Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಗೌರಿಯನ್ನು ಹೇಗೆ ಪ್ರತಿಷ್ಟಾಪಿಸಬೇಕು? ಪ್ರಾತಃಕಾಲ ಗೌರಿ ಪೂಜೆಗೆ ಶುಭ ಮುಹೂರ್ತ
ಗೌರಿ- ಗಣೇಶ ಹಬ್ಬದ ಸಂಭ್ರಮ ಕಳೆಗಟ್ಟಲಾರಂಭಿಸಿದೆ. ಗೌರಿ-ಗಣೇಶ ಹಬ್ಬವನ್ನು ಈ ವರ್ಷ ಸೆಪ್ಟೆಂಬರ್ 6-7ಕ್ಕೆ ಆಚರಿಸಲಾಗುವುದು.ಮೊದಲು ಗೌರಿಯನ್ನು ಪ್ರತಿಷ್ಠಾಪಿಸಲಾಗುವುದು, ನಂತರ ಗಣೇಶನನ್ನು ಪ್ರತಿಷ್ಠಾಪಿಸಲಾಗುವುದು.

ಗೌರಿ ಹಬ್ಬವೆಂದರೆ ಹೆಣ್ಮಕ್ಕಳಿಗೆ ಅತ್ಯಂತ ಸಡಗರದ ಹಬ್ಬ, ಈ ದಿನ ಸಾಂಪ್ರದಾಯಕ ಬಟ್ಟೆ ಧರಿಸಿ, ಅಲಂಕರಿಸಿಗೊಂಡು ಮನೆಯ ಹೆಣ್ಮಕ್ಕಳು ಪೂಜೆಯಲ್ಲಿ ಓಡಾಡುವಾಗ ಸಾಕ್ಷಾತ್ ಗೌರಿಯೇ ಬಂದಂತೆ ಇರುತ್ತದೆ. ಅಲ್ಲದೆ ಈ ದಿನ ಕಟ್ಟುವ 16 ಗಂಟಿನ ದಾರ, ನೀಡುವ ಬಾಗೀನ ಎಲ್ಲವೂ ತುಂಬಾನೇ ವಿಶೇಷವಾದದ್ದು.
ಗೌರಿಯ ಪ್ರತಿಷ್ಟಾಪನೆಗೆ ಶುಭ ಸಮಯ ಯಾವಾಗ? ಪ್ರತಿಷ್ಠಾಪನೆಯ ಪೂಜಾ ವಿಧಿಗಳೇನು, ಮುತ್ತೈದೆಯರಿಗೆ ಬಾಗೀನ ನೀಡುವಾಗ ಯಾವೆಲ್ಲಾ ವಸ್ತುಗಳನ್ನು ಇಟ್ಟು ನೀಡಬೇಕು ಎಂದು ನೋಡೋಣ ಬನ್ನಿ:
ಸೆಪ್ಟೆಂಬರ್ 6 ಪ್ರಾತಃಕಾಲ ಗೌರಿ ಪೂಜೆಗೆ ಶುಭ ಮುಹೂರ್ತ
ಬೆಳಗ್ಗೆ 06:09ರಿಂದ 08:36ರವರೆಗೆ
ತದಿಗೆ ತಿಥಿ ಪ್ರಾರಂಭ ಸೆಪ್ಟೆಂಬರ್ 5 ಮಧ್ಯಾಹ್ನ 12:21ರಿಂದ ಪ್ರಾರಂಬ
ತದಿಗೆ ತಿಥಿ ಮುಕ್ತಾಯ: ಸೆಪ್ಟೆಂಬರ್ 6 ಮಧ್ಯಾಹ್ನ 03:01
ಗೌರಿ ಮಾತೆಯ ಪ್ರತಿಷ್ಟಾಪನೆಯ ವಿಧಾನ
- ಗಣೇಶ ಹಬ್ಬದ ಒಂದು ದಿನ ಮೊದಲು ಗಣೇಶನ ತಾಯಿಯಾದ ಗೌರಿಯನ್ನು ಪ್ರತಿಷ್ಟಾಪಿಸಲಾಗುವುದು.
- ಈ ದಿನ ಅರಿಶಿಣದಿಂದ ಗೌರಿಯನ್ನು ಮಾಡಿ ಅಕ್ಕಿ ಅಥವಾ ಧಾನ್ಯಗಳನ್ನು ಪ್ಲೇಟ್‌ನಲ್ಲಿ ಹಾಕಿ ಗೌರಿಯನ್ನು ಮೂರ್ತಿಯನ್ನು ಇಡಡಬೇಕು.
- ನಂತರ ಬಾಳೆಗಿಡದ ಮಂಟಪ ಕಟ್ಟಿ, ಮಾವಿನೆಲೆಯ ತೋರಣ ಕಟ್ಟಿ, ಹೂವುಗಳಿಂದ ಮಂಟಪವನ್ನು ಅಲಂಕರಿಸಿ ನಂತರ ಅದರಲ್ಲಿ ದೇವಿಯನ್ನು ಇರಿಸಲಾಗುವುದು.
- ಈ ದಿನ ಮಹಿಳೆಯರು 16 ಗಂಟಿನ ದಾರವನ್ನು ಕೈಗೆ ಕಟ್ಟಿಕೊಳ್ಳುತ್ತಾರೆ. ಇದನ್ನು ಗೌರಿದಾರವೆಂದು ಹೇಳಲಾಗುವುದು. ಈ ದಾರವನ್ನು ಕಟ್ಟಿಕೊಳ್ಳುವುದರಿಂದ ದೇವಿಯ ರಕ್ಷೆ ಸದಾ ನಮ್ಮ ಮೇಲಿರುತ್ತದೆ ಎಂಬ ನಂಬಿಕೆ.
- ದೇವಿಗೆ ಒಬ್ಬಟ್ಟು ಅಥವಾ ಪಾಯಸ ಅರ್ಪಿಸಿ.
ಬಾಗಿನ ಹೇಗೆ ನೀಡಬೇಕು?
ನೀವು ಎಷ್ಟು ಬಾಗಿ ನೀಡಬೇಕು ಎಂದು ಬಯಸಿದ್ದೀರೋ ಅದಕ್ಕೆ ದುಪ್ಪಟ್ಟು ಮೊರ ಖರೀದಿಸಬೇಕು. ಮೊರಕ್ಕೆ ಅರಿಶಿಣ, ಕುಂಕುಮ ಹಚ್ಚಿ, ಅದರಲ್ಲಿ ವೀಳ್ಯೆದೆಲೆ, ಜುಟ್ಟು ಇರುವ ತೆಂಗಿನಕಾಯಿ, ಬ್ಲೌಸ್ ಪೀಸ್, ಬೆಲ್ಲ ಅಚ್ಚು, ಅರಿಶಿಣ-ಕುಂಕುಮ, ಕಾಡಿಗೆ, ಬಳೆ, ಓಲೆ, ಕರಿಮಣಿ, ಕನ್ನಡಿ ಬಾಚಣಿಗೆ, ಬಾಳೆಹಣ್ಣು, ದಕ್ಷಿಣೆ ಕೆಲವರು ಇನ್ನು ಕೆಲವು ಅಲಂಕಾರಿಕ ವಸ್ತುಗಳನ್ನು ಹಾಕುತ್ತಾರೆ, ನವ ಧಾನ್ಯ ಇವುಗಳನ್ನು ಇಟ್ಟು ಮತ್ತೊಂದು ಮೊರದಿಮದ ಮುಚ್ಚಿ ಬಾಗಿನ ನೀಡಲಾಗುವುದು.
ಈ ರೀತಿ ಬಾಗಿನ ನೀಡುವುದರಿಂದ ಮನೆಗೆ ಸಂಪತ್ತಿನ ಕೊರತೆಯಾಗಲ್ಲ ಎಂಬ ನಂಬಿಕೆ.
ಗೌರಿಯ ಹಬ್ಬದ ಮಹತ್ವವೇನು?
ಗೌರಿ ಹಬ್ಬವನ್ನು ಮಹಿಳೆಯರು ಆಚರಿಸುತ್ತಾರೆ. ವೈವಾಹಿಕ ಜೀವನ ಚೆನ್ನಾಗಿರಲಿ, ಮನೆಯಲ್ಲಿ ಸಮೃದ್ಧಿ ನೆಲೆಸಲಿ, ಮಕ್ಕಳಿಗೆ ಶ್ರೇಯಸ್ಸು ದೊರೆಯಲಿ ಎಂದು ಬಯಸಿ ಪಾರ್ವತಿಯನ್ನು ಆರಾಧಿಸಲಾಗುವುದು. ಮಹಿಳೆಯರು ಈ ಹಬ್ಬವನ್ನು ಆಚರಿಸಿ 16 ಗಂಟಿನ ದಾರ ಕಟ್ಟಿಕೊಳ್ಳುವುದರಿಂದ ಪತಿಗೆ ದೀರ್ಘಾಯುಸ್ಸು ದೊರೆಯುತ್ತದೆ, ಮನೆಯಲ್ಲಿ ನೆಮ್ಮಿದಿ ಇರುತ್ತದೆ, ಅವಾಹಿತ ಹೆಣ್ಣು ಮಕ್ಕಳಿಗೆ ಮದುಚೆ ಯೋಗ ಕೂಡಿ ಬರುವುದು ಎಂದು ಹೇಳಲಾಗುವುದು.
ಪೌರಾಣಿಕ ಹಿನ್ನೆಲೆ
ಗೌರಿ ಹಬ್ಬ ಸದ್ಗುಣ, ಭಕ್ತಿ, ಶಕ್ತಿಯ ಸಂಕೇತ. ಗೌರಿಯುತನ್ನ ಭಕ್ತರ ಯೋಗಕ್ಷೇಮವನ್ನು ವಿಚಾರಿಸಲು ಭೂಮಿಗೆ
ಬರುತ್ತಾಳೆ ಎಂದು ನಂಬಲಾಗಿದೆ, ತಾಯಿಯನ್ನು ಕರೆದುಕೊಂಡು ಹೋಗಲು ಗಣೇಶ ಭೂಮಿಗೆ ಬರುತ್ತಾನೆ. ತಾಯಿ-ಮಗನನ್ನು ಸಂತೋಷದಿಂದ ಸ್ವಾಗತಿಸಿ ನಂತರ ಅನಂತ ಚರ್ತುದಶಿಯಂದು ವಿಸರ್ಜನೆ ಮಾಡಲಾಗುವುದು.
ಗೌರಿ-ಗಣೆಶನ ಕೃಪೆ ನಿಮ್ಮ ಮೇಲಿರಲಿ, ನಿಮ್ಮೆಲ್ಲಾ ಇಷ್ಟಾರ್ಥಗಳು ನೆರವೇರಲಿ, ಗೌರಿ ಗಣೇಶ ಹಬ್ಬ ಸಂತೋಷ, ನೆಮ್ಮದಿ ತುಂಬಲಿ, ಗೌರಿ-ಗಣೇಶ ಹಬ್ಬದ ಶುಭಾಶಯಗಳು...



Click it and Unblock the Notifications
