Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪಾತಾಳಕ್ಕೆ ಬಿದ್ದರೂ ಮತ್ತೆ ಏಷ್ಯಾದ ನಂ. 1 ಶ್ರೀಮಂತ ಗೌತಮ್ ಅದಾನಿ: ಮಧ್ಯಮ ವರ್ಗದಲ್ಲಿ ಜನಿಸಿದ್ದೇ ಅವರಿಗೆ ಪ್ಲಸ್ ಆಯ್ತು
ನಮ್ಮ ಕೆಲಸದಲ್ಲಿ ಶ್ರದ್ಧೆ, ಪ್ರಯತ್ನವಿದ್ದರೆ ಪಾತಾಳಕ್ಕೆ ಬಿದ್ದರೂ ಯಶಸ್ವಿವಿ ಉತ್ತುಂಗಕ್ಕೆ ತಲುಪಬಹುದು ಎಂಬುವುದಕ್ಕೆ ಅತ್ಯುತ್ತಮವಾದ ಉದಾಹರಣೆ ಗೌತಮ್ ಅದಾನಿ. ಅಷ್ಟೊಂದು ಸಾವಿರ ಕೋಟಿಗಳ ನಷ್ಟವನ್ನು ಅನುಭವಿಸಿದ ವ್ಯಕ್ತಿ ಒಂದೇ ವರ್ಷದಲ್ಲಿ ಮತ್ತೆ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.

ಎಷ್ಟೋ ಆಗರ್ಭ ಶ್ರೀಮಂತರು ಉದಾಹರಣೆ ವಿಜಯ್ ಮಲ್ಯ, ಅನಿಲ್ ಅಂಬಾನಿ ಹೀಗೆ ಹಲವಾರು ಶ್ರೀಮಂತರು ವ್ಯವಹಾರದಲ್ಲಿ ನಷ್ಟವನ್ನು ಅನುಭವಿಸಿದ ಮೇಲೆ ಚೇತರಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ, ಆದರೆ ಹಿಂಡನ್‌ಬರ್ಗ್ ವರದಿಯಿಂದಾಗಿ ಸಾವಿರಾರು ಕೋಟಿ ಕಳೆದುಕೊಂಡಿರುವ ಅದಾನಿ ಕಳೆದುಕೊಂಡ ನಷ್ಟವನ್ನು ಪಡೆಯುವ ಮೂಲಕ ಮತ್ತೆ ಮುಕೇಶ್ ಅಂಬಾನಿಯನ್ನು ಹಿಂದಿಕ್ಕಿ ದೇಶದ ನಂಬರ್ 1 ಪಟ್ಟಕ್ಕೇರಿದ್ದಾರೆ.
ಹಿಂಡನ್‌ಬರ್ಗ್ ವರದಿಯಿಂದ ಅದಾನಿ ಗ್ರೂಪ್ ತೀವ್ರ ಹೊಡೆತ ಬಿದ್ದಿತ್ತು
ಹಿಂಡನ್‌ಬರ್ಗ್ ವರದಿ ಬಂದ ಬಳಿಕ ಗೌತಮ್ ಅದಾನಿ ಷೇರುಗಳು ಪಾತಾಳಕ್ಕೆ ಕುಸಿದಿತ್ತು. ರಾಜಕೀಯ ಅಸ್ತ್ರವೂ ಆಯ್ತು, ಅದಾನಿ ಎಂಬ ದೊಡ್ಡ ಹಡಗು ಮುಳುಗಿ ಹೋಯ್ತು ಇನ್ನು ಅದು ಮೇಲಕ್ಕೆ ಬರಲ್ಲ ಎಂದೇ ಊಹಿಸಲಾಗಿತ್ತು. ಆದರೆ ಅದಾನಿ ಷೇರುಗಳಲ್ಲಿ ಹೂಡಿಕೆ ಮಾಡಿದರೆ ನಷ್ಟ ಉಂಟಾಗುತ್ತದೆ ಎಂದು ಜನರು ಹೂಡಿಕೆ ಮಾಡುತ್ತಿರಲಿಲ್ಲ. ಆದರೆ ಮಧ್ಯಮ ವರ್ಗದಿಂದ ಅಷ್ಟೊಂದು ದೊಡ್ಡ ಸಾಮ್ರಾಜ್ಯ ಕಟ್ಟಿದ ಗೌತಮ್ ಅದಾನಿಗೆ ಮತ್ತೆ ತನ್ನ ಸಾಮ್ರಾಜ್ಯ ಹೇಗೆ ಕಟ್ಟಬೇಕು ಎಂದು ಗೊತ್ತಿದೆ, ಹಾಗಾಗಿಯೇ ಈಗ ಪಾತಾಳಕ್ಕೆ ಕುಸಿದರೂ ಮತ್ತೆ ಬೃಹತ್ ಸಾಮ್ರಾಜ್ಯ ಕಟ್ಟಿದ ಗೌತಮ್ ಅದಾನಿ ಏಷ್ಯಾದ ಶ್ರೀಮಂತ ಅಮತ ಗುರುತಿಸಿಕೊಂಡಿದ್ದಾರೆ.
ಉದ್ಯಮಿ ಗೌತಮ್ ಅದಾನಿ ಕಳೆದೊಂದು ವರ್ಷದಲ್ಲಿ ಭಾರಿ ಟೀಕೆ, ಆರೋಪ, ನಷ್ಟ ಅನುಭವಿಸಿದ್ದರು. ಹಿಂಡನ್‌ಬರ್ಗ್ ವರದಿ ಪ್ರಕಟಗೊಂಡ ಬಳಿಕ ಭಾರತದಲ್ಲಿ ಕೋಲಾಹಲ ಎದ್ದಿತ್ತು. ಅದಾನಿ ಷೇರುಗಳು ಪಾತಾಳಕ್ಕೆ ಕುಸಿದಿತ್ತು. ಸಾವಿರಾರು ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದರು. ಆದರೆ ಸದ್ದಿಲ್ಲದ ಮತ್ತೆ ಸಾಮ್ರಾಜ್ಯ ಕಟ್ಟಿದ ಗೌತಮ್ ಅದಾನಿ ಇದೀಗ ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿರುವ ನಂಬರ್ 1 ಭಾರತೀಯ ಅನ್ನೋ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಹಿಂದಿಕ್ಕಿರುವ ಅದಾನಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದಾರೆ.
ಈಗ ಗೌತಮ್ ಅದಾನಿ ಆಸ್ತಿ ಮೊತ್ತವೆಷ್ಟು?
ಬ್ಲೂಮ್‌ಬರ್ಗ್ ವರದಿ ಪ್ರಕಾರ ಗೌತಮ್ ಅದಾನಿ ನೆಟ್ ವರ್ತ್ ಒಟ್ಟು 111 ಬಿಲಿಯನ್ ಅಮೆರಿಕನ್ ಡಾಲರ್ ಮುಕೇಶ್ ಅಂಬಾನಿ ಒಟ್ಟು ಆಸ್ತಿ 109 ಬಿಲಿಯನ್ ಅಮೆರಿಕನ್ ಡಾಲರ್ , ಇದೀಗ ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿದ್ದಾರೆ.
ಶ್ರೀಮಂತರ ಪಟ್ಟಿಯಲ್ಲಿಯೇ ಇರಲಿಲ್ಲ ಅದಾನಿ
2023ರಲ್ಲಿ ಅದಾನಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಹಿಂಡನ್‌ಬರ್ಗ್ ವರದಿಯಿಂದ ಅದಾನಿಗೆ ಉಂಟಾದ ನಷ್ಟ ಲಕ್ಷ ಕೋಟಿ ರುಪಾಯಿಗಳು. 3ನೇ ಅತಿ ದೊಡ್ಡ ಶ್ರೀಮಂತ ಪಟ್ಟಿಯಲ್ಲಿದ್ದ ಗೌತಮ್ ಅದಾನಿ ಹೆಸರು ಶ್ರೀಮಂತ ಪಟ್ಟಿಯಲ್ಲಿಯೇ ಇರಲಿಲ್ಲ, ಆಯ್ತು ಅದಾನಿ ಸಾಮ್ರಾಜ್ಯ ಇನ್ನು ಅಷ್ಟೊಂದು ಬೆಳೆಯಲ್ಲ ಎಂದೇ ಭಾವಿಸಿದರು ಅಚ್ಚರಿ ಪಡೆದವರಂತೆ ಬೆಳೆದು ನಿಂತಿದ್ದಾರೆ ಗೌತಮ್ ಅದಾನಿ.
ಹಿಂಡನ್‌ಬರ್ಗ್ ವರದಿಯಲ್ಲಿ ಏನಿತ್ತು?
ಅದಾನಿ ಷೇರು ಹಾಗೂ ಉದ್ಯಮದಲ್ಲಿ ಮೋಸದ ಮಾರ್ಗದಲ್ಲಿ ಆದಾಯಗಳಿಸುತ್ತಿದೆ ಎಂದು ಅಮೆರಿಕದ ಹಿಂಡನ್‌ಬರ್ಗ್ ಆರೋಪ ಮಾಡಿತ್ತು, ಈ ವರದಿ ಅದಾನಿ ಗ್ರೂಪ್‌ಗೆ ತುಂಬಾನೇ ಹೊಡೆತ ನೀಡಿತ್ತು. ಈ ಬಗ್ಗೆ ಷೇರುಪೇಟೆ ನಿಯಂತ್ರಣ ಪ್ರಾಧಿಕಾರವಾದ 'ಸೆಬಿ' ತನಿಖೆ ನಡೆಸಿದಾಗ ಹಿಂಡನ್‌ಬರ್ಗ್ ಸಂಸ್ಥೆ ನಡೆಸಿದ್ದ ಆರೋಪ ಸಾಬೀತಾಗಲಿದೆ.
ಮಧ್ಯಮ ವರ್ಗದಲ್ಲಿ ಹುಟ್ಟಿ ಬೆಳೆದವರು
ಗೌತಮ್ ಅದಾನ್ ಜೂನ್ 24, 1962ರಲ್ಲಿ ಜನಿಸಿದರು. ಅವರ ತಂದೆ ಗುಜರಾತಿನಲ್ಲಿ ಬಟ್ಟೆ ವ್ಯಾಪಾರಿಯಾಗಿದ್ದರು, ಅದಾನಿ ಸೆಕೆಂಡ್ ಇಯರ್ ಬಳಿಕ ಸ್ಕೂಲ್ ಡ್ರಾಪ್‌ಔಟ್ ಆಗುತ್ತಾರೆ, ಅವರು ಪ್ರೀತಿ ಅದಾನಿಯನ್ನು ಮದುವೆಯಾಗುತ್ತಾರೆ, ಅವರು ಡೆಂಟಿಸ್ಟ್, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ವಜ್ರ ವ್ಯಾಪಾರದ ಮೂಲಕ ಅದಾನಿ ಸಾಮ್ರಾಜ್ಯ ಕಟ್ಟಲಾರಂಭಿಸಿದರು
ಅದಾನಿ ತಮ್ಮ ಹದಿಹರೆಯದ ಪ್ರಾಯದಲ್ಲಿ ಮಹೇಂದ್ರ ಬ್ರದರ್ಸ್ ಬಳಿ 3 ವರ್ಷ ಕೆಲಸ ಮಾಡುತ್ತಾರೆ. ನಂತರ ವಜ್ರದ ಬ್ರೋಕರ್ ಆಗಿ ಕಾರ್ಯ ನಿರ್ವಹಿಸುತ್ತಾರೆ. ಇವರು 1981ರಲ್ಲಿ ಪ್ಲಾಸ್ಟಿಕ್ ಯೂನಿಟ್ ಖರೀದಿಸುತ್ತಾರೆ, ಅಲ್ಲಿಂದ ಅದಾನಿ ಗ್ರೂಪ್ ಇಂಟರ್‌ನ್ಯಾಷನಲ್ ಮಾರ್ಕೆಟಿಂಗ್ ಪ್ರಾರಂಭಿಸುತ್ತಾರೆ. ಇವರ ಕಂಪನಿಯ ಪಿವಿಸಿ (PVC) ಪೈಪ್‌ಗಳು ಜನಪ್ರಿಯತೆ ಗಳಿಸುತ್ತದೆ, 1085ರಲ್ಲಿ ಪಾಲಿಮರ್ ಚಿಕ್ಕ ಕೈಗಾರಿಕ ಉದ್ಯಮ ಪ್ರಾರಂಭಿಸುತ್ತಾರೆ, ಹೀಗೆ ಒಂದೊಂದೇ ಸಂಸ್ಥೆ ಕಟ್ಟುವ ಮೂಲಕ ವಿಶ್ವದ ಶ್ರೀಮಂತರ ಪಟ್ಟಿಗೇರುತ್ತಾರೆ.
ಎರಡು ಬಾರಿ ಪ್ರಾಣಕ್ಕೆ ಅಪಾಯ ಒದಗಿತ್ತು
1998ರಲ್ಲಿರಲ್ಲಿ ಗೌತಮ್ ಅದಾನಿಯನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಡಲಾಗಿತ್ತು, ಹಣ ಕೊಟ್ಟ ಮೇಲೆ ಇವರನ್ನು ಬಿಡಲಾಯಿತು, ತಾಜ್ ಹೋಟೆಲ್ ಮೇಲೆ ದಾಳಿಯಾದಾಗಲೂ ಅದಾನಿ ಆ ಹೋಟೆಲ್‌ನಲ್ಲಿದ್ದರು.



Click it and Unblock the Notifications









