Latest Updates
-
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ!
ಭಾರತದ ಈ ನದಿಯಲ್ಲಿ ಚಿನ್ನವೇ ಸಿಗುತ್ತೆ..! ಇಂದಿಗೂ ಜನ ಹುಡುಕಾಡುತ್ತಾರೆ..!
ಭಾರತದಲ್ಲಿ ನದಿಗಳಿಗೆ ಪವಿತ್ರ ಸ್ಥಾನ ನೀಡಲಾಗಿದೆ. ಎಲ್ಲಾ ನದಿಗಳನ್ನು ಸ್ತ್ರೀ ಹೆಸರಿನಿಂದ ಕರೆಯಲಾಗುತ್ತದೆ. ಹಾಗೆ ಪ್ರತಿಯೊಂದು ನದಿಯ ಹಿಂದೆಯೂ ಒಂದೊಂದು ಕಥೆಗಳಿರುವುದು ಕೇಳಿರಬಹುದು. ಭಾರತದಲ್ಲಿ ಹರಿಯುವ ಪ್ರತಿಯೊಂದು ನದಿಯೂ ಒಂದೊಂದು ಪವಿತ್ರ ಸ್ಥಳಗಳ ಕುರಿತು ಹೇಳುತ್ತವೆ. ಹಾಗೆ ತಮ್ಮದೇ ವೈಶಿಷ್ಟ್ಯತೆ ಹೊಂದಿವೆ.
ಅನೇಕ ನದಿಗಳು ಅವುಗಳ ಪಾವಿತ್ರ್ಯ, ಜಲ ಸಂಪನ್ಮೂಲಗಳು ಮತ್ತು ಚೈತನ್ಯಕ್ಕಾಗಿ ಪೂಜಿಸಲ್ಪಡುತ್ತವೆ. ಅದರಲ್ಲೂ ಗಂಗಾ, ತುಂಗಾ, ಯಮುನಾ, ಕೃಷ್ಣಾ, ಗೋಧಾವರಿ ನದಿಯನ್ನು ಪವಿತ್ರ ನದಿಗಳಾಗಿ ನೋಡಲಾಗಿದೆ. ಹಾಗೆ ಕೋಟಿ ಕೋಟಿ ಜನರಿಗೆ ಲಕ್ಷಾಂತರ ರೈತರಿಗೂ ಇವು ಜೀವ ಜಲವಾಗಿ ಪರಿಣಮಿಸಿವೆ. ಹಾಗೆ ಉಪನದಿಗಳು ಉಪ ಕಥೆಗಳು ಇನ್ನೂ ಹತ್ತಾರು ವಿಶೇಷವನ್ನು ಈ ನದಿಗಳು ಒಳಗೊಂಡಿವೆ.

ಇಷ್ಟೆಲ್ಲಾ ವಿಶೇಷತೆಗಳ ನಡುವೆ ಭಾರತದಲ್ಲಿ ಹರಿಯುವ ಒಂದು ನದಿಯಲ್ಲಿ ಇಂದಿಗೂ ಚಿನ್ನಕ್ಕಾಗಿ ಹುಡುಕಾಟ ನಡೆಯುತ್ತಿದೆ ಎಂಬ ವಿಚಾರ ನಿಮಗೆ ಗೊತ್ತಿದ್ಯಾ? ಹೌದು ಚಿನ್ನದ ಕಣಗಳನ್ನು ತನ್ನಲ್ಲಿಟ್ಟುಕೊಂಡು ಹರಿಯುವ ಈ ನದಿ ಭಾರತದಲ್ಲಿ ಕುತೂಹಲಕ್ಕೆ ಕಾರಣವಾಗಿದೆ, ಶತಮಾನದಿಂದಲೂ ಈ ನದಿ ಹರಿಯುತ್ತಿದ್ದು, ಇಂದಿಗೂ ಈ ನದಿಯಲ್ಲಿ ಚಿನ್ನ ಸಿಗುತ್ತಿದೆ ಎಂದು ಬೆಳಗ್ಗೆಯಿಂದ ಕತ್ತಲಾಗುವವರೆಗೂ ಜನರು ಹುಡುಕಾಡುತ್ತಾರೆ.
ಈ ನದಿ ಜಾರ್ಖಂಡ್‌ನಿಂದ ಸುಮಾರು 474 ಕಿ.ಲೋ ದೂರ ಹರಿಯುತ್ತದೆ. ಈ ನದಿಯ ವಿಶೇಷತೆಯ ಕಾರಣದಿಂದಾಗಿಯೇ ಇದನ್ನು ಸುವರ್ಣರೇಖಾ ನದಿ ಎಂದು ಕರೆಯಲಾಗಿದೆ. ಈ ನದಿಯಲ್ಲಿ ಶತಮಾನದಿಂದಲೂ ಚಿನ್ನದ ಕಣಗಳು ಸಿಗುತ್ತಿವೆ ಎಂಬ ನಂಬಿಕೆ ಇದೆ. ಹೀಗಾಗಿ ಈ ನದಿ ಹರಿಯುವ ಸ್ಥಳದಲ್ಲೆಲ್ಲ ಜನರು ಚಿನ್ನದ ಕಣ ಆರಿಸಲೆಂದು ತುಂಬಿರುವುದು ಸಾಮಾನ್ಯ.
ಸುವರ್ಣರೇಖಾ ಅಂದರೆ ಚಿನ್ನದ ರೇಖೆ. ಈ ವಿಶಿಷ್ಟ ಲಕ್ಷಣವನ್ನು ವೀಕ್ಷಿಸಲು ದೂರದೂರದ ಜನರು ಭೇಟಿ ನೀಡುತ್ತಾರೆ. ಜಾರ್ಖಂಡ್ ಜೊತೆಗೆ ಈ ನದಿಯು ಉತ್ತರಾಖಂಡ, ಪಶ್ಚಿಮ ಬಂಗಾಳ ಮತ್ತು ಒಡಿಶಾದ ಕೆಲವು ಭಾಗಗಳನ್ನು ಸಹ ಹಾದು ಹೋಗುತ್ತದೆ. ಈ ನದಿಯ ವಿಶೇಷ ಏನೆಂದರೆ ಅದು ನದಿಯಲ್ಲಿ ಚಿನ್ನ ಸಿಗುವುದು ಮಾತ್ರವಲ್ಲ. ಈ ನದಿಯ ಹಲವು ವಿಶೇಷಗಳಿವೆ.
ಸುವರ್ಣರೇಖಾ ನದಿಯು ಖನಿಜ ಸಮೃದ್ಧಿ ಕಲ್ಲುಗಳಿಂದ ಕೂಡಿದೆ. ಏಕೆಂದರೆ ಈ ನದಿ ಹರಿಯುವ ಸ್ಥಳವು ಬಹಳ ಖನಿಜಾಂಶ ಪ್ರದೇಶದಲ್ಲಿದೆ ಎಂದು ವಿಜ್ಞಾನಿಗಳು ಸಹ ಹೇಳಿದ್ದಾರೆ. ಈ ಖನಿಜ ತುಂಬಿದ ಬಂಡೆಗಳು ನದಿಯ ಸೆಳೆತಕ್ಕೆ ಸಿಲುಕಿದ ಬಳಿಕ ಸಣ್ಣಕಣಗಳು ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದು ನದಿಯಲ್ಲಿ ಹರಿಯುತ್ತದೆ. ಇದು ಸಂಪೂರ್ಣ ನೈಸರ್ಗಿಕ ವಿಧಾನವಾಗಿದ್ದರೂ ಇದರ ಹೊಂದೆ ಪುರಾತನ ಕಥೆ ಸಹ ಇದೆ.
ಮಹಾಭಾರತ ಅವಧಿಯಲ್ಲಿ ಪಾಂಡವರು ಕಾಡಿನಲ್ಲಿ ವಾಸಿಸುತ್ತಿದ್ದಾಗ ಈ ಪ್ರದೇಶಕ್ಕೆ ಭೇಟಿ ನೀಡಿದರು. ಒಂದು ದಿನ ಪಾಂಡವರ ತಾಯಿ ಕುಂತಿಗೆ ಬಾಯಾರಿಕೆಯಾಗಿತ್ತು. ಆಕೆ ನೀರಿಗಾಗಿ ಇಡಿ ಕಾಡಿನಲ್ಲಿ ಹುಡುಕಾಡಿದ್ದಳಂತೆ ಆದರೆ ಆಕೆಗೆ ನೀರು ಸಿಗದೆ ಪರದಾಡಿದಳು. ಹೀಗಾಗಿ ಆಕೆ ಮಕ್ಕಳ ಕರೆದು ಎಲ್ಲಿಂದಾದರು ನೀರು ತರುವಂತೆ ಹೇಳಿದಳು, ಆದರೆ ನೀರು ಹುಡುಕಿ ಹೊರಟ ಮಕ್ಕಳು ಬರಿಗೈಯಲ್ಲಿ ವಾಪಾಸು ಬಂದರು.
ಆದರೆ ನೀರು ಬೇಕೆಂದು ಹಠ ಹಿಡಿದು ಕುಳಿತಿದ್ದ ಕುಂತಿ ಅರ್ಜುನನಿಗೆ ನೀರಿನ ವ್ಯವಸ್ಥೆ ಮಾಡಲು ಹೇಳಿದಳು. ಅರ್ಜುನ ತನ್ನ ಬಿಲ್ಲುಗಾರಿಗೆಯ ತಂತ್ರಗಾರಿಯಂತೆ ನೆಲಕ್ಕೆ ಬಾಣ ಹೊಡೆದನಂತೆ, ಇದರಿಂದ ಸುವರ್ಣರೇಖಾ ನದಿ ಹುಟ್ಟಿತು ಎಂದು ಹೇಳಲಾಗಿದೆ. ನೀರು ಭೂಮಿ ಒಳಗಿಂದ ಹರಿಯಲು ಆರಂಭಿಸಿದಾಗ ಚಿನ್ನದ ಕಣಗಳು ಅದರೊಂದಿಗೆ ಬೆರೆತುನೀರು ಶುದ್ಧವಾಯಿತು ಈ ನೀರನ್ನು ಕುಂತಿ ಬಳಸಿದಳು ಎಂದು ಹೇಳಲಾಗಿದೆ. ಅಂದಿನಿಂದ ಇಂದಿನ ವರೆಗೂ ಇದು ಚಿನ್ನದ ನದಿಯಾಗಿ ಪ್ರಸಿದ್ಧಿ ಪಡೆದಿದೆ.



Click it and Unblock the Notifications
