಂದಿ ಅಧಿಕಾರಿಗಳನ್ನು ಅಮಾನತು ಮಾಡಲಾಗಿದ್ದು, ಘಟನೆ ಕುರಿತು ತನಿಖೆಗೆ ಸೂಚಿಸಲಾಗಿದೆ. ಘಟನೆ ಕುರಿತಂತೆ ಸಚಿವ ಅಶ್ವಿನಿ ವೈಷ್ಣವ್ ಸಹ ಪ್ರತಿಕ್ರಿಯಿಸಿ ಸೂಕ್ತ ತನಿಖೆ ನಡೆಸಲು ಸೂಚಿಸಿದ್ದಾರೆ.
ಭಾರತದಲ್ಲಿ ರೈಲ್ವೆ ಅಪಘಾತಗಳು
ಭಾರತ ರೈಲ್ವೆ ಸಂಪರ್ಕ ಹೊಂದಿರುವ ಅತೀ ದೊಡ್ಡ ದೇಶವಾಗಿದೆ. ಆದರೆ ದೇಶದಲ್ಲಿ ರೈಲು ಅಪಘಾತಗಳ ಸಂಖ್ಯೆ ಇತ್ತೀಚಿಗೆ ಕಡಿಮೆಯಾಗಿವೆ. 2021ರಲ್ಲಿ 16000ಕ್ಕೂ ಅಧಿಕ ಮಂದಿ ರೈಲ್ವೆ ಅಪಘಾತದಿಂದ ಮೃತಪಟ್ಟಿದ್ದಾರೆ. ಈ ವರ್ಷ ಸುಮಾರಿ 18 ಸಾವಿರ ರೈಲು ಅಪಘಾತಗಳು ಸಂಭವಿಸಿದೆ ಎಂದು ವರದಿಯಾಗಿದೆ. 2023ರಲ್ಲಿ ಮೂರು ರೈಲ್ವೆ ಅಪಘಾತದಲ್ಲಿ 309 ಮಂದಿ ಮೃತಪಟ್ಟಿದ್ದಾರೆ. ಇತ್ತೀಚಿಗೆ ನಡೆದಿದ್ದ ಒಡಿಶಾ ರೈಲು ಅಪಘಾತದಲ್ಲಿ 296 ಮಂದಿ ಮೃತಪಟ್ಟು 1,200 ಮಂದಿ ಗಾಯಗೊಂಡಿದ್ದರು.



Click it and Unblock the Notifications