Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಹತ್ತಿ ಮೂಲಕವೇ ಅರಳಿವೆ ದೇವರ ಮೂರ್ತಿ: ಈಕೆ 86ರ ವಯಸ್ಸಿನ ಸಾಧಕಿ!
ಜೀವನದಲ್ಲಿ ಏನನ್ನಾದರು ಸಾಧಿಸಬೇಕು ಎಂಬ ಹಠ, ಛಲ ಇದ್ದರೆ ವಯಸ್ಸು ಅದಕ್ಕೆ ಅಡ್ಡಿಯಾಗುವುದಿಲ್ಲ. ಅದಕ್ಕೆ ಸಾವಿರಾರು ಉದಾಹರಣೆಗಳು ನಮ್ಮ ನಡುವೆ ಇದೆ. ಅದ್ರಲ್ಲೂ ಮಹಿಳೆಯರು ತಮ್ಮ ಇಳಿ ವಯಸ್ಸಿನಲ್ಲಿ ಸಾಧನೆ ಮಾಡಿದವರು ಸಹ ನಮ್ಮ ನಡುವೆಯೇ ಇದ್ದಾರೆ. ಹೊಸದನ್ನು ಹುಡುಕುವ, ಹೊಸ ಜೀವನ ಕಟ್ಟಿಕೊಳ್ಳುವ ಬಯಕೆ ಇಳಿ ವಯಸ್ಸಿನಲ್ಲೂ ನನಸಾಗಿಸಿಕೊಂಡಿದ್ದು ಈ ಲಲಿತಮ್ಮ.
ಹೌದು ತಮ್ಮ 86ನೇ ವಯಸ್ಸಿನಲ್ಲೂ ಲಲಿತಮ್ಮ ಯಾರು ಊಹಿಸಲಾಗದ ರೀತಿಯಲ್ಲಿ ನೈಪುಣ್ಯ ತಮ್ಮಲ್ಲಿಟ್ಟುಕೊಂಡಿದ್ದಾರೆ. ಶಿವಮೊಗ್ಗದ ಸಣ್ಣ ಹಳ್ಳಿಯೊಂದರಲ್ಲಿ ನೆಲೆಸಿರುವ ಅವರು ಹತ್ತಿ ಬಳಸಿ ದೇವರ ಕಲಾಕೃತಿಗಳ ಮಾಡುತ್ತಾರೆ. ಅಚ್ಚರಿ ಏನೆಂದರೆ ಈ ಕಲಾಕೃತಿಗಳ ರಚಿಸಲು ಅವರು ಒಂದಿಂಚು ಬೇರೆ ವಸ್ತು ಬಳಸುವುದಿಲ್ಲ ಬರಿ ಹತ್ತಿಯಿಂದ ಎಂತಹ ಮೂರ್ತಿಯನ್ನಾದರು ಅವರು ರಚಿಸುತ್ತಾರೆ.

80 ವರ್ಷ ದಾಟಿದ ಮಂದಿ ಬೆನ್ನು ಆಗಿ ನಡೆಯಲು ಕೂರಲು ಆಗದೆ ಜೀವನ ನಡೆಸಲು ಮತ್ತೊಬ್ಬರ ಸಹಾಯ ಪಡೆಯುವ ಕಾಲದಲ್ಲಿ ಇವರು ಪರಿಸರ ಪ್ರೇಮಿ ಕಲಾಕೃತಿಗಳ ರಚಿಸುವಲ್ಲಿ ಗಮನ ಸೆಳೆಯುತ್ತಾರೆ. ಅವರು ವೀಣೆ ನುಡಿಸುತ್ತಿರುವ ಸರಸ್ವತಿ, ಗಣಪತಿ, ಶಿವ, ಪಾರ್ವತಿ, ಇಲಿ, ರಾಮ-ಸೀತೆ-ಕೌಸಲ್ಯ, ಕೃಷ್ಣನ ವಿವಿಧ ಭಂಗಿಗಳು ಸೇರಿ ನೂರಾರು ಕಲಾಕೃತಿಗಳನ್ನು ಮನೆಯಲ್ಲಿ ಮಾಡಿಟ್ಟಿದ್ದಾರೆ.
ಆದ್ರೆ ಮೂರ್ತಿಗಳಿಗೆ ಅವರೇ ಬಣ್ಣಗಳ ಹಚ್ಚುತ್ತಾರೆ. ರಂಗೊಲಿಗೆ ಬಳಸುವಂತೆ ಬಣ್ಣಗಳನ್ನು ನೀರಿನಲ್ಲಿ ಕರಡಿಕೊಂಡು ಈ ಮೂರ್ತಿಗಳನ್ನು ಮತ್ತಷ್ಟು ಸುಂದರವಾಗಿದಲು ಹಚ್ಚುತ್ತಾರೆ.
ಈ ಮೂರ್ತಿ ಮಾಡುವುದು ಹೇಗೆ?
ಮೊದಲು ಹತ್ತಿಯನ್ನು ತೆಗೆದುಕೊಂಡು ಚೆನ್ನಾಗಿ ನೀರಿನಲ್ಲಿ ಅದ್ದಿರುತ್ತಾರೆ. ಬಳಿಕ ಅದನ್ನು ಬಿಸಿಲಿನಲ್ಲಿ ಒಣಗಿಸಿ ಗಡಸಾಗಿಸುತ್ತಾರೆ. ಹೀಗೆ ಹತ್ತಿ ಬಿಸಿಲಿನಲ್ಲಿ ಒಣಗಿಸುವುದರಿಂದ ಅದು ಗಡಸಾಗಿತ್ತದೆ. ಜೊತೆಗೆ ಯಾವ ರೀತಿ ಬೇಕಾದರು ತಿರುಗಿಸಬಹುದು.
ಅವರು ಈ ಮೂರ್ತಿ ರಚಿಸಲು ಎಲ್ಲಿಯೂ ತರಬೇತಿ ಪಡೆದಿಲ್ಲ. ಹಾಗೆ ಯಾರಿಂದಲೂ ನೋಡಿಯೂ ಕಲಿತಿಲ್ಲ. ಮನೆಯಲ್ಲಿ ಅವರೆ ಮಾಡಿ ಸ್ವಯಂ ಪ್ರಯತ್ನದ ಮೂಲಕ ಈ ರೀತಿಯ ಕಲಾಕೃತಿಗಳ ಮಾಡಿ ಅಚ್ಚರಿ ಮೂಡಿಸುತ್ತಾರೆ. ಅಂಗನವಾಡಿ ಶಿಕ್ಷಕಿಯಾಗಿ ಕೆಲಸ ಮಾಡಿದ್ದ ಅವರು, ಮನೆಯಲ್ಲಿ ಫ್ರೀ ಆಗಿದ್ದಾಗ ಈ ಕಲಾಕೃತಿಗಳ ರಚಿಸುವ ಕೆಲಸ ಮಾಡಿದ್ದರು. ಆರಂಭದಲ್ಲಿ ಸಣ್ಣ ಸಣ್ಣ ಕಲಾಕೃತಿಗಳ ರಚಿಸುವ ಕಾರ್ಯ ಮಾಡುತ್ತಿದ್ದರು.
ಬಳಿಕ ದೊಡ್ಡ ಮೂರ್ತಿಗಳನ್ನೂ ಸಹ ಮಾಡಿ ಸೈ ಎನಿಸಿಕೊಂಡರು. ಆದರೆ ಈ ಮೂರ್ತಿಗಳನ್ನು ಅವರು ಎಲ್ಲಿಯೂ ಮಾರಾಟ ಮಾಡಿಲ್ಲ. ಬದಲಿಗೆ ಮನೆಯಲ್ಲೇ ಸಂಗ್ರಹ ಮಾಡಿಟ್ಟಿದ್ದಾರೆ. ನಿತ್ಯ ಮನೆಯಲ್ಲಿ ಕೆಲಸಗಳ ಮಾಡುತ್ತಾರೆ. ಯಾವುದೇ ಸಮಯ ವ್ಯರ್ಥಮಾಡದೆ ಸಣ್ಣ ಪುಟ್ಟ ಕೆಲಸ ಮಾಡುತ್ತಾರೆ.
ಈ ಕಲಾಕೃತಿ ರಚನೆ ಮಾತ್ರವಲ್ಲ ಅವರು ಸಂಗೀತ ಸಹ ಕಲಿಯಲು ಮುಂದಾಗಿದ್ದಾರೆ. ತಮ್ಮ 60ನೇ ವಯಸ್ಸಿನಲ್ಲಿ ಸಂಗೀತ ಕಲಿಕೆಯತ್ತ ಮನಸ್ಸು ಮಾಡಿದ್ದರಂತೆ. ಕರ್ನಾಟಕ ಸಂಗೀತ ಜೂನಿಯರ್ ಪರೀಕ್ಷೆ ಸಹ ಎದುರಿಸಿದ್ದಾರೆ. ಈ ಪರೀಕ್ಷೆಯಲ್ಲಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಅಚ್ಚರಿಗೂ ಕಾರಣರಾಗಿದ್ದಾರೆ.
ಅವರ ಇಳಿವಯಸ್ಸಿನ ಸಾಧನೆ ಇಷ್ಟಕ್ಕೆ ನಿಲ್ಲುವುದಿಲ್ಲ. ಅವರು ಅಡುಗೆಯಲ್ಲಿ ಆಸಕ್ತಿ ಇದ್ದರು ಅವರು ಮಲೆನಾಡ ಅಡುಗೆ ಎಂಬ ಪುಸ್ತಕ ಸಹ ಬರೆದಿದ್ದಾರೆ. ಹೀಗೆ ತಮ್ಮ ಇಳಿ ವಯಸ್ಸಿನಲ್ಲೂ ಅವರು ಇಂತಹ ಸಾಧನೆಗಳ ಮೂಲಕ ಯುವ ಸಮುದಾಯಕ್ಕೆ ಸ್ಪೂರ್ತಿಯಾಗಿದ್ದಾರೆ.



Click it and Unblock the Notifications

